Sunday, September 25, 2011

ಮಾಸಿದ ಮುಗುಳ್ನಗೆಯೂ ಇದೆ......

ಗಾಳಿ ಚುಂಬಿಸಿದ ಮೋಡದ ತುಟಿ ಕೆಂಪಾಗಿ
ಅದು ನಾಚಿ ನೀರಾಯ್ತು....
ಅದೇ ಮಳೆಯ ಕಳೆಯಾಯ್ತು
ಕುರುಡು ಬಾಳು/
ಕತ್ತಲ ಹಾದಿ...
ಕೈ ಹಿಡಿದು ನಡೆಸೋ ಒಲವಿಗಾಗಿ ಕಾಯುತಿದೆ
ಮನ ನುಡಿಸುತ್ತ ನೋವಿನ ಸನಾದಿ....
ಮನಸಿನಾಗಸದಲ್ಲಿ ಬೆಳ್ಳಿ ಮೂಡಲಿಲ್ಲ,
ನಿನ್ನ ಹೆಜ್ಜೆಯ ಸಪ್ಪಳ ಮರಳಿ ಕೇಳಲಿಲ್ಲ
ನೋವಿನ ನದಿಗೆ ದಾಟಲು ಪಾರವೆ ಇಲ್ಲ...
ಸಂಕಟದ ಹರಿವೆ ಅಪಾರವಾಯ್ತಲ್ಲ//


ನಿರಂತರ ನಿರೀಕ್ಷಿಸುತ್ತಲೆ ಇರೋದರಲ್ಲೂ
ನೋವು-ನಲಿವು ಎರಡೂ ಇವೆ....
ನೀನೆಂದೊ ಬಂದೆ ಬರುವಿ ಎಂಬ ಆಸೆ ಹುಟ್ಟಿಸುವ ನಲಿವು
ನೀ ಬಾರದ ವಾಸ್ತವದ ನಿಜವಾದ ನೋವು/
ಗಾಳಿಗೇನು ಗೊತ್ತು ನೀರಹೊತ್ತ ಮೋಡದ ಮಡಿಲ ಸಂಕಟ?
ತೇಲುತಲೆ ನೆಲವನ್ನ ತೋಯಿಸುವ ಅದರೊಡಲ ತಟವಟ....
ಕಳೆದುಕೊಳ್ಳುವ ಸಂಕಟದಲ್ಲಿದೆ ಪಾಪದ ಮುಗಿಲಲ್ಲವ?
ಮಿಕ್ಕೆಲ್ಲ ವೇದನೆಗಿಂತಲೂ ಅದು ಮಿಗಿಲಲ್ಲವ?,
ಮನದ ಗಣಿ ಅಗಿದಷ್ಟೂ ನೆನಪುಗಳ ಖನನ
ಅಲ್ಲಿ ನೀನಿದ್ದಿ...
ನೀನಿತ್ತ ನೆನಪುಗಳಿವೆ...ನೋವಿದೆ
ಮಾಸಿದ ಮುಗುಳ್ನಗೆಯೂ ಇದೆ//


ಕನಸಿನಾಚೆಗೆ ದಿಗಂತದಂಚಿಗೆ ಸೇರಿ....
ಲೀನವಾಗಿ ಹೋಗುವೊಂದಾಸೆ
ಮನದಲ್ಲಿ ಅರಳಿ ಅರಳಿ ಮತ್ತೆ ಮರೆಯಾಗುವ ಮುನ್ನ
ನೀನು ಬಾ,
ಭಾವದ ನಾಲೆಗಳೆಲ್ಲ ಎದೆಭಾರದ....
ಸಂಕಟಗಳಿಂದಲೆ ಭರ್ತಿಯಾಗಿ
ನೋವಿನ ಭರಪೂರ ನೆರೆ ಬಂದು ಕಣ್ಣ ಕೊಡಿ ಒಡೆದಿದೆ/
ನೆಮ್ಮದಿಯ ತಲಾಶಿನಲ್ಲಿರುವ ನನ್ನೆದೆಗೆ...
ನಿನ್ನ ಹೆಜ್ಜೆಗುರುತುಗಳದ್ದೆ ತೀರಲಾರದ ನಿರೀಕ್ಷೆ
ಎಳೆ ಬಿಸಿಲಿಗೆ ಬಾಡಿ ಹೋಗುವ ಪಾರಿಜಾತದಷ್ಟು ನಾಜೂಕು ನನ್ನ ಒಳಮನ,
ನೀ ಬರುವ ತನಕ ಅರಳಿಕೊಂಡೆ ಕಾಯುತ್ತಿರುತ್ತೇನ?
ನನಗೇನೂ ಅನುಮಾನ!//

ಮುಗಿಲಿನ ಕಂಗಳಿಂದ ಉದುರಿದ ಹನಿ....
ನೆಲದೆದೆಯ ತೋಯಿಸಿ ಅಲ್ಲೆ ಇಂಗುವಾಗ
ನನ್ನುಸಿರಿಗೂ ಕೂಡ ನಿನ್ನ ನೆನಪಾಯ್ತು
ಕಣ್ಣೀರುಕ್ಕಲು ಅದೇನೆ ನೆಪವಾಯ್ತು,
ಸಂತಸದ ಹೂವುಗಳು ಕನಿಷ್ಠ ಕನಸುಗಳಲ್ಲಾದರೂ....
ಆಗಾಗ ಅರಳಿ ಬಾಳನ್ನು ಆಹ್ಲಾದಕರವಾಗಿಸಿದೆಯಾದರೆ
ಅದು ಕೇವಲ ನಿನ್ನ ನೆನಪು ಮರುಕಳಿಸಿದ ಏಕೈಕ ಕಾರಣದಿಂದ/
ಮಳೆ ಮನವನ್ನೂ ಆವರಿಸಿ ಮನಸೊಳಗೂ ಸುರಿದು
ಎದೆಯ ತಂಪಾಗಿಸಿದಾಗ ನನಗೆ ನೆನಪಾದದ್ದು ಕೇವಲ ನೀನು...
ಎದೆಭಿತ್ತಿಯ ಆಸರೆಯಲ್ಲಿ ನೀನು ಬಿತ್ತಿದ ಕನಸುಗಳೆಲ್ಲ,
ಆಗಾಗ ಅಕಾಲದಲ್ಲಿ ಅರಳಿ.....
ಮನಸಿನ ಗಾಳಿಯಾಡದ ಮುಚ್ಚಿದ ಕೋಣೆಯಲ್ಲೂ ಕಂಪಿನ ಸಡಗರ ಸಂಚಯಿಸುತ್ತವೆ//

Saturday, September 24, 2011

ಮಾತು ಹಣೆದ ಸಾಲುಗಳ ಹನಿ ಸಿಂಚನ.......

ಮುಗಿಯದ ನೆನಪುಗಳ ಜಾತ್ರೆ
ಮನಸಿನ ರಾಜಬೀದಿಯಲ್ಲಿ ಸಾಗುವಾಗ.....
ಕಣ್ಣರಳಿಸಿ ಮಂತ್ರ ಮುಗ್ಧನಾಗಿ ನಿಂತ ನನಗೀಗ
ಮತ್ತೆ ಅದರಲ್ಲಿ ಕರಗಿ ಲೀನವಾಗಿ ಕಳೆದು ಹೋಗುವಾಸೆ/
ಕಣ್ಣಿನ ಕೊಳವನ್ನೆಲ್ಲ ನೋವಿನ ನೀರೆ ಆವರಿಸಿ....
ಮನಸಿನ ತೂಬು ಕಟ್ಟೆಯೊಡೆದು ಹರಿದಾಗ
ನೋಡಿದವರು ಅದನ್ನ ಕಣ್ನೀರೆಂದು ಕರೆದರು,
ದೂರದಲ್ಲೆ ಕಂಡು ನಕ್ಕು ಸನಿಹ ಸುಳಿಯದೆ ಹಾಗೆ ಮುಂದೆ ಸರಿದರು
ಬಂದು ಅದನ್ನೊರೆಸಲು ಎಲ್ಲರೂ ನೀ'ನಲ್ಲ'ವಲ್ಲ....!//



ತಪ್ಪು ಕಣ್ಗಳದಲ್ಲ ....ಅದರ ಅನುಮತಿಗೂ ಕಾಯದೆ
ಮನಸಿನಂಗಳದಲ್ಲಿ ಎಡವಿ ಬಿದ್ದ ಕನಸುಗಳದು,
ಒಲವಲ್ಲೂ ಪ್ರತಿಷ್ಠೆ ಮೆರೆವ ಹುಚ್ಚು ಹಂಬಲದ ಒಣ ಮುನಿಸುಗಳದು/
ಮುಕ್ತಿ ಇಲ್ಲದ ಈ ನಿಶಾಚರ ಯಾನಕ್ಕೆ ಬೇಕಿರೋದು
ನಿನ್ನ ಕಣ್ಣ ಹಣತೆಯ ತಿಳಿಬೆಳಕು....
ದಯವಿಟ್ಟು ನನ್ನ ಮನದ ಇರುಳಲ್ಲಿ ನೀನೊಮ್ಮೆ,
ಹಾಗೆಯೇ ಕಾರಣವಿಲ್ಲದೆ ಇಣುಕು//


ಕನಸ ಹೆಣ ಹೊತ್ತ ಮನದ ಬಂಡಿಯಲ್ಲಿ
ಕ್ಷಣ ಕ್ಷಣಕ್ಕೂ ಮಣದಷ್ಟು ಭಾರ ಹೆಚ್ಚುತ್ತಲೇ ಹೋಗುತ್ತಿದೆ...
ನಿಲ್ದಾಣ ಗೊತ್ತಿಲ್ಲ,
ಕಣ್ಣು ಹಾಯಿಸಿದಷ್ಟು ದೂರವೂ ನೀನೆಲ್ಲೂ ಕಾಣುತ್ತಿಲ್ಲ/
ಮೆಲ್ಲ ನಿನ್ನ ಮೆಲುನಗೆ ಕೇಳಿದಂತಾಯ್ತು...
ನಿನ್ನುಸಿರು ನನ್ನೆದೆಯ ಸವರಿದಂತಾಯ್ತು,
ನೀನಿರಲಿಲ್ಲ...ನಿನ್ನ ನೆನಪ ನೆರಳಿತ್ತು
ಸುತ್ತಲೂ ಮೌನ ಹರಡಿದ ಇರುಳಿತ್ತು//


ಮೌನದಲ್ಲೊಂದು ಕಂಪನ....
ಮಾತು ಹಣೆದ ಸಾಲುಗಳ ಹನಿ ಸಿಂಚನ,
ಅದು ನೀನೇನಾ?
ಇಲ್ಲಾ,ಬರೇ ನಿನ್ನ ನೆನಪುಗಳಷ್ಟೇನ?/
ಮುತ್ತಿನಂತ ಮಳೆಯ ಬಿಂದು...
ಸದ್ದಿಲ್ಲದೆ ಇಳೆಗಿಳಿದು ಬಂದು
ನನ್ನೆದೆಯನ್ನೂ ತೋಯಿಸಿದೆ,
ಸಂತಸದಲೆಯಲ್ಲಿ ಮನಸ ಮೀಯಿಸಿದೆ//

ಕನಸುಗಳಿಗೀಗ ಹದಿಹರೆಯ......

ನಿನ್ನ ಕಣ್ಣು ಹೆಣೆದ ಸಂಚಿನ ಬಲೆಯಲ್ಲಿ.....
ಬಯಸಿ ಬಯಸಿ ಸಿಕ್ಕು ಸೆರೆಯಾದ
ನನ್ನ ಕನಸುಗಳಿಗೀಗ ಹದಿಹರೆಯ,
ಮೌನದಾಳದಲ್ಲಿ ಅಡಗಿದ್ದ ನನ್ನ ಆಕ್ಷಾಂಶೆಗಳು
ನಿನ್ನ ನಗುವಿನ ಗಾಳಕ್ಕೆ ಸಿಲುಕಿ ಮೇಲೆದ್ದು ಬಂದವು...
ಬಾಳಲ್ಲಿ ಕೊನೆಗೂ ಒಲವ ಬೆಳಕ ಕಂಡವು/
ಸಂಜೆ ಕಾಲದ ಸಂಕಟದ ಕ್ಷಣಗಳು ಕಾಡಿಸಿದ ಮೌನದುದ್ದಕ್ಕೂ....
ಕಣ್ಣಿನಿಂದ ಜಾರಿದ ಪ್ರತಿಯೊಂದು ಹನಿಗಳೂ
ನಿನ್ನನ್ನೆ ನೆನಪಿಸಿ ಹರಿದುಹೋದವು,
ನನ್ನೆದೆಯ ರಾಗಕೆ ನಿನ್ನುಸಿರ ತಾಳದ ಜೊತೆ ಸಿಕ್ಕಿದ್ದಿದ್ದರೆ
ಬಾಳಿನಲಿ ಎಂದೆಂದೂ ಮರೆಯಲಾಗದ ಗಾನವೊಂದು ಅರಳಿ ನಿರಂತರವಾಗಿ ಹರಿಯುತ್ತಿತ್ತು//


ನೆನಪಿನ ಹನಿಗಳನ್ನೂ ಸುರಿವ ಮಳೆಯಲಿ ನಿತ್ಯ ಲೀನ ಮನಸು...
ಹಗಲಲ್ಲೂ ನನಗೆ ನಿನ್ನೆದೆಯಲ್ಲೇ ಕರಗಿ ಹೋದಂತ ಕನಸು,
ವಾಸ್ತವವಲ್ಲ...ಗೊತ್ತಿದೆ ಇದು ಭ್ರಮೆಯೆಂದು
ನನಗೆ ನಾನೆ ನಿವೇದಿಸಿಕೊಳ್ಳುವ ಹಿತವಾದ ಕ್ಷಮೆಯೆಂದು/
ನಿನ್ನ ಕಣ್ಣ ಚಿಟ್ಟೆ ಆಹ್ವಾದಿಸಿದ ಹೂವು ನನ್ನ ಮನ....
ನಿನ್ನ ತುಟಿ ದುಂಬಿ ಒಲವನ್ನೆಲ್ಲ ಹೀರಿದ ಪುಷ್ಪ ನನ್ನೆದೆ
ಇನ್ನು ನೀನಿಲ್ಲದೆ ಬಾಳೆಲ್ಲ ಬರಿದೆ....ಬರಿ ಬರಿದೆ//


ನೆನ್ನೆಗಳನ್ನ ಗುಣಿಸಿ...
ನಾಳೆಗಳಷ್ಟನ್ನು ಅವಕ್ಕೆ ಕೂಡುವ
ನನ್ನೊಳಗಿನ ಆಸೆಗಳನ್ನೆಲ್ಲ ಭೀಕರವಾಗಿ ಭಾಗಿಸಿ,
ಹೇಳದೆಯೆ ನೀ ಹೊರಟುಹೋದ ನಂತರ
ಕನಸುಗಳು ಅವೆಲ್ಲೋ ಕಳೆದೇಹೋದವು/
ಎಲ್ಲೋ ಅರಳಿದ ಮೊಗ್ಗು....
ಇನ್ನೆಲ್ಲೊ ಅರಳಿ ಹೂವಾಗಿ
ಕಂಪು ಚಲ್ಲಿದ ಹಾಗೆ,
ನನಸಿನಲ್ಲಿ ಮರೀಚಿಕೆಯಾದ ನಿನ್ನ ಹೂನಗೆ ನನ್ನ ಕನಸಿನಲ್ಲಿ//


ಮೌನ ಮಾತಾಗಿ...ಏಕಾಂತ ಎದೆತುಂಬಿ
ಮನದಂಗಳದಲ್ಲಿ ಅರಳಿದ ಹೂವು
ಹೊತ್ತಿರೋದು ನಿನ್ನುಸಿರ ಕಂಪು,
ನಿನ್ನ ಕೆನ್ನೆ ಕಡಕೊಟ್ಟ ಕೆಂಪು/
ನೆನೆದಷ್ಟೂ ಮಧುರ...
ನುಡಿದಷ್ಟೂ ಸಾಲದದರ ಸಾರ,
ಮೋಹವೆಂದರೆ ಇದೇನಾ?
ಪ್ರೀತಿಯೆಂದು ಕರೆಯೋದು ಇದನ್ನೇನ?//

ಮಾತಿನ ನಡುವೆ ಮೌನದಲ್ಲಿ.......

ನಿನ್ನುಸಿರ ಲೋರಿಯಲ್ಲಿ...ನಿನ್ನ ನೆನಪ ಲಾಲಿಯಲ್ಲಿ
ಲೀನವಾದ ನನ್ನ ಭಾವುಕ ಮನಸಿಗೆ,
ನೆನ್ನಿನಿರುಳು ಕಪಟವರಿಯದ ಪುಟ್ಟ ಕಂದನಂತೆ ನೆಮ್ಮದಿಯ ನಿದಿರೆ/
ನಿನ್ನ ನೆನೆಯುವಾಗಲೆಲ್ಲ ಅವರ್ಚನೀಯ ಆನಂದದ ಎಳೆಯೊಂದು
ಎದೆಯನ್ನವಚಿಕೊಂಡಂತೆ,
ಮನದ ಚಾವಡಿಯಿಂದ ಸಂತಸದ ಅಂಗಳಕ್ಕೆ ಮಗುವೊಂದು ಕವಚಿಕೊಂಡಂತೆ
ಸಂಭ್ರಮಿಸುತ್ತದೆ ಭಾವದಲೆಗಳು//


ಸಾಲು ದೀಪಗಳ ಸಾಲಿನಲ್ಲೂ ನಿನ್ನ ಹೊಳೆವ ಕಂಗಳ ಬೆಳಕನ್ನ
ದೂರದಿಂದಲೆ ಸರಿಯಾಗಿ ಗುರುತಿಸಬಲ್ಲೆ,
ಇತ್ತಲ್ಲ ಬಹುಕಾಲ ನನ್ನ ಮನಸು ಪೂರ
ಒಂದೊಮ್ಮೆ ಅಲ್ಲೆ!/
ನೋವು ಖಚಿತ...ನೆನಪುಗಳಷ್ಟೆ ಉಚಿತ
ಎಂಬುದರ ಅರಿವಿದ್ದರೂ ನಿನ್ನನು ಇದೇ ಅವೇಗದಲ್ಲಿ ಪ್ರೀತಿಸಿಯೆ ತೀರುತ್ತಿದ್ದೆ,
ಕ್ಷಣವಾದರೂ ನಿನ್ನವೆರಡು ಕಣ್ಣ ಬೆಳಕನ್ನೆಲ್ಲ
ನನ್ನ ಬಾಳ ಕತ್ತಲು ಕಳೆಯಲು ಹೀರುತ್ತಿದ್ದೆ//



ಕನಸಿಗಿಲ್ಲ ನೋಡು ಸುಂಕ,ಅದಕ್ಕೆ...
ಹೊತ್ತಲ್ಲದಹೊತ್ತಲ್ಲೂ ನಿನ್ನ ಕನವರಿಸಲು ನನಗಿಲ್ಲ ಆತಂಕ,
ಹೀಗೆ ನಿತ್ಯ ನೀ ಬರುವ ಹಾಗಾದರೆ ಸ್ವಪ್ನದೊಳಗೆ
ಬಾಳು ಮರಳಿ ಏರೀತು ಸಂತಸದ ಹಳಿಗೆ/
ಇರುಳಿನ ನೆರಳಿನ್ನೂ ಕನಸಿಂದ ಸರಿದಿಲ್ಲ
ನಿನ್ನ ಮರುಳಿನ್ನೂ ಮನಸಿಂದ ಅಳಿದಿಲ್ಲ,
ಮೌನದಲ್ಲೂ ನಿನ್ನೊಂದಿಗೆ ಮಾತನಾಡುತ್ತೇನೆ
ಮಾತಿನ ನಡುವೆ ಮೌನದಲ್ಲಿ ಲೀನವಾಗುತ್ತೇನೆ//


ದಿನ ಮುಳುಗುವ ಹೊತ್ತು...ನಿನ್ನ ನಿರೀಕ್ಷೆಯ ಮಿಣುಕು ಹಣತೆ ಹೊತ್ತು
ಇರುಳಿಡೀ ಧೀಪದಾರಿಯಾಗಿ....ನೀ ಬರುವ ಹಾದಿಯಲ್ಲೆ ಬೆಳಕುಬೀರುತಿರುತೀನಿ,
ನಿನಗಾಗಿ ರೆಪ್ಪೆಗೂಡಿಸದೆ ಯಾವಾಗಲೂ ಕಾಯುತಿರುತೀನಿ/
ಮುಕ್ತ ಹಾದಿಯಲ್ಲಿ ಕೇವಲ ಕನಸ ಬೆಳಕಿನಾಸರೆಯಲ್ಲಿ
ಮೌನವಾಗಿ ಹೆಜ್ಜೆ ಹಾಕುತ್ತ ಬಾಳಿನುದ್ದಕೂ,
ನಿನ್ನ ನೆನಪನೆ ಗುನುಗುತಿರುತೀನಿ....ನಿನ್ನೊಲವ ಸವಿಯಲ್ಲೆ ನಾನು ನಿರಂತರ ಕರಗುತಿರುತೀನಿ//

Thursday, September 22, 2011

अक्सर आप आते खयालोमे...

मालूम नहीं क्यू ये लगता है,
मन सूना सूना यु रहता है/
जब साथ आपथे थो बात कुछ और थी,
अबथो सिर्फ तनहा राते ही नसीब है//

मोव्सम तब सुहाना था,
जब आप के एक नज़र मेरे ज़िन्दगीमे लायाता बहार/
वो बात कुछ और थी...के आपके हँसी रोशनी लाथीथी अक्सर अपने साथ,
ये वक्त कुछ और है....अबथो बस अन्देराका है अनगिनत बात//

Saturday, September 17, 2011

"ಸತ್ಯಾನಿಕಿ ಜಯಂ ಉಂಟುಂದಿ.....?!"

ಪುರಾತನ ಪಾತಕಿಯೂ,ಕ'ಮಲ' ಪಕ್ಷದ ಬೂಸಿಯ ಸಂಪುಟದಲ್ಲಿದ್ದ ತೆಲುಗು ಸಿನೆಮಾದ 'ರೇಪು ಚೇಸಿನ ರೇಪಿಸ್ಟ್'("ಆದಿ ರೇಪು ಕಾದು...ನಾವಿಬ್ಬರೂ ಸೇರಿ ನೆನ್ನೆಯೆ ಮಾಡಿ ಮುಗಿಸಿದೀವಿ?!" ಅನ್ನೋದು 'ರಸಿಕ' ರೇಣು ಯಾರೂ ಕೇಳದಿದ್ದರೂ ಸ್ವಪ್ರೇರಿತರಾಗಿ ಕೊಡುತ್ತಿರೊ ಸಮಜಾಯಷಿ!) ಲುಕ್ಕಿನ ಆ(ಯೋ)ರೋಗ್ಯ ಸಚಿವನೂ,"ಮಂಡ್ಲೂರು ರೌಡಿಗಳ ನಿರ್ನಾಮಕ್ಕೆ ಹಾಗು ಬಳ್ಳಾರಿಯಲ್ಲಿ ಧರ್ಮಸಂಸ್ಥಾಪನೆಗೆ ಅವತಾರ ಎತ್ತಿ ಬಂದ ಅವತಾರ ಪುರುಷ ಆತ,ದುಷ್ಟ ಸಂಹಾರದಲ್ಲಿ ಒಂದೆರಡು ಕೊಲೆಮಾಡೋದೆಲ್ಲ ಆ ಪುಣ್ಯ ಪುರುಷನಿಗೆ ಮಾಮೂಲು" ಎಂದು ಕೆರೆದು-ಕೊರೆದು ಅವನಿಟ್ಟ ಸ'ಗಣಿ'ಯನ್ನು ಕಂಠಮಟ್ಟ ತಿಂದ ಋಣಕ್ಕೆ ಕೆಲವು 'ಶ್ರೀಮಾಮುಲು' ಶೈಲಿಯ ಕರಿ ಕರಪತ್ರಿಕೆಗಳ ಕರಡಿ 'ಸಂಪಾದಕ'ರಿಂದ (ಅವರು ಇಷ್ಟೆಲ್ಲಾ ಸಂಪಾದಿಸಿದ್ದು ಕೇವಲ ಪತ್ರಿಕೆಯಲ್ಲಿ ಬರೆದೊ?,ಇಲ್ಲ ಕಂಡವರನ್ನು ಪೆನ್ನಲ್ಲೆ ಹೆದರಿಸಿ ಹೆರೆದೊ ಎಂಬ ಸಂಶಯ ಕನ್ನಡಿಗರಿಗೆ ಯಾವಾಗಿನಿಂದಲೂ ಇದ್ದೇ ಇದೆ!) ಎಕ್ಕಮಕ್ಕ ಹೊಗಳಿಸಿಕೊಂಡ ಈಗಾಗಲೆ 'ನೊಂದ' ಶ್ರೀರಾಮುಲು ಈಗ ಇನ್ನಷ್ಟು ನೊಂದು ಮುಲುಗುಡುವುದು ಖಾತ್ರಿಯಾಗಿ ಹೋಗಿದೆ! ಅತ್ತ ತಾನು ನಂಬಿದ ರೆಡ್ಡಿ 'ಜನಾರ್ಧನ'ನ ಜನ್ಮಸ್ಥಾನದಲ್ಲಿ ಖಾಯಂ ಬೀಡು ಬಿಡುವ ಸೂಚನೆ ಸ್ಪಷ್ಟವಾಗಿರುವಾಗ ;ಏನೋ ಆಡಾಡುತ ತಾನು ತಮಾಷೆಗೆ ಕೊಟ್ಟ ರಾಜಿನಾಮೆಯನ್ನ ಸ್ಪೀಕರ್ ಭೂ(ಬೋ)ಪ ಕಡೆಗೂ ಅಂಗೀಕರಿಸಿ ಮಾಜಿ ಸಚಿವನಾಗಿದ್ದ ತನ್ನನ್ನ ಈಗ ಮಾಜಿ ಶಾಸಕನನ್ನಾಗಿಯೂ ಆಗಿಸಿ ಅಂಗಿ ಹರಿದುಕೊಳ್ಳುವಂತೆ ಮಾಡಲಿದ್ದಾನೆ!



ಈ "ಅಜ್ಞಾತ ಸ್ಥಳ" ಎಲ್ಲಿದೆ ಎಂದು ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ಹೇಳಿ ಪುಣ್ಯಕಟ್ಟಿಕೊಳ್ಳಿ! ಯಾವಾಗ ನೋಡಿದರೂ ಸರಕಾರದಲ್ಲಿ ಬಿಕ್ಕಟ್ಟು ಉಂಟಾದಾಗ ಎಲ್ಲಾ ಶಾಸಕರು "ಅಜ್ಞಾತ ಸ್ಥಳಕ್ಕೆ" ಹೋಗುವುದು ಇತ್ತೀಚಿನ ದಿನಗಳಲ್ಲಿ ತೀರಾ ಮಾಮೂಲಾಗಿ ಹೋಗಿದೆ.ಅವರ ಸಕಲೆಂಟು ಶೋಕಿಗಳ ಜೊತೆಗೆ ಗುಂಡು-ತುಂಡು-ಸಮೃದ್ಧ 'ತೀರ್ಥ' ಸಮಾರಾಧನೆ ನಡೆಯುವ ಅಲ್ಲಿಗೆ ಅವರನ್ನ ಇತ್ತೀಚೆಗೆ ಕುಮಾರಣ್ಣ,ಗಣಿಧಣಿಗಳು,ತೀರ ಇತ್ತೀಚಿಗೆ ಒತ್ತಾಯಕ್ಕೆ ಬಸಿರಾದವರಂತೆ ರಾಜಿನಾಮೆ ಕೊಟ್ಟ ಬೂಸಿಯ,ಈ ಕಡೆ ಶಟ್ಟರ್ ಬಳಗ ಹೀಗೆ ಎಲ್ಲರೂ ಅದೇ "ಅಜ್ಞಾತ ಸ್ಥಳ"ದಲ್ಲಿ ಕೂರಿಸಿ ಖಾತಿರ್'ದಾರಿ ಮಾಡಿದ್ದರು.ಶ್ರೀಸಾಮಾನ್ಯರಿಗೆ 'ಪ್ರವೇಶ ನಿಷೇಧಿಸಲಾಗಿರುವ' ಈ ಶಾಶ್ವತ "ಅಜ್ಞಾತ ಸ್ಥಳ' ಕನ್ನಡಿಗರಿರ ಪಾಲಿಗಂತೂ ಒಂದು ವಿಸ್ಮಯವಾಗಿಯೆ ಉಳಿದು ಬಿಟ್ಟಿದೆ.ಮನೆ ಬಿಟ್ಟು ದೂರದಲ್ಲಿ ಟೆಂಟು ಹಾಕಿದ್ದರೂ ಅವರ "ಯೋಗ ಕ್ಷೇಮ"ದ ಮಹಾಮ್ಯಹಂ ಕಂಡು ಕನ್ನಡಿಗರೆಲ್ಲರೂ ಕಂಗಾಲಾಗುವುದನ್ನು ಜೀವನದ ರೊಟೀನ್ ಮಾಡಿಕೊಂಡಿದ್ದ ಕನ್ನಡಿಗರು ಇನ್ನೇನನ್ನೂ ಮಾಡಲಾಗದೆ ಕ್ರಮೇಣ ಅದಕ್ಕೆ ಅನಿವಾರ್ಯವಾಗಿ ಒಗ್ಗಿಹೋಗಿದ್ದರು.



ಜಗತ್ತಿನಲ್ಲಿ ಲಭ್ಯವಿರುವ ಎಲ್ಲಾ ಮಾರ್ಜಕಗಳನ್ನೂ ಸರದಿಯ ಮೇಲೆ ಸುರಿದು ಅತ್ತ ಹೈದರಾಬಾದಿನಲ್ಲಿರುವ "ಸಿಬಿಐ ಮಸಾಜ್ ಪಾರ್ಲರ್'ನಲ್ಲಿ" ಸ'ಗಣಿ' ತಿಂದು ಗಬ್ಬುನಾತ ಹೊಡೆಯುತ್ತಿರುವ ಜನತಾ 'ಜನಾರ್ಧನ'ನನ್ನು ಅಲ್ಲಿನ ನುರಿತ ಮಸಾಜರ್'ಗಳು ತಿಕ್ಕಿತಿಕ್ಕಿ ತೊಳೆದು ಚೊಕ್ಕ'ಚಿನ್ನ'ವಾಗಿಸುತ್ತಿರುವ ಶುಭಸಂದರ್ಭದಲ್ಲಿ ;ಇತ್ತ ಅವರಷ್ಟೆ 'ಗಣಿ'ಧೂಳಿನಿಂದ ಮಿಂದು ಗಲೀಜಾಗಿರುವ 'ನೊಂದ ಸ್ವಾಭಿಮಾನಿ ಶ್ರೀರಾಮುಲು'ವಿಗೂ ಅಲ್ಲಿಯೆ ಒಂದು ಭರ್ಜರಿ ಅಭ್ಯಂಜನ ಮಾಡಿಸೋಣ ಅಂತಂದುಕೊಂಡು ಟಿಕೇಟೆ ಇಲ್ಲದೆ 'ಹೈದರಾಬಾದ್ ಗೋಲಿ' ನುಂಗಿಸಿ 'ಏರೋಪ್ಲೇನ್' ಏರಿಸಿಬಿಡೋದರಲ್ಲಿ ನಿಷ್ಣಾತರಾದ ಅಲ್ಲಿನ ತರಬೇತಾದ ಬೇಟೆಗಾರರು ತಮ್ಮ ಬೋನು ಹಿಡಿದು ಬಳ್ಳಾರಿಗೆ ಬಂದು ಹುಡುಕಿದರೆ ಈ ಕಾಡುಪಾಪ ಪಾಪ ಅವರ್ಯಾರ ಕೈಗೂ ಸಿಗದೆ ಮತ್ತದೆ "ಅಜ್ಞಾತ ಸ್ಥಳ"ದಲ್ಲಿ ತಲೆಮರೆಸಿಕೊಂಡುಬಿಟ್ಟಿದೆ.


ಅದು ಹೇಗೆ ತೊಳೆದರೂ ಹೋಗದ ಕೊಳೆ ಅಂಟಿಕೊಂಡಿರುವ ಈ 'ನೊಂದ ಸ್ವಾಭಿಮಾನಿ'ಯನ್ನ ಅದು ಹೇಗಾದರೂ ಸರಿ ಸೆರೆ ಹಿಡಿದು ರೆಡ್ಡಿಯೊಡನೆ ಒಂದು ರೌಂಡು ಮೀಯಿಸಿಯೆ ತೀರೋಣ ಅಂದುಕೊಂಡರೆ ಕನಿಷ್ಠ ಮೊಬೈಲನ್ನೂ ಬಳಸದಂತೆ ಗುಪ್ತ್'ಗುಪ್ತ್ ವ್ಯವಸ್ಥೆ ಮಾಡಿಕೊಂಡ ಕನ್ನಡದ ಕರಿ'ಕರ'ಪತ್ರಿಕೆಯೊಂದರ 'ಅಕ್ರಮ' ಸಂಪಾದಕನಿಂದ 'ನಡತೆ(ಗೆಟ್ಟ) ಪ್ರಮಾಣಪತ್ರ' ಖರೀದಿಸಿರುವ ಈ ಮರ್ಯಾದ ಪುರುಷೋತ್ತಮನ ಹೆಸರು ಹೊತ್ತ ಆದಿಮಾನವ ಅದೆಲ್ಲೊ ಮೊದಲೆ ಕಳೆದು ಹೋಗಿರುವ ಮಾನವನ್ನು ಇನ್ನೊಮ್ಮೆ ಬಿಟ್ಟು ಮತ್ತೆ ತಲೆಮರೆಸಿಕೊಂಡಿದೆ.ಕಳೆದವಾರ ಪದೇಪದೇ ಪದ್ಮನಾಭನಗರದ ಸುತ್ತಮುತ್ತ ಈ ಮಾಜಿ ಸಚಿವನ 'ಲ್ಯಾಂಡ್ ರೋವರ್' ಠಳಾಯಿಸಿದ್ದನ್ನು ಕಂಡವರಿಗೆ ಶ್ರೀರಾಮುಲು ಕಾಸುಕೊಟ್ಟು ದತ್ತಕಕ್ಕೆ ಖರೀದಿಸಿರುವ ಈ ಅರ್ಜೆಂಟ್ 'ಅನ್ನಯ್ಯ'ನೂ ಆಗಿರುವ ಕರಡಿ ಸಂಪಾದಕನ ಮನೆಯಲ್ಲೆ ಎಲ್ಲಾದರೂ ಆ "ಅಜ್ಞಾತ ಸ್ಥಳ" ಇದ್ದಿರಬಹುದ ಅಂತ ಸಣ್ಣದೊಂದು ಗುಮಾನಿ ಮೊಳೆತಿದೆ!" ಸದ್ಯ ರಾಮುಲು ವಿದೇಶಕ್ಕೆ ಹೋಗಿ ಅಡಗಿಕೊಂಡಿರೊ ನಕಲ ಸಾಧ್ಯತೆಯೂ ಇದೆ!" ಎನ್ನುವ ಗಾಳಿಸುದ್ದಿಯನ್ನು ಕರಿ'ಕರ'ಪತ್ರಿಕೆ ಉದ್ದೇಶಪೂರ್ವಕವೆನ್ನುವಂತೆ ಹರಡುತ್ತಿರೋದು ಕೂಡ ಈ ಗುಮಾನಿಯನ್ನ ಇನ್ನಷ್ಟು ಹೆಚ್ಚಿಸುತ್ತಿದೆ.

ಕೇವಲ ತಿಂಗಳ ಹಿಂದಿನ 'ಸ್ವಾಭಿಮಾನಿ' ಶ್ರೀರಾಮುಲುವಿಗೂ ಈಗ ತಲೆತಪ್ಪಿಸಿಕೊಂಡು 'ಬರೇಮನಿ' ಹೊತ್ತು ಓಡಿಹೋಗಿರುವ ಈ ಇನ್ಸ್'ಟೆಂಟ್ 'ನೊಂದವ'ನಿಗೂ ಹೋಲಿಕೆಕಾಣದೆ ಕಕ್ಕಾಬಿಕ್ಕಿಯಾಗುವ ಸರದಿ ಈಗ ಬಡಕನ್ನಡಿಗನದ್ದು.ಅಡಿಪಾಯದ ಕುರುಹೂ ಉಳಿಯದಂತೆ ಇದೇ ಕಪಿ ಹಿಂದೊಮ್ಮೆ ಹಾವಳಿಯಿಟ್ಟು ಕೆಡವಿ ಹಾಕಿದ "ಸುಗ್ಗುಲಮ್ಮ"ನ ಶಾಪದ ಪರಿಣಾಮವೇನಾದರೂ ಇದಾಗಿದ್ದಿರಬಹುದ? ಇಲ್ಲ ರೆಡ್ಡಿ ಗ್ಯಾಂಗಿನ ಅತಿ ಹಾರಾಟಕ್ಕೆ ಆಗ ನೊಂದು "ನಂಬಿದವರನ್ನು ಕೈಬಿಟ್ಟೆ!" ಎಂದು ಅದ್ಯಾರನ್ನೂ ನೆನೆಸಿಕೊಂಡು ಟಿವಿ ಕ್ಯಾಮರಾಗಳ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದ ಬೂಸಿಯರ ಕಣ್ಣೀರ ಶಾಪವೆನಾದರೂ...ಅದೇನೆ ಇರಲಿ ಈಗ ತೆರೆಮರೆಯಲ್ಲೆ ಬೂಸಿಯ ಕೊಡುವ ಒಂದು ಇಶಾರೆಗೆ ರಂಗಸ್ಥಳದಲ್ಲಿ ಹಲ್ಲು ಬಿಡೋದರಲ್ಲಿ ಸರಿಸಾಟಿಯಿಲ್ಲದ 'ಸದಾನಂದ'ದಿಂದಿರುವವರೇನಾದರೂ ಅಪ್ಪಿತಪ್ಪಿ ಸಮ್ಮತಿಯ ನಗುವನ್ನ ಗಹಗಹಿಸಿ ಮುದ್ರೆ ಒತ್ತಿಯೆ ಬಿಟ್ಟರೆಂದರೆ ಮುಗೀತು,ಸದ್ಯ ಬೋಪನ ಕೈಲಿರುವ ರಾಮುಲು ರಾಜಿನಾಮೆಯ ಭವಿಷ್ಯ ಅತಿಕರಾಳವಾಗಲಿದೆ.ರಾಜಕೀಯ ಆಟದಲ್ಲಿ 'ಟೈಮ್ ಪ್ಲೀಸ್' ಎನ್ನುವ ಅವರ ಆರ್ತನಾದಕ್ಕೆ ಕೊಪ್ಪಳ ಚುನಾವಣೆಗೆ ಸರ'ಕಾರಿ'ನಲ್ಲಿ ಬಂದು ತನು-ಮಾನ-ಧನದಿಂದ ದುಡಿಯುವ ಆಳುವ ಮಂದಿ ಅದಕ್ಕೊಂದು ಗೆಲುವಿನ ತಾರ್ಕಿಕ ಅಂತ್ಯ ಕಾಣಿಸುತ್ತಿದ್ದಂತೆ ಶ್ರೀರಾಮುಲು ಕಥೆಯೂ ದಾರುಣ ಅಂತ್ಯ ಕಾಣಲಿದೆ.ನಂತರ 'ನೊಂದ' ಅವರು ಇನ್ನಷ್ಟು ಮುಲುಗುತ್ತಲೇ ಶೇಷಾಯುಷ್ಯವನ್ನ ಅದೇ "ಅಜ್ಞಾತ ಸ್ಥಳ"ದಲ್ಲಿ ಸವೆಸಬಹುದು....ಅಂತೂ ಅವರ ಪರಮ ಚೋರಗುರು "ಸತ್ಯಾನಿಕಿ ಜಯಂ ಉಂಟುಂದಿ" ಅಂದದ್ದು ಕಡೆಗೂ ಸುಳ್ಳಾಗಲೇಯಿಲ್ಲ! (ಬಹುಷಃ ಈ ಚಂಡಾಳ ಶಿಷ್ಯನನ್ನ ನೆನೆದೆ ಅವರಿಗೆ ಆವಾಗ ಆ ಪರಮ ವಾಕ್ಯ ಹೊಳೆದಿರಬಹುದ?) ಪಾಪ,ಶ್ರೀರಾಮುಲು?!

Thursday, September 15, 2011

ಬೋಳಿಸಿದರೂ ಬಿಟ್ಟು ಹೋಗದ ಬಹಿಷ್ಕಾರದ ಮಾರಿ...ಇದು ಮುನಿಯನ'ಮಾದರಿ'!....

'ವಿಜಯಲಕ್ಷ್ಮಿ ಮುಂದಿನ ಜನ್ಮದಲ್ಲಿ ನನ್ನ ತಂಗಿಯಾಗಿ ಉಟ್ಟಲಿ!" ಅಂತ ನಿರ್ಮಾ'ಪೆಕರರ' ಸಂಘದ ಅಧ್ಯಕ್ಷ 'ಮನಿ'ರತ್ನ ಅಲಿಯಾಸ್ ಕಾರ್ಪೊರೇಟರ್ ಕಂ ಮುನ್ಸಿಪಾಲ್ಟಿ ಮೆಂಬರ್ ಮುನಿರತ್ನಂ ನಾಯ್ಡು ಅಂದದ್ದು ಥೇಟ್ ಅಳಿದೂರಿಗೆ ತೆನೆ ಹೊರೋಕೆ ಉಳಿದ "ಪಿತೃಪಕ್ಷ"ದ ದೇವೇಗೌಡರ 'ಮುಂದಿನ ಜನ್ಮದಲ್ಲಾದರೂ ನಾನು ಮುಸ್ಲೀಮನಾಗಿ ಹುಟ್ಟಬೇಕು' ಎನ್ನುವ ಇಫ್ತಿಹಾರ್'ಕೂಟದ ಇನ್ಸ್ಟೆಂಟ್ ಉದ್ಗಾರದ ಪ್ರತಿಧ್ವನಿಯೇ ಕೇಳಿ ಬಂದಂತಾಗಿ ಕನ್ನಡಕುಲಕೋಟಿ ಈ ಕೋತಿಗಳ ದಿನಕ್ಕೊಂದು ಮಂಗ್ಯಾಟ ನೋಡಿ ಪಕಪಕನೆ ನಗುವ ಜೊತೆಜೊತೆಗೆ,ಈ ಮೇಲಿನ ಮಾತಿನಷ್ಟೆ ಅಸ್ಪಷ್ಟವಾಗಿ ಸರಿಯಾದ ಅಡ್ರಸ್ಸೆ ಇಲ್ಲದ-ಯಾರಿಗೆಂದು ತಿಳಿಯದಂತೆ ಈ ಅಧ್ಯಕ್ಷರು ಬರೆದು ಮಾಧ್ಯಮಗಳ ಮುಂದೆ ಬಿಸಾಕಿರುವ ಕ್ಷಮಾಪಣೆ ಪತ್ರದಲ್ಲಿ ಆಗಿರುವ ಕಸ್ತೂರಿ ಕನ್ನಡದ ಕಗ್ಗೊಲೆಯನ್ನ ನೋಡಿ ಕಂಗಾಲಾಗಿದ್ದಾರೆ!


'ಇದು ದರ್ಮಸ್ತಳ ಮಂಜು'ನಾತ'ಸ್ವಾಮಿ ನೆನ್ನೆ ನನ್ನ ಕನಸಿನಲ್ಲಿ ಬಂದು ಏಳಿದ್ದು...' ಎಂದು ಆರಂಭವಾಗಿ '...ಇದೆ ರೀತಿ ನೂರು ಜನರಿಗೆ ನಾಳೆಯೆ ಕಾಗಜ ಬರೆದು ಆಕದಿದ್ದರೆ ರಕ್ತಕಾರಿ ಸಾಯುತ್ತಿರಿ....!' (ಇರಬೇಕಾದ ಕಡೆ ಅಲ್ಪವಿರಾಮ,ಒತ್ತಕ್ಷರ,ಪೂರ್ಣವಿರಾಮ ಇವ್ಯಾವುದರ ಹಂಗೂ ಇಲ್ಲದೆ ಓತಪ್ರೋತವಾಗಿ ಬರೆದ ಇಂತಹ ಪತ್ರವನ್ನ ಮೊದಲ ಬಾರಿಗೆ ಓದುವಾಗಲೆ ;ಅದನ್ನೋದಿದ ನಾವು ಅನೇಕ ಬಾರಿ ರಕ್ತಕಾರುವ ಸ್ಥಿತಿಗೆ ತಲುಪಿ ಬಹಳ ಕಷ್ಟದಿಂದ ಬದುಕಿ ಬಂದಿರುತ್ತೇವೆ! ಅಂತದ್ದರಲ್ಲಿ ದಿನಾ ಇಂತದ್ದೆ ನೂರು ಜನರನ್ನ ಹಿಡಿದು ಬಲಿ ಹಾಕುತ್ತ ನಿರಂತರ ರಕ್ತಕಾರಿ ಸಾಯುತ್ತಿರಿ" ಎಂಬ ಕೊನೆ ಸಾಲಿನ ಶಾಪ ಬೇರೆ ಕೇಡು!) ಹೀಗೆ ತಪ್ಪುತಪ್ಪು ಕನ್ನಡದಲ್ಲಿ ಅದೆಲ್ಲಿಂದಲೊ ಬರುವ ಆಕಾಶ(ಹ)ರಾಮರ ಬೆಂಬಿಡದ ಬೆದರಿಕೆ ಪತ್ರಗಳ ಪಡಿಯಚ್ಚಿನಂತಿದ್ದ 'ಕನ್ನಡೆಮ್ಮೆಯ ಪುರಾತನ ಕರು' ಮುನಿಯನ ಅದೆ ಮಾದರಿ ಪತ್ರದ ಸಾರಾಮೃತ ಇಷ್ಟು.


"ಕನ್ನಡದ ಉತ್ತಮ ಸಂಪ್ರದಾಯಸ್ತ ,ಗೌರವಸ್ತ,ಸಾದ್ವಿ,ಸದ್ಗುಣ ಸಂಪನ್ನೆ,ಕಳಂಕ ರಹಿತೆ,ಹಾಲಿನಂತ ಮನಸ್ಸುಳ್ಳವರ ಸಮಾನರಾದ ಬಾರತದ ಬಹು ಬಾಷಾ ನಟಿ ನಿಕಿತಾ ರವರಿಗೆ ಕನ್ನಡ ಚಿತ್ರದಲ್ಲಿ 3 ವರ್ಷ ನಟಿಸಬಾರದು ಎಂದು ಅಂದದ್ದು ನಮ್ಮ ಮೂರ್ಕತನ.
ಇಷ್ಟು ಒಳ್ಳೆಯ ಹೆಣ್ಣು ಮಗಳಿಗೆ ನಿಷೇದ ಏರಿರುವುದು ತಪ್ಪು ಎಂದು ನಮಗೆ ಅರಿವಾಗಿದೆ.
ಕಾರಣ ಏನೆಂದರೆ ಹಲವಾರು ಬುದ್ದಿ-ಜೀವಿಗಳು ನಿಷೇದ ಏರಿರುವುದು ತಪ್ಪು,
ಹಿಂತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿರುತ್ತಾರೆ.
ಇದು ಸ್ವತಂತ್ರ ಬಾರತ,ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು.ಬರ ಬಹುದು ಅದನ್ನು ತಡೆಯಲು ನಾವು ಯಾರು?
ಇನ್ನುಮುಂದೆ ನಟಿ ನಿಕಿತಾ ರವರು ಕರ್ನಾಟಕದಲ್ಲಿ ಎಲ್ಲಿಗೆ ಬೇಕಾದರೂ ಹೋಗ ಬಹುದು,
ಯಾವ ಚಿತ್ರದಲ್ಲಿ ಬೇಕಾದರೂ ನಟಿಸಬಹುದು ನಮ್ಮ ಅಬ್ಯಂತರವಿರುವುದಿಲ್ಲ.
ಹಿರಿಯ ನಿರ್ಮಾಪಕರು ಹಾಗು ನಮ್ಮ ತಾಯಿಯ ಸಮಾನರಾದ ಶ್ರೀಮತಿ ಪಾರ್ವತಮ್ಮ ರಾಜ್'ಕುಮಾರ್'ರವರು ಕೆಲ ಕಿವಿಮಾತು ಹೇಳಿರುತ್ತಾರೆ.
ಮಕ್ಕಳು ತಪ್ಪು ಮಾಡುವುದು ಸಹಜ ಅದನ್ನು ತಿದ್ದುವುದು ತಾಯಿಯ ಕರ್ತವ್ಯ,ನಾವು ದುಡುಕಿರುವುದು ತಪ್ಪು ಎಂದು ಅಮ್ಮ ಕಿವಿ ಹಿಂಡಿ ಹೇಳಿದ್ದಾರೆ.ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಎಂಬ ಪದಕ್ಕೆ ಇಂದಿನಿಂದ ಬ್ಯಾನ್ ಮಾಡಲಾಗಿದೆ.
ಕೆಲ ಗಾಂಬೀರವಾದ ವಿಷಯಗಳನ್ನು ಕಲಾವಿದರಾ ಸಂಗದಲ್ಲಿ ಚರ್ಚಿಸಿ, ಬಗೆಹರಿಸಿಕೊಳ್ಳಲಾಗುತ್ತದೆ.
ಮುಂದಿನ ಜನ್ಮವೆಂಬುದು ಇದ್ದರೆ, ಶ್ರೀಮತಿ ವಿಜಯಲಕ್ಷ್ಮಿ ನನ್ನ ತಂಗಿಯಾಗಿ ಹುಟ್ಟಿ ಬರಲಿ ಎಂದು ನಾನು ಆ ಬಗವಂತನಲ್ಲಿ ಪ್ರಾರ್ತಿಸುತ್ತೇನೆ"
ಹೀಗೆ ಲಂಗುಲಾಗಮಿಲ್ಲದ ತಮ್ಮ 'ನಡು'ಗನ್ನಡದಲ್ಲಿ 'ಉಟ್ಟು' ಉಗ್ರ'ಖನ್ನಡ ಓರಾಟ'ಗಾರರಿಗೆ ಸವಾಲೆಸೆಯುವಂತೆ ಪತ್ರ ಬರೆದ ಮುನಿರತ್ನಂರಿಗೆ ಅವರೆ ಹಾಲಿ ಸದಸ್ಯರಾಗಿರುವ ಬೆಂಗಳೂರು ಮುನಿಸಿಪಾಲ್ಟಿಯ 'ಕೆಂಪೇಗೌಡ' ಪ್ರಶಸ್ತಿಗೆ ಅವರ ಈ ಪತ್ರವನ್ನೋದಿದ ಮಹನೀಯರೆಲ್ಲ ಶಿಫಾರಸ್ಸು ಮಾಡಬಹುದು.


ಮಾತೆತ್ತಿದರೆ ಕಟ್ಟೆ ಪಂಚಾಯತಿ 'ಖೊಮೇನಿ'ಗಳ ಹಾಗೆ ತಮ್ಮ ಅರೆಬೆಂದ ತೀರ್ಪಿಗೆ ಎದುರಾಡಿದವರನ್ನೆಲ್ಲ ನೈಟಲ್ಲಿ ನೈಂಟಿ ಏರಿಸಿದಷ್ಟೆ ಸಹಜವಾಗಿ ಬ್ಯಾನ್ ಮಾಡಿ ಬಿಸಾಕುತ್ತಿದ್ದ ನಿರ್ಮಾಪಕರ ಸಂಘ ಈ ಹಿಂದೆಯೂ ಈ ತರಹದ ನಿಷೇಧಗಳನ್ನ ಹೇರಿ ಹೆಸರು ಕೆಡಿಸಿಕೊಂಡಿದೆ.ಈ ಬಾರಿಯ "ನಿಖಿತಾ ನಿಷೇಧ ಪ್ರಕರಣ"ದ ನಂತರ ರಟ್ಟೆಗಾತ್ರದ ಮೀಸೆಬಿಟ್ಟ 'ರೆಬೆಲ್'ರಿಂದ ಹಿಡಿದು ಬೆಲ್ಲೇ ಆಡಿಸಲಾಗದ ಚಿಲ್ಲರೆಪಲ್ಲರೆ ಸ್ಟಾರ್'ಗಳವರೆಗೂ ಎಲ್ಲರೂ ಬಾಯಿಗೆ ಬೆರಳಿಟ್ಟುಕೊಂಡು ಚೀಪುತ್ತಾ ಚಂದ ನೋಡುತ್ತಿದ್ದಾಗ ಮೊತ್ತಮೊದಲಿಗೆ "ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಡುತ್ತೆ ಅಂತಾರೆ,ಹೀಗೆ ಆಗಿದೆ ಈ ನಿರ್ಮಾಪಕರ ದೌಲತ್ತು!" ಎಂದು "ಎತ್ತಿಗೆ ಜ್ವರಬಂದರೆ ಎಮ್ಮೆಗೆ ಬರೆಯಿಡು"ವಂತಿದ್ದ ಈ ಅಂಧಾದರ್ಬಾರಿನ ವಿರುದ್ಧ ಧ್ವನಿ ಎತ್ತಿದ್ದವರು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಡಾ,ಜಯಮಾಲ ಮಾತ್ರ,

ನಂತರ ನಿಖಿತ ಪರವಾಗಿ ಅವರ ಹೇಳಿಕೆಗೆ ಬೆಂಬಲದ ದನಿಗೂಡಿಸಿದವರು ನಟಿ ಪ್ರಿಯಾಹಾಸನ.ರಾಜ್ಯದಾದ್ಯಂತ ಸ್ತ್ರೀಪರ ಸಂಘಟನೆಗಳು ಈ ದಬ್ಬಾಳಿಕೆಗೆ ವಿರೋಧ ವ್ಯಕ್ತಪಡಿಸಿದವು,ಸ್ತ್ರೀವಾದಿಗಳು ಇದನ್ನ ಅನ್ಯಾಯವೆಂದು ಸಾರ್ವಜನಿಕವಾಗಿ ಜರೆದರು ಇಷ್ಟಾದರೂ ತಮ್ಮ ಸಹುದ್ಯೋಗಿಯ ಆದ ಈ ಅನ್ಯಾಯಕ್ಕೆ ಚಿತ್ರರಂಗಕ್ಕೆ ಸಂಬಂಧಿಸಿದ ಯಾವೊಬ್ಬ ಮಹಿಳಾಮಣಿಯೂ ನ್ಯಾಯ ಕೇಳುವ ಮಾತನಾಡುವ ಧೈರ್ಯ ಪ್ರಕಟಿಸಲೆ ಇಲ್ಲ.ಕಡೆಗೂ 'ಹೆಡ್ದಾಫೀಸಿನ' ಕೆಂಪು ಸಿಗ್ನಲ್ ಕಾಣಸಿಕ್ಕಿದ್ದೆ ತಡ ನಾಮುಂದು ತಾಮುಂದು ಅಂತಾ ತಾರಾ,ರಮ್ಯ ಹೀಗೆ ಪ್ರತಿಯೊಬ್ಬರೂ ತಮ್ಮ "ಬೆಂಬಲ ಬೆಲೆ" ಏರಿಸತೊಡಗಿದರಲ್ಲ ಚಿತ್ರಣ ಕೊಂಚಕೊಂಚವೆ ಬದಲಾಗತೊಡಗಿತು.

ಹೀಗೆ ಬ್ಯಾನ್ ಮಾಡೋದನ್ನೆ ಕುಲಕಸುಬು ಮಾಡಿಕೊಂಡಿರುವ ಜಾಮಿಯ ಮಸೀದಿಯ 'ಫತ್ವಾ ಪ್ರಿಯ' ಶಾಹಿ-ಇಮಾಂ-ಬುಖಾರಿಗೆ 'ಬ್ಯಾನ್'ಮಾಡೋದರಲ್ಲಿ ,ನಿಷೇಧ ಹೇರೋದರಲ್ಲಿ ಯಾರಾದರೂ ಪ್ರಬಲ ಸ್ಪರ್ಧಿಗಳಿದ್ದರೆ ಅದು ಕನ್ನಡ ಚಿತ್ರರಂಗದ ಪಟ್ಟಭಧ್ರರು ಮಾತ್ರ ಅನ್ನಿಸುತ್ತದೆ.ಅಷ್ಟರ ಮಟ್ಟಿಗೆ ಇವರ ಬಹಿಷ್ಕಾರ ಪುರಾಣಕ್ಕೆ ದೊಡ್ಡ ಇತಿಹಾಸವೆ ಇದೆ.ಸುನಿಲ್'ಕುಮಾರ್ ದೇಸಾಯಿ,ಉಪೇಂದ್ರ,ಎಸ್ ವಿ ರಾಜೇಂದ್ರಸಿಂಗ್ ಬಾಬು,ವಿ ಮನೋಹರ್,ಮಹೇಂದರ್,ದಿನೇಶ್ ಬಾಬು,ದುನಿಯಾ ವಿಜಯ್,ಯೋಗರಾಜ್ ಭಟ್,ಪ್ರೇಮಾ,ಭಾವನ,ಕೋಡ್ಲು ರಾಮಕೃಷ್ಣ,ಆನಂದ್ ಪಿ ರಾಜು,ರಮ್ಯ ಹೀಗೆ ಹಲವಾರು ಮಂದಿ ಈ ಬಹಿಷ್ಕಾರದ ಕುಣಿಕೆಗೆ ಒಂದೋ ಬಲಿಯಾದವರು ಅಥವಾ ಬಲಿಯಾಗೋದರಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಂಡು ಬಚಾವಾದವರು.

ಕಲಾವಿದರಿಗೊಂದು ಸಂಘ,ಕಾರ್ಮಿಕರಿಗೊಂದು ಸಂಘ ಹೀಗೆ ಪ್ರತಿ ವಿಭಾಗಗಳಿಗೊಂದು ಸಂಘ ಕಟ್ಟಿಕೊಂಡು (ಕೆಲವು ಬೆರಳೆಣಿಕೆಯ ವಿಭಾಗಗಳಿಗಷ್ಟೆ ಸಂಘಟನೆ ಬಲವಿಲ್ಲ!) ಗುಂಪುಗಾರಿಕೆ ನಡೆಸುತ್ತ ಇರುವವರ ನಿಜವಾದ ನಾಯಕತ್ವ ಯಾರ ಕೈಯಲ್ಲಿ ಇದೆ ಅನ್ನೋದು ಇನ್ನೂ ಗೊಂದಲದಲ್ಲಿದೆ.ರಾಜ್'ಕುಮಾರ್'ರಂತಹ ಮೇರುನಟರು ಬದುಕಿದ್ದ ತನಕ ಸದಾಶಿವನಗರದ ಹೆಡ್ದಾಫೀಸ್ ಹೇಳಿದ್ದೆ ಕಟ್ಟಳೆಯಾಗಿತ್ತು.ಅವರ ಕಾಲಾನಂತರ ಜಯನಗರದ 'ಸಿಂಹ' ಕೆಲಕಾಲ ಗರ್ಜಿಸಿ ಕೊನೆಗೊಮ್ಮೆ ಶಾಶ್ವತವಾಗಿ ಸುಮ್ಮನಾಯಿತು.ರಾಜಾಜಿನಗರದ 'ಹೃದಯ'ವಂತ ಯಾರಿಗೂ ಕೇರ್ ಮಾಡದೆ ಊರಮೇಲೆ ಊರು ಬಿದ್ದರೂ 'ಮಲ್ಲ'ನಂತೆ ತನ್ನ ಏಕೋಪಾಧ್ಯಾಯ ಶಾಲೆಯ "ಹಳ್ಳಿಮೇಷ್ಟ್ರು" ಆಗಿಯೆ ಇದ್ದರು-ಇದ್ದಾರೆ.ಇದೀಗ ಜೆಪಿನಗರದ 'ರೆಬೆಲ್'ಗಳು ತಮ್ಮ ಖದರು ತೋರುತ್ತಿದ್ದಾರೆ.ಇವೆಲ್ಲದರ ನಡುವೆ ನಾಮ್-ಕೆ-ವಾಸ್ತೆ ಅದೊಂದು ಮಾತೃಸಂಸ್ಥೆ ಎಂಬ ಆರೋಪ ಹೊತ್ತ "ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ"ಎಂಬ ಬೀಜವಿಲ್ಲದ ಹೋರಿ ತನ್ನ ಮಾತನ್ನೆ ಕೇಳದೆ ಕಂಡಕಂಡವರೆಲ್ಲ 'ಬ್ಯಾನ್' ಗೇಮ್ ಆಡೋದನ್ನ ನೋಡಿ ಕಣ್ಣು ಪಿಳಿಕಿಸುತ್ತ ಯಾರಿಗೂ ಬೇಡದ ಅನಾಥ ಮಗುವಿನಂತೆ ನಿಂತಿದೆ.


ಇಷ್ಟಾಗಿಯೂ ತೆರೆಯಮೇಲೆ ಮಾತ್ರ ಆಚಾರ ಭೋದಿಸಿ ಒಳಗೊಳಗೆ ಬದನೇಕಾಯಿ ತಿನ್ನುವ ಈ ಕೋಡಂಗಿಗಳ ವಿರುದ್ಧ ಸ್ತ್ರೀವಾದಿ ಸಂಘಟನೆಗಳು,ಸ್ತ್ರೀವಾದಿ ಚಿಂತಕರು ನಿಖಿತಾಳನ್ನ ಬೆಂಬಲಿಸಿ ಮಾತನಾಡಿದರೂ ಎಮ್ಮೆ ಮೇಲೆ ಮಳೆ ಬಂದಂತೆ ಬಂಡವಾಳಶಾಹಿ ಚಿತ್ರೋದ್ಯಮ ವರ್ತಿಸಿತು.ನಿಖಿತಾಳ ವರ್ತನೆ ನೈತಿಕತೆಗೆ ಸಂಬಂಧಿಸಿದ್ದು ಅನ್ನುವ ಅರಿವಿಲ್ಲದ ಅರಿವುಗೇಡಿ ಮುನಿಯ ದರ್ಶನ್ ಮೇಲೆ ಹೂಡಿದ ಕೋಟ್ಯಾಂತರ ರೂಪಾಯಿ ಬಂಡವಾಳದ ರಕ್ಷಣೆಗೆ ಹೆಡೆಬಿಚ್ಚಿ ನಿಂತ ನಾಗನಂತೆ "ಇದೆ ತರದ ಘಟನೆ ನಿಮ್ಮನೆ ಮಕ್ಳಿಗೂ ಆಗಿದ್ರೆ ಎನ್ ಮಾಡ್ತಿದ್ರಿ ಅಂತ ನೀವೆ ನಿಮ್ಮನ್ನೂ ಕೇಳ್ಕೊಳ್ಳಿ!" ಎನ್ನುವ ಯಾವ ಅರ್ಥದಲ್ಲಿ ಈಯಪ್ಪ ಈಮಾತನ್ನ ಹೇಳಿದ್ದಾನೆ ಅಂತಲೂ ಅರ್ಥವಾಗದ ಎಡಬಿಡಂಗಿ ಹೇಳಿಕೆಯನ್ನ ಉದುರಿಸಿದ್ದು ಕೇಳಿ ಕನ್ನಡಿಗರು ಕೆಕರುಮಕರಾದರು.ಆದರೆ ಅವರ ಈ ಉದ್ಗಾರ ಹೊರಬರೋವಾಗ ಅವರು ತಮ್ಮ ಆಪ್ತೇಷ್ಟರ ಪಟಾಲಂನೊಂದಿಗೆ 'ಗುಂಡು' ಮೋಜಿನ ಪರಿಷತ್ ನಡೆಸಿರುವ ಗುಮಾನಿ ಇದ್ದುದ್ದರಿಂದ ಅದು ಅಚಾನಕ್ ಹೊರಬಂದ ಸತ್ಯವಿದ್ದೀತು ಅಂದುಕೊಳ್ಳಲಾಯಿತು.ಇತ್ತ 'ರೆಬೆಲ್'ಗಳೆಲ್ಲ "ಮನೆ ಅಂದಮೇಲೆ ಮಗ ಅಮ್ಮನ್ನ ಚಚ್ಚದು,ಗಂಡ ಹೆಂಡ್ರುನ್ನ ರುಬ್ಬಾಕೋದು ಎಲ್ಲಾ ಕಾಮನ್ ಕಂಡ್ಲಾ! ಇದುನ್ನೆ ದೊಡ್ಹ್ ಮಾಡುದ್ರೆ ಮನೆ ಮುರ್ದೊಯ್ತವೆ ಅಷ್ಟೇಯ!" ಅಂತ ಅಬ್ಬರಿಸಿದರಾದರೂ ಅದನ್ನ ಹೇಳೋವಾಗ ಕೆಂಡದುಂಡೆಯಂತಾಗಿದ್ದ ಅವರ ಕಣ್ಣು ನೋಡಿದ ಮಂಡ್ಯದ ಹೈದ "ಬುಡ್ರುಲಾ ಅಣ್ಣ ಫುಲ್ ಜೂಮಲ್ಲೈತೆ!" ಅನ್ಕೊಂಡು ಕ್ಯಾಕರಿಸಿದ.


ನಟ ಶಿವಣ್ಣ,ರಾಘಣ್ಣ ಆಸಕ್ತಿ ವಹಿಸಿದ ಮೇಲೆ ಮತ್ತೆ ಹಳಿಗೆ ಬಂದ ಹಾಗೆ ಕಂಡ ಪ್ರಕರಣದಲ್ಲಿ ನಿಖಿತಾ ಮೇಲೆ ವಿಧಿಸಿದ್ದ ಬಹಿಷ್ಕಾರವನ್ನಸದ್ಯಕ್ಕೆ ಶರತ್ತಿಲ್ಲದೆ ವಾಪಾಸ್ ಪಡೆದು ಕ್ಷಮೆ ಕೋರಲಾಗಿದೆ.ಆದರೆ ಈ ಡೊಂಕುಬಾಲ ದೊಣ್ಣೆ ಕಟ್ಟಿದರೂ ನೆಟ್ಟಗಾಗುವ ಲಕ್ಷಣಗಳು ದೂರ ದೂರಕ್ಕೂ ಕಾಣಿಸುತ್ತಿಲ್ಲ ಅನ್ನೋದನ್ನ ವಿಷಾದದಿಂದಲೆ ಹೇಳಬೇಕಿದೆ.ನಿಖಿತಾಗೆ ಕೊಟ್ಟ ತಪ್ಪೊಪ್ಪಿಗೆ ಪತ್ರದಲ್ಲೆ ನಮೂದಾಗಿರುವಂತೆ 'ಬ್ಯಾನ್'ಎಂಬ ಪದವನ್ನಷ್ಟೆ ಶಾಶ್ವತವಾಗಿ ಚಿತ್ರೋದ್ಯಮದಿಂದ ಬ್ಯಾನ್ ಮಾಡಲಾಗಿದೆ ಅಂತ ತಿಳಿಸಲಾಗಿದೆ.ಏನಿದರ ಅರ್ಥ? ಮುಂದೆ ಬಹಿಷ್ಕಾರ ಹಾಕೋವಾಗ ಹೊಸ ಪರ್ಯಾಯ ಪದವನ್ನ ಅನ್ವೇಷಿಸಿ ಬಳಸಲಾಗುತ್ತದೆ ಅಂತಲ?!

Wednesday, September 14, 2011

"ಕರಿ"ಕರಪತ್ರಿಕೆಯ ಕರಡಿ ಸಂಪಾದಕನೂ.... ರೆಡ್ಡಿಯಿಟ್ಟ ಸ'ಗಣಿ'ಯನ್ನ ತಿಂದ ಅವನ ಕಪ್ಪು ಸಂಪಾದನೆಯೂ....

ತಾವು ಮಾತ್ರ ಪರಮ ಸಾಚಾಗಳಂತೆ ಸೋಗು ಹಾಕಿಕೊಂಡು ವಾರವಾರ ಕಂಡವರನ್ನ ಬಿಟ್ಟಿ ಬೆಂಡೆತ್ತುವ ಕೆಲವರ ಸ್ವಂತ ಅಂಡು ಕೊಳೆತು ಬಹಿರಂಗವಾಗಿ ನಾರುತ್ತಿರೋದು ಅಸಹ್ಯ ಹುಟ್ಟಿಸುತ್ತಿದೆ.ಉಪ್ಪು ತಿಂದವ ಹೇಗೆ ನೀರು ಕುಡಿಯಬೇಕೊ ಹಾಗೇನೆ ಸ'ಗಣಿ' ಕಪ್ಪ ತಿಂದವರೂ ಅದನ್ನ ಕಾರಲೆಬೇಕು.ಅಥವಾ ಒತ್ತಾಯದಿಂದಲಾದರೂ ಅದನ್ನ ಕಾರಿಸುವ ಹೊಣೆ ನಾವು ನಂಬಿರುವ ( ಆಗಾಗ ಈ ನಂಬಿಕೆಗೆ ಭರಪೂರ ದ್ರೋಹ ಆಗುತ್ತಿದ್ದರೂ ಸಹ!) ವ್ಯವಸ್ಥೆಯ ಮೇಲಿದೆ.ಲೋಕಾಯುಕ್ತರ ವರದಿ ಸರಕಾರದ ಕೈಸೇರಿ ತಿಂಗಳೆರಡು ಕಳೆದಿದೆ.ಅದೆಷ್ಟೆ ವಿಸ್ತಾರವಾಗಿದ್ದರೂ ನಮ್ಮಂತ ಹುಲುಮಾನವರಿಗೆ ಅದನ್ನ ಓದಿ ಅರಗಿಸಿಕೊಳ್ಳಲು ಈ ಕಿರುಅವಧಿ ಧಾರಾಳವಾಗಿ ಸಾಕಾಗಿರೋವಾಗ ನಮ್ಮನ್ನಾಳುವ ಸರಕಾರವೇನು ಕತ್ತೆ ಕಾಯುತ್ತಿದೆಯ? ಎಂದು ನೀವು 'ಖಾರ'ವಾಗಿ ಪ್ರಶ್ನಿಸುವುದರಲ್ಲೂ ಅರ್ಥವಿದೆ.( ಆಗಾಗ ಶಾಸಕರು ಚಪಲಕ್ಕೆ 'ಗಂಟು' ಬಿದ್ದವರಂತೆ ಜೊಲ್ಲು ಸುರಿಸುತ್ತ ರೆಸಾರ್ಟ್'ಗಳಿಗೆ 'ತೀರ್ಥ'ಯಾತ್ರೆ ಹೋಗೋದನ್ನ ನೋಡಿದರೆ ಸರಕಾರ ಅಕ್ಷರಶಃ ಈ 'ಕತ್ತೆಗಳನ್ನ' ಕಾಯೋದರಲ್ಲಿಯೆ ಹೈರಾಣಾಗಿ ಹೋಗಿದೆ ಅನ್ನೋದರಲ್ಲೇನೂ ಸಂಶಯವಿಲ್ಲ!) ಇಂತಹ ವಿಪರೀತ ಪರಿಸ್ಥಿತಿಯಲ್ಲಿ ಕಡೆಗೂ ನಿಜವಾಗಿ ನೊಂದಿರುವವರ ಕೈ ಹಿಡಿದಿರೋದು ಘನ ಸರ್ವೋಚ್ಛ ನ್ಯಾಯಾಲಯ.ಮೊನ್ನೆ ಅದು ಬಳ್ಳಾರಿಯಲ್ಲಿ ಬೇಟೆಗೆ ನುಗ್ಗಿಸಿದ ಸಿಬಿಐ ಸೀಳುನಾಯಿಗಳ ಶಿಕಾರಿ ಪಿಪಾಸೆ ನೋಡಿದ ಮೇಲೆ ಅವುಗಳ ಮುಂದಿನ ಸಂಭವನೀಯ ರಕ್ತಪಿಪಾಸುತನಕ್ಕೆ ಬಲಿಯಾಗಲಿಕ್ಕಿರುವ 'ಕನ್ನಡ'ದ ಕೆಲವು 'ಖಾಸ್' ಖದೀಮ ಕಳ್ಳರ ನೆಮ್ಮದಿಗೆ ಕಿಚ್ಚು ಬಿದ್ದಿದ್ದರೆ,ನಮ್ಮಂತಹ 'ಕನ್ನಡ'ನಾಡಿನ ನಿಸ್ಪೃಹ ಪ್ರಜೆಗಳ ನೋವಿನ ನಡುಕಕ್ಕೆ ಕೊಂಚ ಬೆಚ್ಚಗಿನ ಶಾಖ ಸಿಕ್ಕಂತಾಗಿ ನಿಜವಾಗಿಯೂ 'ಹಾಯ್' ಎನಿಸುತ್ತಿದೆ!



ಸಂತೋಷ ಹೆಗ್ದೇರು ತಮ್ಮ ಅಧಿಕಾರದ ಚಾರ್ಜನ್ನು ಹೊಸ ಲೋಕಾಯುಕ್ತರಾಗಿದ್ದ ಶಿವರಾಜಪಾಟೀಲರಿಗೆ ವಹಿಸಿಕೊಟ್ಟು ತಮ್ಮ ಕಚೇರಿಯಿಂದ ಹೊರ ಬರುತ್ತಿದ್ದಂತೆಯೆ ಕೆಲವು ಮಸಿಮುಖದ ಕರ'ಪತ್ರಿಕೆ' ಹೊರತರುವ ಮಂದಿ ತೆಗೆದ ಸಮಯಸಾಧಕ ಉದ್ಗಾರಗಳನ್ನ ನೀವು ಖಂಡಿತವಾಗಿಯೂ ಗಮನಿಸಿಯೆ ಇರುತ್ತೀರಿ.ಮೊದಲಿಗೆ ಅದೆಲ್ಲಿಂದ ಆರೋಪಗಳ ವ್ಯಥಾಲಾಪಗಳನ್ನು ಆರಂಭಿಸುವುದೊ ತಿಳಿಯದೆ "ಇಷ್ಟೊಂದನ್ನ ಬರೀಲಿಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆದಿದೀನಿ ಅಂತಾರೆ ಲೋಕಾಯುಕ್ತರು! ಆದರೆ ಅದನ್ನ ನಿಜವಾಗಿಯೂ ಅವರು ಬರೆದೆ ಇಲ್ಲಾ!!.ಅದೇನಿದ್ದರೂ ಯು ವಿ ಸಿಂಗ್'ರ ಬರಹ" ಅಂತ ಮೊದಲ ಬಟ್ಟೆ ಹಾವನ್ನ ಹೊರಬಿಟ್ಟರು.ಅಷ್ಟಕ್ಕೂ ಲೋಕಾಯುಕ್ತರು "ನನಗೆ ಕೂತು ಬರೆಯೋದು ಕಷ್ಟದ ಕೆಲಸ.ಆದರೆ ಉಕ್ತ ಲೇಖನವನ್ನ ಬರಿಸ್ತೇನೆ,ನ್ಯಾಯಾಧೀಶನಾದಂದಿನಿಂದಲೂ ಹೀಗೇನೆ" ಅಂತ ಈ ಹಿಂದೆಯೆ ಅನೇಕ ಭಾರಿ ಬಹಿರಂಗವಾಗಿ ಹೇಳಿರೋದರಿಂದ ಇದರಲ್ಲಿ ಯಾವ ಹೊಸ ಸಂಗತಿಯೂ ಹೊರಬರಲಿಲ್ಲ.ಬಹುಷಃ ಇಂಟರ್ನೆಟ್'ನಿಂದೆಲ್ಲ ಲಜ್ಜೆಗೆಟ್ಟು (ಕದ್ದ ನಂತರವೂ ಮೂಲಕ್ಕೆ ಕ್ರೆಡಿಟ್ ಕೊಡದ ಖದೀಮರನ್ನ ಇನ್ನು ಹೇಗೆ ತಾನೇ ಕರಿಯೋದು ಹೇಳಿ?) ಕದ್ದು ಮತ್ತದನ್ನ ಬೇರೆಯವರಿಂದ ಬರೆಸಿ ತಮ್ಮ ಹೆಸರಿನಲ್ಲಿ ಪತ್ರಿಕೆ ಹಾಗು ಪುಸ್ತಕಗಳಲ್ಲಿ ಪ್ರಕಟಿಸಿಕೊಂಡು ಬೀಗುವ ಅವರು ಹೆಗ್ಡೇರ ವಿಷಯದಲ್ಲೂ "ತನ್ನಂತೆ ಪರರು" ಎಂಬ ಭಾವಕ್ಕೆ ಪಕ್ಕಾಗಿರುವ ಸಕಲ ಸಾಧ್ಯತೆಗಳೂ ಇವೆ.ಆಮೇಲೆ ಒಂದಿಡೀ ಸಂಚಿಕೆಯಲ್ಲಿ ಹೆಗ್ಡೇರನ್ನ ತನ್ನ ಕೈಲಾದಷ್ಟು ತೆಗಳಿ ಈಗಾಗಲೆ ಕದ್ದು ಕಪ್ಪ ತಿಂದು ಕಾನೂನಿನಡಿ ತಗಲು ಹಾಕಿಕೊಂಡಿರುವ ತಮ್ಮ ಹತಾಶೆಯನ್ನ ಓತಪ್ರೋತವಾಗಿ ಹರಿಯಬಿಟ್ಟು ಮೈಪರಚಿಕೊಂಡರು.ಮರುವಾರ ಇನ್ನಷ್ಟು ಸುಳ್ಳು ಸಮಾಧಾನಗಳನ್ನ ತಮಗೆ ತಾವೆ ಹೇಳಿಕೊಂಡು ಯಾರು ಕೇಳದಿದ್ದರೂ ಇನ್ನೊಂದಷ್ಟು ಸ್ವಪರ ಸಫಾಯಿಗಳನ್ನ ;ಅದು ಸುಳ್ಳೆಂದು ಎಲ್ಲರಿಗೂ ಗೊತ್ತಿದ್ದರೂ ತಮ್ಮ ಅಭ್ಯಾಸ ಬಲದಂತೆ ಹೇಳಿಕೊಂಡರು.ಆದರೇನು ಮಾಡುವುದು ಆ 'ಜನಾರ್ಧನ'ನಿಗೆ ಚೂರೂ ಕರುಣೆಯಿಲ್ಲ ನೋಡಿ! ಕಡೆಗೂ ಆ ಅತಿಕೆಟ್ಟ ಘಳಿಗೆ ಬಂದು ವಕ್ಕರಿಸಿಕೊಂಡೆ ಬಿಟ್ಟಿತು.ಸ್ವತಹ ಜನಾರ್ಧನನೆ ಹಗ್ಗ ಕಡೀತಿರೋವಾಗ ಈ ಕರಿಮುಖದ ಕೆಟ್ಟಹುಳಗಳು ಈಗ ಮತ್ತೆ ಶಾವಿಗೆ ಬೇಡುತ್ತಿವೆ 'ಓದುಗ ಪ್ರಭು'ಗಳಲ್ಲಿ.


ಸಂತೋಷ ಹೆಗ್ದೇರು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೊಂದು ಕೊಂಕು.( ಯಾವ ಹೈಕೋರ್ಟ್ ನ್ಯಾಯಮೂರ್ತಿಗಳೂ ಹಾಗೆ ಮಾಡೋದಿಲ್ಲ ಅಂದ ಮಾತ್ರಕ್ಕೆ ಅದು ನಿಯಮ ಬಾಹಿರವೇನಲ್ಲ.ಸಂವಿಧಾನದಲ್ಲೆ ವಾಕ್ ಸ್ವಾತಂತ್ರ ಪ್ರತಿಯೊಬ್ಬ ಭಾರತೀಯನಿಗೂ ಕೊಡಲಾಗಿದೆ ಹಾಗು ತನ್ನ ಹಿತಾಸಕ್ತಿಗಳ ಕುರಿತು ನಡೆಯುವ ಯಾವುದೆ ಚಟುವಟಿಕೆಗಳನ್ನ ತಿಳಿದುಕೊಳ್ಳೋದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅನ್ನೋದು ಈ ಮೇಧಾವಿಗೆ ಪಾಪ ಅವಸರದಲ್ಲಿ ಮರೆತೆ ಹೋಗಿದೆ.ಲೋಕಾಯುಕ್ತ ಸ್ವಾಯುತ್ತ ಸಂಸ್ಥೆಗೆ ನ್ಯಾಯಾಧಿಕರಣದ ಮಟ್ಟಕ್ಕೆ ಮಾನ್ಯತೆ ಇದೆ ಅಂದ ಮಾತ್ರಕ್ಕೆ ಅದು ಕೇವಲ ಮುಚ್ಚಿದ ಬಾಗಿಲುಗಳ ಹಿಂದೆ "ಕೇಳಿ" ನಡೆಸುವ "ಬೆಂಗಳೂರಿನ" ಪತ್ರಿಕೆಯ ಕಛೇರಿಯಂತಲ್ಲ,ಪ್ರತಿಯೊಬ್ಬ ಸಾರ್ವಜನಿಕರ ಅಹವಾಲಿಗೆ ಬಹಿರಂಗ ಉತ್ತರದಾಯಿ ವ್ಯವಸ್ಥೆಯದು ಎಂಬ ಅರಿವಿಲ್ಲದ ಈ ಅರಿವು'ಕೇಡಿ'ಯನ್ನ ನೋಡಿ "ಉಗ್ರ'ಪ್ರತಾಪಿ'ಯೊಬ್ಬನ ಅರೆಬೆಂದ ಪುಸ್ತಕವೊಂದರ ಬಿಡುಗಡೆಗೆ ಹೆಗ್ದೇರು ಹೋಗಿದ್ದ ಬಗ್ಗೆ ಈ 'ಬಾಟಮ್ ಐಟಂ'ಗೆ ಬಾಟಮ್'ನಿಂದ ಕೆಳಗೆಲ್ಲ ವಿಪರೀತ ಉರಿ :ಅದಕ್ಕೆ ಇದರ ಬಡಬಡಿಕೆ ಈ ಪರಿ" ಎಂದು ಆತನ ಹುಟ್ಟುಗುಣ ಗೊತ್ತಿದ್ದ ಮಂದಿಯೆಲ್ಲ ನಕ್ಕು ಸುಮ್ಮನಾದರು.ಇಷ್ಟೆ ಆಗಿದ್ದರೆ ಇದೊಂದು ಕೆಟ್ಟ ಕ್ರಿಮಿ ಅಂದುಕೊಂಡು ಕನ್ನಡಿಗರು ಅದಕ್ಕೆಲ್ಲ ಕೇರ್ ಮಾಡದೆ ಇದ್ದಿರಬಹುದಾಗಿತ್ತೇನೊ.

ಪದ್ಮನಾಭನಗರದ ಈ ಪರ್ಮನೆಂಟ್ ಪೀಡೆ,ತನ್ನ ಒಂದುಕಾಲದ "ಆಪ್ತಮಿತ್ರ" ಬಾಣಭಟ್ಟನ ಜೊತೆಗೆ ಸದ್ಯದಲ್ಲೆ ಸಿಬಿಐ ಹೆಣೆಯುತ್ತಿರುವ ಬಲೆಗೆ ಬಿದ್ದು ಅಗ್ರಹಾರಕ್ಕೆ ಹಾರವಾಗುವ ಸಕಲ ಸಾಧ್ಯತೆಗಳೂ ಇರೋವಾಗ ಅದಕ್ಕೆ ಕಾರಣರಾದ ಸಂತೋಷ ಹೆಗ್ಡೇರ ಬಗ್ಗೆ ಅಸಂತೋಷ ಪ್ರಕಟಿಸುತ್ತ ವಾರವಾರವೂ ತನ್ನ ಮೈ ಪರಚಿ ಕೊಳ್ಳೋದರಲ್ಲಿ ಅಚ್ಚರಿಯೇನೂ ಇಲ್ಲ.ಆದರೆ "ಶ್ರೀರಾಮುಲು ಮುಗ್ಧ,ಸಾಚಾತನದ ಸಾಕಾರ ರೂಪವೆ ಆಗಿರುವ ಅವನ ಬಾಯಿಯಿಂದ ಕೆಜಿ ಕಬ್ಬಿಣದ ಅದಿರಿಗೆ ಎಷ್ಟು ಬೆಲೆ ಅಂತ ಯಾರಾದ್ರೂ ಹೇಳಿಸಿ ನೋಡೋಣ?" ಅಂತೆಲ್ಲ ತನ್ನ 'ಕಾಸ್'ಬಾಚುವ ಪತ್ರಿಕೆಯಲ್ಲಿ ಪದೆಪದೆ ಮುಲುಗತೊಡಗಿದ ನೋಡಿ ಇಷ್ಟು ದಿನ ರಾಮುಲು ಪ್ರಸಾದ ರೂಪವಾಗಿ ತಿನ್ನಿಸಿದ ಅಮೆಧ್ಯದ ವಾಸನೆ ಪದ್ಮನಾಭನಗರದಾಚೆಗೂ ಪಸರಿಸತೊಡಗಿತು.


ತನ್ನ ಅಕೌಂಟಿಗೆ ಯಾವ ಗಣಿ ಕಪ್ಪವೂ ಸಂದಾಯವಾಗಿಲ್ಲವಂತಲೂ-ತಾನಿನ್ನೂ ಪರಮ ಪವಿತ್ರನಾಗಿದ್ದು ಕಂಡವರ ಕಾಸು ತನಗೆ ಕಕ್ಕ ಅಂತಲೂ ಬಿಕ್ಕಿ ಬಿಕ್ಕಿ ಸಮಾಜಾಯಷಿ ಬಿತ್ತುವುದರ ಜೊತೆಜೊತೆಗೆ "ಖಾರಪುಡಿ ಮಹೇಶನ ಡೈರಿಯಲ್ಲಿ ಪತ್ತೆ ಯಾದ ವಿ,ಭಟ್ಟ ರಾಣಿರಸ್ತೆಯ ಅವನೆ! ಆದರೆ ಆ ಆರ್'ಬಿ ಮಾತ್ರ ರಂಗನಾಥ ಭಾರದ್ವಾಜ" ಅಂತ ತನ್ನ ಮೈಗಂಟಿದ್ದ ಗಣಿಧೂಳನ್ನ ಇನ್ಯಾರೊ ಅಮಾಯಕರ ಮೇಲೆ ಹೊಡೆದು ಕೆಡಗುವ ಹೀನತನಕ್ಕೆ ಇಳಿದ ನೋಡಿ,ಹಾಗಿದ್ದರೆ ತಮ್ಮ ಖಾಸಗಿ ಫೋನ್'ನಂಬರ್ ಅಲ್ಲಿ ನಮೂದಿಸಿರುವ ಆರ್'ಬಿ ಹೆಸರಿನ ಮುಂದೆ ಏನು 'ಲವಲವಿಕೆ' ನಡೆಸುತ್ತಿದೆಯೇನೊ ಹರಾಮಿ? ಎಂದು ಬಲ್ಲವರು ಕ್ಯಾಕರಿಸಿ ನಕ್ಕರು.ಮಾತೆತ್ತಿದರೆ 'ಒಂದು ಲಡಕಾಸಿ ಸುಜುಕಿ ಹತ್ತಿ ಬೆಂಗಳೂರಿಗೆ ಬಂದೆ....' ಅಂತ ಅದ್ಯಾವುದೊ ಪುರಾತನ ಕಾಲದ ಬೂಷ್ಟು ಹಿಡಿದ ಬರಗೆಟ್ಟ ಕಥೆ ಆರಂಭಿಸುವ ಈ ಅಧಿಕಪ್ರಸಂಗಿ "ನನ್ ಆಸ್ತಿಯ ಬೆಲೆಯೆ ಈಗ ಕೋಟಿಗಳ ಲೆಕ್ಕದಲ್ಲಿದೆ" (ಕೆಲವೆ ವರ್ಷದಲ್ಲಿ ಈ ಧನ ವರ್ಷಧಾರೆಯಾಗಲು ಅದೆಂತ ಲಾಭದಾಯಕ 'ದಂಧೆ'ಗೆ ಇಳಿದಿದ್ದೆ ಮಾರಾಯ? ಅಂತ ಸಿಬಿಐಯಾದಾರೂ ಶ್ರೀಯುತರನ್ನ ಕೊಂಚ ತಡಕಾಡಿದರೆ ಕಪ್ಪಗಿದ್ದೆ ಕೊಪ್ಪರಿಗೆ ಕದ್ದು ತಿಂದ ಕೋಟ್ಯಾಂತರ 'ರಹಸ್ಯ'ಗಳು ಹೊರಬಿದ್ದವು ಅನ್ನೋದು ಬೇರೆ ಮಾತು!) ನಾನ್ಯಾಕೆ ಹತ್ತು ಲಕ್ಷಕ್ಕೆಲ್ಲ ಆಸೆಪಡಲಿ?" ಅನ್ನುವ ಈತ ( ಈತನ ಚಿಲ್ಲರೆ ಕಾಸಿನ ಆಸೆಯ ಬಗ್ಗೆ ಪತ್ರಕರ್ತ 'ಅಗ್ನಿ'ಶ್ರೀಧರ್ ರಸವತ್ತಾಗಿ ವಿವರಿಸುತ್ತಾರೆ!) "ರೂಪಾಯಿಯೆ ಆದರೂ ಬಿಟ್ಟಿ ಸಿಕ್ಕರೆ ಯಾರಿಗೆ ಕಹಿಯಾಗುತ್ತೆ ಸ್ವಾಮಿ" ಎಂದು 'ಕೇಳಿ'ದವರ ಪ್ರಶ್ನೆಗೆ ಜಾಣ ಕಿವುಡನಂತೆ ನಟಿಸಿದ.


"ಬಳ್ಳಾರಿ ಕೆಟ್ಟು ಕೆರ ಹಿಡಿದಿತ್ತು,ಮಂಡ್ಲೂರು ಮಂಗ್ಯಾಗಳಿಂದ ಅದನ್ನು ಬಿಡಿಸಿದ ಅದರ ಪರಮೋದ್ಧಾರಕರಾದ ರೆಡ್ಡಿ ಸಹೋದರರಿಗೆ ಬೆಂಬಲಸೂಚಿಸಿ ಸೋಮಶೇಖರರೆಡ್ಡಿಯ ಪರ ಚುನಾವಣಾ ಪ್ರಚಾರಕ್ಕೆ ನಾನು ಇಳಿದಿದ್ದು ಕೇವಲ ಅವರ ಜಗದೊದ್ದಾರದ ಕೆಲಸಕ್ಕೆ ಸಲ್ಲಿಸಿದ ಕಿಂಚಿತ್ ಸೇವೆಯೆ ಹೊರತು :ಸ್ವಾರ್ಥದ ಹನಿಯೂ ಇದರಲ್ಲಿಲ್ಲ" ಎನ್ನುವ ಈ ಆಧುನಿಕ ಸತ್ಯ ಹರೀಶ್ಚಂದ್ರ ಅನಂತರದ ದಿನಗಳಲ್ಲಿ ತನ್ನ ದೊಂಬರ ವೇಷದ ಹಾಡುವ ಕಾರ್ಯಕ್ರಮವನ್ನ ಅಲ್ಲಿಯೆ ಹೇಸಿಗೆ ಹುಟ್ಟಿಸುವ ಗಣಿ ಹಣದ ಹಂಗಿನಲ್ಲಿ ನಡೆಸಿದ್ದು,ರೆಡ್ಡಿ ಒಡೆತನದ "ಜನಶ್ರೀ" ಸುದ್ದಿವಾಹಿನಿಯಲ್ಲಿ ತನ್ನ ಹರಕಲು ಗಡ್ಡದ ಹಂದಿ ಮುಸುಡಿ ಹೊತ್ತ ದಿನಕ್ಕೆರಡೆರಡು ಕಾರ್ಯಕ್ರಮಗಳನ್ನ ದುಬಾರಿ ಸಂಭಾವನೆಯೊಂದಿಗೆ ಆಗ್ರಹಿಸಿ ಗುಂಜಿಕೊಂಡಿದ್ದು.(ಆ ಬಗ್ಗೆ ರೆಡ್ಡಿತ್ರಯರಿಗೆ ಅಸಮಧಾನವಿದ್ದದ್ದು ಬಹಿರಂಗ ಗುಟ್ಟು,ಹೀಗೆ ದಿನಕ್ಕೆರಡು ಕಾರ್ಯಕ್ರಮ ಕೊಟ್ಟ ತಪ್ಪಿಗೆ ಅವರಿಂದ ಅನಂತ ಹಾಗು ಅಂಕುರ ತಾರಾಮಾರ ಉಗಿಸಿಕೊಂಡಿದ್ದರು!).ಚುನಾವಣ ಪ್ರಚಾರಕ್ಕೆ "ನಾನು ಬಳ್ಳಾರಿಗೆ ಹೋದಾಗ ರೆಡ್ಡಿಗಳಿಗೆ ಹಣಕ್ಕೆ ಬಹಳ ಬರವಿತ್ತು ಶ್ರೀರಾಮುಲು ಹಾಗು ಗ್ಯಾಂಗ್ ಬೆಳ್ಳಂಬೆಳಗ್ಯೆಯೆ ಕೈಗೆ ಸಿಕ್ಕ ಬೈಕೇರಿ ಸಿಕ್ಕು ಬಳಿಗೆ ಸಿಕ್ಕು ಬಕರಾಗಳಾಗುವ 'ಮಿತ್ರ'ರ ಬಲಿ ಹತ್ತೊ-ಇಪ್ಪತ್ತೋ ಸಾವಿರ ದೋಚಿಕೊಂಡು ಅಂದಿನ 'ರಾತ್ರಿಖರ್ಚಿಗೆ'(?) ಒಂದು ದಾರಿ ಮಾಡಿಕೊಳ್ಳುತ್ತಿದ್ದರು!" ಎಂದು ಕೇಳುವವರ ಕಿವಿಗೆ ಪಕ್ಕ ಹೂದಾನಿಯಿಡುವ ಈ ಮಹಾಶಯನಿಗೆ ಅದೆ ಹೊತ್ತಲ್ಲಿ ರೆಡ್ಡಿ 'ಕುಟೀರ' ವಾಸಿಯಾಗಿದ್ದು ಪಾಪ ಗೊತ್ತೇ ಇಲ್ಲ,ಅಥವಾ ಹೀಗೆ ಕಂಡವರನ್ನ ದೋಚಿ ರಾಮುಲು ತಂದು ಕೊಟ್ಟ ಆ ಹತ್ತಿಪ್ಪತು ಸಾವಿರ ಹಣ ಶ್ರೀಯುತರ ದಿವ್ಯದೃಷ್ಟಿಯನ್ನ ಮಂಜಾಗಿಸಿದೆ.


ಆಗಲೆ ಎರಡೆರಡು ಹೆಲಿಕ್ಯಾಪ್ಟರ್ ಹೊಂದಿದ್ದ-ಚುನಾವಣಾ ನಂತರ ಸರಕಾರ ರಚನೆಗೆ ಕಮ್ಮಿಬಿದ್ದ ಪಕ್ಷೇತರ ಶಾಸಕರಿಗೆ ಆಗಷ್ಟೆ ಫ್ರೆಶಾಗಿ ಡಾಕ್ಟರ್ ಆಗಿದ್ದ ಯೆಡ್ಡಿ ಅಮೃತಹಸ್ತದಿಂದ ಆಪರೇಶನ್ ಮಾಡಿಸಲು ಗೋಣಿಗಳಲ್ಲಿ ಗೋರಿಗೋರಿ ಗಣಿ ಬಗೆದ ಹಣ ತಂದಿದ್ದ ರೆಡ್ಡಿ ತೀರ ಹತ್ತಿಪ್ಪತು ಸಾವಿರಕ್ಕೆ ಕಂಡವರ ಬಳಿ ಕೈಚಾಚುತ್ತಿದ್ದ ಅಂತ ಈತ ನೀವು ನಂಬಬೇಕು ಅಥವಾ ನಿಮ್ಮ ಕಿವಿ ಖಾಲಿಯಾಗಿದ್ದರೂ ತಾವೆ ಅಲ್ಲೊಂದು ಹೂವಿಟ್ಟುಕೊಂಡು ಕನಿಷ್ಠ ಹಾಗೆ ನಂಬಿದಂತೆ ನಟಿಸಬೇಕು! ಇದಕ್ಕೆ ನೀವು ಮೆಡಿಕಲ್ ಚಂದ್ರುವೋ, ಗೋರೂರು ನಾಗನೂ,ಬಕೆಟ್ ಸೀನನೊ ಇಲ್ಲವೆ ಪಾಪಿ ತೀರ್ಥಹಳ್ಳಿಯೊ ಆಗಿರಲೆಬೇಕು ಅನ್ನೋ ನಿಯಮಗಳೇನೂ ಇದ್ದಂಗಿಲ್ಲ!



ಇವರ ಸಾತ್ವಿಕ ಶ್ರೀರಾಮುಲು ಕಳೆದ 'ಕೋಜಾ' ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗಲೆ ಬಳ್ಳಾರಿ ಮಹಾನಗರಪಾಲಿಕೆಯ ಚುನಾವಣಾ ಪ್ರಚಾರದ ಹೊತ್ತಲ್ಲಿ ಕ್ರಿಕೆಟ್ ಬ್ಯಾಟು ವಿಕೆಟು ಹೊತ್ತು ತಾನೆ ಸ್ವತಃ ತನ್ನ ಕಪಿಪಡೆಯನ್ನ ಮುನ್ನಡೆಸಿ ಆಗಿನ್ನೂ ಬಿಜೆಪಿ ಬಿಟ್ಟು ಕಾಂಗ್ರೆಸ್'ಗೆ ಪಕ್ಷಾಂತರ ಮಾಡಿದ್ದ ಅನಿಲ್ ಲಾಡ್'ರ ಬಳ್ಳಾರಿ ನಿವಾಸಕ್ಕೆ ಹಾಡುಹಗಲೆ ನುಗ್ಗಿ ಎಲ್ಲವನ್ನೂ ಪುಡಿಗಟ್ಟಿದ್ದರೂ ಅದರಲ್ಲೇನೂ ತಪ್ಪುಕಾಣದ ಇವರು ಆಗ "'ಗಣಿಕಳ್ಳ' ಅನಿಲ್ ಲಾಡ್" ಎಂಬ ಉದ್ಗ್ರಂಥ ರಚನೆಯಲ್ಲಿ ತನ್ಮಯರಾಗಿದ್ದರು.ಅತ್ತ ಕಾರ್ಪೊರೇಟರ್ ಪದ್ಮಾವತಿಗೆ ಪದ್ಮನಾಭನ ಪರಮಸಾಯುಜ್ಯವನ್ನ ಹೀಗೆ ಒಂದು ಶುಭಸಂಜೆಯ ತಂಪು ಹೊತ್ತಲ್ಲಿ ಬಳ್ಳಾರಿಪೇಟೆಯ ನಟ್ಟನಡು ರಸ್ತೆಯಲ್ಲಿ ದಯಪಾಲಿಸಿದ್ದರೂ ಕೂಡ ಈಗಾಗಲೆ ನಟಿ ರೂಪಿಣಿಗೊಮ್ಮೆ ಅದೇರೀತಿ ಮುಫಾತ್ತಾಗಿ ಎಡ್ಸ್ ಅಂಟಿಸಿ ಮುಕ್ತಿ ಕರುಣಿಸಿದ್ದ ಅನುಭವವಿರುವ ಈ ಕರ'ಪತರಕರ್ತನ ಪಾಲಿಗೆ ಶ್ರೀರಾಮುಲು ಏನೂ ಅರಿಯದ ಹಸುಗೂಸು,ಪಾಪ!



ಈಗ ಸ್ವಸ್ತಿಕ್ ನಾಗರಾಜ್ ಹಾಗು ಕಾರಪುಡಿ ಮಹೇಶನ ಡೈರಿಗಳೆರಡರಲ್ಲೂ ಈ ಪುಣ್ಯಾತ್ಮನ ಹೆಸರು ಸಂಪರ್ಕ ಸಂಖ್ಯೆಯ ಸಹಿತ ವಕ್ಕರಿಸಿಕೊಂಡಿರುವ ಪರಿಣಾಮ ಕಳೆದ 'ರವಿ'ವಾರ ರಾತ್ರಿ ರೆಡ್ಡಿ ಪ್ರಕರಣದ ಹಿನ್ನೆಲೆಯಲ್ಲಿ ಸದರಿ ಸಂಪಾದಕನ ಹಾಗು ಬಾಣಭಟ್ಟನ ಮನೆಗೂ ಸಿಬಿಐ ಧಾಳಿಯಿಟ್ಟಿದ್ದ ಪುಕಾರು ಬೆಂಗಳೂರಿನ ಪತ್ರಕರ್ತರ ವಲಯದಲ್ಲಿ ಹಬ್ಬಿತ್ತು.ಆದರೆ ಅದು ಸುಳ್ಳು ಅನ್ನುವುದು ತತ್ಕಾಲಕ್ಕೆ ಆತನಿಗೆ ಸಮಾಧಾನವನ್ನೇನೊ ತಂದಿರಬಹುದು.ಆದರೆ ಸದ್ಯ ಓಎಂಸಿ ಹಾಗು ಅಸೋಸಿಯೇಟೆಡ್ ಮೈನಿಂಗ್ ಸಂಸ್ಥೆಯ ಜಂಟಿ ಲೆಕ್ಖ ಪರಿಶೋಧಕಿಯಾಗಿದ್ದ ರೇಣುಕಾ ಜಿ ಆಚಾರ್ಯರ ಅಕಾಲಿಕ ನಾಪತ್ತೆ ಪ್ರಕರಣದ ಬೆನ್ನುಹತ್ತಿರುವ ಸಿಬಿಐ (ಒಂದೊಮ್ಮೆ ಆಕೆ ಸೆರೆಸಿಕ್ಕರೆ ಇನ್ನಷ್ಟು ಅಮೂಲ್ಯ ಮಾಹಿತಿ ಹೊರಬಂದು ರೆಡ್ಡಿ ಮತ್ತವನ ಪಟಾಲಂ ಖಾಯಂ ಜೈಲೂಟಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ ಎನ್ನುವ ಆತಂಕದ ಕಾರಣ ಆಕೆಯನ್ನ ದುಬೈಗೆ ಸಾಗಹಾಕಲಾಗಿದೆ,ಇಲ್ಲ ಇಂಡೋನೇಷ್ಯಾದಲ್ಲಿ ಆಕೆ ಇದ್ದಾಳೆ ಎಂಬ ಅಂತೆಕಂತೆಗಳ ನಡುವೆ ಪುರಾತನ ಪಾತಕಿಯೂ,ಸದರಿ ಸಂಪಾದಕರಿಂದ ಸಂಭಾವಿತನೆಂಬ 'ಪ್ರಮಾಣಪತ್ರ'ವನ್ನು ಕಾಸು ಕೊಟ್ಟು 'ಖಾಸ್'ಆಗಿ ಕೊಂಡವನೂ ಆದ ಶ್ರೀರಾಮುಲುವೆ ಆಕೆಯ 'ಕಥೆಯನ್ನ ಶಾಶ್ವತವಾಗಿ ಮುಗಿಸಿ' ಇನ್ನಿಲ್ಲವಾಗಿಸಿರುವ ಸಾಧ್ಯತೆಗಳ ಬಗ್ಗೆಯೂ ಸಿಬಿಐಗೆ ದಟ್ಟ ಗುಮಾನಿಯಿದೆ!).


ಈ ತನಿಖೆಯ ಜೊತೆಗೆ ಬಳ್ಳಾರಿ ಅಕ್ರಮದ ಫಲಾನುಭವಿಗಳನ್ನ ಅವರು ಮುಕ್ಕಿದ ಹಣದ ಮೊತ್ತದ ಮೌಲ್ಯಾನುಸಾರ ಮೇಲಿನಿಂದ ಕೆಳಕ್ಕೆ ಆದ್ಯತೆಯ ಅನುಸಾರ ಹಿಡಿಹಿಡಿದು ವಿಚಾರಿಸುತ್ತಿರುವ ಶುಭ ಸಂಧರ್ಭದಲ್ಲಿ ಈ ಗಾರ್ಧಭಗಳ ಮೇಲೂ ಐಪಿಸಿ ಹಾಗು ಸಿಅರ್'ಪಿಸಿಯ ಕೋಡ್ 511ರ ಅನುಸಾರ (ಸದರಿ ಪಿನಲ್'ಕೋಡ್ ಕದ್ದ ಮಾಲನ್ನ ಕೊಂಡ ಅಥವಾ ಅದರಲ್ಲಿ ಪಾಲುತಿಂದವರನ್ನೂ ಕಳ್ಳರೆಂದೆ ಪರಿ'ಗಣಿ'ಸಿ ಸೂಕ್ತ ದಂಡ ಸಹಿತ ಸೆರೆವಾಸದ ಸವಿಯನ್ನೂ ಅನುಭವಿಸುವ ಸದಾವಕಾಶ ಕಲ್ಪಿಸಿಕೊಡುತ್ತದೆ!) ಸದ್ಯದಲ್ಲೆ ಮುಗಿಬೀಳುವ ಸಂದರ್ಭವೂ ಇಲ್ಲದಿಲ್ಲ.ಹೀಗಾಗಿಯೆ ರೆಡ್ಡಿ ಒಳಗೆ ಹೋದ ನಂತರ ಇಲ್ಲಿಯವರೆಗೆ ಆತನಿಗೂ-ರಾಮುಲುವಿಗೂ ಹೊಡೆಯುತ್ತಿದ್ದ ಭೋಪರಾಕಿಗೆ ಪೂರ್ತ ವಿರುದ್ಧವಾಗಿ ಈಗ ಹೊಸತಾಗಿ ಪುಂಗಿಯೂದುತ್ತಿರುವ, 'ಕಪ್ಪ'ತಿಂದು ಕಾರುತ್ತಿರುವ ಎಲ್ಲಾ ಪತರಕರ್ತ ಪಾತಕಿಗಳನ್ನೂ ಆದಷ್ಟು ಬೇಗ 'ಒಳಗೆ' ಹಾಕಿ ಸರಕಾರಿ ಅತಿಥಿಗಳಾಗಿಸೋದು ನಾಡಿನ ಹಿತದೃಷ್ಟಿಯಿಂದ ಕ್ಷೇಮ. ಈ ಒಳ್ಳೆಯ ಕಾಲ ಶೀಘ್ರ ಒದಗಿ ಬಂದು, ಹಗಲು ದರೋಡೆ ಮಾಡಿಯೂ ಹೆಗಲು ಕೊಡವಿಕೊಂಡು ಓಡಾಡುವ ಬಾಣ ಭಟ್ಟ ,'ತ್ಯಾಗ'ಜೀವಿ,ಸಂಜಯ್ ಸರ್ ಇವರೆಲ್ಲರೊಂದಿಗೆ ಈ ಗಡವನೂ 'ರವಿ'ಯೋದಯವನ್ನು ಪರಪ್ಪನ ಅಗ್ರಹಾರದಲ್ಲಿಯೆ ಕಾಣುವಂತಾದರೆ ಕನ್ನಡಿಗರು ಖಂಡಿತವಾಗಿಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಾರು...

Tuesday, September 13, 2011

खुछ कोंया सा...

सन्नाटे में,
कामोशी में/
कोफ्नाक दर्द भरते हुवे उदासी रात के...सरगोशी में,
सिर्फ तेरे यादों के भरोसे सांस ले रहाहू//

ये अकेलापन शायद मजे कभ्का कतम करदेता,
यादोंमे ही सही....अगर तुम न आते/
हम शायद सांस लेना ही रोक देते,
सिर्फ खयालोमे ही सही...तुम न साथ देते!//

Saturday, September 10, 2011

ವಿಶ್ವರೂಪ"ದರ್ಶನ"....'ಅಗ್ರಹಾರ'ದಲ್ಲಿ ಇನ್ನೆರಡ್ ದಿನ!

ಎಲ್ಲಿ,ಯಾರಿಗೆ,ಏನಂತ ಚಾಲೆಂಜ್ ಮಾಡಿದ್ದರೊ ಯಾರಿಗೂ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲದಿದ್ದರೂ 'ಮೆಜೆಸ್ಟಿಕ್'ನಿಂದ 'ಕಲಾಸಿಪಾಳ್ಯ'ದವರೆಗೆ ಖಾಸಾ ದೋಸ್ತ್'ಗಳಾದ 'ಕರಿಯ'ರೊಂದಿಗೆ ಅಡ್ಡೆ ಹಾಕಿಕೊಂಡು ಅಡ್ಡಾಡುತ್ತಿದ್ದ ತೂಗುದೀಪ ದರ್ಶನ್'ರನ್ನ 'ಚಾಲೆಂಜಿಂಗ್ ಸ್ಟಾರ್'ಅಂತ ಕನ್ನಡಿಗರು ಒಪ್ಪಿಕೊಂಡು ಈಗಾಗಲೆ ದಶಕ ಕಳೆದುಹೋಗಿದೆ.ಕ್ರಮೇಣ 'ಕಾಸು ಕೊಟ್ಟರೆ ಕಾಚ ಹಾಕ್ಕೊಂಡು ನಟಿಸೋಕೂ ನಾನು ತಯಾರ್' ಎಂಬ ಅವರ 'ನಮ್ಮ ಪ್ರೀತಿಯ ಮಾಮು' ಶೈಲಿಯ ಡೈಲಾಗ್ ಕೇಳಿದ ಮೇಲೂ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡದೆ ಅವರನ್ನ ಇವತ್ತೂ 'ನಮ್ಮ ಪ್ರೀತಿಯ ರಾಮು' ಅಂತಲೆ ಆದರಿಸಿ ಅಪ್ಪಿಕೊಂಡಿರೋದಕ್ಕೂ ಈ ಶರತ್ತಿಲ್ಲದ ಅಭಿಮಾನವೆ ಕಾರಣ.ಆದರೆ ಕಳೆದೆರಡು ವರ್ಷಗಳಿಂದ ಅವರ ವಿಶ್ವರೂಪ'ದರ್ಶನ' ಕ್ರಮೇಣ ಆಗಾಗ ಪ್ರಕಟವಾಗೋದಕ್ಕೆ ಆರಂಭವಾದ ಮೇಲೆ ಮಾತ್ರ ಕನ್ನಡ ಚಿತ್ರರಸಿಕ ಒಳಗೊಳಗೆ ಕಂಗಾಲಾಗಿದ್ದ.



ಇತ್ತೀಚಿಗೆ ತೆರೆಯಾಚೆಗೂ ಪಕ್ಕಾ 'ಪೊರ್ಕಿ'ಯಾಗಿ ನಡೆದುಕೊಳ್ಳೋದನ್ನೆ ರೂಢಿ ಮಾಡಿಕೊಂಡಿದ್ದ ಈ ನಟ ಭಯಂಕರ ತನ್ನ ಪತ್ನಿ ವಿಜಯಲಕ್ಷ್ಮಿಯ ನೆಮ್ಮದಿಗೆ ಮಾತ್ರ ಆಗಾಗ 'ಸುಂಟರಗಾಳಿ'ಯಂತೆ ಧಾಳಿಯಿಡುತ್ತಿರೋದು ಮಾತ್ರ ಅಕ್ಷಮ್ಯ.ದರ್ಶನ್ ವಿಕಾರಗಳು ಮೊತ್ತಮೊದಲ ಬಾರಿಗೆ ಬಹಿರಂಗವಾದದ್ದು "ಕನ್ನಡ ಚಲನಚಿತ್ರರಂಗದ ವಜ್ರಮಹೋತ್ಸವ" ಸಮಾರಂಭದ ಹೊತ್ತಿಗೆ.ಅಂದು ಆ ಆಚರಣೆಯ ಹಿನ್ನೆಲೆಯಲ್ಲಿ ವಿವಿಧ ಲೇಖಕರಿಂದ ಚಿತ್ರರಂಗದ ಸಾಧಕರ ಬಗ್ಗೆ ಸುಮಾರು ಎಪ್ಪತೈದು ಪುಸ್ತಕಗಳನ್ನ ಬರೆಸಲಾಗಿತ್ತು.ದುರದೃಷ್ಟವಶಾತ್ ಅದರಲ್ಲಿ ಒಂದುಕಾಲಕ್ಕೆ ತಮ್ಮ ತೆರೆಯ ಮೇಲಿನ ಅಬ್ಬರದಿಂದ ಮಿಂಚಿಮರೆಯಾಗಿದ್ದ ಹಲವಾರು ಖಳನಾಯಕರ ಬಗ್ಗೆ ಒಂದು ಪುಸ್ತಕವೂ ಪ್ರಕಟವಾಗಿರಲಿಲ್ಲ,ವಾಸ್ತವವಾಗಿ ನೋಡಿದಾಗ ಅದೊಂದು ಕ್ರಿಯಾಲೋಪ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.ಆದರೆ ಅದರ ಬಗ್ಗೆ ದರ್ಶನ್ ತೋರಿದ ದುಂಡಾವರ್ತಿ ನಡುವಳಿಕೆ ಮಾತ್ರ ಹೇಸಿಗೆ ಹುಟ್ಟಿಸುವಂತದ್ದಾಗಿತ್ತು."ನಮ್ಮಪ್ಪನ ಬಗ್ಗೆ ಒಂದು ಬುಕ್ ಬರೆಸೊ ಯೋಗ್ಯತೆಯಿಲ್ಲದ ಅವರು ಸತ್ತರೂ ನಾನವತ್ತು ಮೇಕಪ್ ತೆಗೆಯಲ್ಲ ;ಚಿತ್ರೀಕರಣವನ್ನ ರದ್ದುಪಡಿಸಿ ಗೌರವಿಸಲ್ಲ" ಅಂತ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಂತರವೂ ಅಂದಿನ "ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ"ಯ ಅಧ್ಯಕ್ಷ ರಾಗಿದ್ದ ಡಾ.ಜಯಮಾಲ ವಿರುದ್ದ ಈ ಕೇಡುಗಾಲಕ್ಕೆ ಸಿರಿ ಬಂದ ಹಾಗಿದ್ದ ಈ ಮದ'ಗಜ' ಟಿವಿ ಕ್ಯಾಮರಾಗಳ ಮುಂದೆ ಘೀಳಿಟ್ಟಿತ್ತು.ಸಾಲದ್ದಕ್ಕೆ ಕ್ಯಾಮರ ಮರೆಯಲ್ಲಿ ಆಪ್ತೆಷ್ಟರೊಂದಿಗೆ 'ತೀರ್ಥ'ಯಾತ್ರೆ ಮಾಡೋವಾಗ ಜಯಮಾಲರನ್ನ ಗಾಂಧಿನಗರದ ಶುದ್ಧ 'ಮಾತೃ'ಭಾಷೆಯಲ್ಲಿ ಹೀಯಾಳಿಸಿ ಮಾತನಾಡಿದ್ದನ್ನ ಕೇಳಿಸಿಕೊಂಡಿದ್ದರೂ ಸಹ ಅದನ್ನ 'ಆ ಕಿವೀಲಿ ಕೇಳಿ ಈ ಕಿವೀಲಿ ಬಿಟ್ಟು' ಕನ್ನಡಿಗರು ಕ್ಷಮಿಸಿ ತಮ್ಮ ದೊಡ್ಡತನ ಮೆರೆದಿದ್ದರು.



ಇನ್ನೂ ನಟನಾಗಿ ತಮ್ಮ ವೃತ್ತಿಬದುಕಿನ ತರುಣಾವಸ್ಥೆಯಲ್ಲಿದ್ದಾಗಲೆ ತಾವೇ ಪ್ರೀತಿಸಿದ್ದ ಸಂಬಂಧಿಕರ ಹುಡುಗಿ ವಿಜಯಲಕ್ಷ್ಮಿಯನ್ನ ಆಕೆ ಇನ್ನೂ ಬಿಇ ಪದವಿಯ ಆರನೆ ಸೆಮಿಸ್ಟರ್'ನಲ್ಲಿದ್ದಾಗಲೆ ಅವಸರಕ್ಕೆಬಿದ್ದವರಂತೆ ಮದುವೆಯಾಗಿದ್ದ ದರ್ಶನ್ ಸಂಸಾರಿಯೂ ಆಗಿದ್ದರು.ಆದರೆ ಅದಾಗಲೆ ತಲೆಗೇರಿದ್ದ ಖ್ಯಾತಿಯ ಅಮಲು ಹಾಗು 'ಸ್ಟಾರ್' ಪಟ್ಟ ದೊರಕಿಸಿ ಕೊಟ್ಟ ಕಾಸಿನ ಸಮೃದ್ಧತೆ ಅವರನ್ನ ಬಹುಬೇಗ ಅಡ್ಡದಾರಿಗೆ ತಿರುಗಿಸಿದ್ದು ಮಾತ್ರ ವಿಪರ್ಯಾಸ.2001ರ ಮೇ ತಿಂಗಳಲ್ಲಿ ಮದುವೆಯಾದ ನಂತರ ಕೆಲವು ವರ್ಷ ನೆಮ್ಮದಿಯಾಗಿದ್ದ ಅಥವಾ ಕನಿಷ್ಠ ಹಾಗೆ ನಟಿಸುತ್ತಿದ್ದ ವಿಜಯಲಕ್ಷ್ಮಿ ಮಗ 'ವಿನೀತ್' ಹುಟ್ಟಿದ ನಂತರ ಪೂರ್ತಿ ದಿಕ್ಕೆಟ್ಟರು.ಬಾಡಿಗೆ ಮನೆಯಲ್ಲಿದ್ದಾಗಲೆ ಪತ್ನಿಯಲ್ಲದೆ ಇನ್ನಿತರ 'ವನಿತೆ'ಯರನ್ನೂ ಒಲಿಸಿಕೊಂಡು ಅವರೊಂದಿಗೂ ಹೊತ್ತಲ್ಲದ ಹೊತ್ತಲ್ಲಿ ಖುಲ್ಲಂಖುಲ್ಲ 'ಜಾಲಿಹಾಡು' ಹಾಡೋಕೆ ಹೊರಟರೊ ವಿಜಯಲಕ್ಷ್ಮಿಗೆ ಪ್ರತಿಭಟನೆಗೆ ಇಳಿಯೋದು ಅನಿವಾರ್ಯವಾಯ್ತು.ಈ ಮೊದಲು ಬಿಟಿಎಂಲೇಔಟ್'ನಲ್ಲಿ ವಾಸವಾಗಿದ್ದ ದರ್ಶನ್ ರಾಜರಾಜೇಶ್ವರಿನಗರದ ಸ್ವಂತ ಮನೆಗೆ ವಾಸ್ತವ್ಯ ಬದಲಿಸಿದ ನಂತರ ಅವರ ಒಂದೊಂದೆ ವಿಕಾರಗಳು ಸ್ಪಷ್ಟವಾಗಿ ಬೆಳಕಿಗೆ ಬಂದವು.ಸಾಲದ್ದಕ್ಕೆ ಆ ವೇಳೆಗಾಗಲೇ ಪೋಲಿ'ಕಿಟ್ಟಿ'ಯಾಗಿದ್ದ ಮಗನ 'ಈ ಬಂಧನ'ದಿಂದ ಬೇಸತ್ತ ದರ್ಶನ್ ಅಮ್ಮ ಮೀನಾ ತೂಗುದೀಪ ಮರಳಿ ಮೈಸೂರಿಗೆ ವಾಸ್ತವ್ಯ ಬದಲಿಸಿ ತಮ್ಮ ಚಪಲಗಳ 'ದಾಸ'ನಾಗಿದ್ದ ಹಿರಿಮಗನ ನಂಟನ್ನ ಬಹುತೇಕ ಕಡಿದುಕೊಂಡಿದ್ದರು,ಇತ್ತ ತಮ್ಮ ದಿನಕರ್ ಕೂಡ ದರ್ಶನ್ 'ಬಾಸ್' ಇಸಂನಿಂದ ರೋಸತ್ತು ಪ್ರತ್ಯೇಕವಾಗಿದ್ದರು.ಇದೆಲ್ಲ ಒಳಗೊಳಗೆ ಗುಟ್ಟಾಗಿ ನಡೆದಿತ್ತು ಹೊರತಾಗಿ ಎಲ್ಲೂ ಬಹಿರಂಗಕ್ಕೆ ಬಂದಿರಲಿಲ್ಲ.ಹೀಗೆ 'ಅರಸನ ಅಂಕೆಯಿಲ್ಲದೆ ;ದೆವ್ವದ ಕಾಟವೂ ಕಳೆದು' ಸರ್ವತಂತ್ರ ಸ್ವತಂತ್ರನಾಗುತ್ತಿದ್ದಂತೆ ತಮ್ಮ ಚಿಲ್ಲರೆ ಶೋಕಿಗಳ ನಿಜ ದರ್ಶನವನ್ನ ವಿಜಯಲಕ್ಷ್ಮಿಗೆ ತೋರಲಾರಂಭಿಸಿದ ದರ್ಶನ್ ಅದನ್ನ ಪ್ರಶ್ನಿಸಿದಾಗಲೆಲ್ಲ ಮುಖಾಮೂತಿ ನೋಡದೆ ಪತ್ನಿಗೆ ಚೆಚ್ಚುವುದನ್ನು ರೂಢಿಸಿಕೊಂಡಿದ್ದರು.ಅಲ್ಲದೆ ಅದಾಗಲೆ ಅವರ ಬಾಳಿನಲ್ಲಿ 'ನಿಖಿತಾ'ಗಮನವೂ ಆಗಿದ್ದರಿಂದ "ಅಲ್ಲಿ ನಕ್ಕರೆ ನಿಖಿತ ;ಇಲ್ಲಿ ವಿಜಯಲಕ್ಷ್ಮಿಗೆ ಒದೆ ಖಚಿತ" ಎಂಬ ಸ್ಥಿತಿ ಸೃಷ್ಟಿಯಾಗಿ ಹೋಯ್ತು.ಸಾಲದ್ದಕ್ಕೆ ಸದಾ ಒಳಗೆ ಸೇರಿರುತ್ತಿದ್ದ 'ಪರಮಾತ್ಮ'ನ ಆಡಿಸಿದಂತೆ ಆಡುವ ದರ್ಶನ್ ಹೊರಪ್ರಪಂಚಕ್ಕೆ ಜೆಂಟಲ್'ಮ್ಯಾನಾಗಿಯೂ ಮನೆಯೊಳಗೆ ಮೆಂಟಲ್'ಮ್ಯಾನಾಗಿಯೂ ಏಕಕಾಲದಲ್ಲಿ ದ್ವಿಪಾತ್ರಾಭಿನಯದಲ್ಲಿ ಮಿಂಚುತ್ತಿದ್ದರು ಅನ್ನೋದು ಬಹಿರಂಗ ಗುಟ್ಟು!


ಈ ಹಿಂದೆಯೂ ಸಾಯಬಡಿದಿದ್ದ ದರ್ಶನ್'ರ ಕಾಟವನ್ನು ತುಟಿಕಚ್ಚಿ ಸಹಿಸಿಕೊಂಡಿದ್ದ ವಿಜಯಲಕ್ಷ್ಮಿ ಇದೀಗ ಸಿಡಿದು ನಿಂತಿದ್ದರೂ ಅದನ್ನ ಮತ್ತೆ ವ್ಯವಸ್ಥಿತವಾಗಿ ರಾಜಿ ಪಂಚಾಯತಿ ಮಾಡಿ ಮುಚ್ಚಿಹಾಕಲಾಗಿದೆ.ಕಳೆದ ಎಪ್ರಿಲ್ 14ರಂದು ಚಪ್ಪಲಿಯಿಂದ ಭೀಕರವಾಗಿ ನಡುರಾತ್ರಿಯಲ್ಲಿ ದರ್ಶನ್'ರಿಂದ ಹಲ್ಲೆಗೊಳಗಾಗಿ ನಟ್ಟನಡುರಾತ್ರಿಯಲ್ಲಿ ಮಗುವಿನೊಂದಿಗೆ ಮನೆಯಿಂದ ಹೊರ ತಳ್ಳಲ್ಪಟ್ಟಿದ್ದ ವಿಜಯಲಕ್ಷ್ಮಿ ಅದುಹೇಗೊ ಅರೆಪ್ರಜ್ಞಾವಸ್ಥೆಯಲ್ಲಿಯೆ ಆಟೋ ಹಿಡಿದು ನಾಗವಾರದಲ್ಲಿದ್ದ ನಟ ಶಿವರಾಜ್'ಕುಮಾರರ ಬಂಗಲೆ ತಲುಪಿ ಅವರ ಆಶ್ರಯ ಪಡೆದಿದ್ದರು.ಮೊದಲ ದಿನ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ದರ್ಶನ್ ಎರಡು ದಿನವಾದರೂ ಆಕೆಯ ಪತ್ತೆಯಾಗದ್ದರಿಂದ 'ಎಲ್ಲಾದರೂ ಸತ್ತುಗಿತ್ತು ಹೋದಳೇನೊ!' ಎಂದು ಹೆದರಿ ಕಂಗಾಲಾಗಿದ್ದ.ಕಡೆಗೆ ತನಗಿದ್ದ ಎಲ್ಲಾ ಸಂಪರ್ಕ ಬಳಸಿ ಹುಡುಕಾಡಿದಾಗ ಕಡೆಗೂ ಶಿವಣ್ಣನ ಮನೆಯಲ್ಲಿ ಪತ್ನಿ ಹಾಗು ಮಗನನ್ನ ಕಂಡು ಬಚಾವಾದೆ ಅಂತಂದುಕೊಂಡು ಅಂದು ಶಿವಣ್ಣನ ಕಾಲುಹಿಡಿದು ಕಾಡಿಬೇಡಿ ತನ್ನ ತಪ್ಪಿಗೆ ಪಶ್ಚಾತಾಪವಾಗಿರೋವಂತೆ ನಟಿಸಿ (ಎಷ್ಟಾದರೂ ಹುಟ್ಟು ನಟ!) ಅದು ಹೇಗೊ ವಿಜಯಲಕ್ಷ್ಮಿಯನ್ನ ಮರಳಿ ಮನೆಗೆ ಕರೆದುಕೊಂಡು ಬಂದಿದ್ದರು.ಆ ಸಲ ಆದ ಹಲ್ಲೆಯ ಭೀಕರತೆಗೆ ವಿಜಯಲಕ್ಷ್ಮಿ ಕಣ್ಣು ಕಳೆದುಕೊಳ್ಳುವ ಸ್ಥಿತಿಗೆ ತಲುಪಿ ಮರಳಿ ಚೇತರಿಸಿಕೊಂಡಿರುವುದೆ ಸಾಕ್ಷಿ.


ಇದರಲ್ಲೊಂದು ವ್ಯವಹಾರ ಸೂಕ್ಷ್ಮವೂ ಇದೆ.ಎಲ್ಲಾ ಭಾರತೀಯ ತಳಿಯ ಸಾಮಾನ್ಯ ಮನಸ್ಥಿತಿಯಂತೆ ತೆರಿಗೆ ವಂಚಿಸುವ ಘನಂದಾರಿ ಉದ್ದೇಶದಿಂದ ದರ್ಶನ್ ತನ್ನ ರಾಜರಾಜೇಶ್ವರಿ ನಗರದ ಸ್ವಯಾರ್ಜಿತ ಮನೆಯನ್ನೂ ಸೇರಿ ಕೆಲವೊಂದು ಸ್ಥಿರಾಸ್ಥಿಗಳನ್ನ ಪತ್ನಿಯ ಹೆಸರಿನಲ್ಲೆ ಮಾಡಿಟ್ಟಿದ್ದಾನೆ.ಈಗ 'ನಿಖಿತಾ'ಮೋಹದ ಬಲೆಯಲ್ಲಿ ಶಾಶ್ವತವಾಗಿ ಬಂಧಿಯಾಗಲು ಹೊರಟು ವಿಜಯಲಕ್ಷ್ಮಿಗೆ ಸೋಡಾಚೀಟಿ ಕೊಡಲು ಅವನಿಗೆ ಮನಸ್ಸಿದ್ದರೂ ಆಸ್ತಿಪತ್ರಗಳ ಒಡೆತನದ ವರ್ಗಾವಣೆ ಪತ್ರಕ್ಕೆ ವಿಜಯಲಕ್ಷ್ಮಿ ಸಹಿ ಹಾಕಲು ತಯಾರಿಲ್ಲ,ಇದರ ಸರಳಾರ್ಥವೆನೆಂದರೆ ಒಂದು ವೇಳೆ ಈ ಹಂತದಲ್ಲಿ ಕಾನೂನು ಪ್ರಕಾರ ವಿಚ್ಛೇದನ ಪಡೆದುಕೊಂಡರೂ ಅವೆಲ್ಲ ಜೀವಮಾನದ ಗಳಿಕೆಗೆ ಎಳ್ಳುನೀರು ಬಿಡಬೇಕು! ಈ ಸಂಕಟಕ್ಕೆ ದರ್ಶನ್ ಆಗಾಗ ತನ್ನ ಮಾನಸಿಕ ಸ್ತಿಮಿತ ಕಳೆದುಕೊಂಡು ವಿಜಯಲಕ್ಷ್ಮಿಯ ಬೆಂಡೆತ್ತುವುದು ಸಾಮಾನ್ಯ ಸಂಗತಿಯಾಗಿ ಹೋಗಿದೆ.ಜೊತೆಗೆ ಇದಕ್ಕೆ ನಿಕಿತಾಳ ಕುಮ್ಮಕ್ಕಿನ ಪಕ್ಕವಾದ್ಯವೂ ಸೇರಿ ವಿಜಯಲಕ್ಷ್ಮಿಯ ಬಾಳು ನಾಯಿಪಾಡಾಗಿ ಹೋಗಿದೆ.ತಾನು ಹೊಡೆಯೋದಲ್ಲದೆ ನಿಖಿತಾಳಿಂದ ದೂರವಾಣಿ ಕರೆ ಮಾಡಿಸಿ ಪತ್ನಿಯನ್ನ ಅವಾಚ್ಯವಾಗಿ ನಿಂದಿಸುವ ಹಾಗೆ ಮಾಡೋದು ಕೂಡ ದರ್ಶನ್ ಹಾಬಿಯಾಗಿ ಹೋಗಿದೆ.ಹಾಗಾದರೂ ಅವಳು ಮಣಿದು ಆಸ್ತಿ ಬಿಟ್ಟು ಪ್ರತ್ಯೇಕವಾಗಲಿ ಅನ್ನುವ ಒಳ ಆಸೆ.


ಈ ಪ್ರಕಾರವೆ ದೈಹಿಕ ಹಾಗು ಮಾನಸಿಕ ಹಿಂಸೆ ಪರಾಕೇಷ್ಟೆ ತಲುಪಿ ಕಳೆದ ಮೂರುವಾರದ ಹಿಂದೆ ವಿಜಯಲಕ್ಷ್ಮಿ ತಮ್ಮ ಸಹೋದರನ ಮನೆಗೆ ಹೋಗಿ ಈ ಎಲ್ಲಾ ಹಿಂಸೆಗಳಿಂದ ತಾತ್ಕಾಲಿಕವಾಗಿ ಬಚಾವಾಗಿ ನಿಟ್ಟುಸಿರುಬಿಟ್ಟಿದ್ದರು.ಆದರೆ ಈ ಅರಿಭಯಂಕರ ಈಗ ಮತ್ತೆ ಮೊನ್ನೆ ಸೆಪ್ಟೆಂಬರ್ 8ರ ಸಂಜೆ ಅವರ ಗೆಳತಿ ವಿದ್ಯಾರ ಮನೆಯಾಲ್ಲಿದ್ದಾಗ ವಿಜಯಲಕ್ಷ್ಮಿಯನ್ನ ಥೇಟ್ ತಮ್ಮಪ್ಪನ ಕಾಲದ ತೆರೆಯ ಮೇಲಿನ ಖಳಪಾತ್ರಗಳ ಪಡಿಯಚ್ಚಿನಂತೆ ಅಕ್ಷರಶಃ ಎತ್ತಾಕಿಕೊಂಡು ಹೋಗಿ ಗಾಜುಮುಚ್ಚಿದ ಕಾರಿನಲ್ಲಿಯೆ ತಾರಾಮಾರ ಬಾರಿಸಿ ಕಿವಿ ಹರಿದು-ಹಲ್ಲು ಮುರಿದು-ತಲೆಯೊಡೆದು ತಮ್ಮ ಉತ್ತರಕುಮಾರನ 'ಶೌರ್ಯ'ವನ್ನ ತೆರೆಯಾಚೆಗೂ ಪ್ರದರ್ಶಿಸಿದ್ದಾರೆ.ಇನ್ನು ತಾಳಲಾರೆ ಅಂತ ಪೋಲೀಸರ ಮೊರೆಹೊಕ್ಕ ವಿಜಯಲಕ್ಷ್ಮಿ ವಿಜಯನಗರದ "ಗಾಯತ್ರಿ ಆಸ್ಪತ್ರೆಯಲ್ಲಿ" ಚಿಕಿತ್ಸೆ ಪಡೆಯುತ್ತಿದ್ದಾರೆ' ದರ್ಶನ್ ವಿಜಯನಗರ ಪೋಲೀಸರ 'ಪೋಲಿ' ಅತಿಥಿಯಾಗಿ ಈಗ ಪರಪ್ಪನ "ಅಗ್ರಹಾರದಲ್ಲಿ ಮೂರುದಿನ..."ಕ್ಕೆ ಕಾಲ್'ಶೀಟ್ ಕೊಡದೆಯೂ ನಟಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇದೆಲ್ಲದರ ನಡುವೆ ತಮ್ಮ 'ನವರಸ'ಗಳಿಂದ ತೆರೆಯ ಮೇಲೆ ಆ'ದರ್ಶ'ದ ಪುಕ್ಕಟೆ ಪಾಠ ಹೇಳುವ 'ರೆಬೆಲ್ ಸ್ಟಾರ್'ಗಳೆಲ್ಲ ಈಗ ದರ್ಶನ್ ನನ್ನ ರಿಪೇರಿ ಮಾಡೋದನ್ನ ಬಿಟ್ಟು ಬಲಿಪಶು ವಿಜಯಲಕ್ಷ್ಮಿಯ ತಲೆಯನ್ನೆ ಸವರಿ ಅವಳ ಪೂರ್ವದ ಪೊಲೀಸ್'ದೂರಿನ ಹೇಳಿಕೆ ಬದಲಿಸಲು ಒತ್ತಡತಂದು ಅನಂತರ ಮಾಧ್ಯಮಗಳ ಮುಂದೆ ದೇಶಾವಾರಿ ಹೇಳಿಕೆ ಕೊಟ್ಟು ಜಾಣತನ ಮೆರೆಯುತ್ತಿರೋದನ್ನ ನೋಡುತ್ತಿದ್ದರೆ 'ಆಚಾರ ಇರೋದು ಹೇಳೋದಕ್ಕೆ ;ಬದನೆ ಕಾಯಿ ಇರೋದು ತಿನ್ನೋದಕ್ಕೆ' ಎಂಬ ಹಚ್ಚ ಹಳೆಯ ಗಾದೆ ಮತ್ತೆ ನೆನಪಾಗಿ ಅಸಹ್ಯ ಉಕ್ಕುತ್ತದೆ."ಹ್ಯಾಟ್ರಿಕ್ ಹೀರೊ"ಗಳ ಸಂಭಾವಿತ ನಡುವಳಿಕೆ-ಹೃದಯವಂತಿಕೆಗಳಿಂದ ವಯಸ್ಸಿನಲ್ಲಿ ಮಾತ್ರ ಕೇವಲ ಅವರಿಂದ ಬಲಿತಿರುವ ಈ ಹೆಗ್ಗಣಗಳು ಕಲಿಯೋದು ಬೇಕಾದಷ್ಟಿದೆ.


ದರ್ಶನ್ ಖೈದಿ ನಂ 9000ನಾಗಿ ಗೆಟಪ್ ಚೇಂಜ್ ಮಾಡಿದ ಕುಕ್ಕೂಡಲೆ ಅವರ ಆಪದ್ಬಾಂಧವರಾಗಿ ಲಡಕಾಸಿ 'ಬುಲೆಟ್' ಏರಿ 'ಕರಿ ಚಿರತೆ'ಗಳಂತೆ ಪರಪ್ಪನ ಅಗ್ರಹಾರದ ಅಭಿಮಾನಿಗಳಿಗೆ ಧರ್ಮ'ದರ್ಶನ' ನೀಡಿದ್ದ 'ಲವ್ಲಿ ಸ್ಟಾರ್'ಗಳಿಗೂ ಮೇಲಿನ ಮಾತು ಅನ್ವಯಿಸುತ್ತದೆ ಎನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಯೇನೂ ಇಲ್ಲ. ಮತ್ತದೆ 'ಜೈಲುರೋಗ'ಕ್ಕೆ ದರ್ಶನ್ ಕೂಡ ಬಲಿಯಾಗಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಅವರನ್ನ ಹೃದ್ರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಅವರಿಗೆ ಜಾಂಡೀಸ್ ಎಂದು ರೋಗ 'ಪತ್ತೆ ಹಚ್ಚಿ' ಹೃದ್ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ಮೇಧಾವಿ ವೈದ್ಯರನ್ನ ಮೊದಲು ದರ್ಶನ್'ರನ್ನ ಸೇರಿಸಿದ್ದ 'ನಿಮಾನ್ಸ್'ಗೆ ತುರ್ತಾಗಿ ದಾಖಲಿಸುವ ಅಗತ್ಯವಿದೆ."ಕಾಂಚನಂ ಕಾರ್ಯಸಿದ್ಧಿ!"ಎನ್ನುವ ಇಂತಹ ರೋಗಿಷ್ಟ ಮನಸ್ಸುಗಳು ಕ್ರಿಯಾಶೀಲರಾಗಿರುವ ತನಕ ವಿಜಯಲಕ್ಷ್ಮಿಯಂತಹ ಹೆಣ್ಣುಮಕ್ಕಳು ನಿತ್ಯ ಹೀಗೆಯೆ "ಬಚ್ಚಲು ಮನೆಯಲ್ಲಿ ಕಾಲುಜಾರಿ ಬಿದ್ದು" ಕಿವಿ-ಹಲ್ಲು-ತಲೆ ಹರಿದು-ಮುರಿದು ಒಡೆದುಕೊಳ್ಳುತ್ತಲೆ ಇರುತ್ತಾರೆ,ನಾವೆಲ್ಲರೂ ಇದನ್ನ 'ತೆರೆಯ ಮೇಲೆ' ನೋಡಿ ಆನಂದಿಸುತ್ತಲೆ ಇರುತ್ತೇವೆ?!

Friday, September 9, 2011

"ಕುಮಾರ"ಮೋಸ ಭಾರತ.....

ಹುಟ್ಟು ಹರಳೆಣ್ಣೆ ಮುಖದವರೂ ,ತುಂಬಾ ಕಿರಿ ವಯಸ್ಸಿನಲ್ಲಿಯೆ ಕರ್ನಾಟಕದ ಮುಖ್ಯಮಂತ್ರಿ ಪಟ್ಟದಲ್ಲಿ ಅಂಡೂರೆದ್ದವರೂ, ಅಲ್ಲದೆ ಆಗಾಗ 'ಬಿಚ್ತೀನಿ ಜೊತೆಗೆ ಎಲ್ರದ್ದೂ ಬಿಚ್ಚಾಕ್ತೀನಿ' ಅಂತ ಮಾಧ್ಯಮಗಳ ಮುಂದೆ ಚೀರಿ ರಂಪ ಮಾಡಿ ಕಡೆಗೆ ತಾವು ಬಿಚ್ಚಲು ಹೊರಟವರಿಂದ ತಾವೆ ಸರಿಯಾಗಿ ಬಿಚ್ಚಿಸಿಕೊಂಡು-ಜೊತೆಗಿಷ್ಟು ಚಚ್ಚಿಸಿಕೊಂಡು ಮರ್ಯಾದೆ ಮಣ್ಣುಪಾಲಾದರೂ ಮತ್ತೆ ಕಂಕುಳಲ್ಲಿ ಅದ್ಯಾವುದು ಓಬಿರಾಯನ ಕಾಲದ ಕಡತಗಳನ್ನೆಲ್ಲ ಇರುಕಿಕೊಂಡು ಕ್ಯಾಮರ ಕಂಡಾಗಲೆಲ್ಲ ಅದರ ಕಥೆಯ ಕ್ಯಾತೆ ಬಿಚ್ಚುವ 'ಸುಟ್ಟರೂ ಹೋಗದ ಹುಟ್ಟು ಗುಣ 'ಹೊಂದಿದವರೂ,ಇವೆಲ್ಲಕ್ಕಿಂತ ಹೆಚ್ಚಾಗಿ "ರಾಧಿಕಾ"ರಮಣರೆಂದೆ ಕನ್ನಡನಾಡಿನ 'ರಸಿಕರ' ಮನೆಮಾತಾಗಿರುವವರೂ ಆದ 'ಹೊರೆಹೊತ್ತ' ಪಕ್ಷದ ದೇವೆಗೌಡರು ರಾಜ್ಯಕ್ಕೆ ಬೇಡದಿದ್ದರೂ ಹೊರೆಸಿದ ದೊಡ್ಡ ಹೊರೆಯಾಗಿರುವ ಹೆಚ್ ಡಿ ಕುಮಾರಣ್ಣ ಕೆಲವು 'ಮಾಧ್ಯಮ ಮಿತ್ರರು' ಹಬ್ಬಿಸಿದ ಉಹಾಪೋಹಗಳಿಂದ ವಿಪರೀತ ನೊಂದುಬೆಂದು ಹೋಗಿದ್ದಾರಂತೆ!


"ನಾನು ಕಾನೂನಿಗೆ ಹಾಗು ನ್ಯಾಯಾಲಯಕ್ಕೆ ತೀರಾ ಬೆಲೆ ಕೊಡುವ ವ್ಯಕ್ತಿ! (ಕಳೆದ ಒಂದು ತಿಂಗಳಿಂದ ಸಮನ್ಸ್'ಗೆ ಹೆದರಿ ತಲೆತಪ್ಪಿಸಿಕೊಂಡು ಅಡ್ಡಾಡುತ್ತಿದ್ದಾಗಲೆ ಅವರ ಈ "ಬೆಲೆ" ಕೊಡುವ ಬುದ್ಧಿ ನಮಗೆಲ್ಲ ಚನ್ನಾಗಿ ಅರ್ಥವಾಗಿತ್ತು ಅನ್ನೋದು ಬೇರೆ ಮಾತು!) "ಕಾನೂನಿನ ಪರಿಧಿಯಲ್ಲಿ ಕಟಕಟೆಗೆ ಬಂದರೆ ಹೇಳದೆ ಕೇಳದೆ (ಯಾರನ್ನ ಕೇಳಬೇಕಿತ್ತು,ಕರ್ನಾಟಕದ ಖಾಯಂ 'ಮಾಜಿ ಪ್ರಧಾನಿ'ಗಳನ್ನ? ಯಾರಿಗೆ ಹೇಳಬೇಕಿತ್ತು ಅವರ ಆಪ್ತಮಿತ್ರ "ಕಬಡ್ಡಿ ಬಾಬು"ವಿಗಾ? ಎಂಬ ನಿಮ್ಮ ಕುಹಕವೆಲ್ಲ ಅವರು 'ನೊಂದಿರುವ' ಇಂತಹ ಕಾಲದಲ್ಲಿ ಬೇಡ!) ದಸ್ತಗಿರಿ ಮಾಡಬಹುದು ಹೀಗಾಗಿ ಯಾವುದಕ್ಕೂ ಒಂದು ನಿರೀಕ್ಷಣ ಜಾಮೀನು ( ಮತ್ತದೆ ನಿಮ್ಮ ಕುಹಕ,ಜಮೀನಲ್ಲ ಸ್ವಾಮಿ ಅದು ಜಾಮೀನು!) ಪಡೆದೇ ತೀರಿ" ಎಂಬ ಹಿತವಚನ ಹೇಳಿದ ನನ್ನ ವಕೀಲರ ಮಾತಿಗೆ ಬೆಲೆ ಕೊಟ್ಟು ಅವರ 'ವಕೀಲವಾಕ್ಯ ಪರಿಪಾಲನೆ'ಗಾಗಿ ಇಷ್ಟು ದಿನ ಕಾದು ಈಗ ಇಲ್ಲಿಗೆ ಬಂದಿದ್ದೀನಷ್ಟೆ! (ತೆರೆದ ನ್ಯಾಯಾಲಯದಲ್ಲಿ ಯಾರೊ ನಿಮಗಾಗದವರು 'ತೆರೆದ ಹೃದಯ ಶಸ್ತ್ರಚಿಕಿತ್ಸೆ' ಆಗಿರೊ ಕಾರಣ ನಿಮಗೆ 'ಎದೆಬೇನೆ' ಇತ್ತು ಹಾಗಾಗಿ ನೀವು ಬರಲಿಲ್ಲ ಅಂದ ಹಾಗಿತ್ತಲ್ಲ! ಯಾರು ಅಂತಹ ಅಪದ್ಧವನ್ನಾಡಿದ ಅಧಮ?),ಅದನ್ನ ಬಿಟ್ಟು ಕುಮಾರಣ್ಣ ಹೆದರಿ ಓಡಿ ಹೋಗಿದ್ದಾರೆ (ಅಷ್ಟಕ್ಕೂ ಅವರು ಓಡಿ ಹೋಗಿದ್ದರೂ ಹೆಚ್ಚಂದರೆ ಎಲ್ಲಿಗೆ ತಾನೆ ಓಡಿ ಹೋಗ್ತಿದ್ರು ಹೇಳಿ? ಜೆಪಿನಗರದಿಂದ ಡಾಲರ್ಸ್'ಕಾಲೋನಿಗೆ ಓಡಿಹೊಗ್ತಿದ್ರು ಅಷ್ಟೆ?!) ಅಂತೆಲ್ಲ ಸುದ್ದಿ ಹಬ್ಬಿಸಿದ ಕೆಲವು 'ಮಾಧ್ಯಮ ಮಿತ್ರ'ರ ಊಹಾಪೋಹಗಳಿಂದ ನನಗೆ ವಿಪರೀತ ನೋವಾಗಿದೆ!" ಅಂತ ಅಪ್ಪಟ 'ಕುಮಾರ"ವ್ಯಾಸನ ಕಾಲದ ಕನ್ನಡದಲ್ಲಿ ಅವರು ಎಂದಿನಂತೆ ಕ್ಯಾಮರಾಗಳ ಮುಂದೆ ಅವಲತ್ತುಕೊಳ್ಳುತಿದ್ದರೆ ಏನೂ ಕಪಟವರಿಯದ ಈ ಚನ್ನಮ್ಮನ ಕಂದಮ್ಮನ್ನ ಕಂಡು ಕನ್ನಡಿಗರು ಅವರ ಜೊತೆಗೆ ಸೇರಿ ಕಣ್ಣೀರು ಇಡೋದೊಂದೆ ಬಾಕಿಯಿತ್ತು!


ಮೊನ್ನೆ ಮೊನ್ನೆಯವರೆಗೂ 'ಎದೆನೋವು' ಅನ್ನುತ್ತಿದ್ದ ಕಟ್ಟಾ ಆಮೇಲೆ 'ಬೆನ್ನುನೋವು' ಅಂತಲೂ,ಆನಂತರ 'ಮೂಳೆನೋವು!' ಅಂತಲೂ (ಯಾವುದರ ಮೂಳೆ ಹಾಗು ಎಲ್ಲಿನ ಮೂಳೆ ಎಂಬ ಅಡ್ಡಪ್ರಶ್ನೆ ಆಮೇಲೆ ಕೇಳೋರಂತೆ ಸ್ವಲ್ಪ ತಾಳಿ!) ,ಅದಾದ ಮೇಲೆ "ಭೇದಿಗಾಗಿ ಆಪರೇಶನ್" ಅಂತಲೂ ( ಈವರೆಗೂ ಕೇವಲ "ಬೇಬಿಗಾಗಿ ಆಪರೇಶನ್" ಮಾತ್ರ ನೋಡಿ ಗೊತ್ತಿದ್ದ ಕನ್ನಡಿಗರಿಗಾಗ ಅದನ್ನ ಕೇಳಿ ಅಚ್ಚರಿಯಿಂದ ಯಾವುದೆ ಆಪರೇಶನ್'ನ ಅಗತ್ಯ ಇಲ್ಲದೆಯೆ ಸ್ಥಳದಲ್ಲೆ ಸರಾಗ ಭೇದಿಯಾಗಿ ಹೋದದ್ದು ಮಾತ್ರ ಬೇರೆ ಮಾತು!) ಈಗ ಅದೇನೂ ಮತ್ತೆ "ಮೂಳೆ ರೋಗಕ್ಕೆ" ಶಸ್ತ್ರಚಿಕಿತ್ಸೆ ಅಂತಲೂ (ಬಹುಶಃ ಅದು "ಮೂಲ" ರೋಗವಿದ್ದೀತ? ವ್ಯಾಕರಣ ದೋಷದಿಂದ ಒಂದುವೇಳೆ ಮೂಳೆ ಆಗಿರಬಹುದ? ಎಂಬ ಸಂಶಯ ಬೇಡ,ಅದು ಅವರಂದಂತೆ ಅದು "ಮೂಳೆ ರೋಗವೆ!") ಹೀಗೆ "ದಿನಕ್ಕೊಂದು ಕಥೆ" ಹೊಡೆಯುತ್ತ ಕುಮಾರಣ್ಣ ,ಅನಿತಕ್ಕರಾದಿಯಾಗಿ ಬೂಸಿಯವರೆಗೂ ಈ ವಿಷಯದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟು ಆದರ್ಶ"ಪ್ರಾಯ"ರಾಗಿರುವ ಹೊತ್ತಲ್ಲಿ ಕುಮಾರಣ್ಣನಿಗೂ ಎದೆನೋವು ಬಂದು,ಅನಿತಕ್ಕನಿಗೂ ಬೆನ್ನುನೋವು ಬೆನ್ನುಹತ್ತಿ ಕನ್ನಡ ಕುಲಕೋಟಿಯನ್ನ ಏಕಕಾಲದಲ್ಲಿ ತಮ್ಮ ಹಾಗು ಅವರೆಲ್ಲರ ಭವಿಷ್ಯದ ಕುರಿತು ಚಿಂತಾಕ್ರಾಂತರಾಗುವಂತೆ ಮಾಡಿದ್ದವು.ಅಂತದ್ದರಲ್ಲಿ ತನಗೇನೂ ಮಂಡೆಮಾರಿಯೂ ಬಡಿದಿಲ್ಲ ;ಅದೆಲ್ಲ ತಮಗಾಗದವರು ಹಬ್ಬಿಸಿದ ಸುಳ್ಳುಸುದ್ದಿಗಳು ಎಂಬ ಸಮಜಾಯಶಿಯನ್ನ ಸ್ವತಃ ಕುಮಾರಣ್ಣನ ಬಾಯಿಯಿಂದಲೆ ಕೇಳಿ ಕನ್ನಡಿಗರು ಕೊಂಚ ನಿರಾಳರಾದರು.ಇದರ ಜೊತೆಗೆ "ವಾಕ್ಯ ಪರಿಪಾಲನೆ"ಯಲ್ಲಿ ಅವರಿಗಿರುವ ಕಾಳಜಿಯನ್ನೂ ಕಂಡು ಬೆಕ್ಕಸ ಬೆರಗಾದರು.

ನೀವೆ ನೋಡಿ, ಅವರು ಈ ಹಿಂದೆ 'ಕಮಲ'ಳ ಕೈಯನ್ನ 'ಅನೈತಿಕ" ಹಿಡಿದು "ಕೋಜಾ" ಮಗುವೊಂದನ್ನು ಹೆತ್ತು (ಕೋಮುವಾದಿ-ಜಾತ್ಯತೀತ ಎಂದಷ್ಟೆ ಅದನ್ನ ವಿಸ್ತರಿಕೊಂಡು ಓದಿ ಪ್ಲೀಸ್!) ಅಧಿಕಾರದ ಸವಿಯುಂಡಾಗಲೂ ಆಗ ಅದಕ್ಕೊಪ್ಪದ ತಮ್ಮ ಪೂಜ್ಯ ತೀರ್ಥರೂಪರ "ಪಿತೃಪಕ್ಷ"ವನ್ನ ತಪ್ಪಿಯೂ ಒಡೆಯದೆ,ಸುದೀರ್ಘ ಒಂದೂ ಮುಕ್ಕಾಲು ವರ್ಷ ಅದನ್ನೆ ಆಲೋಚಿಸಿ ಮತ್ತೆ ಇಪ್ಪತ್ತು ತಿಂಗಳ ಮೊದಲ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ "ಮರಳಿ ಮನೆಗೆ" ಸೇರಿ (ಅವರು ಮಣ್ಣಿನ ಮೊಮ್ಮಗನೂ ಆಗಿರೋದರಿಂದ ಇದನ್ನ "ಮರಳಿ ಮಣ್ಣಿಗೆ" ಸೇರಿ ಅಂತಲಾದರೂ ನೀವು ಓದಲಿಕ್ಕೆ ಅಡ್ಡಿಯಿಲ್ಲ!) ಮತ್ತೆ "ಪಿತೃವಾಕ್ಯ ಪರಿಪಾಲಕ'ರೆ ಆಗಿದ್ದರು.ಆದರೂ ಅವರಿಗಾಗದ ಮಂದಿ ಅವರನ್ನ ಸುಮ್ಮನಾದರೂ 'ವಚನಭ್ರಷ್ಟ" ಅಂತೆಲ್ಲ ಜರಿದದ್ದನ್ನು ಕೇಳಿ ಆಗಲೂ ಅವರು "ನೊಂದಿರುವ' ಸಾಧ್ಯತೆಯಿದೆ! ಇಂಥ ಸತ್ಯಸಂಧರು ಈಗ ತಮ್ಮ "ವಕೀಲವಾಕ್ಯ ಪರಿಪಾಲನೆ"ಯಲ್ಲಿ ನಿರತರಾಗಿರೋದು ನಮ್ಮ ನಿಮ್ಮೆಲ್ಲರಿಗೂ ಅತೀವ ಹೆಮ್ಮೆಯ ಸಂಗತಿಯೆ ಸರಿ.

ಇನ್ನು ಚಂಚಲಗುಡದ ಕಲ್ಲಿನರಮನೆ ಸೇರಿ ನಾಲ್ಕುದಿನ ಕಳೆದ ನಂತರವೂ ಯಾವುದೆ ಅಕಾಲದಲ್ಲಿ ವಕ್ಕರಿಸಿ ಕಾಡುವ 'ರೋಗ ರುಜಿನ'ಗಳಿಗೆ ಬಲಿಯಾಗದೆ ಕಲ್ಲುಗುಂಡಿನ ಹಾಗಿರುವ ಜನಾರ್ಧನ ರೆಡ್ಡಿಯನ್ನ ನೋಡಿದಾಗ,ಸದ್ಯ ಪರಪ್ಪನ ಅಗ್ರಹಾರದ ಅತಿಥಿಗೃಹಕ್ಕೆ ಅಮರಿಕೊಂಡಿರುವ ವಾಸ್ತುದೋಷ ಪರಿಹಾರ ಆಗುವವರೆಗೆ, ಇಲ್ಲಿನ 'ರಹಸ್ಯ' ರೋಗಿಷ್ಟ ಅತಿಥಿಗಳನ್ನೆಲ್ಲ ತಾತ್ಕಾಲಿಕವಾಗಿ ಅವರ ಆರೋಗ್ಯದ ಹಿತದೃಷ್ಟಿಯಿಂದ "ರೆಡ್ಡಿ"ರೇಂಜಿಗೆ ಗಡಿಪಾರು ಮಾಡಿದರೆ ಚನ್ನಾಗಿತ್ತು ಅನ್ನಿಸುತ್ತಿದೆ,ಇದಕ್ಕೆ ನೀವೇನಂತೀರಿ?!

Thursday, September 8, 2011

'ಮಾಯಾ'ಜಾಲ...ದೇಶದ ದಿವಾಳ....!

ತನ್ನ ಅಡಾದುಡಿ ಅಹಂಕಾರದ ವಿರುದ್ಧ ಮಾತೆತ್ತಿದರೆ ಅಂತವರನ್ನ "ಮನುವಾದಿ..." ಅನ್ನೂ ಸ್ಟ್ಯಾಂಪ್ ಹಚ್ಚಿ ಚಿತ್ತು ಮಾಡಿಬಿಡುವ ಚಟ ಚಕ್ರವರ್ತಿನಿಯೂ,ಸದ್ಯ ಮುಖ್ಯಮಂತ್ರಿ ಅನ್ನುವ ಹೆಸರಿನಲ್ಲಿ ಸರ್ವಾಧಿಕಾರ ಚಲಾಯಿಸುತ್ತಾ ಇಡಿ ಉತ್ತರಪ್ರದೇಶ ರಾಜ್ಯವನ್ನೆ ತನ್ನ ಮೂರನೆದರ್ಜೆಯ ತೆವಲುಗಳಿಗಾಗಿ ಖಾಸಗಿ ಜಹಗೀರಿನಂತೆ ಅಡ್ಡಡ್ಡ ಹುರಿದು ಮುಕ್ಕುತ್ತಿರುವ ಮಾಯಾವತಿ ಎಂಬ ಸ್ಥ್ರೀರೂಪಿ ಬಫೂನ್ ಈಗ ಮತ್ತೆ 'ಬೋಳಿಸಿದರೂ ಬದಲಾಗದ ಹೀನಸುಳಿಯಂತೆ' ತನ್ನ ಮತ್ತವೆ ಮೂರುಕಾಸಿನ ಗಾಂಚಲಿಗಳಿಂದ ಆಗಬಾರದ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ತನ್ನ ನೇರವಂತಿಕೆಯಿಂದ ಆಷಾಡಭೂತಿ 'ಅಮೇರಿಕ'ದ ದಗಲುಬಾಜಿತನವನ್ನೆ ಸಕಲೆಂಟು ಅಮೇರಿಕ ಪ್ರಾಯೋಜಿತ ಕಿರುಕುಳಗಳಿಗೆ 'ಕ್ಯಾರೆ' ಅನ್ನದೆ ಬಟಾಬಯಲು ಮಾಡಿ ಅಲ್ಲಿನ ಆಳುವವರ ಮಾನವನ್ನ ಅಂತರ್ಜಾಲದ ಸಂತೆಯಲ್ಲಿ ಮುಲಾಜಿಲ್ಲದೆ ಪ್ರತಿನಿತ್ಯ ಹರಾಜು ಹಾಕುತ್ತಿರುವ ಜೂಲಿಯನ್ ಅಸ್ಸಾಂಜ್ ಈಗ 'ಆನೆ'ಬ್ರಾಂಡ್ ಮಾಯಾವತಿಯ ಮುಕುಳಿ ಬಾಯಿಯಿಲ್ಲದ ಬಡಬಡಿಕೆಗೆ ಬಲಿಯಾಗಿರುವ ಪುಣ್ಯಾತ್ಮ. ಸುಖಾಸುಮ್ಮನೆ ವಿಕಿಲಿಕ್ಸ್'ನ ನಿರ್ಲಿಪ್ತ ರಾಜತಾಂತ್ರಿಕ ಮಾಹಿತಿ ಸೋರಿಕೆಗೆ ಮತ್ತದೆ ತನ್ನ ಬುಡಭದ್ರವಿಲ್ಲದ ಹಳೆತರ್ಕದ ತಿರುಗೇಟು ನೀಡಲು ಹೋಗಿ ಮಾಯಾ ಎಂಬ ಕೇವಲ ಕೆಲವೆ ಹಿಂ'ಬಾಲಕ'ರ ಖಾಯಂ ''ಮೇಮ್'ಸಾಬ್'' ಹಾಸ್ಯಾಸ್ಪದವಾಗಿದ್ದಾರೆ.

"ಜೂಲಿಯನ್ ಅಸ್ಸಾಂಜ್ ಒಬ್ಬ ಹುಚ್ಚ ಅವನಿಗೆ ಮಾನಸಿಕ ಅಸ್ವಸ್ಥ್ಯತೆಗೆ ಚಿಕಿತ್ಸೆ ಕೊಡಿಸೋಕೆ ಅಲ್ಲಿನ ಸರಕಾರಕ್ಕೆ ಸಲಹೆ ಕೊಡ್ತೀನಿ!" ಅನ್ನುವ 'ಮಾಯಾ'ಜಾಲದ ತರ್ಕಕ್ಕೆ ಎಲ್ಲಿಂದ ನಗಬೇಕೊ ಯಾರಿಗೂ ಗೊತ್ತಾಗುತ್ತಿಲ್ಲ.ಸಾಲದ್ದಕ್ಕೆ "ಅವನೊಬ್ಬ ದಲಿತ ವಿರೋಧಿ! ಕೆಳವರ್ಗದ ಜನರ ಮಗಳಾದ ತನ್ನ ಏಳ್ಗೆಗೆ ಕುರುಬುವ ವಿರೋಧಪಕ್ಷಗಳ ಜೊತೆ ಶಾಮೀಲಾಗಿ ಮಾಡಿರೊ ಸಂಚಿನಂತೆ ಆತ ವ್ಯಥಾ ಈ ತರದ ಸುಳ್ಳುಗಳನ್ನ ಹಬ್ಬಿಸುತ್ತಿದ್ದಾನೆ! ಬೇಕಿದ್ದರೆ ಅವನನ್ನ 'ಆಗ್ರಾ'ದಲ್ಲಿರೊ ಹುಚ್ಚಾಸ್ಪತ್ರೆಗೆ ನಾನೆ ಸೇರಿಸ್ತೀನಿ!" ಅನ್ನುವ ಈ ಮತಿಭ್ರಾಂತೆಗೆ ಎಲ್ಲರಿಗಿಂತ ಮೊದಲು ಅಲ್ಲಿ ಅಡ್ಮಿಶನ್ ಯಾವತ್ತೂ ಸಿಗಬೇಕಿತ್ತಲ್ಲ(?) ಅಂತ ನಿಮಗೇನಾದರೂ ಅನಿಸುತ್ತಿದ್ದರೆ ಅದು ನಿಮ್ಮ ತಪ್ಪಲ್ಲ! ಆದರೂ ಅದನ್ನ ಬಾಯಿ ಬಿಟ್ಟು ಹೇಳೀರ ಮತ್ತೆ!,'ಮನುವಾದಿ' ಎಂಬ ಪಟ್ಟ ಬಿಟ್ಟಿಯಾಗಿ ನಿಮ್ಮ ತಲೆಗೇರೀತು ಹುಷಾರ್!! ತನ್ನ ಬಿಡುವಿರದ ಕೆಲಸ ಕಾರ್ಯಗಳ ನಡುವೆ ಮಾಯಾವತಿಯೆಂಬ ಚಿಲ್ಲರೆ ಶೋಕಿಯ ಮಹಿಳೆಗೆ ಪ್ರಾಮುಖ್ಯತೆ ಕೊಟ್ಟು ಪಿತೂರಿ ಮಾಡೋವಷ್ಟು ಬಿಡುವೇನಾದರೂ ಅಸ್ಸಂಜ್'ಗೆ ಇದ್ದಿದ್ದರೆ ಅಮೆರಿಕೆಗೆ ಆದ ಹೀನಾಪಮಾನದ ಮೂರುಪಟ್ಟು ಮಂಗಳಾರತಿ ಯಾವತ್ತೂ 'ಮಾಯಾ'ದರ್ಬಾರಿಗೂ ಆಗಿರುತ್ತಿತ್ತು ಅನ್ನೋದು ಬೇರೆಮಾತು!

"ಆಕೆಗೆ ವಿಪರೀತ ಚಪ್ಪಲಿಕೊಳ್ಳುವ ಖಯಾಲಿ ;ಅದಕ್ಕಂತಲೆ ತನ್ನ ಖಾಸಗಿ ವಿಮಾನವನ್ನ (ತನ್ನ ಹನಿ ಬೆವರನ್ನ ಸುರಿಸಿ ಮೂರುಕಾಸು ಸಂಪಾದಿ ಗೊತ್ತಿರದ ಈ ಘಟವಾಣಿ ಖಾಸಗಿ ವಿಮಾನವನ್ನ ಖರೀದಿಸಿದ್ದಾಳೆ ,ಥೇಟ್ ನಮ್ಮ ಹ'ರಾಮಿರೆಡ್ಡಿ' ತರ!) ಖಾಲಿಯಾಗಿ ಮುಂಬೈಗೆ ಕಳಿಸಿದ್ದಳು" "ಹಳೆ ಪಾಳೆಗಾರರ ತರಹ ಮನೆಯಲ್ಲಿ ಒಂಬತ್ತು (ಒಂಬತ್ತೆ ಏಕೊ? ಬಹುಷಃ 'ನ್ಯೂಮರಾಲಜಿ' ಇದ್ದೀತು!) ಅಡುಗೆ ಸಿಬ್ಬಂದಿ ಹೊಂದಿದ್ದಾಳೆ,ತಯಾರಾದ ಅಡುಗೆಯನ್ನ ಮೊದಲು ಅವರಲ್ಲೆ ಇಬ್ಬರಿಗೆ ತಿನ್ನಿಸಿ ಅದರಲ್ಲೇನೂ 'ವಿಷ' ಹಾಕಿಲ್ಲ(!) ಅನ್ನೋದನ್ನ ಖಚಿತಪಡಿಸಿಕೊಂಡು ಅನಂತರವಷ್ಟೆ ನಿತ್ಯ ಉಣ್ಣುತ್ತಾಳೆ" ಅಂತ ಆಕೆಯನ್ನ ಕಳೆದಬಾರಿ ತನ್ನ 'ಬ್ರಾಮಣ್-ಬನಿಯ-ದಲಿತ್' ಸೂತ್ರದ ಏರೇಣಿ ಹಾಕಿ ಅಧಿಕಾರದ ಅಟ್ಟ ಏರಿಸಿದ್ದ ಸತೀಶ್ ಮಿಶ್ರಾ ಅಮೇರಿಕದ ರಾಜತಾಂತ್ರಿಕರ ಹತ್ತಿರ ಖಾಸಗಿಯಾಗಿ ಬಾಯಿ ಬಿಟ್ಟದ್ದು,ಆ ಮಾಹಿತಿ ಯಥಾವತ್ ಕೇಬಲ್ ಮೂಲಕ ಹಿಲರಿ ಕ್ಲಿಂಟನ್ ಟೇಬಲ್ ತಲುಪಿತ್ತು.ಅದೆ ಈಗ ಅಸ್ಸಾಂಜ್ ಕೃಪೆಯಿಂದ ಜಗಜ್ಜಾಹೀರಾಗಿದೆ ಅಷ್ಟೆ! ಇದರಲ್ಲಿ ವಿಶೇಷವಾದರೂ ಏನಿದೆ?



ಉತ್ತರಪ್ರದೇಶದ ಮೂರುರಸ್ತೆ ಕೂಡುವಲ್ಲೆಲ್ಲ ತನ್ನ ಹಾಗು ತನ್ನ "ತಂದೆ ಸಮಾನ"ರಾದ (ಈ "ಸಮಾನ ಮನಸ್ಕ" ರೋಗ ಕರ್ನಾಟಕದಲ್ಲಷ್ಟೆ ಅಲ್ಲ,ಎಲ್ಲೆಲ್ಲೂ ಸರಿ 'ಸಮಾ'ನಾಗಿದೆ ಅನ್ನೋದು ನಿಮ್ಮ ಗಮನಕ್ಕೆ!) ಕಾನ್ಶಿರಾಮರ ಕಲ್ಲಿನ ಪ್ರತಿಮೆಗಳನ್ನ ನಾಚಿಕೆಯಿಲ್ಲದೆ ರಾಜ್ಯದ ಖಜಾನೆ ಖರ್ಚಿನಲ್ಲಿ ನಿಲ್ಲಿಸಿಕೊಂಡಿರುವ ಮಾಯಾವತಿಗೆ ಮೇಲಿನ ದೌಲತ್ತು ಕೂಡ ಇದೆ ಅನ್ನೋದು ಎಲ್ಲರಿಗೂ ಈಗಾಗಲೆ ಗೊತ್ತಿದೆ (ಈ 'ಮೂರ್ತಿ' ಮಹಾತ್ಮೆಯ ಸ್ಯಾಂಪಲ್ ನೋಡೋಕೆ ನೀವು ದೆಹಲಿ ಸಮೀಪದ ನೋಯ್ಡಾ ಹಾಗು ಘಾಜಿಯಾಬಾದ್'ಗಳಿಗೆ ಸಂಜೆ ತಂಪುಹೊತ್ತಲ್ಲಿ 'ತೀರ್ಥ'ಯಾತ್ರೆ ಮಾಡಿದರೂ ಸಾಕೆಸಾಕು!).ತನ್ನ ಪಕ್ಷದ ಬಹಿರಂಗಸಭೆಯಲ್ಲಿ ಭರ್ಜರಿ ನೋಟಿನ ಹಾರವನ್ನೆ ಹಾಕಿಕೊಂಡು ಮೆರದಾಡಿದ್ದ (ಆ ಹಾರದಲ್ಲಿ ಒತ್ತೊತ್ತಾಗಿದ್ದ ನೋಟುಗಳ ಒಟ್ಟು ಮೌಲ್ಯ ಕೇವಲ ಇಪ್ಪತ್ತೆ ಕೋಟಿಗಳು!) ಹಾಗು ಅದನ್ನ ಮೂರೂ ಬಿಟ್ಟವರಂತೆ 'ಅಭಿಮಾನಿಗಳು ಕೊಟ್ಟದ್ದು' ಎಂದು ಸಮರ್ಥಿಸಿಕೊಂಡಿದ್ದ (ಹಾಗೆ ನೋಡಿದರೆ ಅವರಿರೊ ಮನೆ-ಕಾರು-ವಿಮಾನ ಎಲ್ಲಾ ಅವರ ಅಭಿಮಾನಿಗಳೆ ಕೊಟ್ಟದ್ದಂತೆ! ಮೇಡಂ ಹೆಸರಿನಲ್ಲಿ ಚಿಕ್ಕಾಸು ಇಲ್ಲವಂತೆ ಎಲ್ಲಾ ಪಕ್ಷದ್ದೇ ಅಂತೆ!! ಹಾಗೆಂದರೆ ಏನು ಅಂತ ತಲೆತುರಿಸಿಕೊಳ್ಳಬೇಡಿ ಬಿಡಿ ಅತ್ಲಾಗೆ!) 'ಮಾಯಾ'ಬಜಾರಿನಲ್ಲಿ ಮೇಲಿನದ್ದು ನಡೆದಿದ್ದರೆ ಅದನ್ನ ಮುಕ್ತಾರ್ ಅಬ್ಬಾಸ್ ನಕ್ವಿಯಾಗಲಿ-ಸತೀಶ್ ಮಿಶ್ರಾ ಆಗಲಿ ಆಡಿಕೊಂಡಿದ್ದರೆ ಅತಿಶಯೋಕ್ತಿಯಾದರೂ ಏನಿದೆ?


"ಚಪ್ಲಿ ತರೋಕೆ ವಿಮಾನ ಕಳಿಸಿದ್ದು ನನಗಂತೂ ಗೊತ್ತಿಲ್ಲ! ಬಹುಷಃ ನಕ್ವಿ ಹಾಗು ಅಸ್ಸಾಂಜ್ ಅದರಲ್ಲೆ ಹೋಗಿದ್ರೇನೋ!" "ಇನ್ನು ನನ್ ಅಡುಗೆ ಮನೇಲೂ ಅಷ್ಟ್ ಜನ ಇರೋದು ಗೊತ್ತೇ ಇಲ್ಲ!! ಬಹುಷಃ ಅವರಿಬ್ರೂ ಅಲ್ಲೆ ಮೂಲೆಲೆಲ್ಲೊ ಪಾತ್ರೆ ಉಜ್ಕೊಂಡು ಬಿದ್ದಿದ್ರೇನೋ" ಎಂಬ 'ಮಾಯಾ'ಪ್ರಲಾಪ ಆಕೆಯ ಬಗ್ಗೆ ಅನುಕಂಪವನ್ನಷ್ಟೆ ಹುಟ್ಟಿಸೀತು ಅಷ್ಟೆ.

ಇತ್ತೀಚಿನ ಎರಡು-ಮೂರು ವರ್ಷಗಳಲ್ಲಿ ಕನ್ನಡ ಹಾಗು ಕನ್ನಡನಾಡಿನಿಂದ ಪ್ರಕಾಶಿತವಾಗುವ ಇತರ ಭಾಷೆಗಳ ದಿನಪತ್ರಿಕೆ ಹಾಗು ನಿಯತಕಾಲಿಕೆಗಳಲ್ಲಿ "ಮಾನ್ಯವರ ಕಾನ್ಶಿರಾಂ ಜಯಂತಿ'ಯ ನೆಪದಿಂದಲೊ ಇಲ್ಲವೆ "ಶಾಹು ಮಹಾರಾಜ್" ಅಥವಾ "ಬಾಬಾ ಸಾಹೇಬ್ ಅಂಬೇಡ್ಕರರ ಜನ್ಮದಿನ"ದ ನೆಪದಲ್ಲಿಯೊ ಮಾಯಾವತಿ ಪುಟಗಟ್ಟಲೆ ಜಾಹಿರಾತು ನೀಡುತ್ತಿರೋದು ನಿಮ್ಮ ಗಮನಕ್ಕೆ ಬಂದಿರಲಿಕ್ಕೆ ಸಾಕು.ಉತ್ತರಪ್ರದೇಶ ಸರಕಾರದ ಸಾಧನೆಗಳ ಶಂಖ ಊದುವ ಸದರಿ ಜಯಂತಿ ಮಾರುವೇಷದ ಜಾಹಿರಾತಿನ ತುಂಬಾ "ಬಹುಜನ ಸಮಾಜಪಕ್ಷ"ದ ಬಡಾಯಿಯೆ ತುಂಬಿರುತ್ತದೆ.ಕರುನಾಡಲ್ಲೂ ತನ್ನ ಕ್ಯಾಕ್ಟಸ್ ಹಬ್ಬಿಸುವ ಹುನ್ನಾರವಿದು.ಅಚ್ಚರಿಯೆಂದರೆ ಇದಕ್ಕೆ ಪಾವತಿಯಾಗೋದು ಮಾತ್ರ ಮಾಯಾವತಿಯ "ಆನೆ"ಪಕ್ಷದ 'ಅಭಿಮಾನಿ'ಗಳು ಕೊಡೊ ರೋಖಡಾ ಅಲ್ಲ ಬದಲಾಗಿ ಬಡತೆರಿಗೆದಾರ ಪಾವತಿಸಿದ ಆ ರಾಜ್ಯದ ಖಜಾನೆಯ ಬಾಬ್ತಿನಿಂದ!


ಅಷ್ಟಕ್ಕೂ ಎಲ್ಲಾ ರಾಜಕಾರಣಿಗಳಂತೆ ಸಮಯಸಾಧಕತನದಲ್ಲಿ ಮುಂಚೂಣಿಯಲ್ಲಿರುವ ಈ ಲೇಟೆಸ್ಟ್ ಹಿಡಿಂಬಿ ಮೊದಲು ಅಧಿಕಾರದ ಸವಿ ಉಂಡದ್ದು ಅದೆ ಮನುವಾದಿಗಳೊಂದಿಗಿನ 'ಅನೈತಿಕ ಸಂಬಂಧ'ದಿಂದ ಅನ್ನೋದು ಸ್ವತಃ ಅಕೆಗಾದರೂ ನೆನಪಿದೆಯೊ ಇಲ್ಲವೊ? ಅದತ್ಲಾಗಿರಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಹ'ರಾಮ'ರ ಕಪಿಪಕ್ಷಕ್ಕೆ ಬಲಿಯಾಗಿ ನರಳುತ್ತಿರೋದರಲ್ಲಿ ಮಾಯಾ ಪಾತ್ರವಿದೆ ಅನ್ನೋದಾದರೂ ನಿಮಗೆ ಗೊತ್ತ? ಸುಲಭವಾಗಿ ಜಾತ್ಯತೀತ ಶಕ್ತಿಗಳು ಗೆಲ್ಲಬಹುದಾಗಿದಾ 64 ಕ್ಷೇತ್ರಗಳಲ್ಲಿ ತನ್ನ ಚಿಲ್ಲರೆ ರಾಜಕೀಯ ಆಟ ಆಡಿ 'ಮನುವಾದಿ' ಪಕ್ಷದ ಕ'ಮಲ'ವನ್ನ ಕರ್ನಾಟಕಕ್ಕೆ ಅಭಿಷೇಕಮಾಡಿಸಿದ ಪುಣ್ಯ 'ಮಾಯಾ'ಮಂಗಾಟಕ್ಕೆ ಸಲ್ಲಬೇಕು.ಅವಷ್ಟೂ ಕ್ಷೇತ್ರಗಳಲ್ಲಿ ತಾನು ಕಸಿದ ಮತಗಳು ಕಡೇಪಕ್ಷ 'ಕೈ' ಕೊಡೋವವರಿಗೊ.ಇಲ್ಲ'ತೆನೆಹೊತ್ತ ರೈತ ಮಹಿಳೆಗೂ' ಬಿದ್ದಿದ್ದರೆ ಬಹುಷಃ ಕರ್ನಾಟಕದ ಭವಿಷ್ಯ ಈಗಿನಷ್ಟು ಕೆಟ್ಟು ಕೆರ ಹಿಡೀತಿರ್ಲಿಲ್ಲ ಅನ್ನಿಸುತ್ತೆ.ಕನಿಷ್ಠ ಮುಂಬರುವ ಚುನಾವಣೆಗಳಲ್ಲಂತೂ ನಾವು ಕನ್ನಡಿಗರು ಇಂತಹ ಪೀಡೆಗಳ 'ರಹಸ್ಯ' ಹುನ್ನಾರದ ಬಗ್ಗೆ ಎಚ್ಚರವಹಿಸಿ ಅವರ "ಆನೆ ಮಾರ್ಕ್" ನೀಲಿಚಿತ್ರದ(?) ಪಾರ್ಟಿಯನ್ನ ಒಂದೂ ಮತ ಹಾಕದೆ ಒದ್ದೋಡಿಸಬೇಕು.ಇಲ್ಲದಿದ್ದರೆ ಖಂಡಿತ ರಾಜ್ಯಕ್ಕೆ ಉಳಿಗಾಲವಿಲ್ಲ ಅನ್ನೋದು ನೆನಪಿನಲ್ಲಿರಲಿ,ಅಪ್ಪಿತಪ್ಪಿ ಅವರ ಕೈಗೆನಾದರೂ ಅಧಿಕಾರ ಸಿಕ್ಕರೆ ನಾಳೆ ನಮ್ಮ ಹಣವನ್ನು ಇನ್ಯಾವುದೊ ಕಂಡು ಕೇಳರಿಯದ ರಾಜ್ಯದಲ್ಲಿ ತಮ್ಮ ಬೊಂಬಡಾ ಬಜಾಯಿಸುವ ಶೋಕಿಗೆ ಮರ್ಯಾದೆ ಇಲ್ಲದೆ ನಮ್ಮ ಸರಕಾರಿ ಖಜಾನೆಯನ್ನೂ ದೋಚಿ ಖರ್ಚು ಮಾಡೋಕೂ ಹೇಸುವ ಜನ ಅವರಲ್ಲ.ಇಷ್ಟು ಸಾಲದು ಅಂತ 'ಮಾಯಾ'ಮ್ಮನ ಕಾಲು ಹಿಡಿದು ಅಸ್ಸಾಂಜ್ ಕ್ಷಮೆ ಬೇರೆ ಕೋರಬೇಕು ಅಂತ ಸ್ವತಹ ಶಾಹಿ ಇಮಾಂ ಬುಕಾರಿಯ ಪಡಿಯಚ್ಚಿನಂತೆ 'ಮಾಯಾ'ಜ್ಞೆ ಬೇರೆ ಹೊರಡಿಸಲಾಗಿದೆ ( ಅಸ್ಸಾಂಜ್ ಇದಕ್ಕೆ ಸೊಪ್ಪು ಹಾಕದೆ ಇನ್ನಷ್ಟು ಗೇಲಿ ಮಾಡಿದ್ದಾನೆ ಅನ್ನೋದು ಬೇರೆಮಾತು!) ಹಾಗೆಲ್ಲ "ಮಾಯಾ"ಸ್ಥಾನದಲ್ಲಿ ಬಂದು ಉರುಳುಸೇವೆ ಮಾಡಿ ಹೇಳುವ ಮೊದಲೆ ಮುಜುರೆಯೊಪ್ಪಿಸಿ ದೊರೆಸಾನಿ ಕಾಲು ನೆಕ್ಕೋಕೆ ಜೂಲಿಯನ್ ಅಸ್ಸಾಂಜ್ ಏನು ಮಾರಸಂದ್ರ ಮುನಿಯಪ್ಪನ? ಈ 'ಕಾಮಿಡಿ ಟೈಮ್ ಲೇಡಿ'ಯನ್ನ ಯಾವ ಹುಚ್ಚಾಸ್ಪತ್ರೆಗೆ ಸೇರಿಸೋದು ಕಾನ್ಷಿ'ರಾಮಾ'?!

Tuesday, September 6, 2011

ಜನಾರ್ಧನನ ಜನ್ಮಸ್ಥಾನದಲ್ಲಿ "ಜನತಾ" ಜನಾ'ರ್ಧನ'...?!

'ನೋಡಿ ಅವರು ಇನ್ನೂ ಅಪರಾಧಿಯಲ್ಲ,ಆರೋಪಿಯಷ್ಟೆ" ಎಂಬ ಪರಮ ಸತ್ಯದ ಸಾಕಾರ ತಮಗೊಬ್ಬರಿಗೆ ಆಗಿದೆ ಎಂಬಂತೆ ನೆನ್ನೆದಿನ ಬೆಳಗ್ಗಿನಿಂದ ಕಂಡಕಂಡ ಟಿವಿ ಕ್ಯಾಮರಾಗಳ ಮುಂದೆಲ್ಲ ಹಳೆ ಸವಕಲು ಡೈಲಾಗನ್ನೆ ಮತ್ತೆಮತ್ತೆ ಪ್ರಲಾಪಿಸುತ್ತಿದ್ದ ಭಾಜಪದ ಕುಖ್ಯಾತ ಹಳೆಕಳ್ಳನೂ-ಹಾಲಿ ದೆಹಲಿ ದರೋಡೆಕೋರನೂ ಆಗಿರುವ ವಿ ಧನಂಜಯಕುಮಾರ್ ತಮ್ಮ ಅದೆ ಹರಳೆಣ್ಣೆ ಮುಖದಲ್ಲಿ ನೋಡುಗರಿಗೆ ಬೇಡದಿದ್ದರೂ ಒತ್ತಾಯದ ಧರ್ಮದರ್ಶನ ಕೊಡುತ್ತಿದ್ದ ಹೊತ್ತಿನಲ್ಲೆ, ಅದೆ ಟಿವಿಯ ಮುಂದೆ ಕುಳಿತು ರಾಜ್ಯದ ಮೇಲೆ ಎರಗಿದ್ದ ಮತ್ತೊಂದು ಘೋರ ವಿಪತ್ತನ್ನು ನೋಡಲಾಗದೆ ಬಡಕನ್ನಡಿಗ ತಳಮಳಿಸಿ ಹೋಗುತ್ತಿದ್ದ.ಜೊತೆಜೊತೆಗೆ ತನ್ನ ಕೊನೆಗಾಣದ ಸಂಕಟಗಳಿಗೆ ಒಳಗೊಳಗೆ ಹುಲುಬುತ್ತಿದ್ದ ಅವನ ಅಸಲಿ ಸಂಕಟಕ್ಕೆ ಅಸಲು ಕಾರಣ ಮಾತ್ರ ಬೇರೆಯದೆ ಆಗಿತ್ತು.

ಬೆಳಗಾಗುತ್ತಲೆ ಇತ್ತ ನೇಸರ ಭೂರಮೆಯನ್ನ ನೋಡಿ ಕಣ್ಣು ಹೊಡೆವ ಹೊತ್ತಿಗೆ ಸರಿಯಾಗಿ ಅತ್ತ ಬಳ್ಳಾರಿಯಲ್ಲಿ ಪ್ರಭಾವಿಗಳೂ,ಸ'ಗಣಿ'ಯನ್ನ ತಾವೂ ಕಂಠಮುಟ್ಟ ತಿಂದು-ಇನ್ನಿತರರಿಗೂ ತಿನ್ನಿಸಿದ ಆರೋಪ ಹೊತ್ತ ಅನೇಕರ ಎಡಗಣ್ಣು ಕೂಡ ಅಶುಭದ ಪೂರ್ವಸೂಚನೆ ಕೊಡುತ್ತ ಪಟಪಟನೆ ಹೊಡೆದುಕೊಂಡಿತ್ತಂತೆ! ಅಗೋಚರವಾದ ಆ ದುರಾದೃಷ್ಟ ಬಂದು ವಕ್ಕರಿಸಿಕೊಳ್ಳಲು ಹೆಚ್ಚು ಹೊತ್ತೇನೂ ತಗಲಲಿಲ್ಲ.ಜನತಾ "ಜನಾರ್ಧನ'ರೆಂಬ ಆರೋಪ ಹೊತ್ತ ಜನನಾಯಕರೊಬ್ಬರನ್ನ ಸರ್ವೋಚ್ಚ ನ್ಯಾಯಾಲಯದ ಅಣತಿಯಂತೆ ಕೇಂದ್ರ ಸರಕಾರ ಛೂ ಬಿಟ್ಟಿದ್ದ ಸಿಬಿಐ ಸೀಳುನಾಯಿಗಳು ಅಚ್ಚುಕಟ್ಟಾಗಿ ಬೇಟೆಯಾಡಿ ಹಡೆಮುರಿಗೆಗೆ ಕಟ್ಟಿ ತಮ್ಮೊಂದಿಗೆ ಹೈದರಾಬಾದಿನ ಚುಂಚಲವಾಡ ಅತಿಥಿಗೃಹಕ್ಕೆ ಹೊರಡಿಸುತ್ತಿದ್ದವು.ಕೇವಲ ಮೂವತ್ತೆ ಕೆಜಿ ಚಿನ್ನ,ಆರು ಕೋಟಿ ನಗದು (ಹಾಗೆಲ್ಲ ಸಂಪಾದಿಸಿದ ಸಂಪತ್ತನ್ನ ಹೇಳದೆ-ಕೇಳದೆ ಯಾರ್ಯಾರೊ ಹೊತ್ತುಕೊಂಡು ಹೋದರೆ ಯಾವ 'ಸದಾನಂದ' ಮೂತಿಯೂ ಖಂಡಿತವಾಗಿಯೂ 'ನಗದು'!) ಬಳ್ಳಾರಿಯ ಅವರ 'ಕುಟೀರದ' ಮೇಲೆ ಬಿದ್ದ ರೇಡಿನಲ್ಲಿ ಜಪ್ತಾದ ಕಿಂಚಿತ್ ಸಂಪತ್ತು!

ಇತಿಹಾಸದಲ್ಲಿ ವಿಜಯನಗರದ ರಾಜಧಾನಿ ಹಂಪೆಯ ಮೇಲೆ ಬಹು'ಮನಿ' ತುರುಕರು ಇಟ್ಟಿದ್ದ ದಾಳಿಯ ಪಡಿಯಚ್ಚಿನಂತಿತ್ತು ಈ ಅಚಾನಕ್ ಧಾಳಿ.ಆ ಸಂಪತ್ತಿನ ಜೊತೆಗೆ ಸಿಕ್ಕಿದ ಕೆಲವು ದಾಖಲೆಗಳನ್ನೂ ಒಟ್ಟು ಸೇರಿಸಿ ಅವರದ್ದೆ ಆದ ಬಿಎಂಡಬ್ಲೂ,ಕರೋಲ ಹಾಗು ಬೆಂಜ್ ಕಾರುಗಳಲ್ಲಿ ಅವನ್ನೆಲ್ಲ ಹೇರಿಕೊಂಡು ಸಾಗಿಸಿದ್ದು ಥೇಟ್ ಹಿಂದೊಮ್ಮೆ ಹಾಳು ಹಂಪೆಯಿಂದ ತಿರುಮಲ ತನ್ನ ರಾಜಧಾನಿಯನ್ನ ಪೆನುಗೊಂಡಕ್ಕೆ ಸ್ಥಳಾಂತರಿಸುವಾಗ ಸಾಲು ಆನೆಗಳ ಮೇಲೆ ಸಾಮ್ರಾಜ್ಯದ ಸಂಪತ್ತನ್ನ ಸಾಗಿಸಿದ ಹಾಗೆ ಕಂಗೊಳಿಸುತ್ತಿತ್ತು.ಮುಂಗೋಳಿ ಕೂಗುವ ಮುನ್ನವೆ ನಡೆದ ಈ ಭೀಕರ ಧಾಳಿ ಪಾಪ,ದುಬಾರಿ ಕಾರುಗಳಲ್ಲಿ ಹಾಗು ಹೆಲಿಕಾಪ್ಟರ್'ನಲ್ಲಿ ಮಾತ್ರ ಈ ನಡುವೆ ತೇಲುತ್ತ ಪ್ರಪಂಚಪರ್ಯಟನೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುವ ಸನ್ಮಾನ್ಯರನ್ನ ಕೊಂಚವೂ ದಯೆತೋರದೆ ತಮ್ಮ ಲಡಕಾಸಿ ಇನ್ನೋವ ಸರ'ಕಾರಿ'ನಲ್ಲಿ ತುರುಕಿಕೊಂಡು ಹೋದದ್ದು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆಯಲ್ಲದೆ ಮತ್ತಿನ್ನೇನೂ ಅಲ್ಲ! ಅಕಟಾಕಟಾ! ಅಷ್ಟಲ್ಲದೆ ಹಂಪೆಯ ಮೇಲೆ ತುರುಕರ ಧಾಳಿಯಾಗಿ ಶತಮಾನಗಳೆ ಕಳೆದು ಹೋಗಿದ್ದರೂ ಪರಿಸ್ಥಿತಿ ಚೂರೂ ಬದಲಾಗಿಯೆ ಇಲ್ಲ(?),ಅಲ್ಲಿ ನಡೆದ ದುರುದ್ದೇಶಪೂರಿತ ಧಾಳಿಯಲ್ಲಿ ಪ್ರಮುಖನಾಗಿದ್ದ ಅಧಿಕಾರಿ ಆರ್ ಎಂ ಖಾನ್ ಎಂಬ ಮುಸಲರವ ಅನ್ನುವುದೇ ಇದಕ್ಕೆ ಪುರಾವೆ!

ಇದೆಲ್ಲದರ ನಡುವೆ ಕನ್ನಡಿಗನ ಕಣ್ಣೀರಿನ ಕತೆಯೆ ಬೇರೆ.ಈ ಹಿಂದೊಮ್ಮೆ ತಲೆಹರಟೆ ಲೋಕಾಯುಕ್ತದ ಅಧಿಕಾರಿ ಯು ವಿ ಸಿಂಗ್'ರಿಗೆ ಇದೀಗ ತಾನೇ ಅರೆಷ್ಟ್ ಆಗಿರುವ ಸಜ್ಜನರ "ಭ್ರಾತೃ ವಾಕ್ಯ ಪರಿಪಾಲನೆಯಲ್ಲಿ 'ಭರತ'ನಿಗೆ ಸಮಾನನಾದ" (ಇದನ್ನ "ಬ್ರಾತಲ್ ವಾಕ್ಯ ಪರಿಪಾಲನೆಯಲ್ಲಿ "ಭರತ'ನಿಗೆ ಸಮಾನನಾದ" ಎಂದೆಲ್ಲ ಅಶ್ಲೀಲವಾಗಿ ಓದಿಕೊಳ್ಳಬಾರದಾಗಿ ಸತ್ಪ್ರಜೆಗಳಾದ ತಮ್ಮೆಲ್ಲರಲ್ಲಿ ವಿನಮ್ರ ವಿನಂತಿ!) ಕಿರಿತಮ್ಮ ಸೋಮಶೇಖರರೆಡ್ಡಿಯೆಂಬ ಪುಣ್ಯಾತ್ಮನು ಅವರ 'ಭವಿಷ್ಯದ' ಹಿತದೃಷ್ಟಿಯಿಂದಲೆ "ಬಳ್ಳಾರಿಗೆ ಕಾಲಿಡುವ ಮುನ್ನ 'ಜಿಲ್ಲಾ ಉಸ್ತುವಾರಿ ಸಚಿವ'ರ ಅನುಮತಿ ಪಡೆದು ಬಂದಿದ್ದೀರಾ?! ಎಂದು 'ನಯವಾಗಿ'ಯೆ ಬುದ್ದಿ ಹೇಳಿದ್ದು ಚನ್ನಾಗಿ ನೆನಪಿರುವ ಕಾರಣ ಇನ್ನು ಬಳ್ಳಾರಿಗೆ ತಾನು ಕಾಲಿಡುವುದಾದರೂ ಹೇಗೆ? "ಬಳ್ಳಾರಿ ಸ್ವತಂತ್ರ ಗಣರಾಜ್ಯದ" ಪುರಪ್ರವೇಶಕ್ಕೆ ತಾನಿನ್ನು ಮುಂದೆ ವಿಶೇಷ ಅನುಮತಿಯ ವೀಸಾ ಪಡೆಯಲು ಅಲ್ಲಿನ ಖಾಯಂ ಜಿಲ್ಲಾ ಉಸ್ತುವಾರಿ ಸಚಿವರ (ಅವರು ಅಧಿಕಾರದಲ್ಲಿ ಇಲ್ಲವಲ್ಲ ಎಂಬ ಅಧಿಕಪ್ರಸಂಗದ ಪ್ರಶ್ನೆಗಳನ್ನ ಇಲ್ಲಿ ನೀವು ಕೇಳುವಂತಿಲ್ಲ!) ಅನುಮತಿ ಪಡೆಯಲು ಚುಂಚಲವಾಡದ ಅವರ ನೂತನ ಕಲ್ಲಿನ ಅರಮನೆಯ ಅಂತಪುರಕ್ಕೆ ಹೋಗಬೇಕ?,ಅವರಿಲ್ಲದೆ ಅನಾಥವಾಗುವ ಈ "ಬಳ್ಳಾರಿ ದೇಶದ" ಮುಂದಿನ ಭವಿಷ್ಯವೇನು? ಹೀಗೆ "ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಅದೇನೂ ...ಡನ ಚಿಂತೆ" ಅನ್ನುತ್ತಾರಲ್ಲ ಹಾಗೆ ಇವನದ್ದೊಂದು ಗೋಳು.ನೋಡಿ ಜನಸೇವೆ ಮಾಡುವ ಮಂದಿಗೆ ಎಷ್ಟೆಲ್ಲಾ ಅಡೆತಡೆ!

'ಬರದ ನಾಡು' ಎಂದೆ ಪ್ರಸಿದ್ಧಿ ಪಡೆದಿದ್ದ ಬಳ್ಳಾರಿಯ ಬರಡು ಭೂಮಿಯಲ್ಲೂ ಬಂಗಾರ ಮೊಗೆಯಬಹುದು ಎಂಬ ವಿನೂತನ ಅವಿಷ್ಕಾರ ಮಾಡಿದ್ದಕ್ಕೆ ಕನಿಷ್ಟಪಕ್ಷ ಒಂದೆಒಂದು 'ಕೆಂಪೆಗೌಡ' ಪ್ರಶಸ್ತಿಗಾದರೂ ಭಾಜನವಾಗಲೆ ಬೇಕಿದ್ದ ಸದರಿ ಜನಸೇವಕರನ್ನು ಈಪರಿ ಹೀನಾಮಾನವಾಗಿ ಅವಮಾನಿಸಿ ಸರಳುಗಳ ಹಿಂದೆ ನೂಕುವುದರಲ್ಲಿ ಏಕಕಾಲದಲ್ಲಿ ಕಾಣದ 'ಕೈ'ಯೊಂದರ ಪಿತೂರಿಯೂ-ಅದರ ಸಂಗಡ ಹಿತಶತ್ರುಗಳ ಮೀರ್'ಸಾಧಕ್ ಮಾದರಿಯ ಒಳಸಂಚೂ ಕಂಡಂತಾಗಿ ಅವರ ಖಾಸಾ ಶಾಗಿರ್ದ್ ಶ್ರೀರಾಮುಲು ಕೆರಳಿ ಕೆಂಡವಾಗಿದ್ದಾರೆ.ನೀವೆ ಗಮನಿಸಿ ನೋಡಿ 'ಗಣಿ'ಧೂಳಿನಿಂದ ಮತ್ತೊಮ್ಮೆ ಎದ್ದು ಬಂದು ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿ ಮಾಡುವ ಹುಮ್ಮಸ್ಸಿನಿಂದ ತಮ್ಮ ಎಂದಿನ ನಟ್ಟ'ನಡು'ಗನ್ನಡದಲ್ಲಿ ದೊಡ್ಡ ಗಂಟಲಲ್ಲಿ (ಸಹಜವಾಗಿ ಅವರ ಗಂಟಲು ದೊಡ್ಡದೆ ಆಗಿರೋದರಿಂದ ಈಬಗ್ಗೆ ನೀವು ಆಕ್ಷೇಪಿಸುವಂತಿಲ್ಲ!) ಮಾಧ್ಯಮಗಳ ಮುಂದೆ ಮುಲುಕಿ ನೆನ್ನೆಯಷ್ಟೆ ಲೋಕಕ್ಕೆಲ್ಲ ತನ್ನ 'ನೊಂದ ರಾಜಿನಾಮೆ'ಯನ್ನ ಸಾರಿ ಹೊಸ ಇತಿಹಾಸಕ್ಕೆ ಮುಂದಡಿ ಇಡುವ ಹೊತ್ತಿನಲ್ಲೆ ಅವರಿಗೆ ಈ ಘೋರ ವಿಪತ್ತು ಒದಗಿಬಂದಿದೆ.

ಈ ಬಂಧನದ ಸಮಯವನ್ನಾದರೂ ನೋಡಿ ಹೇಗಿದೆ. ರಾಜ್ಯದ ಜನರ ಹಾಗು ತಮ್ಮ ಹಿತದೃಷ್ಟಿಯಿಂದ ಬಳ್ಳಾರಿ ಗ್ಯಾಂಗಿನ 'ವಿವಿಧೋದ್ಧೇಶ ಪಂಚವರ್ಷೀಯ'ಯೋಜನೆಯ ಅನುಸಾರ ಈ ಹಿಂದೆಲ್ಲ ಡಾ ಯಡ್ಡಿಯವರು ( ಸ್ಯಾನ್'ಫೋರ್ಡ್ ವಿವಿಯವರು ತಮಗೆ ಕೊಡಮಾಡಿರುವ <ಎಷ್ಟಕ್ಕೆ ಎಂಬ ನಿಮ್ಮ ಅಡ್ಡಪ್ರಶ್ನೆ ಇವಾಗ ಬೇಡ!> 'ಡಾಕ್ಟರೇಟ್' ಗೌರವವನ್ನು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳದಷ್ಟು ವಿನಯ"ಶೀಲ"ರೂ-ಸದ್ಗುಣ ಸಂಪನ್ನರು ಅವರಾಗಿದ್ದರೂ ಸಹ ನಾವು ಅದನ್ನ ಮರೆಯಲಾದೀತೆ?) ವಿಪಕ್ಷದ 'ಉಸಿರುಗಟ್ಟಿಸುವ' ವಾತಾವರಣದ ಕಾಯಿಲೆಯಿಂದ ತೀವ್ರಅಸ್ವಸ್ಥರಾಗಿ ನರಳುತ್ತಿದ್ದ ಶಾಸಕರ ಮೇಲೆಲ್ಲ ಈವರೆಗೆ ನಡೆಸಿದ ಅಷ್ಟೂ 'ಆಪರೇಶನ್'ಗಳಲ್ಲಿ ತಮ್ಮ ತನು-ಮನ ಇವೆಲ್ಲಕ್ಕಿಂತ ಹೆಚ್ಚಾಗಿ 'ಧನ' ಅರ್ಪಿಸಿ ದುಡಿದಿದ್ದರೂ ತಮಗಾದ ಅನ್ಯಾಯವನ್ನ ಪ್ರತಿಭಟಿಸಿ ರಾಜಿನಾಮೆ ಬಿಸಾಕಲು ತಾವು ಸಿದ್ಧರಾಗಿದ್ದರೂ ತಮ್ಮಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಸ್ಪೀಕರ್ ಭೂ(ಬೊ)ಪನನ್ನು ಹುಡುಕಿ ಹೈರಾಣಾಗಿ,ಈ ಹಿಂದೆ ವಿರೋಧಿಬಣದ ಶಾಸಕರು 'ರಾಜಿನಾಮೆ' ಎಂದು ಕನಸಿನಲ್ಲಿ ಕನವರಿಸುವುದೆ ತಡ ಅವರು ಕಾಮೋಡ್ ಮೇಲೆ ಕೂತಿದ್ದರೂ ಬಿಡದೆ ಬೆಂಬತ್ತಿ ಅಲ್ಲಿಯೆ ಅವರಿಗೆ ದರ್ಶನ ಭಾಗ್ಯ ಕರುಣಿಸಿ ಎಂಜಲಗುಳಿಗೆ ಕಾದು ಕೂತ ಬರಗೆಟ್ಟ ಕಾಗೆಯಂತೆ ಅವರು ಕೊಡುವ ಮುನ್ನ ತಾನೆ ರಾಜಿನಾಮೆಪತ್ರ ಕಸಿದುಕೊಂಡು ಸ್ಥಳದಲ್ಲೆ ಅದನ್ನ ಅಂಗೀಕರಿಸುತ್ತಿದ್ದ ಕಿಲಾಡಿ ಸಭಾಧ್ಯಕ್ಷ ಈಗ ಮಾತ್ರ ತನ್ನಿಂದ ಮುಖ ಮರೆಸಿಕೊಂಡು ಮಡಿಕೇರಿಗೆ ಓಡಿಹೋಗಿರುವ ಮಾಹಿತಿ ಖಚಿತವಾಗುತ್ತಿದ್ದಂತೆ 'ಎಲೆಲ ಬೋಪ!" ಎಂದು ಚಕಿತರಾಗಿ ಅವರಿದ್ದಲ್ಲಿಗೆ ಅವರನ್ನ ಥೇಟ್ ತೆಲುಗು ಪಿಚ್ಚರಿನ ಚೇಸಿಂಗ್ ದೃಶ್ಯದಂತೆ ಅಟ್ಟಾಡಿಸಿಕೊಂಡು ಹೋಗಿ ಕಡೆಗೂ ಕಷ್ಟಪಟ್ಟು ರಾಜಿನಾಮೆಯನ್ನ ಅವರ ಕೈಗೆ ಮುಟ್ಟಿಸಿ 'ಉಸ್ಸಪ್ಪ' ಎಂದು ನಿಟ್ಟುಸಿರು ಬಿಟ್ಟು ಹೊಸ ಹೋರಾಟಕ್ಕೆ ಸಿದ್ಧರಾಗುತ್ತಿದ್ದ ಹೊತ್ತಿನಲ್ಲೆ ತಮ್ಮ ಬಂಧುಬಳಗದ ಬೆಂಗಳೂರು-ಬಳ್ಳಾರಿ-ಹೈದರಾಬಾದಿನ ಗುಡಿಸಲುಗಳ ಮೇಲೆಲ್ಲಾ ಏಕಕಾಲದಲ್ಲಿ ಈ ದುರುದ್ದೇಶಪೂರಿತ ಧಾಳಿ ನಡೆದಿರೋದು ಅವರನ್ನ ಎಲ್ಲರ ಮೇಲೂ ಶಂಕೆ ಕಾರುವಂತೆ ಮಾಡಿದೆ! ಶ್ರೀಸಾಮಾನ್ಯರಾದ ನಮಗೇ ಇಲ್ಲಿನ ಒಳಮರ್ಮಗಳು ಅರ್ಥವಾಗುವಾಗ ಇನ್ನು 'ನೊಂದ' ಶ್ರೀರಾಮುಲುವಿಗೆ ಆಗದೆ?

ಕೊಪ್ಪಳ ವಿಧಾನಸಭಾ ಕ್ಷೇತ್ರದ ಮರುಚುನಾವಣೆಗೆ ತಮ್ಮ ಅನುಮತಿ ಪಡೆಯದೆ ಕ'ಮಲ' ಸುರಿದುಕೊಳ್ಳಲು 'ಕರಡಿ'ಯೊಂದು ಹೊಂಚು ಹಾಕುತ್ತಿರುವಾಗ,ಅತ್ತ ನಂಬಿದ 'ತಾಯಿ' ಕರೆದು ಮುದ್ದುಮಾಡೋದನ್ನ ಬಿಟ್ಟಿರೋವಾಗ-ಸಾಲದ್ದಕ್ಕೆ ಕಾಣದ 'ಕೈ'ಗಳ ಚಮತ್ಕಾರಕ್ಕೆ ಸ್ವಪಕ್ಷದ 'ಬೂಸಿಯ'ನ್ನೆ ಕಾಯಕ ಮಾಡಿಕೊಂಡ ನಾಯಕರು ಸಾಥ್ ಕೊಟ್ಟಿರುವ ಗುಮಾನಿಯೂ ಹುಟ್ಟುತ್ತಿರುವ ಹೊತ್ತಿನಲ್ಲಿಯೆ-ಇತ್ತ ಆ'ಜಗನ್'ನಿಯಾಮಕನ ಪ್ರೇರಣೆಯಂತೆ ಆಪತ್ತಿನ ಹೊತ್ತಲ್ಲೆ ನಂಬಿದ "ಆಪ್ತಮಿತ್ರ"ರೂ 'ಕೈ' ಕೊಡುತ್ತಿರೊವಾಗ ಶ್ರೀರಾಮುಲು ಮುಲುಕುವುದರಲ್ಲೂ ಒಂದು ಅರ್ಥವಿದೆ! ಆದರೆ ಕನ್ನಡಿಗನ ಕರ್ಮ ಏನು ಕೇಳುತ್ತೀರಾ....ಮತ್ತದೆ ಕಥೆ! ಅದೆ ನಿತ್ಯದ ವ್ಯಥೆ!! ಹೀಗೆ ಪ್ರತಿನಿತ್ಯ 'ಪ್ರಭಾತ'ಫೇರಿಯಲ್ಲಿ ತಾನು ನಂಬಿದ ನಾಯಕರೆಲ್ಲ ಸರಕಾರಿ ರೆಷ್ಟ್'ಹೌಸಿಗೆ ವಲಸೆ ಹೋಗೋದನ್ನ ನೋಡಲಾಗದೆ ಕಣ್ಣೀರಿಡುತ್ತಿರುವ ಆತನದ್ದು ಅವೆ ಹಳೆಯ ಅಹವಾಲುಗಳು.ಗಾದೆ ನೆನಪುಂಟಲ್ಲ "ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಅದೇನೂ ...ಡನ ಚಿಂತೆ"?!

Sunday, September 4, 2011

'ಶ್ರೀರಾಮು'ಯಣ.....ಕಾಸಿನ ಋಣ ;ಮರಳಿ ಕೊಡದಿದ್ದರೆ ಹೇಗಣ್ಣಾ?!




"ಮರ್ಯಾದ ರಾಮಣ್ಣ"ನನ್ನು 'ಅನೈಕವಾಗಿ' ಗುತ್ತಿಗೆ ಹಿಡಿದು ಅವನಿಗೆ ಬೇಡದಿದ್ದರೂ ಒತ್ತಾಯದಿಂದ ತಮ್ಮ ಮಂಗಾಟಗಳಿಗೆಲ್ಲ ಅವನನ್ನೆ ಕಾಪಿರೈಟ್ ಮಾಡಿಕೊಂಡಿರುವ ಕ'ಮಲ'ದಪಕ್ಷದಲ್ಲಿ ಈವರೆಗೂ ಇದ್ದು 'ಗಣಿ'ಧೂಳೆಬ್ಬಿಸುತ್ತಿದ್ದ ಕಿಷ್ಕಿಂದೆಯ ಕಪಿವರ್ಯರ ಗುಂಪಿನಲ್ಲೊಂದು ಕೋಡಂಗಿ ಇವತ್ತು ದೃಶ್ಯಮಾಧ್ಯಮಗಳ ಮುಂದೆ ಎಗರೆಗರಿ ಹಾರಿ ರಜೆಯ ಗುಂಗಿನಲ್ಲದ್ದ ಕನ್ನಡಿಗರಿಗೆ ಭರಪೂರ 'ಮಜಾ'ಭೂತಾದ ಬಿಟ್ಟಿ ಮನರಂಜನೆ ಒದಗಿಸಿ ಕೊಟ್ಟಿತು.

"ನಾನು ಎದುಕ್ಕಿಗ ಪತ್ರಿಕಾ ಗೋಸ್ಟಿ ಕರೆದಿದೆನಾಗಿನ! ನಮ್ಮ ಸ್ವಾಭಿಮಾನಕ್ಕೆ ಏನು ಧಕ್ಕೆ ಆಗಿದಾಗಿನ...ಹಾಗೇನು ಒಂದು ಲೋಕಾಯುಕ್ತರ,ಅವರ ಮೇಲೆ ನನಗೆ ತುಂಬಾ ಗೌರವವಿದೆ...ಅವರು ಕೊಟ್ಟ ವರದಿಯಲ್ಲಿ ಆಕ್ರಮ ಗಣಿಗಾರಿಕೆಯಲ್ಲಿ ನನ್ನ ಹೆಸರು ಬಂದಿದಾಗಿನ ಅದಕ್ಕೆ ಒಂದು ಬೆಲೆ ಕೊಟ್ಟು ಈಗ ನನ್ನ ಎಂಎಲ್'ಎ ಪದವಿಗೆ ರಾಜಿನಾಮೆ ಕೊಡುತಿದೀನಿ! ಇನ್ನೇನಿದ್ರೂ ರಾಜ್ಯದ ಜನರ ಮನೆಮನೆಗೂ ಹೋಗಿ ಬೆಂಬಲ ಬೇಡೋದಕ್ಕಾಗಿನ ಈ ಜೀವ ಅರ್ಪಿಸೋಕೆ ನಾನಿರ್ತೀನಿ ಅಂತ ನಿಮ್ಮೆಲ್ಲರ ಮೂಲಕ ಹೇಳ್ತಿದೀನಿ.ಅದಲ್ದೆನ ಮೂವತ್ ವರ್ಷದಾಗಿನ ನಾನು ಕಷ್ಟಪಟ್ಟು ದುಡಿದು ಮೂವತ್ ವರ್ಷ ಜನ ಹೋರಾಟ ಮಾಡಿದ ಶ್ರೀಮಾನ್ ಯಡಿಯೂರಪ್ಪನವರು ಮುಖ್ಯಮಂತ್ರಿ ಮಾಡೋಕೆ ಪ್ರಾಮಾಣಿಕವಾಗಿ ದುಡಿದ ನನ್ನನ್ನ ರಾಜ್ಯದ ಜನರೆಲ್ಲಾ ಗುರುತಿಸಿದ್ದಾರೆ.ನಂಗೆ ತಾಯಿ(!)ಯವರ ಆಶಿರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ ಆಸೆ ಇತ್ತಲದಿಗೆನ ಅಧಿಕಾರದ ಆಸೆ ಚೂರೂ ಇರ್ಲಿಲ್ಲ.ಆದರೊ ನಮ್ ಶ್ರಮ ಗುರ್ತಿಸಿ ಯಡ್ಯೂರಪ್ಪನವರು 'ಶ್ರೀರಾಮುಲು ಅವ್ರೆ ನಿಮಗ್ಯಾ ಕ್ಯಾತೆ(ಹೌದು ಅವರು ಉಚ್ಚರಿಸಿದ್ದು ಹಾಗೆ!) ಬೇಕೊ ಅದನ್ನೆ ತಗೊಳ್ರಿ ಅಂದಾಗಿನ ನಾಡಿನ ಜನರಸೇವೆ ಮಾಡ್ಲಿಕ್ಕಗಿನ ನಾನು ಆರೋಗ್ಯ ಕ್ಯಾತೇನೆ ಕೇಳಿ ಆಕ್ಯಾತೆಲಿ ಜನರಿಗಾಗಿನ ಕೆಲಸ ಮಾಡಕ್ಕೆ ಹೊರಟಿರೋ ಹೊತ್ನಾಗಿ ಈ ಸರಕಾರನಲ್ಲಿ ನಾಮಗ ನಮ್ಮ ಪ್ರಾಮಾಣಿಕತೆಗ ಒಂದೂನು ಅವಕಾಶ ಇಲಾದಾಗಿರೋದು ನಾಡಿನ ಎಲ್ಲಾ ಜನ ನೋಡ್ತಿದಾರೆ! ಹಾಗಾಗಿ ನ್ಯಾಯ ಕೇಳೋಕಾಗಿನ ಇವತ್ತಿನ ದಿನ ಈ ರಾಜಿನಾಮೆ ಅಂತಕಂತದ್ದೆನಿದೆ ಅದನ್ನ ಕೊಟ್ಟು ನಾನು ನಾಡಿನ ಜನರ ಬಳಿ ಹೋಗಬೇಕಂತ ಒಂದು ನಿರ್ಧಾರಕ್ಕೆ ಬಂದಿದೀನಿ! ನಮಗ ಅಧಿಕಾರದ ಆಸೆ ಚೂರೂ ಇಲ್ಲ ಅಂತ ನೊಂದು ಈ ಹೊತ್ತಲ್ಲಿ ಹೇಳ್ತಾ ನನ್ ಮಾತನ್ನ ಮುಗಿಸ್ತಿದೀನಿ!"


ಹೀಗೆ ಫುಲ್'ಸ್ಟಾಪ್,ಕಾಮ,ಒತ್ತಕ್ಷರ ಒಂದೂ ಇಲ್ಲದ ತಮ್ಮ ಎಂದಿನ 'ನಡು'ಗನ್ನಡದಲ್ಲಿ ಪತ್ರಿಕಾಗೋಷ್ಠಿಯುದ್ದಕ್ಕೂ ಅದ್ಭುತವಾಗಿ ಕನ್ನಡದ ಮಾನಾಪಹರಣ ಮಾಡಿದ 'ಸ್ವರಾಜ್'ಯಕ್ಕೆ ಅಡ್ಡ ಹುಟ್ಟಿರೊ ಖಚಿತ ಗುಮಾನಿಯಿರುವ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಥೇಟ್ ತೊಂಬತ್ತರ ದಶಕದ ಮೂರನೆದರ್ಜೆ ತೆಲುಗು ಪಿಚ್ಚರ್ರಿನ ಖಾಯಂ ರೇಪಿಷ್ಟ್ ಗೆಟಪ್ಪಿನಲ್ಲಿ ಕಂಗೊಳಿಸುತ್ತಿದ್ದರು,for a change ಈ ಬಾರಿ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದು 'ಕಸ್ತೂರಿ ಕನ್ನಡ'!

"ಕೊಪ್ಪಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕಂತಿದ್ರೆ ಯಡಿಯೂರಪ್ಪನವರ ನಾಯಕತ್ವದಲ್ಲೆ ಹೋರಾಡಬೇಕು.ಯಾಕಂದ್ರೆ ಅಲ್ಲಿ ಶಾಸಕರ ರಾಜಿನಾಮೆ ಕೊಡ್ಸಿ ಚುನಾವಣೆ ಆಗೋ ಹಾಗೆ ಮಾಡಿದ್ದೆ ಅವ್ರು!"ಎಂಬ ಅಪರೂಪದ ಸತ್ಯವನ್ನ ನಾಲಗೆತಪ್ಪಿ ನುಡಿದ ಸಂಸದ ಡಿ ಬಿ ಚಂದ್ರೇಗೌಡರು "ಅದೇನು ಆಪರೇಶನ್ ಕ'ಮಲ' ಅಂದರೆ?" ಅಂತಾ ಕೇಳಿದಾಗಲೆಲ್ಲ ತಮ್ಮ ದೊಡ್ಡ ಕಣ್ಣುಬಿಟ್ಟು ಮಾಧ್ಯಮದವರನ್ನೆ ಹೆದರಿಸುತ್ತಿದ್ದ ಮಹಿಷಾಸುರನ 'ಕಸಿನ್ ಬ್ರದರ್' ಕೆ ಎಸ್ ಈಶರಪ್ಪನವರ ಹಳೆಸುಳ್ಳಿಗೆ ಅದೆ ಮಾಧ್ಯಮಗಳಲ್ಲಿ ಸಾಕ್ಷಿ ಹೇಳಿ ಫಜೀತಿ ಹುಟ್ಟಿಸುತ್ತಿರುವ ಹೊತ್ತಲ್ಲೇ ಈ ಶ್ರೀರಾಮಾಯಣವೂ ನಡೆದಿರೋದು ಇನ್ನೂ ಮುಂಬರುವ ಹಾಸ್ಯಾಸ್ಪದ ಕಿಷ್ಕಿಂಧಾ ಪುರಾಣದ ಟ್ರೈಲರ್'ನಂತೆ ಭಾಸವಾಗಿ ಕನ್ನಡಿಗರು ಫುಲ್ ಕನ್'ಫ್ಯೂಜ್ ಆಗಿ ನಗುವುದೋ ;ಅಳುವುದೋ ಅರಿಯದ ಸ್ಥಿತಿಗೆ ಬಂದು ಮುಟ್ಟಿದ್ದಾರೆ?!.

Friday, September 2, 2011

"ಕಣ್ಣೀರಧಾರೆ ಇದೇಕೆ? ಇದೇಕೆ?"



ಬೂಸಿಯ ಅಲಿಯಾಸ್ 'ಚಡ್ಡಿ" ಕಳಕೊಂಡ ಕಂಗಾಲು ಯೆಡ್ಡಿ "ರಾಜ್ಯದ ಸಮೃದ್ದಿಗಾಗಿ ತನು ( ಹಾಗೆಂದರೇನು ಅನ್ನೂ ಅನುಮಾನವಿರೋವವರು ಈ ಇಳಿ ವಯಸ್ಸಿನಲ್ಲೂ ಅವರಿಗೆ "ಇಂಧನ"ವಾಗಿರುವ 'ಸಚಿವ'ರನ್ನು ವಿಚಾರಿಸಿ ತಮ್ಮ ಅನು'ಮಾನ'ವನ್ನು ಪರಿಹರಿಸಿಕೊಳ್ಳಬಹುದು!)-ಮನ (ಇದು 'ಮಗನ' ಎಂದಾಗಿರಬೇಕಿದ್ದುದು ವ್ಯಾಕರಣ ದೋಷದಿಂದ 'ಮನ' ಎಂದಾಗಿರಬಹುದು ಎಂಬ ಅನುಮಾನ ನಿಮ್ಮಂತೆ ನನಗೂ ಇದೆ!) -ಧನ (ಯಾರ 'ಧನ' ಎಂಬ ರಾಜಕೀಯ ಪ್ರೇರಿತ ಅಡ್ಡಪ್ರಶ್ನೆಗೆ ಯಾರಿಗೂ ಇಲ್ಲಿ ಅವಕಾಶವಿಲ್ಲ! ಅಲ್ಲದೆ ಅದು"ಕಪ್ಪು"ಬಣ್ಣದ 'ಧನ'ವೂ ಇಲ್ಲ ಬಿಳಿಯದೊ ಎಂಬ ಗೊಂದಲ ಇದ್ದರೂ ಹಾಗೆಲ್ಲ ಕೇಳೋದು ತಪ್ಪು?!) ದಿಂದ ಬಿಡುವಿರದೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ! (ಆಗಿರುವ 'ಅಭಿವೃದ್ದಿ'ಯನ್ನು ಗಮನಿಸಿದಾಗ ಅವರ ರಾಜ್ಯದ ವ್ಯಾಖ್ಯೆ ಬಹುಷಃ ಅವರ 'ಸ್ವಂತ' ಕುಟುಂಬಕ್ಕಷ್ಟೆ ಸೀಮಿತವಾಗಿದ್ದಿರಲೂಬಹುದು ಅಂತ ನಿಮಗನಿಸೋದು ಸಹಜ!)

ರಾತ್ರಿ ಹನ್ನೆರಡರ ಮೊದಲು ಎಂದೂ ಮಲಗಿಲ್ಲ! (ಅಷ್ಟು ಹೊತ್ತು 'ಎಲ್ಲಿ' ಏನು ಮಾಡುತ್ತಿದ್ದಿರಿ 'ದಾಖಲೆ ಕೊಡಿ!' ಅಂತ ಕುಮಾರಣ್ಣನ ತರ ಕೇಳಿದ್ದೆ ಆದಲ್ಲಿ ರೌರವ ನರಕಕ್ಕೆ ಹೋಗುತ್ತೀರಿ,ಹುಷಾರ್!) ಬೆಳಗ್ಯೆ ಐದರ ನಂತರ ಹಾಸಿಗೆಯಲ್ಲಿದ್ದದೆ ಇಲ್ಲ! (ಎಲ್ಲಾದರೂ ಈ ನಿದ್ರಾಹೀನತೆಯೆ ಮಾರಕ ಈಗ ಅಮರಿಕೊಂಡಿರುವ 'ಎಡ್ಸ್'ಗೆ ಮುನ್ನುಡಿ ಬರೆದಿರಬಹುದ?) ಪ್ರಪಂಚದಲ್ಲೆ ಮೊತ್ತಮೊದಲನೆಯದಾಗಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ-ಅದಿರು ರಫ್ತು ನಿಷೇಧಕ್ಕೆ ದಿಟ್ಟಕ್ರಮ ಕೈಗೊಂಡ ಕ್ರಾಂತಿಕಾರಿಯೂ-ಧೀರನೂ ಆದ ನನಗೆ ಹಾಗೆ ನೋಡಿದರೆ 'ನೊಬೆಲ್' ಕೊಡಬೇಕಿತ್ತು ;ಈಗ ನೋಡಿದ್ರೆ 'ರಾಜಿನಾಮೆ' ಕೇಳ್ತಿದಾರೆ ಎಂದು ತಮಗೆ ಒದಗಿದ ದುಸ್ಥಿತಿಗೆ ತಾವೆ ಮರುಗಿ-ಕರಗಿ ಕನಿಕರದಿಂದ ಕಣ್ಣೀರಿಟ್ಟು (ಇನ್ಯಾರೂ ಆ ಕೆಲಸ ಮಾಡದಾಗ ಪಾಪ ಅವರಾದರೂ ಇನ್ನೇನು ತಾನೆ ಮಾಡಿಯಾರು ನೀವೆ ಹೇಳಿ!) ಹೀಗಂತ ಅದೆಲ್ಲೊ ತಮ್ಮಂತಹ ಖಜಾನೆ ಕಳ್ಳ-ಖದಿಮರಿಂದಲೆ ತುಂಬಿ ತುಳುಕುತ್ತಿದ್ದ ವೇದಿಕೆಯೊಂದರಿಂದ ಗದ್ಗದಿತರಾಗಿ ಹೇಳಿದ್ದು, ಒಮ್ಮೆ ನೋಡಿದ್ದನ್ನು ಮರೆಯಲಾಗದ ಅನುವಂಶಿಕ ಕಾಯಿಲೆ ಇರುವ ಕನ್ನಡಿಗರಲ್ಲಿ ಒಬ್ಬನಾದ ನನಗಿನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ!.ಅವರ ಈ ಘನಂದಾರಿ ಸಾಧನೆಗೆ ತಕ್ಷಣಕ್ಕೆ 'ಭಾರತರತ್ನ',ಇಲ್ಲದಿದ್ದರೆ ಕನಿಷ್ಟಪಕ್ಷ 'ಕರ್ನಾಟಕರತ್ನ'ವನ್ನಾದರೂ ಕೊಟ್ಟು ಕಂಬನಿಯೊರೆಸೋಕೆ "ಶೋಭಾ'ಯಮಾನರಾದ ಯಾರೊಬ್ಬರೂ ಅಲ್ಲಿರದಿದ್ದರಿಂದ ಅವರ ಕಣ್ಣುಗಳಿಂದ ಉಕ್ಕಿದ ನೀರು ಅನಿವಾರ್ಯವಾಗಿ ನೆಲ ಮುಟ್ಟಿಬಿಟ್ಟಿತ್ತು ಆವತ್ತು.

ಮೇಲಿನ ಭಾಷಣವನ್ನು ಅವರಷ್ಟೆ ಹನಿಗಣ್ಣಾಗಿ ಕೇಳಿ ನಂತರ ಮನೆಗೆ ಬಂದು 'ಲೋಕೊತ' ವರದಿಯಲ್ಲಿ (ಇದನ್ನ ನಿಮ್ಮ ಅನುಕೂಲಕ್ಕೆ ತಕ್ಕಂತೆ 'ಲೋಕಾಯುಕ್ತರು ಕೊಟ್ಟ ತನಿಖಾ ವರದಿ' ಅಂತಲೂ ಇಲ್ಲವೆ "ಲೋಫರ್'ಗಳನ್ನ ಕಾರಾಗೃಹದಲ್ಲಿ ಕೊಳೆಸಲು ತಯಾರು ಮಾಡಿದ ವರದಿ"ಅಂತಲೂ ವಿಸ್ತರಿಸಿಕೊಂಡು ಓದಬಹುದು..) ನಮೂದಾಗಿರುವಂತಹ ಬೂಸಿಯ ಸರಕಾರದ ಸಾಧನೆಯೊಂದರ ವಿವರಣೆ ಓದಿದರೆ ನಿಮಗೆ ದಿಗ್ಭ್ರಮೆಯಾಗೋದು ಖಂಡಿತ.ಕ್ರಾಂತಿಯ ಕೆಂಡ ತಣ್ಣಗಾದ 'ಢಂಬಾಯ'ದ ಕವಿ ಪುಂಗವರೊಬ್ಬರಿಂದ ಇತ್ತೀಚೆಗಷ್ಟೆ 'ಆಧುನಿಕ ಬಸವಣ್ಣ' ಅಂತ ಎಕ್ಕಮಕ್ಕ ಹೊಗಳಿಸಿಕೊಂಡ ಬೂಸಿಯ ಕೈಗೊಂಡಿದ್ದೇನೆ ಎಂದು ಹೇಳಿಕೊಂಡ ಎದೆಗಾರಿಕೆಯ ಕ್ರಮಗಳಿಗೂ-ಇಲ್ಲಿ ವಿವರಿಸಿದ್ದಕ್ಕೂ ಸೂತ್ರ-ಸಂಬಂಧವೆ ಕಾಣದೆ ಕಂಗಾಲಾಗುವ ಸರದಿಯೀಗ ನಿಮ್ಮದಾಗುತ್ತದೆ!

ತೋರಣಗಲ್'ನ ಅಂದಿನ ಎಂಎಲ್'ಸಿ ಕೆ ಎಸ್ ಎಲ್ ಸ್ವಾಮಿ-ಕೆ ಕುಮಾರಸ್ವಾಮಿ-ಎಂ ಮಾಬುಸಾಬ್ ಎಂಬ ಖದೀಮರಿಗೆ ರಾಮಘಡದ ಪಟ್ಟಾಭೂಮಿಯಾಗಿರೊ ಸರಕಾರಿ ಅರಣ್ಯ ಭೂಮಿ ಸರ್ವೇ ಸಂಖ್ಯೆ 28ರಲ್ಲಿ ಕಾನೂನಿನಲ್ಲಿ ಅವಕಾಶವೆ ಇಲ್ಲದಿದ್ದರೂ ಅಪಾರ ಉದಾರತೆಯಿಂದ ಗಣಿಗಾರಿಕೆಗೆ ಅವರು ಅನುಮತಿ ನೀಡಿಬಿಟ್ಟಿದ್ದಾರೆ! ಅದೇ ಎಪ್ರಿಲ್ 11 ಕ್ಕೆ ಅನುಮತಿ ಸಹಿತ ಅವರ ಅರ್ಜಿಯನ್ನ ಕೇಂದ್ರಕ್ಕೆ ರವಾನಿಸಲಾಗಿದೆ! ಅಧಿಕಾರಕ್ಕೆ ಬಂದ ನಾಲ್ಕನೆ ದಿನವೆ ಅವರಿಂದ ಈ ಇಂದ್ರಜಾಲ ಸಾಧ್ಯವಾಗಿದೆ.ಕೇವಲ ನಾಲ್ಕೇನಾಲ್ಕು ದಿನಗಳಲ್ಲಿ ಸದರಿ ಮರುಪರಿಶೀಲನಾ ಅರ್ಜಿಯನ್ನ ವಿಲೇವಾರಿ ಮಾಡಿ ಅನುಮತಿ ದಯಪಾಲಿಸಲಾಗಿದೆ.ಹೌದು ಇದರಲ್ಲೇನು ತಪ್ಪು ಅಂತ ನೀವು ಕೇಳಬಹುದು? ಅಸಲಿಗೆ ಮೊದಲಿಗೆ ಆ ಮೂವರೂ ಅರ್ಜಿ ಸಲ್ಲಿಸಿದ್ದು 11 ಎಪ್ರಿಲ್ 2001ಕ್ಕೆ.ಆಗ ಅರ್ಜಿ ಸಲ್ಲಿಸುವಾಗ ಸ್ವಾಮಿ&ಸ್ವಾಮಿ ಐದು ಎಕರೆ ತಮಗೆ ಸೇರಿದ್ದು-ಇನ್ನೈದೆಕರೆ ರತ್ನಮ್ಮ ಎನ್ನುವವರಿಗೆ ಸೇರಿದ್ದು ಎಂದು ವಿವರಿಸಿದ್ದರು,ಹಾಗೆಯೆ ತಮ್ಮದು ಐದು ಎಕರೆ ಇನ್ನೈದು ಎಕರೆ ಕರೀಂಸಾಬರದ್ದು ಎಂದು ಮಾಬುಸಾಬ್ ತಮ್ಮ ಅರ್ಜಿಯಲ್ಲಿ ನಮೂದಿಸಿದ್ದರು ಆದರೆ ಅವರು ಅಲ್ಲಿ ನಮೂದಿಸದಂತೆ ಅದು ಕಂದಾಯ ಭೂಮಿಯಾಗಿರದೆ ಪಟ್ಟಾಭೂಮಿಯಾಗಿತ್ತು.ಮರುಪರಿಶೀಲನಾ ಅರ್ಜಿ ಸಲ್ಲಿಸುವಾಗ ಮಾತ್ರ ಪವಾಡ ಸದೃಶವಾಗಿ ಹತ್ತೆಕರೆಯೂ ಒಬ್ಬರದೆ ಹೆಸರಲ್ಲಿರುವ ಹಾಗೆ ನಮೂದಾಗಿ ಎಲ್ಲವೂ ಕಂದಾಯ ಭೂಮಿಯೆಂದೆ ನಮೂದಾಗಿತ್ತು! ತಮ್ಮ ಅವಗಾಹನೆಗೆ 2008ರ ಜೂನ್ 6ರಂದು ಬಂದ ಮರುಪರಿಶೀಲನಾ ಅರ್ಜಿಗೆ ಯಡ್ಡಿ ಅಧಿಕಾರದ ಕುರ್ಚಿ ಸಿಕ್ಕಿದ ತಕ್ಷಣ ಬಲೆಗೆ ಬಿದ್ದ ಈ ಮೂರು ಮಿಕಗಳನ್ನ ಚನ್ನಾಗಿಯೇ ಬೋಳಿಸಿ ಬೂಸಿಯ ತಮ್ಮ 'ಆಟೋಗ್ರಾಫ್' ಹಾಕಿ ಅರ್ಜಿಗೆ ಅಸ್ತು ಎಂದಿದ್ದಾರೆ,ಥೇಟ್ ಕೇಳಿದಾಕ್ಷಣ ವರ ಕೊಡುವ ವಿಠಲಾಚಾರಿ ಸಿನೆಮಾದ ಅರ್ಜೆಂಟ್ ದೇವರ ತರಹ!

ರಾಜ್ಯದ ಅಭಿವೃದ್ದಿಗೆ ದಿಟ್ಟಕ್ರಮ ಕೈಗೊಳ್ಳೋದು ಅಭಿವೃದ್ದಿ ಪರ ಸರಕಾರದ ಕರ್ತವ್ಯ ತಾನೆ ಅಂತ ನೀವು ಕೇಳಲೂಬಹುದು.ಆದರೆ ಇಲ್ಲೇ ಇರೋದು ಅಸಲು ಸಂಗತಿ! ಹೀಗೆ ಅರ್ಜಿ 2001ಅಂದಿನ ಮುಖ್ಯಮಂತ್ರಿಗಳಿಂದ ಸಮ್ಮತಿ ಮುದ್ರೆ ಒತ್ತಿಸಿಕೊಳ್ಳುವ ಮುನ್ನ ತಿನ್ನಿಸಬೇಕಿದ್ದಲ್ಲಿ ಅದೇನನ್ನೋ ತಿನ್ನಿಸಿ ಬಳ್ಳಾರಿಯ ಅಂದಿನ ಜಿಲ್ಲಾಧಿಕಾರಿಗಳಿಂದ ನಿರಪೇಕ್ಷಣಾ ಪತ್ರ ಪಡೆದು ಬಂದಿತ್ತು.ಆದರೆ 2008ರಲ್ಲಿ ಸಲ್ಲಿಸಿದ ಮರುಪರಿಶೀಲನೆ ಅರ್ಜಿಯಲ್ಲಿ ಅನುಮತಿಯನ್ನ ಜಿಲ್ಲಾಧಿಕಾರಿ ನಿರಾಕರಿಸಿದ್ದರೂ ನುಂಗಾಟದಲ್ಲಿ ಪ್ರವೀಣರಾಗಿರೋ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಎಂ ವಿ ಶಿವಲಿಂಗಮೂರ್ತಿ ಇಂತಹ ಪವಿತ್ರ ಕಾರ್ಯಕ್ಕೆ ತಮ್ಮ ತಕರಾರೇನೂ ಇಲ್ಲವೆಂದು ಬೂಸಿಯಾರ ಘನಸನ್ನಿಧಾನಕ್ಕೆ ಸದರಿ ಕಡತವನ್ನು ಶ್ರದ್ಧಾ ಭಕ್ತಿಯಿಂದ ದಾಟಿಸಿದ್ದರು.ಆದರೆ ಪೋರ್ಜರಿ ಮಾಡಿ ದಾಖಲೆಗಳನ್ನೆ ತಿರುಚಿ ತಿದ್ದಿ ನಿಜದಲ್ಲಿ ಅರಣ್ಯ ಭೂಮಿಯನ್ನ ಕಾಗದದ ಮೇಲೆ ಬರಡು ಭೂಮಿಯೆಂದು ಸಾಬೀತು ಪಡಿಸಿದ್ದ ಅರ್ಜಿ ಅದಾಗಿದ್ದುದೆ ಈಗ ಎಡವಟ್ಟಾಗಿದೆ ಅಷ್ಟೆ.ಹಾಗಂತ ಲೋಕಾಯುಕ್ತದ ವರದಿಯಲ್ಲಿ ತನಿಖಾಧಿಕಾರಿ ಯು ವಿ ಸಿಂಗ್ ಸ್ಪಷ್ಟವಾಗಿ ನಮೂದಿಸಿದ್ದಾರೆ!

ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ 1) 2001ರಲ್ಲಿ ಇಬ್ಬಿಬ್ಬರ ಖಾತದಲ್ಲಿ ಕಂದಾಯ ಭೂಮಿ ಆಗಿದ್ದುದು ಯಡ್ಡಿ ಕುರ್ಚಿ ಏರುತ್ತಿದ್ದಂತೆ ಸಲ್ಲಿಕೆಯಾದ ಅರ್ಜಿಯಲ್ಲಿ ಪಟ್ಟಾಭೂಮಿಯಾಗಿ ಒಬ್ಬರದೆ ಮಾಲಕತ್ವಕ್ಕೆ ಒಳಪಟ್ಟಿದ್ದಾದರೂ ಹೇಗೆ? ಇನ್ನು 2) 2008ರ ಕರ್ನಾಟಕ ಖನಿಜ ನೀತಿಯ ಅನ್ವಯ ಆ ಬಗ್ಗೆ ಮೇಲೆತ್ತುವ ಕಚ್ಚಾ ಖನಿಜಕ್ಕೆ ಒಂದು ಉದ್ಯಮದ ಖರೀದಿ ಒಪ್ಪಿಗೆಯೂ ಅಗತ್ಯ.ತಮಾಷೆಯೇನೆಂದರೆ ಈ ಮೂವರ ಪರವಾಗಿ ತಾರಾಪಾದ ಮಹಾಪಾತ್ರ ಎಂಬ ಜೆಮ್'ಶೆಡ್'ಪುರದಲ್ಲಿರೊ ಟಾಟಾ ಸ್ಟೀಲ್ಸ್'ನ ಕಚ್ಚಾವಸ್ತು ವಿಭಾಗದ ಮುಖ್ಯಸ್ಥನೆ ಖುದ್ದು ಖರೀದಿ ಸಮ್ಮತಿ ಒಪ್ಪಿಗೆ ಪತ್ರ ಕೊಟ್ಟಿದ್ದಾನೆ! ಈ ಮೂರು ಮಂಗಗಳು ಅದನ್ನೂ ಎಳೆ ಮಕ್ಕಳು ಬರೆಯುವ ನೋಟುಬುಕ್ಕಿನಲ್ಲಿ ತಪ್ಪಾದಲ್ಲೆಲ್ಲ ಗೀಚಿ ಸರಿಪಡಿಸುವ ಹಾಗೆ ಬೇಕಾಬಿಟ್ಟಿ ಗೀಚಿ ಬೇಕುಬೇಕಾದನ್ನು ಮಾತ್ರ ಉಳಿಸಿಕೊಂಡು ತಂದಿದ್ದಾರೆ!

ಆದರೇನು ಮಾಡ್ತೀರ ಆಗಷ್ಟೆ ಏರಿದ್ದ ಅಧಿಕಾರದ ಅಮಲಿನಲ್ಲಿ ನಮ್ಮ ಬೂಸಿಯ ಸಾಹೇಬರಿಗೆ ಅಂತಹ ಕ್ಷುಲ್ಲಕ ಸಂಗತಿಗಳೆಲ್ಲ ಕಾಣದೆ ಹಸನ್ಮುಖದಿಂದಲೆ ಅವರು ತಮ್ಮ ಹಸ್ತಾಕ್ಷರ ಹಾಕಿ ರಾಜ್ಯದ ಅಭಿವೃದ್ದಿಗೆ ಒತ್ತು ಕೊಡುವ ಹೊಸ ಅಧ್ಯಾಯ ಬರೆದಿದ್ದಾರೆ! ಅಲ್ಲಿಂದೀಚೆಗೆ ಆದ ಸರಕಾರಿ ಕೃಪಾಪೋಷಿತ ಲೂಟಿಯನ್ನ ಲೆಕ್ಖವಿಟ್ಟವರಿಲ್ಲ.ಇದೂ ಅವರ ಪ್ರಗತಿಪರ ಸರಕಾರದ ಸಾಧನೆ ಅನ್ನೋದನ್ನ ನಾವು ಎಂದೆಂದೂ ಸೂರ್ಯ ಚಂದ್ರರಿರುವ ಮರೆಯಬಾರದು.ಶರವೇಗದ ಸರಕಾರಿ ಕಾರ್ಯವೈಖರಿಗೆ ಹೆಮ್ಮೆಪಟ್ಟು ಬೆನ್ನು ತಟ್ಟೋದು (ಬೆನ್ನನ್ನ ಮಾತ್ರ!) ಬಿಟ್ಟು ಇದ್ಯಾತರ ಕ್ಯಾತೆ ಸ್ವಾಮಿ!! ಈಗ ಹೇಳಿ ನೊಬೆಲ್ ಎಲ್ಲಾ ಒಂದು ಲೆಕ್ಕಾನ? ಅದರಿಂದಲೂ ದೊಡ್ಡ ಪ್ರಶಸ್ತಿ ಇವರಿಗೆ ನ್ಯಾಯವಾಗಿ ಸಲ್ಲಬೇಕ ಬೇಡವ?!

Thursday, September 1, 2011

ಹೆಸರಿನಲ್ಲೆ ಎಲ್ಲಾ ಇದೆ!....



ಕಟ್ಟಾ-ಕಲ್ಮಾಡಿ-ಕನಿಮೋಳಿ ಮುಂತಾದ 'ಕ' ಅಕ್ಷರಾಧಾರಿತ ನಾಯಕರ ಜೊತೆಜೊತೆಗೆ ರಾಜಾ-ಜಗದೀಶ ಮುಂತಾದ ಅಧಿಕಾರಸ್ಥ ಹೆಸರಿನ ನಾಯಕರೂ ಈ ಬಾರಿ ಕಂಬಿ ಹಿಂದೆಯೆ 2ಜಿ ಹಬ್ಬದಾಚರಣೆಯಲ್ಲಿ (ಇದು 'ಗೌ'ರಿ ಹಾಗು 'ಗ'ಣಪತಿ ಎಂಬ 2ಜಿ ಅನ್ನೋದು ನಿಮ್ಮ ಗಮನಕ್ಕೆ!) ತೊಡಗಬೇಕಾಗಿ ಬಂದಿರೋದು ಅವರ ಅಪಾರ ಅಭಿಮಾನಿಗಳ 'ಕ'ಣ್ಣಲ್ಲಿ ನೀರುಕ್ಕಿಸುವುದರ ಜೊತೆ ಹಬ್ಬದ ಸಂಭ್ರಮದಲ್ಲಿ ಮೈಮರೆತಿದ್ದ ಬಡ ಭಾರತೀಯರ ಹೊಟ್ಟೆಯನ್ನೂ ಚುರುಕ್ಕೆನ್ನಿಸಿದೆ!

ಪರಿಸ್ಥಿತಿ ಹೀಗೆ ವಿಕೋಪಕ್ಕೆ ಹೋಗಿದ್ದೆ ಆದರೆ ನಾಳೆ ಇವರದ್ದೆ ಮೇಲ್ಪಂಕ್ತಿ ಅನುಸರಿಸಿ ಕುಮಾರಸ್ವಾಮಿ-ಯಡಿಯೂರಪ್ಪ-ರಾಘವೇಂದ್ರ-ವಿಜಯೇಂದ್ರ-ಕೃಷ್ಣಯ್ಯ ಹೀಗೆ 'ಪರಮಾತ್ಮ"ನ ( ರೇಣುಕಾಚಾರ್ಯನದೋ-ಯೋಗರಾಜ ಭಟ್ಟರದೋ 'ಪರಮಾತ್ಮ' ಇವನಲ್ಲ! ) ಸಹಸ್ರ'ನಾಮ'ಗಳಿಟ್ಟುಕೊಂಡ ಹಾಗು ನಾಡಿಗೆಲ್ಲ ನಿರ್ವಂಚನೆಯಿಂದ ಅದನ್ನೆ ಇಡುತ್ತಿರುವ ಪವಿತ್ರಾತ್ಮರೂ ಅಲ್ಲಿಗೆ ದೌಡಾಯಿಸಿ ಇನ್ನೇನು ಸಾಲಾಗಿ ಬರಲಿರುವ ಎಲ್ಲಾ ಹಬ್ಬಗಳಲ್ಲೂ ಈಗಾಗಲೆ 'ಒಳಗಿದ್ದು' ನೊಂದವರ ಕಂಬನಿ ಒರೆಸಿ ;ಅವರೆಲ್ಲರಿಗೂ 'ಕಂಪನಿ' ಕೊಡುವುದರ ಮೂಲಕ ಅವರ ಸಂಭ್ರಮೋಲ್ಲಾಸವನ್ನು ಕಿಂಚಿತ್ ಹೆಚ್ಚಿಸಲು ಪ್ರಯತ್ನಿಸೋದರಲ್ಲಿ ಸಂಶಯವೆ ಇಲ್ಲ!

ನಾಡಿಗಾಗಿ ಸೇವೆ ಸಲ್ಲಿಸಿದ ಮಹಾನೀಯರನ್ನು ನಡೆಸಿಕೊಳ್ಳುವ ಬಗೆಯ ಇದು? ಹೀಗಾಗಿ ಮುಂದೆ ಅವರ ಅನುಪಸ್ಥಿತಿಯಲ್ಲಿ ಈ "ಬಡ ದೇಶ" ಇನ್ನಷ್ಟು ಬರಗೆಟ್ಟು ಹೋದರೂ ಸರಿ ; ಮನಸ್ಸನ್ನು ಕಲ್ಲು ಮಾಡಿಕೊಂಡು ನಾವೆಲ್ಲರೂ ಒಂದು 'ತ್ಯಾಗ'ಕ್ಕೆ (?) ಒಲ್ಲದ ಮನಸ್ಸಿನಿಂದ ಸಿದ್ಧರಾಗಲೆಬೇಕಿದೆ! ದೇಶಕ್ಕೆ ಸಂದ ಅವರ 'ಅಮೂಲ್ಯ ಸೇ(ಶೇ)ವೆಯನ್ನು ಪರಿಗಣಿಸಿ ಕಡೇಪಕ್ಷ ಅವರೆಲ್ಲರನ್ನು ಅವರುಗಳು ತಮ್ಮ ಹರಾಮಿ ಕಮಾಯಿ ಹೂತಿಟ್ಟ ಹೊರದೇಶಗಳಿಗೇ ಗಡಿಪಾರು ಮಾಡಿಯಾದರೂ ಭಾರತದ ಭೂ'ಭಾರ'ವನ್ನ ಇಳಿಸಿಕೊಂಡಿದ್ದಲ್ಲಿ ಅವರಿಗೂ ಕೊಂಚ ನೆಮ್ಮದಿ ಹಾಗು ನಮಗೂ ಭವಿಷ್ಯದಲ್ಲಿ ಅವರೆಲ್ಲರಿಂದ ಪಾರಾದ ಪರಮ ಖುಷಿ ಏಕಕಾಲದಲ್ಲಿ ಲಭ್ಯ ಆಗುತ್ತಿತ್ತೋ ಏನೋ! ಆದರೇನು ಮಾಡೋದು ನಾವದನ್ನು ಪಡಕೊಂಡು ಬಂದಿಲ್ಲವಲ್ಲ!! ಆದರೂ ಮುಂಡೆದು ಈ ದರಿದ್ರ ಮನಸು ಇಂತಹ ಹಗಲು ಕನಸು ಕಾಣೋದನ್ನ ನಿಲ್ಲಿಸುತ್ತಲೆ ಇಲ್ಲ?!