
ಇದು ನಮ್ಮ ಜನರ ಬೌದ್ಧಿಕ ದಾರಿದ್ರ್ಯಕ್ಕೆ ಮತ್ತು ದೇವ ಮಾನವ ಎನಿಸಿಕೊಂಡು ನರ ಮನುಷ್ಯನಂತೆ ಸತ್ತು ಹೋದ ವ್ಯಕ್ತಿಯೊಬ್ಬನ ಚಿಲ್ಲರೆ ಶೋಕಿ, ದೌಲತ್ತಿಗೆ ಸಾಕ್ಷಿಯಂತಿರುವ ಚಿನ್ನದ ಶೌಚಾಲಯ. ಧರೆಗಿಳಿದ ಭಗವಂತ ಅಂತಲೇ ಬಿಂಬಿಸಿಕೊಂಡಿದ್ದ ಸತ್ಯರಾಜು ಉರುಫ್ ಕರಡಿ ಸಾಯಿಬಾಬನ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರುವ ಆಶ್ರಮದಲ್ಲಿನ ಖಾಸಗಿ ಮಲಗುವ ಮನೆಯಲ್ಲಿ ಪತ್ತೆಯಾಗಿದೆ.
ಭೂಮಿ ಬಗೆದು ತೆಗೆದ ಧೂಳಿನ ಕಳ್ಳ ಕಾಸಿನಿಂದ ಚಿನ್ನದ ಸೋಫಾ ಮಾಡಿಸಿಕೊಂಡು ಅದರಲ್ಲೇ ಕುಳಿತು ಅಬ್ಬರಿಸಿದವರು, "ಹಳದಿ"ಯಾಗಿಯೇ ಇರುವ ಹೊಲಸನ್ನ ಹೊರಹಾಕುವ "ಆಸನ"ಕ್ಕೂ ಅದೇ ಬಂಗಾರದ ಬಣ್ಣದ ಲೋಹವನ್ನೆ ಆಯ್ದುಕೊಳ್ಳುವ ವಿಕೃತರು, ಅಕಾಲದಲ್ಲಿ ಅನಾಯಾಸವಾಗಿ ಸಿಕ್ಕ ಹೇಸಿಗೆಯ ಹಣದಲ್ಲಿ ಮಾಡಿಟ್ಟುಕೊಂಡ ಸ್ವರ್ಣದ ತಟ್ಟೆಯಲ್ಲಿಯೇ ನಿತ್ಯದ ಕೂಳು ಕತ್ತರಿಸುವವರು.... ಇವರೆಲ್ಲರೂ ಹೋಗೋದು ಮಣ್ಣಿಗೆ ಅನ್ನುವ ವಿವೇಕ ಹಾಗಾಡುವವರಿಗೂ, ಅವರ ಆಟಗಳನ್ನ ನೋಡಿ ತಲೆದೂಗುವವರಿಗೂ ಮೂಡೋದು ಯಾವಾಗ?
No comments:
Post a Comment