Thursday, August 18, 2011

ಕಳ್ಳರ ಕೈಗೆ ಖಜಾನೆ ಕೀಲಿ ಕೈ...



ಮನೀಶ್ ತಿವಾರಿ-ಕಪಿಲ್ ಸಿಬಲ್ ದ್ವಯ ಕಾಂಗ್ರೆಸ್ ಕಮಂಗಿಗಳಿಂದ ಮತ್ತೊಂದು ಹೊಸ ಸಂಶೋಧನೆಯಾಗಿದೆ.ಈ ಇಬ್ಬರು ಜೇಮ್ಸ್ ಬಾಂಡ್ ಗಳ ಪ್ರಕಾರ "ಅಣ್ಣಾ'ಬ್ರಾಂಡ್ ಚಳುವಳಿಗೆ 'ವಿದೇಶಿ'(!) ಕೈವಾಡದ ಹುನ್ನಾರ ಪೂರಿತ ನೆರವು ಇದೆ! ಇದೆಲ್ಲ ಅಮೇರಿಕದ ಪಿತೂರಿ (ಸದ್ಯ ಪಾಕಿಸ್ತಾನದ ಪಿತೂರಿ ಅನ್ನಲಿಲ್ಲ!),ಅಣ್ಣಾ ಹಜಾರೆ ಅಮೇರಿಕಾದ ಸೀಕ್ರೆಟ್ ಏಜೆಂಟ್?! ಅವರ ಪೂರ್ತಿ ವಿದೇಶಿ ಅಧಿನಾಯಕಿ-ನಾಮ ನಿಮಿತ್ತ 'ಗಾಂಧಿ' ಅನಾರೋಗ್ಯಕ್ಕೆ ಚಿಕಿತ್ಸೆಯ ನೆಪದಲ್ಲಿ ಅಮೇರಿಕದಲ್ಲೆ ತಿಂಗಳಿಂದೀಚೆಗೆ ಠಿಕಾಣಿ ಹೂಡಿರೋದರಿಂದ ಆಕೆಯೂ ಈ ಹುನ್ನಾರದಲ್ಲಿ ಪಾಲ್ಗೊಂಡಿರಬಹುದೇ? ಎಂಬ ಜರೂರು ಪ್ರಶ್ನೆಗೆ ಇನ್ನೂ ಈ ಪತ್ತೆದಾರ ಪುರುಷೋತ್ತಮನ ತುಂಡುಗಳು ಉತ್ತರಿಸಿಲ್ಲ ಅಥವಾ ಹೊಸಕಥೆ ಹೇಳುವಾಗ ಅದು ಮರೆತೇ ಹೋಗಿದೆ.ಅಲ್ಲದೆ ಆಕೆ ಕಳೆದ ಐದುವರ್ಷದಲ್ಲಿ ದೇಶವನ್ನೆ ದೋಚಿದ ಕಪ್ಪುಹಣವನ್ನ ದೇಶದಿಂದ ಹೊರಗೆ ಸ್ಮಗ್ಲಿಂಗ್ ಮಾಡೋಕೆ ಅನಾರೋಗ್ಯದ ನೆಪದಲ್ಲಿ ಗಪ್ ಚುಪ್ಪಾಗಿ ಕಳ್ಳರಂತೆ ಸುದ್ದಿಯನ್ನೆ ಮಾಡದೆ ಅಮೆರಿಕಕ್ಕೆ ಓಡಿ ಹೋಗಿರುವ ಗುಮಾನಿಯೂ ದಟ್ಟವಾಗಿದೆ.ಈ ಬಗ್ಗೆಯೂ ಈ ಸಿಐಡಿ ೯೯೯ರದ್ದು ದಿವ್ಯ ಮೌನ!

ಇನ್ನು ನರಸತ್ತ ಮಾನವನ ಪಳಯುಳಕೆಯಂತಿರುವ ಪ್ರಧಾನಿ ಎಂಬ ಆರೋಪ ಹೊತ್ತ ಮನಮೋಹನ ಸಿಂಗ ಬೆಳ್ಳಿ ಮೂಡುವ ಮೊದಲೆ ಅಣ್ಣಾ ಅರೆಷ್ಟ್ ಮಾಡಿಸಿ ಒದ್ದು ಒಳಗೆ ಹಾಕುವ ಸನ್ನಾಹದಲ್ಲಿದ್ದಾಗ ಪಕ್ಷದ ಹೆಸರಿಗೆ ಕೆಸರು ಬೀಳ್ತಿರೋದನ್ನ ಕಂಡು ಕಕ್ಕಾಬಿಕ್ಕಿಯಾದ ಅರೆ'ವಿದೇಶಿ' ರಾಜಕುಮಾರ 'ಗಾಂಧಿ'ಯ ಅಪ್ಪಣೆ ದೂರವಾಣಿ ಮೂಲಕ ಬಂದ ನಂತರ ಮಲ್ಲಗೆ ಕಳ್ಳನ ಹಾಗೆ ಅಣ್ಣಾ ರನ್ನ ಒಳ ಕೂಡಿದಷ್ಟೇ ಸುಲಭವಾಗಿ ಹೊರ ತಳ್ಳಲೂ ನೋಡಿ ಅದೂ ಆಗದೆ ಹತಾಶರಾಗಿ ;ಮೈ ಪರಚಿ ಕೊಳ್ಳುವಂತಾದಾಗ ಅರ್ಜೆಂಟ್ ಮತಿಭ್ರಮಣೆಗೆ ಒಳಗಾದಂತೆ ಸಂಸತ್ತಿನಲ್ಲಿ ಬಡಬಡಿಸಿದರು.ಇನ್ನು ವಿರೋಧಪಕ್ಷದ ಅವಕಾಶವಾದಿ ಅಧಿನಾಯಕಿ ಹೇಳಿದ್ದು ಕೇಳಿ ಎಲ್ಲಿಂದ ನಗಬೇಕು ಅನ್ನೋದು ಶ್ರೀಸಾಮಾನ್ಯನಿಗೆ ಗೊತ್ತೇ ಆಗಲಿಲ್ಲ."ಕಾನೂನು ರೂಪಿಸೋಧು ಸಂಸತ್ತಿನ ಪರಮಾಧಿಕಾರ,ನಮಗ್ಯಾರೂ ಬುದ್ಧಿ ಹೇಳಬೇಕಿಲ್ಲ ;ನಾಗರೀಕರನ್ನ ಕೇಳಿ ಕಾನೂನು ರೂಪಿಸ ಬೇಕಂತಿಲ್ಲ (ಕೋಳಿ ಕೇಳಿ ಮಸಾಲೆ ಅರೀಬೇಕಂತಿಲ್ಲ ಅನ್ನೋ ಧಾಟಿ)" ಅನ್ನೋ ಆಕೆಯ ಅಹಂಕಾರದ ನುಡಿಗೆ ಮೇವುಗಳ್ಳ ಲಾಲೂ,ದೇಶನಿಷ್ಠೆಯೇ ಅನುಮಾನಾಸ್ಪದವಾಗಿರುವ ಕಮ್ಯುನಿಷ್ಟರ ನಾಯಕ ಗುರುದಾಸ್ ದಾಸಗುಪ್ತ ಮುಂತಾದ ಗಂಟು ಕಳ್ಳರ ಪಕ್ಕವಾದ್ಯ ಬೇರೆ.ಅಲ್ಲ ಸ್ವಾಮಿ ನಮ್ಮ ಪರವಾಗಿ ಕಾನೂನು ರೂಪಿಸಿ ಅಂತ ನಿಮ್ಮನ್ನ ಅಲ್ಲಿಗೆ ಕಳಿಸಿದ್ದೆ ಹೊರಟು ನಿಮ್ಮ ಖಜಾನೆ ತುಂಬುವ ಹಿತಾಸಕ್ತಿಗಳೇ ಭಾರಪೂರವಾಗಿರುವ ಫಾರ್ಮಾನು-ಫತ್ವಾಗಳನ್ನ ಹುಲು ನಾಗರೀಕರ ಮೇಲೆ ಹೆರೋದಕ್ಕಲ್ಲ ಎಂತ ಅವರ ಜುಟ್ಟು ಹಿಡಿದು ಬೇಕಿದ್ದರೆ ನಾಲ್ಕು ಒದ್ದು ಹೇಳುವ ನಾಯಕರು ಇಂದು ದೇಶಕ್ಕೆ ಬೇಕಾಗಿದ್ದರೆ.ಅಣ್ಣಾ ಅಂತವರಲ್ಲೊಬ್ಬರು ಅನ್ನೋದು ನಮ್ಮ ಸುದೈವ.ಇಂತಹ ಪ್ರಜಾಪ್ರಭುತ್ವವೆಂಬ ನಕಲಿ ಸಂತೆಯ ಅಸಲು ಗಂಟುಕಳ್ಳರ ಕೈಗೆ ದೇಶದ ಚುಕ್ಕಾಣಿ ಕೊಟ್ಟು ಈಗ ಬಾಯಿಬಾಯಿ ಬಡಿದುಕೊಳ್ಳುತ್ತಿರುವ ನಾವೆ ಅಸಲು ಕಮಂಗಿಗಳು ಅನ್ನೋದರಲ್ಲಿ ಸಂಶಯವೆ ಉಳಿದಿಲ್ಲ!

No comments:

Post a Comment