Thursday, September 27, 2012
ನೆನಪಿನ ದಂಡೆಯ ಮೇಲೆ....
ನಿನ್ನ ನೆನಪಿನ ಗಂಗೆಯಲಿ ಮಿಂದು,
ನಿನ್ನ ಹಾದಿಯನೆ ಮನದ ಯಮುನೆಯ ದಡದಲ್ಲಿ ಕಾದು....
ನಿನ್ನ ವಿರಹದ ನೋವಿನ ತುಂಗೆಯನ್ನೆ ನಿತ್ಯ ಕುಡಿದು
ಅನುಗಾಲದ ಮನದ ದಾಹವನ್ನ ತೀರಿಸಿ ಕೊಳ್ಳುತ್ತಿರುವ ನನಗೆ ಇಲ್ಲೇ ಮುಕ್ತಿ ಕಟ್ಟಿಟ್ಟಿರುವಾಗ,
ಇನ್ನೊಂದು ಜನ್ಮ ಯಾವ ಕರ್ಮಕ್ಕೆ? /
ಅಲ್ಪ ತೃಪ್ತ ನನ್ನ ಮನಕ್ಕೆ
ನಿನ್ನದೊಂದು ನಿಷ್ಕಲ್ಮಶ ನಗುವಿನ ನೆನಪೆ ಸಾಕು.....
ಪ್ರಾಮಾಣಿಕ ಪ್ರೀತಿಗೆ ಹೇಳು.
ಇದಕ್ಕಿಂತ ಹೆಚ್ಚಿನ್ನೇನು ಬೇಕು? //
ಸುಮ್ಮನಿರುವ ನನ್ನ ಮನಸನ್ನ ಮೆತ್ತಗೆ ಕೆಣಕುವ ನಿನ್ನ ನಿನಪುಗಳಿಗೆ
ಹೊತ್ತು ಗೊತ್ತು ಒಂದೂ ಇಲ್ಲವ?,
ಕೇವಲ ಮಾತಿನಲ್ಲಿಯೆ ಮಹಲು ಕಟ್ಟುವ ಬಯಕೆ ನನಗಿಲ್ಲ....
ಮೌನದ ಮಹತ್ತನ್ನ ಕೊನೆಯ ತನಕ
ನಿನಗಾಗಿ ಕಾದು ಕೂತು ನಿರೂಪಿಸುತೀನಿ ನಾನು /
ಕಿವಿಯಲ್ಲಿ ಕದ್ದು ಗಾಳಿಯುಸುರಿದ
ನನ್ನೆದೆಯ ಖಾಸಗಿ ಗುಟ್ಟುಗಳನ್ನೆಲ್ಲ ನಿಜವೆಂದೆ ಭಾವಿಸಿದ್ದ....
ನನ್ನ ಮನದ ಮೂಢತನಕ್ಕೆ ನೀನು ಖಂಡಿತ ಹೊಣೆಯಲ್ಲ,
ನೆನ್ನಿನಿರುಳು ಸುರಿದ ಮಳೆಗೆ ಇಂದೂ ಮತ್ತೆ ಹನಿಯಲು ಬಿಡುವಾದಲ್ಲಿ
ನನ್ನ ಇರುಳ ಕಂಬನಿಗಳಿಗೆ ಒಂಟಿತನದಲ್ಲೊಂದು....
ಒಂದು ಜೊತೆಯಾದರೂ ಸಿಕ್ಕೀತೇನೋ //
ಕೇವಲ ಮೌನದ ಆಸರೆಯಿದೆ
ಮನದೊಳಗೆ ಹೊರಳಾಡುವ ಕಳವಳದ ಮಿಡುಕಾಟಕ್ಕೆ....
ನೆನಪುಗಳು ಹೊದಿಸಿದ ಚಾದರ ಬೇಸರವಿದೆ,
ಸೂಕ್ಷ್ಮ ನನ್ನೆದೆಯ ಭಾವಗಳು...
ನೀ ಮಾಡಿದ ಆಳ ಗಾಯ ಮಾಯಲು ಬಹುಷಃ
ಈ ಒಂದು ಜನ್ಮವೂ ಅದಕ್ಕೆ ಸಾಲಲಾರದೇನೋ /
ನನ್ನ ಮನಸ ಆಗಸದ ನೀಲಿಯಲ್ಲಿ
ಗುಂಪು ಗುಂಪಾಗಿ ತೇಲುವ ನಿನ್ನ ನೆನಪುಗಳ ಮೋಡ....
ಸದಾ ಕಣ್ಣ ಹನಿಗಾಗಿಯೇ ಕೆಳಕ್ಕೆ ಹನಿಯುವುದಾದರೂ ಏಕೆ?,
ಪಿಸುನುಡಿವ ಒಳ ಮನದ ಆಕ್ಷಾಂಶೆಗಳಿಗೆ
ಮೌನದ ಗುಹೆಯಲ್ಲೆ ಮತ್ತೆ ಅಡಗಿಕೊಳ್ಳುವ ಮೊದಲು...
ನಿನ್ನ ನೆನಪುಗಳನ್ನೊಮ್ಮೆ ಸೋಕಿ ಹೋಗುವ ಆಳದ ಆಸೆ //
ಇರುಳಿಗೆ ತಂಪಿಲ್ಲ ಹಗಲಿಗೆ ಕಾವಿಲ್ಲ
ನಿನ್ನ ನೆನಪಿರುವ ತನಕ ಮನಸಿಗೆ ವಿರಹದ ನೋವರಿವಿಲ್ಲ....
ನೀನಿಲ್ಲದ ಗುಂಗು
ನನ್ನೊಳಗಿನ ನಾನು ಸತ್ತು ಹೋಗಿದ್ದರೂ ಈ ಹಾಳು ಕುಟುಕು ಜೀವದ ಹಂಗು,
ಇನ್ನೂ ನನ್ನ ಕಾಯವನ್ನ ಕೇವಲ ಉಸಿರಾಡುವ ಕಾಷ್ಠವಾಗಿಸಿಟ್ಟಿವೆ/
ಕಾಪಿಟ್ಟ ಕನಸುಗಳಿಗೆ
ಕಾದಿಟ್ಟ ನಿಧಿಯಂತಾ ಒಳಮನದ ಖುಷಿಗಳಿಗೆ....
ಅಸಲು ಮೌಲ್ಯ ಹುಟ್ಟೋದು ನೀನು ಬಂದಾಗಲೇ ತಾನೆ ಬರೋದು,
ಕಾದ ಪ್ರತಿ ಕ್ಷಣದ ಕಪ್ಪ ಕಣ್ಣ ಹನಿಗಳಾಗಿಯೆ
ಉದುರಿ ಹೋಗೋದು ಖಾತ್ರಿ,,,,
ಆದರೆ ನೀ ಮರಳಿ ಬರುವ ಬಗ್ಗೆ ಮನಸಿಗೆ ಖಚಿತ ಮಾಹಿತಿಯಿಲ್ಲ //
Subscribe to:
Post Comments (Atom)
No comments:
Post a Comment