Saturday, February 9, 2013

ತುಳುಗಾದೆ ೨


"ಅಂಚನೆ ಜರ್ಪುನೆಗ್ ಅರ್ಧ ರೊಟ್ಟಿ ಎಡ್ಡೆ" { ಈ ಗಾದೆಗೆ ಅರ್ಥ ಸ್ವಾರಸ್ಯಕರವಾಗಿದೆ, ರಾತ್ರಿಯಲ್ಲಿ ಹಾಗೆಯೆ ಬರಿ ಹೊಟ್ಟೆ ಹಸಿದು ಮಲಗುವವನಿಗೆ ಅರ್ಧ ರೊಟ್ಟಿಯಾದರೂ ಸಿಕ್ಕರೆ ಅದೇ ಸ್ವರ್ಗ. ಇದು ಪೂರ್ತಿ ಹಸಿವನ್ನ ತಣಿಸಲಾರದು ನಿಜ. ಆದರೆ, ಪೂರ್ತಿ ಉಪವಾಸ ಬೀಳುವುದಕ್ಕಿಂತ ಅರೆಹೊಟ್ಟೆ ತುಂಬಿಸಿ ಕೊಳ್ಳುವುದು ವಾಸಿ. ಒಬ್ಬರಿಂದ ತಕ್ಕಮಟ್ಟಿನ ಸಹಾಯ ಕಷ್ಟದಲ್ಲಿದ್ದಾಗ ನಿರೀಕ್ಷಿಸುವುದು ಇದ್ದದ್ದೆ. ಆಗ ಆ ಬಂಧು ತುಸುವಾದರೂ ನೆರವಾದರೆ ಪೂರ್ತಿ ಕಷ್ಟ ಪರಿಹಾರವಾಗಲಾರದಾದರೂ ಬೀಸುವ ದೊಣ್ಣೆಯಿಂದ ತತ್ಕಾಲಕ್ಕೆ ಖಂಡಿತ ತಪ್ಪಿಸಿ ಕೊಳ್ಳಬಹುದು. ಅಲ್ಲದೆ ಬಯಸಿದಷ್ಟು ಸಿಗದಾಗ ಸಿಕ್ಕಿದ್ದಷ್ಟಕ್ಕೆ ತೃಪ್ತಿ ಕಾಣಬೇಕು ಅನ್ನುವುದು ಇದರ ವಾಸ್ತವದ ತಾತ್ಪರ್ಯ. "ಕುರುಡುಗಣ್ಣಿಗಿಂತ ಮಳ್ಳೆಗಣ್ಣು ವಾಸಿ" ಅನ್ನುವುದು ಇದಕ್ಕೆ ಸಮಾನಾರ್ಥಕವಾದ ಕನ್ನಡ ಗಾದೆ.} (ಅಂಚನೆ ಜರ್ಪುನೆಗ್ ಅರ್ಧ ರೊಟ್ಟಿ ಎಡ್ಡೆ. = ಹಾಗೆಯೆ ಮಲಗುವ ಬದಲು ಅರ್ಧ ರೊಟ್ಟಿ ಒಳ್ಳೆಯದು.)

No comments:

Post a Comment