Wednesday, August 31, 2011

ಕಲಿಯುಗ ದುಶ್ಯಾಸನನ ಕಥೆಯೂ...ಕರುನಾಡ ಕಾಂಗ್ರೆಸ್ಸಿಗರೂ...




"ಬಿಚ್ತೀನಿ!...ಬಿಚ್ತೀನಿ!! ಎಲ್ರುದ್ದೂ ಬಿಚ್ತೀನಿ!!!" ಎಂದು ದುಶ್ಯಾಸನನ ಕೊನೆ ಪಳಯುಳಿಕೆಯಂತೆ ನಿತ್ಯ ಸುದ್ಧಿ ಮಾಧ್ಯಮಗಳ ಮುಂದೆ ಬಿಕ್ಕಳಿಸಿ-ಬಿಕ್ಕಳಿಸಿ ಆರ್ಭಟಿಸುವ ಮಾಜಿ ಮುಖ್ಯಮಂತ್ರಿಗಳೂ, ಹಾಲಿ 007 ಬ್ರಾಂಡ್'ನ ಪತ್ತೇದಾರಿ ಪುರುಷೋತ್ತಮರೂ ಆಗಿರುವ ನಮ್ಮ "ನಾಡಿನ ಕಣ್ಮಣಿ", ನಡು ('ನಡು' ಇಲ್ಲಿ 'ಅಂಗ' ಸೂಚಕ ಮಾತ್ರ ಅನ್ನೋದು ನಿಮ್ಮ ಗಮನಕ್ಕೆ!) ವಯಸ್ಸಿನ 'ನವ'ಯುವಕ ಹೆಚ್ ಡಿ ಕುಮಾರಣ್ಣನ ಹಳೆ ಚಾಳಿಯಾದ "ದಾಖಲೆ ಧಾಳಿ" ಈಗಾಗಲೆ ಕೆಟ್ಟು ಕೆರ ಹಿಡಿದ ಕಳೆಯಲ್ಲಿ ಕಂಗೊಳಿಸುತ್ತಿರೊ ಕರುನಾಡಿನ ಬರಗೆಟ್ಟ ಬಡಪಾಯಿ ಕಾಂಗ್ರೆಸ್ ನಾಯಕರ ಕಡೆಗೆ ಹೊಸತಾಗಿ ತಿರುಗಿದೆ!

ಹಾಲಿ 'ಹೃದ್ರೋಗಿ"ಯೂ ಆಗಿರುವ ಅವರು ಈಗಾಗಲೆ ರಾಜ್ಯಾಡಳಿತದ ಚುಕ್ಕಾಣಿ ಹಿಡಿದಿರುವ ಭಾಜಪದ ಮೇಲೆ ಒಂದು ಸುತ್ತಿನ ಸಮರ ನಡೆಸಿ ದಣಿದು,ಆಮೇಲೆ ಕೊಂಚ ಬದಲಾವಣೆಗಾಗಿ ಥೇಟ್ "ಶರ್ಲಾಕ್ಸ್ ಹೋಮ್ಸ್'ನ" ಪಡಿಯಚ್ಚಿನಂತೆ ಮಾಜಿ ಲೋಕಾಯುಕ್ತರ "ರಾತ್ರಿ ರಹಸ್ಯ"ಗಳ ರಸವತ್ತಾದ 'ಗಣಿ' ತೋಡಲು ಸೊಂಟಕಟ್ಟಿ ನಿಂತರು! ಆದರೆ ಅವರಿಗಿರುವ ಮಾರಣಾಂತಿಕ "ಹೃದ್ರೋಗ" ಅವರನ್ನು ಆ ಪವಿತ್ರಕಾರ್ಯದಲ್ಲಿ ಯಶಸ್ವಿಯಾಗದಂತೆ ತಡೆದು,ಆ ಮೂಲಕ ಅವರು ಬಯಲಿಗೆಳೆದು ಹೊರಹಾಕಲಿದ್ದ "ಹೆಗ್ಡೇರ ಹುಡುಗಾಟ"ಗಳನ್ನು ಕಂಡು ತಮ್ಮ ಜ್ಞಾನದಾಹವನ್ನು ತಣಿಸಿಕೊಳ್ಳಲು ಕಾಗೆಗಳಂತೆ ಕಾದಿದ್ದ,ಈ ನಾಡಿನ ಉದ್ದಗಲಕ್ಕೂ ಹರಡಿ ಹಂಚಿ ಹೋಗಿರುವ ಅವರ ಅಪಾರ ಅಭಿಮಾನಿಗಳ ಕಲಿಕೆಯ ಆಸಕ್ತಿ ಹೆಚ್ಚಿಸಲು ಅವರಿಂದ ಕಡೆಗೂ ಆಗಲೇಯಿಲ್ಲ.


ಆದರೂ ಇಂತ ಚಿಲ್ಲರೆ ಸಂಗತಿಗಳಿಗೆ ಚೂರೂ ತಲೆ ಕೆಡಿಸಿಕೊಳ್ಳದೆ ಕುಗ್ಗದೆ-ಜಗ್ಗದೆ,ಎದುರಾದ ಎಲ್ಲಾ ಅಡ್ಡಿ ಆತಂಕಗಳಿಗೆ ಅಂಜದೆ-ಅಳುಕದೆ-ಬೋಳಿಸಿದರೂ ಮಾಸಿ ಹೋಗದ ಹೀನ ಸುಳಿಯಂತಹ ತಮ್ಮ ಹುಟ್ಟು ಪತ್ತೇದಾರಿ ಚಟವನ್ನ ಸುಲಭದಲ್ಲಿ ಬಿಡಲೂ ಆಗದೆ :ಈಗ ಅವರು ತಮ್ಮ ಚಿಕಿತ್ಸಕ ದೃಷ್ಟಿಯನ್ನ ಕಾಂಗ್ರೆಸ್ ಕಳ್ಳರ ಮೇಲೆ ಇಡ ಹೊರಟಿದ್ದಾರೆ!

ಇಡಲು ಬೇರೆ ಯಾರದೂ ಸಿಗದಿದ್ದರೆ (ಆರಂಭದಲ್ಲೆ ಅಶ್ಲೀಲತೆ ಕಲ್ಪಿಸಿ ಕೊಳ್ಳಬೇಡಿ ಸ್ವಾಮಿ ಸ್ವಲ್ಪ ತಾಳಿ!) ತನ್ನ ಸ್ವಂತ ತಲೆಯ ಮೇಲೆ ಕೈ ಇಟ್ಟುಕೊಳ್ಳಲು ತವಕಿಸುವ ಭಸ್ಮಾಸುರನ ಆಧುನಿಕ ಅಪರಾವತಾರವಾಗಿರುವ ಅವರಿಗೆ ಈ ನೂತನ ಮಾರ್ಗಸೂಚಿಯನ್ನು ಹಾಕಿಕೊಟ್ಟ ಪುಣ್ಯಾತ್ಮರ ಜಾಣ್ಮೆಯನ್ನ ಮೆಚ್ಚಲೆಬೇಕು,ಇಲ್ಲದಿದ್ದರೆ "ಜಿಹಾದಿ ಆತ್ಮಹತ್ಯಾ ಬಾಂಬರ್"ನಂತೆ ಸ್ವಂತ ತಮ್ಮ ವಿರುದ್ಧವೆ ಅವರು ಪತ್ತೇದಾರಿ ನಡೆಸಿ ಅಮೂಲ್ಯ ದಾಖಲೆಗಳನ್ನ ನಾಡಿನ ಜನತೆಯ ಮುಂದಿಡುವ ಸಕಲ ಸಾಧ್ಯತೆಗಳೂ ಇದ್ದವು! ಅನ್ನೋದನ್ನ ಯಾರೂ ಮರೆಯುವ ಹಾಗಿಲ್ಲ. ಹೀಗಾಗಿ ಈಗ ಅಧಿಕಾರವಿಲ್ಲದೆ ಬರಗೆಟ್ಟು ಹೋಗಿರುವ ಕಾಂಗ್ರೆಸ್ ಕಂದಮ್ಮಗಳ ಕಡೆಗೆ ಅವರ 'ಸಾತ್ವಿಕ' ಆಕ್ರೋಶ ಹೊರಹೊಮ್ಮಿದೆ!

ಇಷ್ಟೆಲ್ಲಾ ಸಿಐಡಿ ಕೆಲಸ ಮಾಡುವ ಭರದಲ್ಲಿ ಅವರ ಪಂಚೆಯೆ ಅಲ್ಲಲಿ-ಆಗಾಗ ಉದುರಿ ಬೀಳುತ್ತಿರೋದು ಪಾಪ ಅವರ ಘನ ಗಮನಕ್ಕೆ ಬಂದೇ ಇಲ್ಲ,ಬಹುಷಃ ಅವರೆ ಅದನ್ನ ಎಲ್ಲಾದರೂ 'ಅನಧಿಕೃತ'ವಾಗಿ ಕಳಚಿಟ್ಟವರು 'ದಾಖಲೆ'ಗಳೊಂದಿಗೆ ಅರ್ಜೆಂಟಾಗಿ ಎದ್ದು ಬರುವಾಗ ಅಲ್ಲೆ ಎಲ್ಲೊ ಮರೆತು ಬಂದಿರುವ ಸಾಧ್ಯತೆಗಳನ್ನೂ ಸುಲಭವಾಗಿ ತಳ್ಳಿಹಾಕುವಂತಿಲ್ಲ! ಆದರೂ ಇನ್ಯಾರದ್ದೋ ಹರಿದ ಪಟಾಪಟಿ ಚಡ್ಡಿಗೆ ತೇಪೆ ಹಾಕಲು ಹಪಾಹಪಿಸುವ ಮುನ್ನ ಅವರೂ ಸಣ್ಣದಾದರೂ ಒಂದು ಚೊಣ್ಣ ತೊಟ್ಟುಕೊಂಡಿದ್ದರೆ ಚನ್ನಾಗಿತ್ತು! ಮುದ್ದೆ ಮುಖದ ದೊಡ್ಡಗೌಡರಾದರೂ ಅವರದ್ದೆ ಒಂದು ಹಳೆ ಪಂಚೆಯನ್ನ ಮನೆಯಿಂದ ಹೊರಬೀಳುವ ಮುನ್ನ ತಮ್ಮ 'ಕುಮಾರ'ನಿಗೆ ಉಡಿಸಿ ಕಳಿಸಬಾರದ?!

Tuesday, August 30, 2011

ವಾಸ್ತು ದೋಷ-ಇದ್ಯಾತರ ಮರಾ ಮೋಸ!


(ಆ"ರೋಗ"ವೆ ಭಾಗ್ಯ!)



ಅದ್ಯಾಕೊ ಪರಪ್ಪನ ಅಗ್ರಹಾರದಲ್ಲಿ ಇತ್ತೀಚೆಗಷ್ಟೆ ಕರುನಾಡಿನ ಬಡ ತೆರಿಗೆದಾರರ ತೆರಿಗೆಯ ಹಣ ಖರ್ಚು ಮಾಡಿ ರಾಜ್ಯ ಸರಕಾರ ಕಟ್ಟಿಸಿರೊ ಕಲ್ಲಿನ ಮಜಭೂತು ಅತಿಥಿಗೃಹದ ವಾಸ್ತುವಿನಲ್ಲೆ ಏನೊ ಭಾರಿ ದೋಷವಿದ್ದಂತಿದೆ.ಅಷ್ಟೆಲ್ಲ ಖರ್ಚುಮಾಡಿ ಕಟ್ಟಿಸುವ ಮುನ್ನ ಯಾರಾದರೂ 'ವಾಸ್ತುಶಾಸ್ತ್ರ ಪಂಡಿತ'ರಲ್ಲೊಮ್ಮೆ ಕಣಿ ಕೇಳಿಯಾದರೂ ಸರಕಾರ ಮುಂದಡಿಯಿಡಬಾರದಿತ್ತ?

ಹೌದು ಈ 'ವಾಸ್ತುಶಾಸ್ತ್ರ' ತಳಿಯ ವಿಶೇಷ ಪಂಡಿತರು ಅದೆಲ್ಲಿ ಸಿಗುತ್ತಾರೆ ಎಂಬ ಗೊಂದಲವೇನಾದರೂ 'ಸದಾನಂದ'ದಿಂದ ಆಳುವ ಮಂದಿಗೆ ಇದ್ದಿದ್ದೆ ಹೌದಾಗಿದ್ದಲ್ಲಿ ಮಗುವನ್ನ ಕೇಳಿದ್ದರೂ "ದಿನ ಬೆಳಗಾದರೆ ಎಲ್ಲಾ ಟೀವಿಯಲ್ಲೂ ವಕ್ಕರಿಸಿಕೊಂಡು ಊಳಿಡುತ್ತಾ,ಬೆಳಗ್ಯೆ ಶಾಲೆಗೆ ಹೋಗೊ ಮುಂಚೆ ಚೂರು ನಮ್ಮ ಪೋಗೊ-ಕಾರ್ಟೂನ್ ನೆಟ್'ವರ್ಕ್ ನೋಡೋ ಸುಖಕ್ಕೂ ಅಮ್ಮಂದಿರಿಂದ ಕಲ್ಲು ಹಾಕಿಸುತ್ತಾರೆ ನೋಡಿ ಅವೇ ಪ್ರಾಣಿಗಳು" ಅಂತ ಕರುನಾಡಿನ ಯಾವಮೂಲೆಯ ಎಳೆ ಬೊಮ್ಮಟೆ ಬೇಕಾದರೂ ಬೀದಿಗೊಬ್ಬರಂತಿರುವ ಅಂತಹ ಪಂಡಿತೋತ್ತಮರನ್ನು ರೆಡ್'ಹ್ಯಾಂಡಾಗಿ ಹಿಡಿದುಕೊಡುತ್ತಿತ್ತು!

ಅದಕ್ಕೂ ಪುರುಸೊತ್ತಿಲ್ಲದಿದ್ದರೆ ಕನಿಷ್ಠ ಪಕ್ಷ ತಳಿಪರಂಬದ ರಾಜರಾಜೇಶ್ವರನೊಂದಿಗೆ -ಧರ್ಮಸ್ಥಳದ ಮಂಜಣ್ಣನ ಜಂಟಿ ಭಕ್ತಾಗ್ರೇಣಿಯಾಗಿರುವ ಹಾಗು ನಮ್ಮ ಸುದೈವದಿಂದ ವಿಪರೀತ ದೈವಭೀರುಗಳೂ ಆಗಿರುವ (ಇದು ರೇಣುಕಾಚಾರ್ಯ ಬೀರುವ "ಬೀರು" ಖಂಡಿತ ಅಲ್ಲ ಮತ್ತೆ!),ವಾಸ್ತು ಪ್ರಕಾಂಡ ಪಂಡಿತರ ಪುಕಾರುಗಳನ್ನ ಕಟ್ಟಿಕೊಂಡೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಅನುಗ್ರಹ'ಕ್ಕೆ ಅಪ್ಪಿತಪ್ಪಿಯೂ ಕಾಲಿಡದೆಯೆ ಮೂರೂ ಚಿಲ್ಲರೆ ವರ್ಷ ಯಶಸ್ವಿಯಾಗಿ ರಾಜ್ಯ'ಭಾರ' ಮಾಡಿದ ಮಾಜಿ ಮುಖ್ಯಮಂತ್ರಿ ಬೂಸಿಯರವರನ್ನೆ ಒಂದು ಮಾತು ಕೇಳಿದ್ದರೂ ಸಾಕಿತ್ತು,ಅವರೆ ಒಬ್ಬರನ್ನ ಬೇಕಿದ್ದರೆ ಸಂತೋಷದಿಂದ ತಗಲು ಹಾಕುತ್ತಿದ್ದರು.

ಆ ಅತಿಥಿಗೃಹದ ಅಧಿಕೃತ ನಿರ್ಮಾಣದ ಸ್ಕೆಚ್ ಈಗಿನ ಸರಕಾರದಲ್ಲಿಯೂ ಮಂತ್ರಿಯಾಗಿರೊ ಯಡ್ಡಿಯ ಖಾಸಾ ಶಿಷ್ಯ 'ಸರ್ವರ್ ಸೋಮ' ಆಗಿನ್ನೂ "ಚಕ್ರ ಬ್ರಾಂಡಿನ" ಸರಕಾರದಲ್ಲಿ ಬಂಧೀಖಾನೆ ಸಚಿವರಾಗಿದ್ದಾಗ ಹಾಕಿದ್ದೆ ಇರಬಹುದು (ಆಗ ಆದ ಅ'ವ್ಯವಹಾರ'ದ ತನಿಖೆಯೆಲ್ಲಾದರೂ ಲೋಕಾಯುಕ್ತರು ಮಾಡಿದ್ದೇ ಆಗಿದ್ದರೆ ಅವರೂ ದೂಸರ ಮಾತಿಲ್ಲದೆ ಅಲ್ಲಿಗೇ ತಮ್ಮ ನಿವಾಸವನ್ನ ಶಿಫ್ಟ್ ಮಾಡಿಕೊಳ್ಳಬೇಕಾಗ್ತಿತ್ತು ಅನ್ನೋದೆಲ್ಲ ಬೇರೆ ಮಾತು ಬಿಡಿ!) ಆದರೆ ಆಗ ಆದ ತಪ್ಪಿಗೆ ಈಗಲಾದರೂ ಅದಕ್ಕೊಂದು "ವಾಸ್ತುಹೋಮ" ನಡೆಸಿ ಸರಕಾರ ಪಶ್ಚಾತಾಪದ ಶಾಂತಿ ಮಾಡಿಸದಿದ್ದರೆ ಹೇಗೆ?

ಈಗ ಆದರಿಂದಾಗುತ್ತಿರುವ ಅನಾಹುತ ಒಂದಾ-ಎರಡಾ? ಅಲ್ಲಿನ ವಾಸ ಪಕ್ಕ ಆಗೋದೆ ತಡ ಅಲ್ಲಿ ತನಕ ನಳನಳಿಸುತ್ತಿರೊ ನಮ್ಮ ಎಲ್ಲಾ ನಾಯಕಮಣಿಗಳ ಆರೋಗ್ಯಕ್ಕೆ ಅನಿರೀಕ್ಷಿತ ಗ್ರಹಣ ಹಿಡಿದು ಏನಾದರೊಂದು ಕಾಯಲೆ-ಕಸಾಲೆ ಯಾವ ಪೂರ್ವಸೂಚನೆಯನ್ನೂ ಕೊಡದೆ ಅರ್ಜೆಂಟಾಗಿ ಅವರಿಗೆ ಆಟಕಾಯಿಸಿಕೊಂಡು ಬಿಡುತ್ತದೆ.ಉದಹಾರಣೆಗೆ ಶಾಸಕ ಸಂಪಂಗಿಯನ್ನೆ ತಗೊಳ್ಳಿ ಅದೇನೋ ತಿನ್ನಬಾರದ್ದನ್ನ ಅವರು ತಿಂದರು ಅಂತ ಅವರ ಹಿತದೃಷ್ಟಿಯಿಂದಲೆ ಅವಸರದಲ್ಲಿ ಆತ ತಿಂದದ್ದ ಕ(ಕಾ)ಸವನ್ನೆಲ್ಲಾ ಕಕ್ಕಿಸಲು ಲೋಕಾಯುಕ್ತ ಪೊಲೀಸರು ಅವರನ್ನು "ಸೂಕ್ತ ಚಿಕಿತ್ಸೆ"(?)ಗಾಗಿ ಅಲ್ಲಿಗೆ ಸೇರಿಸುವ ಸೂಚನೆ ಸಿಕ್ಕಿದ್ದೇ ತಡ ಅವರು ತುರ್ತು ಹಾರ್ಟ್ ಪೇಷೆಂಟ್ ಆಗಿಬಿಟ್ಟರು! ಏಕಾಂತದಲ್ಲಿ ಧ್ಯಾನ ಹೇಳಿಕೊಟ್ಟದ್ದನ್ನೆ ತಪ್ಪು ಅಂತ ಕ್ಯಾತೆ ತೆಗೆದು ನಿತ್ಯಾನಂದಸ್ವಾಮಿಗಳನ್ನೂ (ಸದ್ಯ ಹಲ್ಲುಬಿಡುವುದರಲ್ಲಿ ನಮ್ಮ ಮಾನ್ಯಮುಖ್ಯಮಂತ್ರಿಗಳಿಗಿರುವ ಏಕೈಕ ಪ್ರತಿಸ್ಪರ್ಧಿ ಅಂದರೆ ಅವರೊಬ್ಬರೆ!) ಅಲ್ಲಿಗೇ ವಿಹಾರಕ್ಕೆ ಕಳಿಸಲು ಪೊಲೀಸರು ಪ್ಲಾನ್ ಮಾಡುತ್ತಿದ್ದಾಗಲೆ ಅದ್ಯಾವ್ಯಾವುದೊ ಹೆಸರಿಲ್ಲದ ರೋಗಗಳೆಲ್ಲ ಪೂಜ್ಯರನ್ನ ಅಂಟಿಕೊಂಡು ಕಾಡಿಸಿದವು!

ಇನ್ನು ಕಾಲಿಗೆ ಚಕ್ರಕಟ್ಟಿಕೊಂಡಂತೆ ಸದಾ ಹೆಲಿಕ್ಯಾಪ್ಟರ್'ನಲ್ಲೆ 'ಶೋಭಾ'ಯಮಾನರಾಗಿರುತ್ತಿದ್ದ ಮಾಜಿ ಮುಖ್ಯಮಂತ್ರಿಗಳಿಗಂತೂ ಭೀಕರ 'ಎಡ್ಸ್' ಅಮರಿಕೊಂಡಿತು! ಅವರ ಆಜ್ಞಾನು'ನಾಯಿ' ಕಟ್ಟಾ ನಾಯ್ದುಗಾರಿಗಳಿಗಂತೂ ಒಂದು ದಿನ ಬೆವರು ಬಂದು ಎದೆಶೂಲೆ-ಬಿದ್ದು ಮುರಿದ ಸೊಂಟದ ಮೂಳೆ-ಇದೀಗ ಯಾರೂ ಕಂಡು ಕೇಳರಿಯದ 'ಬೇಧಿಗಾಗಿ ಆಪರೇಶನ್' (ಒಂದೇ ಒಂದ್ ಸಲ ಆಪರೇಷನ್ ಕ'ಮಲ'ವನ್ನ ನೆನಪಿಸಿಕೊಳ್ಳಿ ಪ್ಲೀಸ್!) ಹೀಗೆ ತರೇವಾರಿ ಸಮಸ್ಯೆಗಳು ಬಿಟ್ಟೂ ಬಿಡದಂತೆ ಕಾಡತೊಡಗಿದವು,ಬೂಸಿಯಾರ ಒಂದು ಕಾಲದ ಅವರ 'ಆಪ್ತಮಿತ್ರ' ಹೆಚ್ ಡಿ ಕೆ (ಗೊಂದಲಬೇಡ! ಕಡೇ ಎರಡು ಅಕ್ಷರಗಳು ಅದಲು ಬದಲಾಗಿಲ್ಲ,ಅವಿರಬೇಕಾದಲ್ಲೇ ಇವೆ!) ಗೆ ಲೋಕಾಯುಕ್ತರ ಹವಾಮಾನ ವರದಿಯಯಲ್ಲಿ 'ಪರಪ್ಪನ ಅಗ್ರಹಾರದಲ್ಲಿ ಮೋಡ ಕವಿದ ವಾತಾವರಣ' ಎಂಬ ಸುಳಿವು ಸಿಕ್ಕಿದ್ದೆ ತಡ ದರಿದ್ರ ಹೃದ್ರೋಗ ಒಂದು ಸಣ್ಣ ಹೇಳಿಕೆಯೂ ಇಲ್ಲದೆ ಬಂದು ಅವರನ್ನ ಬಿಡಲಾರದಂತೆ ಅಂಟಿಕೊಂಡಿದೆ.ಜೊತೆಗೆ ಜ್ವರದ ತಾಪವೂ ಇದೆಯಂತೆ ಪಾಪ!...ಇಷ್ಟೆಲ್ಲಾ ಸಾಲದು ಅಂತ ಅವರ 'ಅಧಿಕೃತ' ಮನೆಯೊಡತಿ ಅನಿತಕ್ಕನಿಗೂ ಅದೇನೂ ಹೊಸತಾಗಿ ಬೆನ್ನುನೋವು-ಜ್ವರ ಬೇರೆ ಪತಿಯೊಂದಿಗೆ ಅಂಟುಜಾಡ್ಯವಾಗಿ ಅವರ ಪಾಲಿಗೂ ಬಂದಿದೆಯಂತೆ.

ಇದ್ಯಾವ ಶನಿಪೀಡೆ ಸ್ವಾಮಿ? ನಮ್ಮ ನಾಡಿನ ಭೂತ-ವರ್ತಮಾನ-ಭವಿಷ್ಯದ ನಾಯಕರೆಲ್ಲ ಹೀಗೆ ಅಲ್ಲಿಗೆ ಹೋಗಿ "ಸಿಕ್'ಲೀವ್" ಪಡೆಯುವ ಹಾಗಾದರೆ ಈ ಬರಗೆಟ್ಟು ಹೋಗಿರುವ (ಯಾರಿಂದ 'ಬರಗೆಟ್ಟು' ಹೋದದ್ದು ಅನ್ನೋ ಪ್ರಶ್ನೆ ಕೇಳುವ ಪಾಪಕ್ಕೆ ಯಾರೊಬ್ಬರೂ ಇಳಿಯಬಾರದು) ನತದೃಷ್ಟ ನಾಡಿಗೆ ಇನ್ನು ಮುಂದೆ ಯಾರು ಗತಿ ? ಈಗ್ಗೆ ವರ್ಷದ ಹಿಂದೆ ವಿಧಾನಸಭೆಯ ಅಧಿವೇಶನದಲ್ಲಿ ವಿಪರೀತ ಈ ಬಗ್ಗೆ ದೂರದೃಷ್ಟಿ ಹೊಂದಿದ್ದ ನಮ್ಮ ಮುತ್ಸದ್ಧಿ-ದಾರ್ಶನಿಕ ಮುಖ್ಯಮಂತ್ರಿ ಬೂಸಿಯ ಪ್ರೀತಿಯಿಂದಲೆ "ನೀವೆಲ್ಲರೂ ಸ'ಗಣಿ' ತಿಂದ 'ಲೋಕಾಯುಕ್ತರ ವರದಿ' ಬರಲಿ ತಡೀರಿ! ನಿಮಗೆಲ್ಲರಿಗೂ ಅಲ್ಲಿ ವಿಶೇಷ ವ್ಯವಸ್ಥೆ ಮಾಡಿಸುತ್ತೇನೆ" ಅಂತ ವಿರೋಧಪಕ್ಷದವರಿಗೆ ಅಂದು - "ನೀವು ಮಾಡೊ ಆ ವ್ಯವಸ್ಥೆಯ 'ಸುಖ'ವನ್ನ ನಿಮಗೇನೆ ಸಿಗೋವಂತೆ ಮಾಡುತ್ತೇವೆ" ಅಂತ ವಿರೋಧಪಕ್ಷದವರಿಂದಲೂ ಅನ್ನಿಸಿಕೊಂಡು 'ವಿಧಾನಸೌಧ'ದಲ್ಲಿ ಒಂದು 'ಪುಟ್ಟ ಪ್ರೇಮ ಕಲಹ'ವನ್ನೆ ಆಡಿದ್ದು ಒಮ್ಮೆ ಕಂಡದ್ದನ್ನು ಎಂದೆಂದಿಗೂ ಮರೆಯದಿರುವ ಕೆಟ್ಟ ಖಾಯಿಲೆಯಿರುವ ಕನ್ನಡಿಗರಿಗೆ ಇನ್ನೂ ನೆನಪಿದೆ!...ಆದರೆ ಅವರ ಅನೇಕ ಬೂಸಿ ಆಶ್ವಾಸನೆಗಳಂತೆ ಇದೂ ಇನ್ನೊಂದು ಬೂಸಿಯೇ ಆಗಿಹೋಗಿ ಆದ ಪ್ರಮಾದಕ್ಕಾಗಿ ಖುದ್ದು ಅವರೆ ಈಗ ಆದ ಪರಿತಪಿಸುವಂತಾಗಿದೆ.

ಸದ್ಯ ಅಧಿಕಾರದಲ್ಲಿರುವ 'ಸದಾ' ಹಸನ್ಮುಖಿ ಮುಖ್ಯಮಂತ್ರಿಗಳಾದರೂ ಇನ್ನೇನು ಅಲ್ಲಿಗೆ ಸಾಲಾಗಿ ಹೋಗಲಿರುವ ತಮ್ಮ ಸಂಪುಟದ ಬಹುತೇಕ ಸಹುದ್ಯೋಗಿಗಳ ಕೂಡಲೆ ಕೆಟ್ಟು ಕೆರಹಿಡಿಯಬಹುದಾದ ಆರೋಗ್ಯದ ಹಿತದೃಷ್ಟಿಯಿಂದಾದರೂ ಒಂದು 'ವಾಸ್ತು ಶಾಂತಿ ಹೋಮವನ್ನ' ಇದೇ ಚೌತಿಯ ಸಂಭ್ರಮದೊಂದಿಗೆ ತಮ್ಮ "ಅನುಗ್ರಹ"ದೊಂದಿಗೆ "ಅಗ್ರಹಾರ'ದಲ್ಲಿಯೂ ಮಾಡಿಮುಗಿಸಿ ತಮ್ಮೆಲ್ಲ ಈವರೆಗಿನ ಪುಣ್ಯದ 'ಫಲ'ಗಳನ್ನ ಇನ್ನಷ್ಟು ಹೆಚ್ಚಿಸಿಕೊಳ್ಳಲಿ ಎಂಬ ಆಶಯ ಬಡ ಕನ್ನಡಿಗರದ್ದು...!

Monday, August 29, 2011

ಕುಚ್ "ಕಟ್ಟಾ"....ಸಬ್'ಕುಚ್ ಜೂಟಾ....



ಇಷ್ಟ್ ದಿನ ಜಮೀನಿಗೆ ಬಾಯಿ ಬಿಟ್ಟು-ಈಗ ಜಾಮೀನಿಗೆ ಬಾಯಿಬಾಯಿ ಬಿಡುತ್ತಿರೊ ಕುಮಾರಣ್ಣನ ವಿವಿಧ ವಿನೋದಾವಳಿಗಳಿಗೆ ನಗಲಾರದೆ ಅಳಲಾರದೆ ಕನ್ನಡಿಗ ತನಗಿರುವ ಒಂದೇ ತಲೆಯನ್ನ ಚಚ್ಚಿಕೊಂಡು ಹೈರಾಣಾಗಿರೊ ಹೊತ್ತಿಗೆ ;ಊರಿಗೆಲ್ಲ ತಾನು ಟೋಪಿ ತೊಡೆಸಿದ ಸಂಕೇತವಾಗಿ ತಾನೂ ಒಂದನ್ನು ಹಾಕಿಕೊಂಡಿರುವ ಮಾಜಿ ಮಂ(ಕಂ)ತ್ರಿ ಕಟ್ಟಾ ಬಗ್ಗೆ ಒಂದು ಕೆಟ್ಟ ಸುದ್ದಿ ಈಗಷ್ಟೆ ಬಂದಿದೆ.

ಈಗಾಗಲೆ ಎರಡೆರಡು ಹಬ್ಬಗಳನ್ನ ಪರಪ್ಪನ ಅಗ್ರಹಾರದ ಅತಿಥಿಗೃಹದಲ್ಲಿಯೆ ತಮ್ಮ ಸುಪುತ್ರನೊಂದಿಗೆ ಸಕುಂಟುಂಬಿಕವಾಗಿ ಆಚರಿಸಿರುವ ಹಾಗು ಇನ್ನೂ ನೂರಾರು ಹಬ್ಬಗಳನ್ನ ಅಲ್ಲೇ ಆಚರಿಸುವ ಸಕಲ ಸಾಧ್ಯತೆಗಳೂ ಇರುವ ಕಟ್ಟಾ ಸುಬ್ರಮಣ್ಯಂ ನಾಯ್ದುಗಾರು ಇದೀಗ ವಿಪರೀತ ಬೇಧಿಯಿಂದ ಹಾಡಾಲೆದ್ದು ಹೋಗಿದ್ದಾರಂತೆ,ಅಯ್ಯೋ ಪಾಪ! ಒಂದು ವೇಳೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಕನಿಷ್ಠ ಇನ್ನೆರಡು ಮೂರುವರ್ಷ ವಿಕ್ಟೋರಿಯ ಆಸ್ಪತ್ರೆಯ ವಿಶೇಷ ವಾರ್ಡಿನಲ್ಲಿಯೇ ವೈದ್ಯರ ಮುಚ್ಚಟೆಯ ನಿಗಾದಲ್ಲಿ ಅವರನ್ನ ಇಡದೆ ಇದ್ದರೆ,ಅಕಟಾಕಟಾ! ಅವರ ಅಮೂಲ್ಯ ಪ್ರಾಣಪಕ್ಷಿ ಯಾವುದೆ ಕ್ಷಣದಲ್ಲಾದರೂ ಅನಂತದಲ್ಲಿ ಲೀನವಾಗಿ ರಾಜ್ಯಕ್ಕೆ ತುಂಬಲಾಗದ ನಷ್ಟ ಆಗಿಯೆ ತೀರುತ್ತದಂತೆ.

ಹಾಗಂತ ಅತ್ತ ಈಗಷ್ಟೆ ಮರೆಯಲ್ಲಿ ನಿಂತು ಮೂಗಿನ ಮುಟ್ಟ ಕಟ್ಟಾ ಕೊಟ್ಟ ಪ್ರಸಾದ ತಿಂದ ವಾಸನೆ ಎದ್ದು ಹೊಡಿಯುತ್ತಿರುವ ವಿಕ್ಟೋರಿಯ ಆಸ್ಪತ್ರೆಯ ಅಧೀಕ್ಷಕ ಡಾ,ತಿಲಕ್ ಕುಮಾರ್ ಒಂದೆ ಉಸಿರಿನಲ್ಲಿ ವಿಪರೀತ ಆತಂಕದಲ್ಲಿ ಮಾಧ್ಯಮಗಳ ಮುಂದೆ ಹೇಳಿ ಮುಗಿಸಿ ತಮ್ಮ ಸ್ವಂತ ಸುಳ್ಳಿಗೆ ತಾವೆ ಬೆಚ್ಚಿಬಿದ್ದಂತೆ ಕಾಣಿಸುತ್ತಿದ್ದರೆ! ಇತ್ತ ಅದನ್ನು ಕೇಳಿ ಪುಳಕಿತರಾದ ಮಾಜಿ ಮಂತ್ರಿಗಳ 'ಕಟ್ಟಾ'ಭಿಮಾನಿಗಳು ಮಾತ್ರ ಸರಕಾರಿ ವೈದ್ಯರ ಅತಿ ಜಾಣತನಕ್ಕೆ ಎಲ್ಲೆಲ್ಲೊ (?) ರೋಮಾಂಚಿತರಾಗುತ್ತಿದ್ದಾರೆ!.

ಹಾಗೊಂದು ವೇಳೆ ಬೇಧಿಯಾದದ್ದಕ್ಕೆಲ್ಲ ಕಟ್ಟಾ ಆಪರೇಶನ್ ಮಾಡಿಸಿಕೊಂಡದ್ದೆ ಆದರೆ ಅದೊಂದು ಜಾಗತಿಕ ದಾಖಲೆಯೆ ಆಗಿ ಹೋಗಿ ;ನಾಳೆ ಬೀದಿ ಬದೀಲಿ ಕೂತು ಬೇಧಿ ಮಾಡೋರೆಲ್ಲ ಅರ್ಜೆಂಟಾಗಿ ಆಸ್ಪತ್ರೆಯ ಹಾದಿ ಹಿಡಿದು ಆಪರೇಶನ್'ಗಾಗಿ ಅಣ್ಣಾ ಹಜಾರೆ ಬ್ರಾಂಡಿನ ಸತ್ಯಾಗ್ರಹ ಹೂಡೊ ಎಲ್ಲಾ ಅಪಾಯಗಳೂ ಇವೆ! ಸಹಜವಾಗಿ ಆಗ ಹೆಚ್ಚಬಹುದಾದ ಸರಕಾರಿ ಖರ್ಚಿನ ಬಗ್ಗೆ ಯೋಚಿಸಿಯೆ 'ಸದಾ'ನಗುವ ಮಾನ್ಯ ಮುಖ್ಯಮಂತ್ರಿಗಳ ಹಣೆಯಲ್ಲೂ ಆತಂಕದ ಗೆರೆಗಳು ಮೂಡಿರುವ ಸುದ್ದಿಯಿದೆ!

"ಬೂಸಿಯ" ಆರೋಗ್ಯ ಕಾಪಾಡು ಮಂಜುನಾಥಾ....?!



ಮಾಜಿ ಮುಖ್ಯಮಂತ್ರಿ ಬೂಸಿಯಗೆ ಒಂದು ವೇಳೆ 'ಎಡ್ಸ್' ಏನಾದರೂ ಬಂದಿರಬಹುದ? ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ 'ರಸಿಕ' ಕುಲಚಕ್ರವರ್ತಿ ರೇಣುಕಾಚಾರ್ಯನ ಸಂಗ ಮಾಡಿ ಅವರೂ ಅವನಂತೆ ಎಲ್ಲೆಲ್ಲೋ ಜಾರಿ ಬಿದ್ದಿದ್ದು (!) ಏನಾದ್ರೂ ಬಾಯಿಬಿಟ್ಟು ಹೇಳಲಾಗದ ಮಾರಕ ರೋಗಕ್ಕೆ ಬಲಿಯಾಗಿದ್ದಾರಾ? ಇಲ್ಲ ರಾಮಚಂದ್ರೆಗೌಡರು ಏನಾದ್ರೂ ಮಾರಣಾಂತಿಕ ಸೋಂಕನ್ನು ಅವರಿಗೆ ಅಂಟಿಸಿರಬಹುದ? ಎಂಬ ಪ್ರಶ್ನೆಗಳು ಅಕಾಲದಲ್ಲಿ ಕನ್ನಡಿಗರ ಮನಸ್ಸಿನ ಮೇಲೆ ಧಾಳಿಯಿಡುತ್ತಿವೆ.

ತಾವು ಮುಖ್ಯಮಂತ್ರಿಯಾಗಿದ್ದ ಮೂರು ಚಿಲ್ಲರೆ ವರ್ಷಗಳಲ್ಲಿ ನೆಲಕಾಣದ ಯವ್ವನಿಗರಂತೆ ಹೆಲಿಕಾಪ್ಟರ್'ನಲ್ಲಿ ಗಿರಗಿರನೆ ರಾಜ್ಯ ಸುತ್ತುತ್ತಿದ್ದಾಗ-ತಮ್ಮ ಬಿಡುವಿಲ್ಲದ ತೀರ್ಥಕ್ಷೇತ್ರ ಯಾತ್ರೆಗಳ ನಡುವೆಯೂ ಮಧ್ಯ ಮಧ್ಯ ಹಿತ್ತಲಿಗೆ ಹೋಗಿ ಬಂದಂತೆ ಕು'ಮಾರಿ' ಜೊತೆಗೆ (ಅವರೊಬ್ಬರ ಜೊತೆಗೆ ಮಾತ್ರ!) ಆಗಾಗ "ಇದೀಗ ದೆಹಲಿಗೆ" ದೌಡಾಯಿಸುತ್ತಿದ್ದಾಗ-ಮನ ಬಂದಾಗ ಹೊತ್ತು ಗೊತ್ತು ಒಂದನ್ನೂ ನೋಡದೆ ಮಾರಿಷಸ್,ಚೀನಾ ಅಂತ ವಿದೇಶಕ್ಕೆ ಹಾರುತ್ತಿದ್ದಾಗ ಇದ್ದಿರದಿದ್ದ ಯಾವುದೇ ಮಂಡೆಮಾರಿ ಈಗ ಕೋರ್ಟ್ ಕಾಟ ಆರಂಭವಾಗುವ ಅನಿಷ್ಟ ಕಾಲದಲ್ಲಿಯೆ ಶನಿಯಂತೆ ವಕ್ಕರಿಸಿಕೊಂಡಿದೆ ಎಂದರೆ ಏನರ್ಥ?

ಅಧಿಕಾರ ಬಿಟ್ಟ ತಿಂಗಳೊಳಗೆ ಮೂರು ಮೂರು ಬಾರಿ ಆರೋಗ್ಯ ಸಮಸ್ಯೆ ಉಲ್ಬಣಿಸಿರೋದರಿಂದ,ಅದೂ ಚಿಕ್ಕ ಚಿಕ್ಕ ಕಾರಣಗಳಾದ ಅಧಿಕ ರಕ್ತದೊತ್ತಡ-ಮಧುಮೇಹ-ಜ್ವರದಂತಹ ಚಿಲ್ಲರೆ ರೋಗಗಳಿಗೂ ಅವರನ್ನ ತೀವ್ರ ನಿಗಾಘಟಕಕ್ಕೆ ಸೇರಿಸಲೇ ಬೇಕಾದ ಅಗತ್ಯ ಮೂಡಿರೋದನ್ನ ನೋಡಿದರೆ ( ಇದೆಲ್ಲ 'ಎಡ್ಸ್'ನ ಲಕ್ಷಣಗಳೇ ಅನ್ನೋದನ್ನ ನಾವು ಮರೆಯಲೇ ಬಾರದು ಮತ್ತೆ!) ಪಾಪ ಅವರ ಸಂಕಟ ನೋಡಲಾಗದೆ ಈ ಸಂಶಯ ಕನ್ನಡ ಕುಲಕೋಟಿಯ ಹೃದಯದಲ್ಲಿ ಹುಟ್ಟಿದೆ,ಕಿರುವಯಸ್ಸಿನಲ್ಲಿಯೆ 'ಮಾಂಗಲ್ಯ ಭಾಗ್ಯ' ಕಳೆದುಕೊಳ್ಳುವ ಭೀತಿ ಎದುರಿಸುತ್ತಿರೊ ಕು'ಮಾರಿ'ಯ ಬಗ್ಗೆ ಕರುಣೆ ಎಲ್ಲೆಲಿಂದಲೋ(?) ಉಕ್ಕುಕ್ಕಿ ಬರುತ್ತಿದೆ.ಅವರು ನಂಬಿದ ಧರ್ಮಸ್ಥಳದ ಮಂಜಣ್ಣ ಅವರನ್ನ "ಸದಾ" ಕಾಪಾಡಲಿ ಅನ್ನೋದಷ್ಟೆ ನಮ್ಮ ಮನದಾಳದ ಹಾರೈಕೆ?!

ಕುಮಾರಣ್ಣನೂ.....ಅವರ ರಂಗೀನ್ ರಾತ್ರಿ "ರಾಧಿಕೆ"ಯರೂ....




ಒಟ್ಟಿನಲ್ಲಿ ಕನ್ನಡಿಗರ ವ್ಯಥೆಯ ಕತೆಗೆ ಒಂದು ಕೊನೆಯೇ ಇದ್ದಂತಿಲ್ಲ.ಮೊನ್ನೆ ನೋಡಿದರೆ ಯೆಡ್ಡಿಗೆ 'ಎಡ್ಸ್',ಇವತ್ತು ಕುಮಾರಣ್ಣನಿಗೆ ಮಾರಣಾಂತಿಕ ಹೃದಯ 'ಬೇನೆ'! ಶಿವಾ ಅಂತ ಆಲ್ಲಲ್ಲಿ ಅಷ್ಟಿಷ್ಟು ಪತ್ರಿಕಾಗೋಷ್ಠಿ ನಡೆಸುತ್ತ (ಪಾನಗೋಷ್ಠಿಗಳಲ್ಲ ಮತ್ತೆ!) ಭಂಡ ರಾಜ್ಯ ಸರಕಾರದ ಬಂಡವಾಳವನ್ನೆಲ್ಲ ದಾಖಲೆ ಸಮೇತ ಎಳೆಎಳೆಯಾಗಿ ರಾಜ್ಯದ ಆರುಕೋಟಿ ಜನತೆಯ ಮುಂದೆ ಬಿಚ್ಚಿಡುತ್ತಾ,ಸಂಜೆ ಹೊತ್ತು ಕಂತುತ್ತಲೆ ತಮ್ಮ ಅಧಿಕೃತ ಅಥವಾ ಅನಧಿಕೃತ ಇವುಗಳಲ್ಲಿ ಒಂದು ಸಂಸಾರ ಇರುವ ಕಡೆ ಹೋಗಿ ಮುದ್ದೆಯುಣ್ಣುವ ಮುನ್ನ ಕೇವಲ ಎರಡೆ ಎರಡು ಪೆಗ್ 'ಪರಮಾತ್ಮ'ನನ್ನು ಹಾಗೇ ಆವಾಹನೆ ಮಾಡಿಕೊಂಡು ಏನೂ ಕಪಟವರಿಯದ ಪುಟ್ಟ ಪಾಪುವಿನಂತೆ ಮಡದಿಯ (ಮತ್ತೆ ಅಧಿಕೃತವೊ? ಅನಧಿಕೃತವೊ ಎಂಬ ಅಸಡ್ಡಾಳ ದುರುದ್ದೇಶಪೂರಿತ ಪ್ರಶ್ನೆ ಕೇಳೀರಿ ಹುಷಾರ್!) ಮಡಿಲಲ್ಲೆ ಪವಡಿಸುವ ಅವರಿಗೆ ಪಾಪ ಬೈಪಾಸ್'ಸರ್ಜರಿ ಆಗಿದೆಯಂತೆ,ಇನ್ನೂ ನಳನಳಿಸುತ್ತಿರುವ ಈ ಯವ್ವನ ಕಾಲದಲ್ಲಿಯೆ (ಇನ್ನೂ ಎರಡು ವರ್ಷದ ಮಗುವಿನ ತಂದೆಯಾಗಿರುವಷ್ಟು ಚೈತನ್ಯದ ಚಿಲುಮೆ ಅವರು?!) ಅವರಿಗೆ ಅಕಾಲಿಕ ಹೃದಯ ರೋಗವಂತೆ,ಹಾಗಂತ ಅವರ ಪರ ವಕೀಲರು ಲೋಕಾಯುಕ್ತ ನ್ಯಾಯಾಲಯದಲ್ಲಿ ವಾದಿಸಿದರಲ್ಲ,ಆ ಘೋರ ಸುದ್ದಿ ಕೇಳಿ ಬಡ ಕನ್ನಡಿಗರು ಭರಿಸಲಾಗದ ವೇದನೆಯಿಂದ ತಳಮಳಿಸಿ ಹೋದರು!!

ಆ ರೋಗಿಷ್ಟ ಹೃದಯವನ್ನೇ ಇಬ್ಬರಿಬ್ಬರಿಗೆ ಏಕಕಾಲದಲ್ಲಿ ಹಂಚಿಕೊಟ್ಟ ತ್ಯಾಗಜೀವಿ ಅವರು.ಅವರನ್ನೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ದುರುದ್ದೇಶಪೂರಿತರಾಗಿ-ರಾಜಕೀಯ ಪ್ರೇರಿತರಾಗಿ ದೂಷಿಸೋದು ಅಂದರೇನು? ತುಂಬಾ ಸರಳಜೀವಿ ಅವರು. ಈಗ ಏನೋ ಕಾಲ ಅವರ ಮೇಲೆ ಮುನಿದು ಸರಳುಗಳ ಹಿಂದೆ ಹೋಗೊ ವಿನಾಶ ಕಾಲವೂ ಬಂದಿದೆ. ಅಷ್ಟಕ್ಕೆಲ್ಲ ನಾಡಿಗೆ ಅವರು ಸಲ್ಲಿಸಿದ ಅಮೂಲ್ಯ ಕೊಡುಗೆಗಳನ್ನು ಕಡೆಗಣಿಸಿ ಮರೆಯುವಷ್ಟು ಕೃತಘ್ನರೆ ನಾವು ಕನ್ನಡಿಗರು? ಅಂತಹ ಕೊಡುಗೆಗಳ ಉದಾಹಾರಣೆಗೆ ಮಿಡ್'ನೈಟ್ ನಿಖಿಲ್ ಗೌಡ ಹಾಗೂ ಶಮಿತಾ ಕೆ,ಸ್ವಾಮಿಯವರಂತಹ ನಾಡಿನ ಭವಿಷ್ಯದ ಮುಖ್ಯಮಂತ್ರಿಗಳನ್ನೆ ತೆಗೆದುಕೊಳ್ಳಿ ಬೇಕಾದರೆ!!


ನಿಮ್ಮ ನೆನಪಿನ ಗಡಿಯಾರವನ್ನು ಕೇವಲ ಹದಿನೈದೇ ವರ್ಷ ಹಿಂದೆ ತಿರುಗಿಸಿಕೊಂಡು ಅವಲೋಕಿಸಿ ಒಮ್ಮೆ.ಅಂದು ಈ ದೇಶದ ಮೇಲೆ ದೊಡ್ಡದೊಂದು ವಿಪತ್ತು ಬಂದೊದಗಿತ್ತು, ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕನ್ನಡಿಗ ಪ್ರಧಾನಮಂತ್ರಿ ಹರದನಹಳ್ಳಿ ದೊಡ್ದೇಗೌಡ ದೇವೇಗೌಡರು ಸೀತಾರಾಮ ಕೇಸರಿ ಎಂಬ ಮುದಿಕುತಂತ್ರಿಯ ಮೋಸಕ್ಕೆ ಸಿಲುಕಿ ತಮ್ಮ ಸರಕಾರವನ್ನು ಪತನದ ಅಂಚಿಗೆ ತಂದು ಕೊಂಡಿದ್ದರಲ್ಲ ಅವೇ ಭೀಕರ ದಿನಗಳು ನೋಡಿ.ಆಗ ರಾಜ್ಯದ ಯುವ ಸಂಸದರಾಗಿದ್ದ (ಈಗ ಬಿ ವೈ ರಾಘವೇಂದ್ರ ಆಗಿದ್ದಾರಲ್ಲ ಥೇಟ್ ಹಾಗೆ!) ಇದೇ ಕುಮಾರಣ್ಣ ದೆಹಲಿಯ ತುಂಬಾ ಅದೆಷ್ಟು ರಂಗೀನ್ ರಾತ್ರಿಗಳನ್ನ ಆಯೋಜಿಸಿ ಚಿಲ್ಲರೆ ಪಕ್ಷಗಳ ಸಂಸತ್ ಸದಸ್ಯರ ಮನೋಲ್ಲಾಸ ಹೆಚ್ಚಿಸಿಲ್ಲ? ದೇವೇಗೌಡರು ಅವರ ತಂದೆ ಅನ್ನೋದು ಬೇರೆ ಮಾತು ಆದರೆ 'ಪ್ರಗತಿಯ ಪಥ'ದಲ್ಲಿ (ಯಾರ ಪ್ರಗತಿ ಎಂಬ ಅಡ್ಡ ಪ್ರಶ್ನೆ ಈಗ ಬೇಡ!) ದೌಡಾಯಿಸುತ್ತಿದ್ದ ಕೇಂದ್ರ ಸರಕಾರವನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವಾಗಿದ್ದ ಅವರ ಈ ರಾತ್ರಿ ಸೇವೆಗಳಲ್ಲಿ ಕೊಂಚವಾದರೂ ಸ್ವಂತ ಸ್ವಾರ್ಥವಿತ್ತ ಹೇಳಿ? ಅವರು "ಆ" ರಾತ್ರಿಗಳ 'ಖರ್ಚಿಗೆ' ಏನು ವ್ಯವಸ್ಥೆ ಮಾಡಿಕೊಂಡಿದ್ದರು ಎಂಬ ರಾಜಕೀಯ ಪ್ರೇರಿತ ಪ್ರಶ್ನೆ ನಿಮ್ಮಿಂದ ಬಂದದ್ದೆ ಆದಲ್ಲಿ ಖಂಡಿತ ನೀವು ನರಕಕ್ಕೆ ಹೋಗುತ್ತೀರಿ.


ಇನ್ನು 'ಮುಂದೆ ಬಂದರೆ ಹಾಯದೆ ;ಹಿಂದೆ ಬಂದರೆ ಒದೆಯದೆ' ತಮಗೆ ಸಿಕ್ಕಿದ್ದ ಕಿರುಅವಧಿಯಲ್ಲಿ ಸಿಕ್ಕಸಿಕ್ಕಲೆಲ್ಲ ಮೇಯುತ್ತಿದ್ದ ಧರ್ಮಸಿಂಗ್'ರ ಸರಕಾರಕ್ಕೆ ಬತ್ತಿ ಇಟ್ಟು "ಕೋಜಾ" ಸರಕಾರ ರಚನೆಗೆ (ಕೊಳಕು ಮನಸ್ಸು ನಿಮ್ಮದು!,ಅದರ ಅರ್ಥ ಕೋಮುವಾದಿ-ಜಾತ್ಯಾತೀತ ಅಂತ ಮಾತ್ರ!!) ಅದೆಲ್ಲಿಗೊ ಶಾಸಕರ ದಂಡು ಕಟ್ಟಿಕೊಂಡು ಓಡಿ ಹೋಗಿ ರೆಸಾರ್ಟ್ಗಳಲ್ಲಿ ರಾತ್ರಿಗಳನ್ನಷ್ಟೆ ಏನು ಹಗಲುಗಳನ್ನೂ ರಂಗು ರಂಗಾಗಿಸಿದ್ದಾಗ ಅದರ 'ಖರ್ಚಿಗೆ' ಕೊಟ್ಟ ಕುಬೇರರು ಯಾರು ಎಂಬ ನಿಮ್ಮ ಅಸಂಬದ್ಧ ಪ್ರಶ್ನೆಗಳಿಗೆಲ್ಲ ಅವರು ಉತ್ತರಿಸ ಬೇಕಾಗಿಲ್ಲ.

ಅವರು ಈ ನಾಡಿನ ಮುಖ್ಯಮಂತ್ರಿ ಆಗಿದ್ದಾಗಿನ ಸಂದರ್ಭವನ್ನೆ ನೆನಪಿಸಿಕೊಳ್ಳಿ ನೋಡೋಣ? ರಾಜ್ಯ ಆದಷ್ಟು ಸು'ಭಿಕ್ಷ'ವಾಗಿತ್ತು ಅರ್ಧರಾತ್ರಿಯಲ್ಲಿ ಯಾರು ಬೇಕಾದರೂ ಅರ್ಧ ಕ್ವಾಟ್ರು ಹೊಡಕೊಂಡು ನಿರ್ಭಯವಾಗಿ ದಾರಿಗಳಲ್ಲಿ ಸಾಗೋದಷ್ಟೇ ಅಲ್ಲ ಅಕ್ಕಪಕ್ಕದ ಪಬ್-ಬಾರ್'ಗಳಿಗೆ ಮನಸ್ಸು ಬಂದಾಗ ;ಅದು ನಡುರಾತ್ರಿ ಮೂರರ ನಂತರ ಆಗಿದ್ದರೂ ಸರಿಯೆ ಊಟ ಕೊಡಿ (ಬರೀ ಊಟ ಮಾತ್ರ,ತಿಂಡಿ-"ತೀರ್ಥ"?! ಅಲ್ಲ ಮತ್ತೆ!) ಅಂತ ಮೃದುವಾಗಿ ಕೇಳಿ,ಒಂದು ವೇಳೆ ಕೊಡದಿದ್ದರೆ ಮಾತ್ರ ನೇರ ಕಾರ್ಯಾಚರಣೆಗೆ ಇಳಿಯಬಹುದಿತ್ತಲ್ಲ.ಆಗೆಲ್ಲ ಎಷ್ಟು ಶಾಂತಿ ಸಮೃದ್ಧಿಯಿತ್ತು ನಾಡಿನಲ್ಲಿ,ಏನ್ ಕಥೆ! ತಾವು ಅಧಿಕಾರದಲ್ಲಿದ್ದರೂ ತಮ್ಮ ಸ್ವಂತ ಮಗ (ಅಧಿಕೃತ!), ಸಾಕ್ಷಾತ್ ಮುಖ್ಯಮಂತ್ರಿಗಳ ಮಗನೆ ಮುಕ್ಕಾಲು ರಾತ್ರಿ ಮೀರಿದ ಮೇಲೆಯೂ ಅಂತದ್ದೊಂದು ನೇರ ಕಾರ್ಯಾಚರಣೆ ನಡೆಸಿ ನಾಡಿಗೆ ಮಾದರಿಯಾಗಿ ಈ ಸುಭಿಕ್ಷತೆಗೆ ಮರುದಿನದ ಸುದ್ದಿ ಮಾಧ್ಯಮಗಳಲ್ಲೇ ಪುರಾವೆ ಒದಗಿಸಿಕೊಟ್ಟಿದ್ದರು.


ಹಾಗಂತ ಅವರು ಎಂದೂ ಪುತ್ರವ್ಯಾಮೋಹಿ ಆಗಿರಲೇಯಿಲ್ಲ ಮಗನ 'ರಾತ್ರಿ ಖರ್ಚಿಗೆ' ಎಂದೂ ತಮ್ಮ ಕುರ್ಚಿಯ ಬಲದಿಂದ ಹಣ ಕೊಡದೆ ಅದೇನಿದ್ರೂ 'ಅಧಿಕೃತ' ಅನಿತಕ್ಕನ 'ವಿವೇಚನಾ ಕೋಟಾ'ಕ್ಕೆ ಬಿಟ್ಟಿದ್ದರು! ಇಂತಹ ನಾಡಿನ ಭವಿಷ್ಯದ ಹೃದಯಕ್ಕೆ ರೋಗ ವ್ಯಾಪಿಸಿರೋದು ಕನ್ನಡಿಗರ ದುರಾದೃಷ್ಟ ಅಲ್ಲದೆ ಮತ್ತಿನ್ನೇನು? ಅವರಲ್ಲದೆ ಇನ್ಯಾರು ಕೇಳಬೇಕು ನ್ಯಾಯಮೂರ್ತಿ ಸಂತೋಷ್ ಹೆಗ್ಡೇರ 'ರಾತ್ರಿ ಖರ್ಚಿನ' ಮೂಲಗಳ ಬಗ್ಗೆ? ಅವರು ಇದಕ್ಕಾಗಿಯೆ ಆಗ್ರಹಿಸಿ ಇನ್ನೊಮ್ಮೆ ಒಂದೇ ದಿನದಲ್ಲಿ ಮುಗಿಯುವ ತಮ್ಮದೆ ಬ್ರಾಂಡಿನ 'ಅಮರಣಾಂತ ಉಪವಾಸ'ವನ್ನ ಆದಷ್ಟು ಶೀಘ್ರವಾಗಿ ಸಂಘಟಿಸಲಿ...ಆ ಮೂಲಕವಾದರೂ ಹೆಗ್ಡೆ ಖರ್ಚುವೆಚ್ಚದ "ರಹಸ್ಯ"(?!) ಹೊರ ಬೀಳಲಿ ಅನ್ನೋದು ಅವರ ಅಸಂಖ್ಯ ಅಭಿಮಾನಿಗಳ ಮನದಾಳದ ಆಶಯ.ಮೊನ್ನೆ ಮೊನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡ ಆ 'ರಾಧಿಕಾ' ರಮಣ ಶ್ರೀಕೃಷ್ಣನಲ್ಲಿ ಕನ್ನಡಿಗದ್ದು ಕುಮಾರಣ್ಣನ ಆರೋಗ್ಯಕ್ಕಾಗಿ ವಿಹ್ವಲ ಮೊರೆ.

Wednesday, August 24, 2011

ಕಥೆಯೇನು? ಕೊನೆಗಾಣದ ವ್ಯಥೆಯೇನು?!

ಯಡ್ಡಿ ಚಡ್ಡಿ ಹರಿದು ಹೋಗುವ ಎಲ್ಲಾ ಲಕ್ಷಣಗಳು ದಿಟವಾಗುತ್ತಿರುವ ಈ ಹೊತ್ತಿಗೆ...ಅಧಿಕಾರದ ಮದ ತಲೆಗೇರಿದ್ದಾಗ ತಾನು ಸ'ಗಣಿ' ತಿಂದು ಗಬರಿದ ಹಣದಲ್ಲೆ ಒಂದು ಪಾಲು ಖರ್ಚು ಮಾಡಿ ಲೋಕಾಯುಕ್ತದ ಕುಣಿಕೆಯಿಂದ ತಲೆತಪ್ಪಿಸಿಕೊಳ್ಳಲು ಕರಿಕೋಟು ಬೃಹಸ್ಪತಿಗಳ ಆಸರೆಗೆ ಈಗ ಬಾಯಿ ಬಿಡುತ್ತಿರೋದು ಕರುಣಾಜನಕವಾಗಿ ಗೋಚರಿಸುತ್ತಿದೆ.ಆದರೆ ಅದೇನೆ ಆಟ ಹೂಡಿದರೂ...ಅದೆಷ್ಟೇ ಬಿಕಾವು ಬಿಳಿಕೋಟಿನ ವೈದ್ಯರಿಂದ ಖೊಟ್ಟಿ ಅನಾರೋಗ್ಯ ಪ್ರಮಾಣಪತ್ರ ಖರೀದಿಸಿದರೂ ಜೈಲೂಟ ಮಾತ್ರ ಗ್ಯಾರೆಂಟಿ! ಅಂತಹ ಭೀಕರ ದಿನ ಬರಲಾರದೆ ಬಂದಲ್ಲಿ ಕಡೇಪಕ್ಷ ಸರಕಾರಿ ಆಸ್ಪತ್ರೆಯಲ್ಲೆ "ಆಪ್ತಮಿತ್ರ" ಕಟ್ಟಾನ ರೂಂಮೇಟ್ ಆಗೋಣ..ಆಗಲಾದರೂ ನಿತ್ಯ 'ಶೋಭಾ'ಯಮಾನವಾಗಿ ಬರೋ ಮನೆ ಬುತ್ತಿ ಮೆಲ್ಲಬಹುದು ಎಂಬ ಕ್ಷೀಣ ಆಸೆಯೂ ಅವರ ಕಂಡ ಕಂಡಲ್ಲಿ ಕಣ್ಣೀರಿಡುವ ಹೃದಯದ ಮೂಲೆಯಲ್ಲಿರಬಹುದು!


ಆದರೆ ಅವರನ್ನೆ ನಂಬಿ ಕೊಂಡಿರುವ ಅಭಿಮಾನಿಗಳ ಸಂಕಟವೆ ಬೇರೆ.ಅವರೇನಾದರೂ ದುರುದ್ದೇಶಪೂರಿತ ಲೋಕಾಯುಕ್ತ ವರದಿಯ ಬಲಿಪಶುವಾಗಿ (?) ಜೈಲು ಸೇರಿದರೆ ರಸಿಕ'ರೇಣು'ವಿನಂತೆ ಅನಾಥರಾಗುವ ಅವರ ಅಸಂಖ್ಯ "ಮಾನಸಿಕ"(ಅಸ್ವಸ್ಥ) ಪುತ್ರರ ಗತಿಯೇನು? ಐದು ತಿಂಗಳ ನಂತರ ಅವರ ಪುನರಾಗಮನಕ್ಕೆ ಕಾತರದಿಂದ ಕಾಯುತ್ತಿರುವ ಕರುನಾಡಿನ ಸಿರಿ ಗದ್ದುಗೆಯ ಕತೆಯೇನು? ಎಲ್ಲಾದರೂ 'ಪರಪ್ಪನ ಅಗ್ರಹಾರ'ದ ಫಲವತ್ತತೆಯೆ (?) ಅದೃಷ್ಟ ಕೆಟ್ಟು ಅವರಿಗೆ ಬಹಳ ಪಸಂದಾಗಿ ಅದನ್ನೆ ಡಿ-ನೋಟಿಫಿಕೇಶನ್ ಮಾಡಿಸಿ ಕೊಂಡು ಅಲ್ಲೇ ಒಂದು "ಇಟಾಸ್ಕ" ಆರಂಭಿಸುವ "ಪ್ರೇರಣಾ" ಅವರಿಗಾಗಿ ಬಿಟ್ಟರೆ ಅಲ್ಲಿರುವ ಸಾಮಾನ್ಯ ಕಳ್ಳ ಖದೀಮರ-ಬಸ್ಸ್ಟ್ಯಾಂಡ್ ಕಿಸೆಗಳ್ಳರ ಕತೆಯೇನು? ಇವರಿಂದ ಪ್ರೇರಿತರಾಗಿ ರಾಘು,ವಿಜಿ,ಸೋಹನನ ಮುಂದಾಳತ್ವದಲ್ಲಿ ಇವರ ಹಿಂದೆಯೆ ಸಾಲಾಗಿ ಎಲ್ಲಾ ಖಾದಿ ಖೂಳರೂ ಸಾಲಾಗಿ ಅಲ್ಲಿನ ಆತಿಥ್ಯಕ್ಕೆ ಮನಸೋತು ಕಾನೂನಿನ ಒತ್ತಾಯಕ್ಕೆ ಬಲಿಯಾಗಿ ಅಲ್ಲಿಗೆ ಬಂದು ಸೇರಿದರೆ ಅಲ್ಲಿರೊ ಅಸಲು ಖೈದಿಗಳ ವ್ಯಥೆಯೇನು?
(ಗಮನಿಸಿ ಇವರು ಕೇವಲ 'ಆರೋಪಿ' ಅಷ್ಟೆ ಇನ್ನೂ 'ಅಪರಾಧಿ' ಅಲ್ಲ!) ಉತ್ತರ ಕಾಣದ ಇಂತಹ ಸಾವಿರ ಪ್ರಶ್ನೆಗಳಿಂದ ತಲೆ ಮೊಸರು ಗಡಿಗೆಯಾಗಿ ಹೋಗಿದೆ,ಹೀಗೆ ಆದ್ರೆ ನಾನೂ 'ಅಪೋಲೊ' ಸೇರಬೇಕಾಗ್ತದೋ ಏನೊ?!

Sunday, August 21, 2011

ಕಾದು ಕುಳಿತ ಕರುನಾಡಿಗೆ ಇನ್ಯಾರು ಗತಿ?



ಅರ್ಜೆಂಟಾಗಿ ಬಿಪಿ ಏರಿಸಿಕೊಂಡ ಬೂಸಿಯ ಪರಪ್ಪನ ಅಗ್ರಹಾರದ ದಾರಿಯಲ್ಲೆ ಇರುವ 'ಸಾಗರ್ ಅಪೋಲೊ'ದಲ್ಲಿ ತುರ್ತು ಚಿಕಿತ್ಸೆ ಪಡೆದರಂತೆ! ಅವರಿಗೇನಾದರೂ ಆದುಗೀದರೆ ಮುಂದೆ ಐದು ತಿಂಗಳ ನಂತರದ ಅವರ ಪುನರಾಗಮನಕ್ಕಾಗಿ ಕಾತರದಿಂದ ಕಣ್ಣು ಬಿಟ್ಟುಕೊಂಡೆ ಕಾದು ಕೂತ ಬಡ ಕರ್ನಾಟಕದ-ನಿಸ್ಸಹಾಯಕ ಕನ್ನಡಿಗರ ಗತಿಯೇನು? ಎಂದು ಅವರ 'ಮಾನಸಿಕ'ಪುತ್ರ ಎಂ ಪಿ ರೇಣುಕಾಚಾರ್ಯ ಅಲಿಯಾಸ್ 'ರಸಿಕ ಕುಲತಿಲಕ' ರೇಣು ತನ್ನ ಆಪ್ತಸಖಿ ಜಯಲಕ್ಷ್ಮಿಯನ್ನ ಕರಡಿಯಂತೆ ತಬ್ಬಿಕೊಂಡು ಉಮ್ಮಳಿಸಿ ಬಂದ ದುಃಖ ತಡಿಯೋಕಾಗದೆ ಒಂದೇ ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರಿಟ್ಟರಂತೆ!

ಮೊನ್ನೆ ಮೊನ್ನೆಯಷ್ಟೆ ರೇಣುಕನ 'ಮಾನಸಿಕ' ಅಸ್ವಸ್ಥ್ಯತೆಯ ಸೋಂಕನ್ನ ತಾವೂ ತಗುಲಿಸಿಕೊಂಡಂತೆ ಅಣ್ಣಾ ಹಜಾರೆಗೆ ಬಹಿರಂಗ ಬೆಂಬಲ ಸೂಚಿಸಿ,ಆಮೇಲೆ ತಾವು ಕರೆಕೊಟ್ಟ ಪ್ರತಿಭಟನೆಗೆ ತಾವೆ ಬಾರದೆ ತಲೆತಪ್ಪಿಸಿಕೊಂಡು ;ಮರುದಿನ ಈಗಷ್ಟೆ ಇನ್ಸ್ಟೆಂಟ್ ಜ್ಞಾನೋದಯವಾಗಿ ಭೋದಿ ಮರದಡಿಯಿಂದ ಹಾಗ್ಹಾಗೆ ನೇರ ಎದ್ದೊಡಿ ಬಂದವರ ಮುಖಭಾವದಲ್ಲಿ "ಬೀದಿಗಿಳಿದು ಹೋರಾಡೋದು ಸಂವಿಧಾನ ಬಾಹಿರ...ಕಾಯಿದೆಯೇನಿದ್ದರೂ ಸಂಸತ್ತೆ ರೂಪಿಸಬೇಕು" ಎಂಬ ಹಿತವಚನಗಳನ್ನುದುರಿಸಿದ್ದ ಬೂಸಿಯರಿಗೆ ಸದ್ಯಕ್ಕೆ ಕಾಡುತಿರೋದು ಕೇವಲ ಈ ಮಾನಸಿಕ ಅಸ್ವಸ್ಥ್ಯತೆ ಮಾತ್ರವ? ಇಲ್ಲ ಕಟ್ಟಾ ತನ್ನೆಲ್ಲ ಹಲ್ಲು ಬಿಟ್ಟುಕೊಂಡು ತಮ್ಮನ್ನೂ ತಾನಿರುವ ಸ್ವರ್ಗಕ್ಕೆ ತೆರೆದ ತೋಳುಗಳಿಂದ ಆಹ್ವಾನಿಸುತ್ತಿರುವಂತೆ ನಿತ್ಯ ಕೆಟ್ಟ ಕನಸೇನಾದರೂ ಪದೆಪದೆ ಬೀಳುತ್ತಿರೋದೂ ಕೂಡ ಕಾರಣವಿದ್ದೀತ?

'ಲೋಕಾಯುಕ್ತ ತನಿಖೆ'ಗೆ ಸಿಕ್ಕ ಸಮ್ಮತಿ ಹಾಗು 'ಭದ್ರಾ ಮೇಲ್ದಂಡೆ ಅವ್ಯವಹಾರದ' ಸುದ್ದಿ ನಿಧಾನವಾಗಿ ತನ್ನ ರೆಕ್ಕೆ ಚಾಚುತ್ತಿರೋದನ್ನ ನೋಡಿದರೆ ಅವರ ಕರುಣಾಜನಕ ಸ್ಥಿತಿಗೆ ಮರುಕ ಎಲ್ಲೆಲಿಂದಲೊ ಉಕ್ಕಿ ಬರುತ್ತದೆ.ಕ'ಮಲ' ಪಕ್ಷದ 'ಶಿಸ್ತಿನ ಸಿಪಾಯಿಗೆ' ಹೀಗಬಾರದಿತ್ತು,ಅಯ್ಯೋ ಪಾಪ?!

ಕಾದು ಕುಳಿತ ಕರುನಾಡಿಗೆ ಇನ್ಯಾರು ಗತಿ?



ಅರ್ಜೆಂಟಾಗಿ ಬಿಪಿ ಏರಿಸಿಕೊಂಡ ಬೂಸಿಯ ಪರಪ್ಪನ ಅಗ್ರಹಾರದ ದಾರಿಯಲ್ಲೆ ಇರುವ 'ಸಾಗರ್ ಅಪೋಲೊ'ದಲ್ಲಿ ತುರ್ತು ಚಿಕಿತ್ಸೆ ಪಡೆದರಂತೆ! ಅವರಿಗೇನಾದರೂ ಆದುಗೀದರೆ ಮುಂದೆ ಐದು ತಿಂಗಳ ನಂತರದ ಅವರ ಪುನರಾಗಮನಕ್ಕಾಗಿ ಕಾತರದಿಂದ ಕಣ್ಣು ಬಿಟ್ಟುಕೊಂಡೆ ಕಾದು ಕೂತ ಬಡ ಕರ್ನಾಟಕದ-ನಿಸ್ಸಹಾಯಕ ಕನ್ನಡಿಗರ ಗತಿಯೇನು? ಎಂದು ಅವರ 'ಮಾನಸಿಕ'ಪುತ್ರ ಎಂ ಪಿ ರೇಣುಕಾಚಾರ್ಯ ಅಲಿಯಾಸ್ 'ರಸಿಕ ಕುಲತಿಲಕ' ರೇಣು ತನ್ನ ಆಪ್ತಸಖಿ ಜಯಲಕ್ಷ್ಮಿಯನ್ನ ಕರಡಿಯಂತೆ ತಬ್ಬಿಕೊಂಡು ಉಮ್ಮಳಿಸಿ ಬಂದ ದುಃಖ ತಡಿಯೋಕಾಗದೆ ಒಂದೇ ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರಿಟ್ಟರಂತೆ!

ಮೊನ್ನೆ ಮೊನ್ನೆಯಷ್ಟೆ ರೇಣುಕನ 'ಮಾನಸಿಕ' ಅಸ್ವಸ್ಥ್ಯತೆಯ ಸೋಂಕನ್ನ ತಾವೂ ತಗುಲಿಸಿಕೊಂಡಂತೆ ಅಣ್ಣಾ ಹಜಾರೆಗೆ ಬಹಿರಂಗ ಬೆಂಬಲ ಸೂಚಿಸಿ,ಆಮೇಲೆ ತಾವು ಕರೆಕೊಟ್ಟ ಪ್ರತಿಭಟನೆಗೆ ತಾವೆ ಬಾರದೆ ತಲೆತಪ್ಪಿಸಿಕೊಂಡು ;ಮರುದಿನ ಈಗಷ್ಟೆ ಇನ್ಸ್ಟೆಂಟ್ ಜ್ಞಾನೋದಯವಾಗಿ ಭೋದಿ ಮರದಡಿಯಿಂದ ಹಾಗ್ಹಾಗೆ ನೇರ ಎದ್ದೊಡಿ ಬಂದವರ ಮುಖಭಾವದಲ್ಲಿ "ಬೀದಿಗಿಳಿದು ಹೋರಾಡೋದು ಸಂವಿಧಾನ ಬಾಹಿರ...ಕಾಯಿದೆಯೇನಿದ್ದರೂ ಸಂಸತ್ತೆ ರೂಪಿಸಬೇಕು" ಎಂಬ ಹಿತವಚನಗಳನ್ನುದುರಿಸಿದ್ದ ಬೂಸಿಯರಿಗೆ ಸದ್ಯಕ್ಕೆ ಕಾಡುತಿರೋದು ಕೇವಲ ಈ ಮಾನಸಿಕ ಅಸ್ವಸ್ಥ್ಯತೆ ಮಾತ್ರವ? ಇಲ್ಲ ಕಟ್ಟಾ ತನ್ನೆಲ್ಲ ಹಲ್ಲು ಬಿಟ್ಟುಕೊಂಡು ತಮ್ಮನ್ನೂ ತಾನಿರುವ ಸ್ವರ್ಗಕ್ಕೆ ತೆರೆದ ತೋಳುಗಳಿಂದ ಆಹ್ವಾನಿಸುತ್ತಿರುವಂತೆ ನಿತ್ಯ ಕೆಟ್ಟ ಕನಸೇನಾದರೂ ಪದೆಪದೆ ಬೀಳುತ್ತಿರೋದೂ ಕೂಡ ಕಾರಣವಿದ್ದೀತ?

'ಲೋಕಾಯುಕ್ತ ತನಿಖೆ'ಗೆ ಸಿಕ್ಕ ಸಮ್ಮತಿ ಹಾಗು 'ಭದ್ರಾ ಮೇಲ್ದಂಡೆ ಅವ್ಯವಹಾರದ' ಸುದ್ದಿ ನಿಧಾನವಾಗಿ ತನ್ನ ರೆಕ್ಕೆ ಚಾಚುತ್ತಿರೋದನ್ನ ನೋಡಿದರೆ ಅವರ ಕರುಣಾಜನಕ ಸ್ಥಿತಿಗೆ ಮರುಕ ಎಲ್ಲೆಲಿಂದಲೊ ಉಕ್ಕಿ ಬರುತ್ತದೆ.ಕ'ಮಲ' ಪಕ್ಷದ 'ಶಿಸ್ತಿನ ಸಿಪಾಯಿಗೆ' ಹೀಗಬಾರದಿತ್ತು,ಅಯ್ಯೋ ಪಾಪ?!

Friday, August 19, 2011

'ಕನ್ನಡ'ದ ಉಜ್ವಲ 'ಪ್ರಭ'...ಬಾಣಭಟ್ಟ ಕಂಡ ಕಂಡಲ್ಲಿ ತನ್ನ 'ಬಾಣ' ನೆಟ್ಟ?!




ಕಣ್ಣೂ ಬಾಯಿ ಬಿಟ್ಟ ಹಾಗೆ ಬಿಟ್ಟು "ನೋಡ್ತಾ ಇದೀವಿ ಏನೇನ್ ಮಾಡ್ತಿದಾರೆ ಅಂತ!" ಲೋಕವೆ ಜನಲೋಕಪಾಲಕ್ಕೆ ಧ್ವನಿ ಎತ್ತುತ್ತಿರುವಾಗ ಪಿಟೀಲು ಕುಯ್ಯೂ ನೀರೋನ ಹಾಗೆ ಅದೆಲ್ಲೆಲ್ಲಿಗೊ ನೂರೆಂಟು ಬಾಣ ಬಿಟ್ಟುಕೊಂತ ಕೂತಿದ್ದಾರೆ.ಸ'ಗಣಿ'ಯನ್ನ ತಾವೂ ತಿಂದು ಬೂಸಿಯ ಮೂತಿಗೆ ಮಾತ್ರ ಎದ್ದುಕಾಣುವಂತೆ ಮುಖಪುಟದಲ್ಲೇ ನಿತ್ಯ ಘಂಟಾಘೋಷವಾಗಿ ಮೆತ್ತುತ್ತಿದ್ದಾರೆ.ಹೋದಲೆಲ್ಲ ಕತ್ತಲಲ್ಲಿ "ಬೆತ್ತಲೆ ಪ್ರಪಂಚ" ತೋರಿಸ್ತಿದಾರೆ.ಕಂಡಕಂಡಲ್ಲಿ ನೀರ್ ಬಿಡ್ತಿದಾರೆ.ಬಳ್ಳಾರಿ ಕೆಮ್ಮಣ್ಣು ತಿನ್ನೋ ಮಂದಿಯನ್ನೆಲ್ಲ ಎಲ್ಲೆಲ್ಲೊ "ಪ್ರೆಸ್" ಮಾಡಿ ಕೋಟಿಗೆ ಕೇವಲ ಇಪ್ಪತೈದೆ ಲಕ್ಷ ಕಡಿಮೆ ಕಾಸು ಗಿಂಜಿದ್ದಾರೆ.ಆ ಋಣಕ್ಕೆ ಪಾಪ ಅವರಿಗೆ ಸ್ವಲ್ಪ 'ಸಹಾಯ' ಮಾಡಿ ಅಂತ ಪ್ರಾಮಾಣಿಕ ಅಧಿಕಾರಿಗಳ ಮುಂದೆ ಹಲ್ಲುಗಿಂಜಿದ್ದಾರೆ.



ಇಷ್ಟಾಗಿಯೂ ಬೂಸಿಯಗೆ ಬ್ಲಾಕ್ ಮೇಲ್ ಮಾಡಿ ಜಿ ಕೆಟಗರಿಗೆ ಬಕೇಟು ಹಿಡಿದಿದ್ದಾರೆ,ತಮ್ಮ ಚಂಡಾಳ ಶಿಷ್ಯರಿಂದಲೂ ಹಿಡಿಸಿದ್ದಾರೆ.ಏಟ್ರಿಯದಂತಹ ಐಶಾರಮಿ ಲಾಡ್ಜುಗಳಲ್ಲಿ (ಶೋಕಿ ಹೆಚ್ಚಾಗಿದ್ದರು ಅದು 'ಆ' ವಿಷಯಗಳಲ್ಲಿ ಮಾತ್ರ ಅಪ್ಪಟ ಲಾಡ್ಜೆ?!) ಅಕಾಲದಲ್ಲಿ ಅಡ್ಡೆ ಹಾಕಿದ್ದಾರೆ.ಅದರ ಬಿಲ್ವಿದೆಯನ್ನ ಧೂಳು ತಿಂದವರ ಹಾಡಾಲೆದ್ದ ಜೇಬಿಂದಲೇ ಕೊಡಿಸಿ ಗುಡ್ಡೆ ಹಾಕಿದಾರೆ.ಇವರ "ರಾಶಿಚಕ್ರ" ಇವತ್ತಿನ ದಿನಪತ್ರಿಕೆಯೊಂದರಲ್ಲಿ ವಿವರವಾಗಿ ಬಂದಿದ್ದರೂ ತಾವು ಮಾಡಿದ್ದೆ "ಸರೀ ರೀ ಸರಿ" ಅಂಬ ಭಂಡತನವನ್ನೂ ನಾಚಿಕೆ ಬಿಟ್ಟು ಮೆರೆಯುತ್ತಿದ್ದಾರೆ.ನಾಳೆ ಮತ್ತೆ ಗಂಟಲು ಹರಕೊಂಡು 'ಬೆತ್ತಲಾಗುವ' ಇವರ "ನೂರೆಂಟು ತೂತುಗಳು" ಹಾಗ್ಹಾಗೆ ಹೊರ ಬಂದರೂ ಮೂರೂಬಿಟ್ಟು ಆರಾಮಾಗಿ "ನನಗಿದೆ ಇಷ್ಟನೋ" ಅಂತ ಹಲ್ಕಿರೀತಿದಾರೆ! ಇದರ "ಒಳ ಸುರುಳಿ"ಯಾದರೂ ಏನು?

ಕುಯ್ ಕುಯ್ ರಾಗವ ಹಾಡುವರು....



ಕಾಂಗ್ರೆಸ್ 'ಗಾಂಧಿ'ಗಳು ಸಾಕಿದ ಕೆಲವು ಹುಚ್ಚು ನಾಯಿಗಳಿಗೆ ಇವತ್ತು ಅವರ ಅಧಿನಾಯಕಿಯ ಉತ್ತರ "ಕುಮಾರ" ರೇಬೀಸ್ ಚುಚ್ಚುಮದ್ದನ್ನ ತಾನೆ ಸ್ವತಃ ಚುಚ್ಚಿರಬೇಕು.ಯಾಕೊ ಇವತ್ತಿನಿಂದ ಸುಖಾಸುಮ್ಮನೆ ಅವು ಬೊಗಳುತ್ತಿಲ್ಲ.ಆದರೂ ಎಲ್ಲೋ ಮೂಲೆಯೊಂದರಿಂದ "ಅಣ್ಣಾ ಚಳುವಳಿಗೆ ವಿದೇಶಿ ಕುಮ್ಮಕ್ಕು" "ಅಣ್ಣಾ ಅಮೇರಿಕಾದ ಸೀಕ್ರೆಟ್ ಏಜೆಂಟ್" ಎಂಬ ಗುರುಗುಟ್ಟುವಿಕೆ ಕೇಳಿಬರೋದು ಪೂರ್ತಿ ನಿಂತಿಲ್ಲ.ಯಾರಾದರೂ ಪುಣ್ಯವಂತರು-ಪ್ರಾಣಿದಯಾಪರರು ಅವೆಲ್ಲವನ್ನೂ ಹಿಡಿದು ಮತ್ತೊಮ್ಮೆ ಹದಿನಾಲ್ಕು ದಬ್ಬಣ ಚುಚ್ಚಿ,ಹಿಡಿದ ಕೈಯಲ್ಲೇ (ಏನನ್ನ ಹಿಡಿದದ್ದು ಅಂತ ಕೇಳಬೇಡಿ...ಸೆನ್ಸಾರ್ ಸಮಸ್ಯೆಯಿದೆ!) ಜೊತೆಗೆ ಆಪರೇಶನ್ನೂ ಮಾಡಬಾರದ?...ಕಡೇಪಕ್ಷ ದೇಶದ ಹಿತದೃಷ್ಟಿಯಿಂದ!

Thursday, August 18, 2011

ಪಲಾವ್ ತಿಂದು ಪುಕ್ಕಟೆ ಪ್ರತಿಭಟನೆ...ಅಮರಣಾಂತ!



ಬೂ ಸಿ ಯ ಕರೆ ಕೊಟ್ಟ "ಭ್ರಷ್ಟಾಚಾರ ವಿರೋಧಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ"ಕ್ಕೆ ಸ್ವತಹ ಬೂಸಿಯ ಪಿಳ್ಳೆ ನೆವ ತೆಗೆದು ಚಕ್ಕರ್ ಕೊಟ್ಟು ಪರಾರಿಯಾಗಿದ್ದರೂ ಅವರ ಶಿಷ್ಯಗಣ ಗುರುವಾಕ್ಯ ಪರಿಪಾಲನೆಗಾಗಿ ಬೆಳಗ್ಯೆಯೇ ಮನೆಯಲ್ಲಿ ಹೊಟ್ಟೆ ಬಿರಿಯ ಟಿಫನ್ ಮುಗಿಸಿ ಗಾಂಧಿ ಪ್ರತಿಮೆಯ ಮುಂದೆ ತಮ್ಮ ಚೇಲಾ ಪಡೆಗಳೊಂದಿಗೆ ತೇಗುತ್ತಲೇ ಬಂದು ಝಾಂಡಾ ಊರಿಯೆ ಬಿಟ್ಟಿತು...ರಸಿಕ ಚಕ್ರವರ್ತಿ ರೇಣು,ಪೋಲಿ ಪುಟ್ಟ,ಗೋಲ್ ಮಾಲ್ ಗೋಪಾಲಕೃಷ್ಣ,ಓ ಸಿ ವಿಶ್ವನಾಥ,ಉಂಡ್ಫೆನಾಮ ನಿರಾಣಿ,ಸ್ತ್ರೀ ರಾಮಚಂದ್ರೆ ಗೌಡ,ಸರ್ವರ್ ಸೋಮ ಹೀಗೆ ರಾಜ್ಯಕ್ಕೆ ಒಕ್ಕರಿಸಿಕೊಂಡ ಎಲ್ಲಾ ಶನಿಗಳೂ ಅಲ್ಲಿಗೆ ಬಂದು ಎರಡು ಘಂಟೆ ಬೀಡಿ ಸೇದಿ,ಪಾನ್ ಹಾಕಿ ನಡುನಡುವೆ ಚೂರ್ ಕೂಗಿ ಕಡೆಗೆ ಬಂದ ಬಿಟ್ಟಿ ಪಲಾವ್ ತಿನ್ನೋಕೂ ಕಚ್ಚಾಡಿ ಎರಡೆ ಎರಡು ಘಂಟೆಯೊಳಗೆ ತಮ್ಮ ಅಮರಣಾಂತ ಉಪವಾಸವನ್ನ ಖೈದು ಮಾಡಿ ಎಂ ಜಿ ರೋಡಿನ ಬಾರುಗಳತ್ತ ನಗುನಗುತ್ತಲೇ ಹೆಜ್ಜೆ ಹಾಕಿದರು.ಗುಂಪಿನಲ್ಲಿ ಬೀಜದ ಹೋರಿಯಂತೆ ಕಂಗೊಳಿಸುತ್ತಿದ್ದ 'ರಸಿಕ'ರೇಣುವನ್ನ ಹತ್ತಿರಕರೆದು ಅವನ ಅರ್ಜೆಂಟ್ ಅಪ್ಪಾಜಿ ಯಾಕೆ ಬರಲಿಲ್ಲ ಎಂದು ಗುಟ್ಟಾಗಿ ಪ್ರಶ್ನಿಸಲಾಗಿ ;ಅವನು ತನ್ನ ಎಂದಿನ ಗಟ್ಟಿ ಗಂಟಲಲ್ಲೇ "ನೋಡಿ,ಮಾನ್ಯ ಅಪ್ಪಾಜಿ ಯಡಿಯೂರಪ್ಪನವರು ದೊಡ್ಡ ಜನನಾಯಕ.ಒಂದ್ ವೇಳೆ ಅವರೇನಾದ್ರೂ ಇಲ್ಲಿಗೆ ಬಂದಿದ್ರೆ ಇಡೀ ಎಂ ಜಿ ರೋಡು ಟ್ರಾಫಿಕ್ ಜಾಮ್ ಆಗಿ ಜನ ದಿನದ ಬ್ರೆಡ್ಗೆ ಕಣ್ ಕಣ್ ಬಿಡಬೇಕಿತ್ತು?!" ಎಂಬ ಭೀಕರ ಉತ್ತರ ಬಂದದ್ದೆ ಪ್ರಶ್ನಿಸಿದ ನನಗೆ ಮೂರ್ಛೆ ಹೋಗುವಂತಾಯ್ತು....

ಕಳ್ಳರ ಕೈಗೆ ಖಜಾನೆ ಕೀಲಿ ಕೈ...



ಮನೀಶ್ ತಿವಾರಿ-ಕಪಿಲ್ ಸಿಬಲ್ ದ್ವಯ ಕಾಂಗ್ರೆಸ್ ಕಮಂಗಿಗಳಿಂದ ಮತ್ತೊಂದು ಹೊಸ ಸಂಶೋಧನೆಯಾಗಿದೆ.ಈ ಇಬ್ಬರು ಜೇಮ್ಸ್ ಬಾಂಡ್ ಗಳ ಪ್ರಕಾರ "ಅಣ್ಣಾ'ಬ್ರಾಂಡ್ ಚಳುವಳಿಗೆ 'ವಿದೇಶಿ'(!) ಕೈವಾಡದ ಹುನ್ನಾರ ಪೂರಿತ ನೆರವು ಇದೆ! ಇದೆಲ್ಲ ಅಮೇರಿಕದ ಪಿತೂರಿ (ಸದ್ಯ ಪಾಕಿಸ್ತಾನದ ಪಿತೂರಿ ಅನ್ನಲಿಲ್ಲ!),ಅಣ್ಣಾ ಹಜಾರೆ ಅಮೇರಿಕಾದ ಸೀಕ್ರೆಟ್ ಏಜೆಂಟ್?! ಅವರ ಪೂರ್ತಿ ವಿದೇಶಿ ಅಧಿನಾಯಕಿ-ನಾಮ ನಿಮಿತ್ತ 'ಗಾಂಧಿ' ಅನಾರೋಗ್ಯಕ್ಕೆ ಚಿಕಿತ್ಸೆಯ ನೆಪದಲ್ಲಿ ಅಮೇರಿಕದಲ್ಲೆ ತಿಂಗಳಿಂದೀಚೆಗೆ ಠಿಕಾಣಿ ಹೂಡಿರೋದರಿಂದ ಆಕೆಯೂ ಈ ಹುನ್ನಾರದಲ್ಲಿ ಪಾಲ್ಗೊಂಡಿರಬಹುದೇ? ಎಂಬ ಜರೂರು ಪ್ರಶ್ನೆಗೆ ಇನ್ನೂ ಈ ಪತ್ತೆದಾರ ಪುರುಷೋತ್ತಮನ ತುಂಡುಗಳು ಉತ್ತರಿಸಿಲ್ಲ ಅಥವಾ ಹೊಸಕಥೆ ಹೇಳುವಾಗ ಅದು ಮರೆತೇ ಹೋಗಿದೆ.ಅಲ್ಲದೆ ಆಕೆ ಕಳೆದ ಐದುವರ್ಷದಲ್ಲಿ ದೇಶವನ್ನೆ ದೋಚಿದ ಕಪ್ಪುಹಣವನ್ನ ದೇಶದಿಂದ ಹೊರಗೆ ಸ್ಮಗ್ಲಿಂಗ್ ಮಾಡೋಕೆ ಅನಾರೋಗ್ಯದ ನೆಪದಲ್ಲಿ ಗಪ್ ಚುಪ್ಪಾಗಿ ಕಳ್ಳರಂತೆ ಸುದ್ದಿಯನ್ನೆ ಮಾಡದೆ ಅಮೆರಿಕಕ್ಕೆ ಓಡಿ ಹೋಗಿರುವ ಗುಮಾನಿಯೂ ದಟ್ಟವಾಗಿದೆ.ಈ ಬಗ್ಗೆಯೂ ಈ ಸಿಐಡಿ ೯೯೯ರದ್ದು ದಿವ್ಯ ಮೌನ!

ಇನ್ನು ನರಸತ್ತ ಮಾನವನ ಪಳಯುಳಕೆಯಂತಿರುವ ಪ್ರಧಾನಿ ಎಂಬ ಆರೋಪ ಹೊತ್ತ ಮನಮೋಹನ ಸಿಂಗ ಬೆಳ್ಳಿ ಮೂಡುವ ಮೊದಲೆ ಅಣ್ಣಾ ಅರೆಷ್ಟ್ ಮಾಡಿಸಿ ಒದ್ದು ಒಳಗೆ ಹಾಕುವ ಸನ್ನಾಹದಲ್ಲಿದ್ದಾಗ ಪಕ್ಷದ ಹೆಸರಿಗೆ ಕೆಸರು ಬೀಳ್ತಿರೋದನ್ನ ಕಂಡು ಕಕ್ಕಾಬಿಕ್ಕಿಯಾದ ಅರೆ'ವಿದೇಶಿ' ರಾಜಕುಮಾರ 'ಗಾಂಧಿ'ಯ ಅಪ್ಪಣೆ ದೂರವಾಣಿ ಮೂಲಕ ಬಂದ ನಂತರ ಮಲ್ಲಗೆ ಕಳ್ಳನ ಹಾಗೆ ಅಣ್ಣಾ ರನ್ನ ಒಳ ಕೂಡಿದಷ್ಟೇ ಸುಲಭವಾಗಿ ಹೊರ ತಳ್ಳಲೂ ನೋಡಿ ಅದೂ ಆಗದೆ ಹತಾಶರಾಗಿ ;ಮೈ ಪರಚಿ ಕೊಳ್ಳುವಂತಾದಾಗ ಅರ್ಜೆಂಟ್ ಮತಿಭ್ರಮಣೆಗೆ ಒಳಗಾದಂತೆ ಸಂಸತ್ತಿನಲ್ಲಿ ಬಡಬಡಿಸಿದರು.ಇನ್ನು ವಿರೋಧಪಕ್ಷದ ಅವಕಾಶವಾದಿ ಅಧಿನಾಯಕಿ ಹೇಳಿದ್ದು ಕೇಳಿ ಎಲ್ಲಿಂದ ನಗಬೇಕು ಅನ್ನೋದು ಶ್ರೀಸಾಮಾನ್ಯನಿಗೆ ಗೊತ್ತೇ ಆಗಲಿಲ್ಲ."ಕಾನೂನು ರೂಪಿಸೋಧು ಸಂಸತ್ತಿನ ಪರಮಾಧಿಕಾರ,ನಮಗ್ಯಾರೂ ಬುದ್ಧಿ ಹೇಳಬೇಕಿಲ್ಲ ;ನಾಗರೀಕರನ್ನ ಕೇಳಿ ಕಾನೂನು ರೂಪಿಸ ಬೇಕಂತಿಲ್ಲ (ಕೋಳಿ ಕೇಳಿ ಮಸಾಲೆ ಅರೀಬೇಕಂತಿಲ್ಲ ಅನ್ನೋ ಧಾಟಿ)" ಅನ್ನೋ ಆಕೆಯ ಅಹಂಕಾರದ ನುಡಿಗೆ ಮೇವುಗಳ್ಳ ಲಾಲೂ,ದೇಶನಿಷ್ಠೆಯೇ ಅನುಮಾನಾಸ್ಪದವಾಗಿರುವ ಕಮ್ಯುನಿಷ್ಟರ ನಾಯಕ ಗುರುದಾಸ್ ದಾಸಗುಪ್ತ ಮುಂತಾದ ಗಂಟು ಕಳ್ಳರ ಪಕ್ಕವಾದ್ಯ ಬೇರೆ.ಅಲ್ಲ ಸ್ವಾಮಿ ನಮ್ಮ ಪರವಾಗಿ ಕಾನೂನು ರೂಪಿಸಿ ಅಂತ ನಿಮ್ಮನ್ನ ಅಲ್ಲಿಗೆ ಕಳಿಸಿದ್ದೆ ಹೊರಟು ನಿಮ್ಮ ಖಜಾನೆ ತುಂಬುವ ಹಿತಾಸಕ್ತಿಗಳೇ ಭಾರಪೂರವಾಗಿರುವ ಫಾರ್ಮಾನು-ಫತ್ವಾಗಳನ್ನ ಹುಲು ನಾಗರೀಕರ ಮೇಲೆ ಹೆರೋದಕ್ಕಲ್ಲ ಎಂತ ಅವರ ಜುಟ್ಟು ಹಿಡಿದು ಬೇಕಿದ್ದರೆ ನಾಲ್ಕು ಒದ್ದು ಹೇಳುವ ನಾಯಕರು ಇಂದು ದೇಶಕ್ಕೆ ಬೇಕಾಗಿದ್ದರೆ.ಅಣ್ಣಾ ಅಂತವರಲ್ಲೊಬ್ಬರು ಅನ್ನೋದು ನಮ್ಮ ಸುದೈವ.ಇಂತಹ ಪ್ರಜಾಪ್ರಭುತ್ವವೆಂಬ ನಕಲಿ ಸಂತೆಯ ಅಸಲು ಗಂಟುಕಳ್ಳರ ಕೈಗೆ ದೇಶದ ಚುಕ್ಕಾಣಿ ಕೊಟ್ಟು ಈಗ ಬಾಯಿಬಾಯಿ ಬಡಿದುಕೊಳ್ಳುತ್ತಿರುವ ನಾವೆ ಅಸಲು ಕಮಂಗಿಗಳು ಅನ್ನೋದರಲ್ಲಿ ಸಂಶಯವೆ ಉಳಿದಿಲ್ಲ!

ಕೆ(ಕ)ಟ್ಟಾ ಮೇಲೆ ಬುದ್ಧಿ ಬಂತು..!



ಕಡೆಗೂ ಬೂ ಸಿ ಯ ಕಾಟದಿಂದ ಬಾಪೂಜಿ ಪಾರಾಗಿದ್ದಾರೆ! ಗಾಂಧೀ ಮೂರ್ತಿಯೆದುರು ಭ್ರಷ್ಟಾಚಾರ ವಿರೋಧಿಸಿ ಧರಣಿ ಕೂರುವ ತಮ್ಮ ಅದ್ಭುತ ( ಅವರ "ಮಾನಸಿಕ ಪುತ್ರ" 'ರಸಿಕ' ರೇಣು ಕೊಟ್ಟ ಅದ್ಭುತ ಐಡಿಯಾನೆ ಇದಾಗಿರಬಹುದ ಅನ್ನೋ ಗುಮಾನಿ ನನಗೆ! ) ಆಲೋಚನೆಯಿಂದ ಹಿಂದೆಸರಿದು ಇದೂ ತಮ್ಮ ಇನ್ನೊಂದು ಬೂಸಿ ಅನ್ನೋದನ್ನ ಸ್ವಯಂ ಸಾಬೀತು ಪಡಿಸಿದ್ದಾರೆ.ಹಿಂದೆ ಸರಿಯಲು ಇರೋ ಕಾರಣ ಮಾತ್ರ ಇನ್ನೂ ನಿಗೂಢ! ಬಹುಷಃ ತಮ್ಮ 'ಜಿಗರ್ ಕಾ ತುಕುಡ' ಕಟ್ಟಾ ಪರಪ್ಪನ ಅಗ್ರಹಾರದ ಗೆಸ್ಟ್ ಹೌಸಿಗೆ ಮೊದಲೆ ಹೋದವ ತಮಗೂ ಪಕ್ಕದ ಸೆಲ್ ಬುಕ್ ಮಾಡಿಸಿ ಅದನ್ನ ಕಸ ಹೊಡೆದು ಕ್ಲೀನ್ ಮಾಡಿ ಇಟ್ಟು ತಮಗಾಗಿಯೇ ಕಾದು ಕೂತಂತೆ ನೆನ್ನಿನಿರುಳು ಕೆಟ್ಟ ಕನಸೇನಾದರೂ ಬಿದ್ದಿರಬಹುದ?! ಪಾಪ ಧರ್ಮಸ್ಥಳದ ಮಂಜ ಗಾಂಧೀಜಿಯಷ್ಟು ಪುಣ್ಯವಂತನಾಗಿರ್ಲಿಲ್ಲ,ಸರ್ಕಾರಿ ಆಣೆಗೆ ಅನಿವಾರ್ಯ ಸಾಕ್ಷಿಯಾಗಿ ಸಿಕ್ಕಿ ಬಿದ್ದು ಹಡಾಲೆದ್ದು ಹೋಗಿದ್ದ ನತದೃಷ್ಟನಾಗಿದ್ದನವ!

Wednesday, August 17, 2011

ನಗಲಾರದೆ ಅಳಲಾರದೆ...


"ನಾಳೆ ಮಹಾತ್ಮಗಾಂಧಿ ಪ್ರತಿಮೆ ಬಳಿ ಹತ್ತಾರು ಸಾವಿರ ಜನರ ಸೇರಿಸಿ,ಅಣ್ಣಾ ಹಜಾರೆಯವರ ಜನಲೋಕಪಾಲಕ್ಕೆ ತುಂಬು ಹೃದಯದ ಬೆಂಬಲ ಸೂಚಿಸಿ ಪಕ್ಷಾತೀತವಾದ ಹೋರಾಟ ಮಾಡಲಾಗುವುದು!" ಅಂದಿದ್ದಾರೆ ಮಾಜಿ ಮುಖ್ಯ'ಕಂತ್ರಿ' ಬೂ ಸಿ ಯ! (ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ.ಇದೂ ಒಂದು ಅವರ ಹೊಸ ಬೂಸಿಯೇ.ಅಲ್ಲಾ ಅಬಲೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಉಮೇಶ್ ರೆಡ್ಡಿ ಧರಣಿ ಕೂತರೆ...ಸರಣಿ ಮಹಿಳ ಅತ್ಯಾಚಾರ ವಿರೋಧಿಸಿ ಚಾರ್ಲ್ಸ್ ಶೋಭರಾಜ್ ಉಪವಾಸ ಕೂತರೆ...ಭೂಮಿ ಡೀನೋಟಿಫಿಕೇಶನ್ ವಿರೋಧಿಸಿ ಸ್ವಂತ(?) ಮಗನೊಂದಿಗೆ ಕಟ್ಟಾ ನಾಯ್ಡು ಸರಕಾರದ ವಿರುದ್ಧ ಸಮರ ಸಾರಿದರೆ ಆಗಬಹುದಾದ ಕೆಕರುಮೆಕರು ಕನ್ನಡಿಗರಿಗಾಗುತ್ತಿದೆ.ಇದೇನು ಅಕಾಲದಲ್ಲಿ 'ಹಾಸ್ಯೋತ್ಸವ"?! ಆಣೆ ಹಾಕೊ ದಿವಸ ಧರ್ಮಸ್ಥಳದಿಂದ ಮಂಜುನಾಥ ತಲೆ ತಪ್ಪಿಸಿಕೊಂಡು ಓಡಿ ಹೋದ ಹಾಗೆ ನಾಳೆಗೆ ಬೆಚ್ಚಿಬಿದ್ದು ಗಾಂಧಿಯೂ ಕೋಲೂರಿಕೊಂಡು ಇವತ್ತು ರಾತ್ರಿಯೇ ಓಡಿ ಹೋಗಿ ಬೂಸಿಯ ಕೈಯಿಂದ ಬಚಾವಾಗುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ...

Monday, August 15, 2011

ಮನಸು ಉತ್ತ ನೆನಪಿನ ಜಾಡಿನಲ್ಲೆಲ್ಲ ...

ಕನಸಿನ ಕರಿ ಮೋಡಗಳು
ನುಂಗಿ ಮರೆಮಾಚಿದ ಕಾಮನಬಿಲ್ಲಿನಲ್ಲಿ....
ನನ್ನ ಒಲವ ಬಣ್ಣಗಳೂ ಇದ್ದವು,
ನಿನ್ನ ಮನಸಿನ ಆಕರ್ಷಣೆ ಅವನ್ನು ಅರಿವಿಲ್ಲದಂತೆ ಕದ್ದಿದ್ದವು/
ಕಣ್ಣಲ್ಲಿ ಪ್ರತಿಫಲಿಸಿದ ಕನಸಿನ ಮಳೆಬಿಲ್ಲಿನ ಸಪ್ತ ವರ್ಣಗಳು
ಮತ್ತೆ ಒಂದಾಗಿ ಕನಸಿನ ಮೋಡದಲ್ಲಿ ಲೀನವಾದವು,
ಮನಸಿನ ತಲೆಬಾಗಿಲಲಿ
ಬಿದ್ದ ನಿನ್ನ ಹೆಸರಿನ ಹೂರಂಗೋಲಿ...
ಬಾಡದಂತೆ ನಿತ್ಯ ಕನಸು ಹೊಸ ಹೂಗಳ ತಂದಲ್ಲಿ ಸುರಿಯುತಿದೆ
ಮೌನವಾಗಿ ಅನುಕ್ಷಣ ನಿನ್ನನೆ ಅದು ಕರೆಯುತಿದೆ//



ನೋವಿನ ಸಾಗರದಾಚೆಗೆ
ಒಂದು ಸಂತಸದ ತೀರವಿದೆ...
ನೋವಿನ ತೊರೆಗೂ ಮೇಲೆ ನಲಿವಿನ ಪಾರವಿದೆ,
ನೀ ಬಂದರೆ ಬಾಳು ಸಂಭ್ರಮಿಸೋದು ಅಪಾರವಿದೆ/
ಸಂಶಯವಿಲ್ಲದೆ ಮನ ಮಾರ್ನುಡಿದ
ನಿನ್ನ ಹೆಸರಿನ ಹಿಂದೆ ನನ್ನವೆ ಆದ ಖಾಸಗಿ ಖುಷಿಗಳ ನಲಿವಿದೆ...
ಮೌನ ಎದೆ ಮಿಡಿತದ ಅವ್ಯಕ್ತ ಒಲವಿದೆ//


ಮನದ ಮನೆಯ ಹೊಸಿಲು ದಾಟಿದ ಭಾವಗಳು
ಬಂಧನದ ಹಂಗಿಲ್ಲದೆ ಸ್ವಚ್ಚಂದವಾಗಿ ವಿಹರಿಸುವಾಗ...
ಅದರ ಮೇಲೆ ಬಿದ್ದ ಒಲವ ಮಳೆ ನಿನ್ನೆದೆಯಲ್ಲಿ ಕಟ್ಟಿದ್ದ ಮೋಡಗಳದ್ದು,
ಕಣ್ಣೀರ ಹನಿಯೆಲ್ಲ ನಿನ್ನ ನೆನಪಿಗೆ ಹೊಳೆದಾಗ....
ಹರಿದಾಗ ನಾನೇಕೆ ಅಳಲಿ?
ಎದೆಯ ಪ್ರಾರ್ಥನೆ ಇದಿಷ್ಟೆ
ಮನಸೆಲ್ಲ ನಿನ್ನುಸಿರ ನೆನಪೆ ತುಂಬಿರಲಿ/
ಮುಗಿಲೆಲ್ಲ ಬರಿದಾಗಿ ಕನಸ ತಾರೆ ಮೂಡದೆ
ಎದೆಯೆಲ್ಲ ಬರಡಾಗಿ ನಿನ್ನ ಒಲವ ಕಾಣದೆ...
ಎದೆ ಪಿಸು ನುಡಿದ ಆಕಾಂಕ್ಷೆಗಳ ಹರಕೆಗಳೆಲ್ಲ,
ಒಂದೊಂದಾಗಿ ಕನಸಿನರಮನೆಯ ಹೊಸ್ತಿಲು ದಾಟಿದವು
ನಿನ್ನೆದೆ ವಿಳಾಸದ ಕರೆಗಂಟೆ ತಂತಿ ಮೀಟಿದವು//



ಹೇಗೆ ಹೇಳಿದರೂ ಭಾವಗಳ ಬಯಕೆ ಬದಲಾಗೊಲ್ಲ
ಮನಸಿನ ರಾಗಗಳ ಲಯ ಬೇರೆ ಮೂಡೋಲ್ಲ....
ಬದುಕು ಒಂದೆ,
ಹಾಗೇನೆ ಬದುಕಲ್ಲಿ ಬಂದ ನೀನೂನು!/
ಮನಸಿನ ಬಳ್ಳಿ ನಿನ್ನ ನಗುವಿನ ಗೊಬ್ಬರದಾಸರೆ ಸಿಗದೆ
ಬರಗಾಲಕ್ಕೆ ಸಿಕ್ಕ ತೆಂಗಿನಂತೆ ಸೊರಗಿ ಹೋಗಿದೆ....
ಮನಸು ಉತ್ತ ನೆನಪಿನ ಜಾಡಿನಲ್ಲೆಲ್ಲ
ಕನಸಿನ ಬೀಜಗಳನ್ನೆ ಬಿತ್ತಿ...ನೆಮ್ಮದಿಯ ಚಿಗುರನ್ನ ಕಾಣುವ ನನ್ನ ಹಂಬಲ,
ನಿನ್ನ ಸಮ್ಮತಿಯಿಲ್ಲದೆ ಕರಗಿ ಹೋಗಿದೆ//

ನಿನ್ನೊಂದು ನಗುವ ಕದ್ದು....




ಸಾಲು ಕನಸುಗಳ ನಡುವಿನಿಂದ
ಬೇರೆ ಸರಿದ ನಿನ್ನೊಂದು ಕನಸು...
ನನ್ನ ಇರುಳ ತುಂಬಾ ಸಂತಸದ ಮುತ್ತುಗಳ ಸುರಿದು
ಮತ್ತೆ ಅದೆ ಸಾಲಿನಲ್ಲಿ ಸೇರಿ ಲೀನವಾಯ್ತು/
ಮೆಲ್ಲಗೆ ಮನಸಿನಂಗಳ ದಾಟಿದ
ಮೋಹಕ ಕನಸು....
ಭಾವಗಳ ಹೂ ತೋಟದಲ್ಲಿ
ನಿನ್ನ ಮೊಗವರಳಿಸಿಕೊಂಡ ಸುಮಕ್ಕಾಗಿ,
ಸುಮ್ಮನಾದರೂ ಹುಡುಕುತ್ತಲೆ ಇದೆ//


ಕವಿತೆಗಳೆಲ್ಲ ಕೇವಲ ನಿರ್ಜೀವ ಪ್ರತೀಕ
ಮನದ ಮಾತಿಗೆ ಇಷ್ಟೆ ಎಂದು ಬೇಲಿ ಹಾಕಲಸಾಧ್ಯ!....
ಇದು ಹರಿವ ತೊರೆ,
ಬೀಸುವ ತಂಗಾಳಿ...ಕೇವಲ ಕೆಲ ಪದಗಳ .ಹಿಡಿತಕ್ಕೆ ಸಿಗದಷ್ಟು ಅಭೇದ್ಯ!/
ಕನಸು ಬಿತ್ತಿದ ಸಾಲುಗಳೆಲ್ಲ ಕವನಗಳಾಗಿ
ಮನಸು ಕೆತ್ತಿದ ಬರಿ ಮಾತುಗಳೆಲ್ಲ ಎದೆಬೇನೆಯ ಶಮನಗಳಾಗಿ...
ಬಾಳು ಖುಷಿ-ಕಣ್ಣೀರಿನ ನಾವೆಯಲ್ಲಿ
ಮೌನವಾಗಿ ತೇಲುತಿದೆ//



ವಿಶ್ವಾಸ ಕುದುರದ ಮೇಲೆ ಪರಸ್ಪರ
ಅಪನಂಬಿಕೆಯೆ ಆಗಿರುವಾಗ ಬೆಟ್ಟ...
ಸ್ವಾತಂತ್ರ್ಯಕ್ಕಿಂತ ಪರತಂತ್ರವೆ ಹಿತವಾಗಿದ್ದಂತೂ ದಿಟ...!
ಎಲ್ಲಿದ್ದರೇನು,
ನೀ ಹೇಗಿದ್ದರೇನು...
ಅಲಿಯುತ್ತಿರು ಹೀಗೆ ಯಾವುದೊ ದಿಕ್ಕೇ ಗೊತ್ತಿಲ್ಲದ ಪರದೇಶ
ಬದಲಾದೀತೆನು ನಿನ್ನ ಭಾರತೀಯ ನಡೆ-ನುಡಿ-ವೇಷ?/
ನಾ ಕನಸುಗಳನ್ನ ಗಾಳಿಯಲ್ಲಿ ತೇಲಿ ಬಿಟ್ಟಾಗ
ನಿನ್ನೆದೆ ಕಿಂಡಿಯನ್ನು ಮರೆಯದೆ ತೆರೆದಿಡು......
ಅವಕ್ಕೂ ನಿನ್ನ ಮನಸಲ್ಲೇ ತಾವುಬೇಕು//



ನೀನೊಮ್ಮೆ ಮರಳಿ ಬಂದರೆ ತುಂಗೆಯಲ್ಲಿ ತೇಲುತ್ತ ಹರಿಯೋಣ
ಒಲವಿನ ಸವಿ ಮಾತನ್ನೆಲ್ಲ ಮುಗಿಲಂಚಲ್ಲಿ ಬರೆಯೋಣ...
ನಿನ್ನೊಂದು ನಗುವ ಕದ್ದು
ನಾ ಪೋಣಿಸಿದ ಈ ರಾಗ ಇನ್ಯಾವುದೆ ಮಾಧುರ್ಯಕ್ಕಿಂತಲೂ....ಬಲು ಇಂಪು,
ನಿನ್ನ ನೆನಪಿನ ಎಳೆಗಳಿಂದಲೆ ನೇಯ್ದ ನನ್ನ ಕನಸಿನ ಕುಲಾವಿಯ ತುಂಬೆಲ್ಲ....
ನಿನ್ನುಸಿರನದೆ ನರುಗಂಪು/
ಥಟ್ಟನೆ ಹೊರಟ
ನಿಂತ ನೀರಾಗಿದ್ದ ನನ್ನ ಬಾಳ ಬಂಡಿಗೆ....
ನಿನ್ನ ಒಲವ ಇಂಧನವೇ ಮೂಲಾಧಾರ,
ಆತ್ಮ ನಿವೇದನೆ ಅನ್ನು
ನೋವಿನ ಅನಾವರಣ ಅನ್ನು...
ನಿನ್ನ ಮಾತೆತ್ತದೆ ನನ್ನ ನಾಲ್ಕು ಸಾಲುಗಳಿಗೆ ವಿರಮಿಸಿ ಗೊತ್ತಿಲ್ಲ
ಎದೆಯಲ್ಲಿ ನಿನ್ನುಸಿರಷ್ಟು ಬೆಚ್ಚನೆ ಭಾವಗಳನ್ನು ಇನ್ಯಾರು ಬಿತ್ತಿಲ್ಲ//

ವಿಧಿ ವಿಪರೀತ...!





ನೆನ್ನೆ ದೇಶದಾದ್ಯಂತ ನಡೆದ ಸ್ವಾತಂತ್ರ ದಿನದ ಆಚರಣೆಯನ್ನ ಗಮನಿಸಿದಾಗ ಇದೊಂತರ ಅಂಗವಿಕಲ ಮಗುವಿಗೆ ಸಿಂಗಾರ ಮಾಡಿ ಮುದ್ದಿಸಿದಂತೆ ಕಾಣಿಸಿತು.ಮಗುವಿಗದರಿಂದ ಸುಖವಿಲ್ಲ ;ಮುದ್ದಿಸೋ ಮಂದಿ ಬಿಡೋಲ್ಲ.ಒಟ್ಟಿನಲ್ಲಿ ಮಗುವಿಗೆ ಭರ್ತಿ ಹಿಂಸೆ ಹೀಗಿತ್ತು...ಏನೋ ಒಂಥರಾ 'ಡ್ರೈ' ಸರಕಾರಿ ಆಚರಣೆ.

ಯಾವೊಬ್ಬ ನಾಗರೀಕನೂ ಮನಸಪೂರ್ತಿ ಸಂಭ್ರಮಿಸಿ ಸ್ವಯಂ ಸೂರ್ತಿಯಿಂದ ಪಾಲ್ಗೊಳ್ಳದ ಈ ಸರಕಾರಿ ಸಂಭ್ರಮದಲ್ಲಿ ಮುಖ್ಯ-ಪ್ರಧಾನ "ಕಂತ್ರಿಗಳು" ಧ್ವಜಾರೋಹಣ ಮಾಡುತ್ತಿದ್ದರೆ ಅವರ ಒತ್ತಾಯದ ಭಾಷಣ ಭೀಕರತೆಗೆ ಬಲಿಯಾದದ್ದು ಅನಿವಾರ್ಯ ಪ್ರೇಕ್ಷಕರಾದ ಶಾಲಾ ಮಕ್ಕಳು! ಡೆಲ್ಲಿಯಲ್ಲಂತೂ ಪರಿಸ್ಥಿತಿ ಇನ್ನೂ ಕರುಣಾಜನಕವಾಗಿತ್ತು,ಬಾಲವಿಲ್ಲದ (ಸ್ವಂತ ಬಲದ ಮೇಲೆ ನಾಲ್ಕು ಮಾತಾಡುವ ಬಲವೂ ಇಲ್ಲ!) ಸಿಂಗ ಅದ್ಯಾರೋ ಬರೆದು ಕೊಟ್ಟ ಭಾಷಣ ಕುಟ್ಟುತ್ತಿದ್ದರೆ ಅಪರೂಪಕ್ಕೆ ಎಡೆಬಿಡದೆ ಸುರಿದ ದೆಹಲಿ ಮಳೆಯಲ್ಲಿ ಒತ್ತಾಯದಿಂದ ಕೂಡಿ ಹಾಕಲ್ಪಟ್ಟ ಮಕ್ಕಳೆಲ್ಲ ಕಂಗಾಲಾಗಿದ್ದವು.ಒಂದೆಡೆ ಮುಗಿಲ ಮಳೆ-ಇನ್ನೊಂದೆಡೆ ಅದಕ್ಕಿಂತಲೂ ಭೀಕರವಾದ ಭಾಷಣದ ಮಳೆ! ಮಕ್ಕಳು ನಿಜಕ್ಕೂ ತೋಯ್ದು ತೊಪ್ಪೆಯಾಗಿದ್ದವು.

ಸುತ್ತಲೂ ಭ್ರಷ್ಟಾಚಾರ-ಜಾತೀಯತೆ-ಹೊಲಸು ರಾಜಕೀಯ-ಸ್ವಜನ ಪಕ್ಷಪಾತ ಸಾಮಾನ್ಯ ಜನರನ್ನ ಹತಾಶರನ್ನಾಗಿಸುತ್ತಿರುವಾಗ ಈ ಹುಸಿ ಆಚರನೆಗಳನ್ನ ಸಾರ್ವಜನಿಕ ಖಜಾನೆಯ ಖರ್ಚಿನಲ್ಲಿ ನಿಜಕ್ಕೂ ನಡೆಸಲೇ ಬೇಕ? ಪ್ರಜಾಪ್ರಭುತ್ವ ಶ್ರೇಷ್ಠ ಅಂದ ಮಾತ್ರಕ್ಕೆ ಅದರಲ್ಲಿ ಅಹಿತಕಾರಿ ಅಂಶಗಳೇ ಇಲ್ಲ ಅಂತೇನಿಲ್ಲ.ಬ್ರಿಟನ್ ನಲ್ಲಿ ಇತ್ತೀಚಿಗೆ ಭುಗಿಲೆದ್ದ ನಾಗರೀಕ ದಂಗೆಯೆ ಅದಕ್ಕೆ ಸಾಕ್ಷಿ,ಇಂದು ಬ್ರಿಟನ್-ನಾಳೆ ಖಂಡಿತ ಭಾರತ.

ಇದಕ್ಕೆಲ್ಲ ತುಪ್ಪ ಸುರಿಯುವಂತೆ ಸರಕಾರ ಇಂದು ಸ್ವಯಂ ಸ್ಪೂರ್ತಿಯಿಂದ ದೇಶದ ಬಹುಪಾಲು ಮಂದಿ 'ಜನ ಲೋಕಪಾಲಕ್ಕೆ' ಆಗ್ರಹಿಸಿ ಅಣ್ಣಾಹಜಾರೆಯ ನೇತೃತ್ವದಲ್ಲಿ ಎಬ್ಬಿಸಿರುವ ಶಾಂತ ಸಮರ ಕಹಳೆಗೆ ದಬ್ಬಾಳಿಕೆಯ ಉತ್ತರ ಕೊಟ್ಟಿದೆ.ಜನ ಮೆಚ್ಚಿದ್ದು ಸರಕಾರಕ್ಕೆ ಬೇಡ-ಸರಕಾರಕ್ಕೆ ಹುಚ್ಚಿರೋದರಲ್ಲಿ ಜನಕ್ಕೆ ಯಾವ ಆಸಕ್ತಿಯೂ ಇಲ್ಲ! ಇನ್ನು ಆಳುವ ಪಕ್ಷದ ಸಾಕಿದ ನಾಯಿಗಳಂತಹ ಮನೀಶ್ ತಿವಾರಿ,ದಿಗ್ವಿಜಯ್ ಸಿಂಗ್,ಅಭಿಷೇಕ್ ಮನು ಸಿಂಘ್ವಿಯಂತಹ ಮಂಗ್ಯಾಗಳು ಅಣ್ಣಾ ಸಾಚಾತನ-ಅವರ ಹೋರಾಟಕ್ಕೆ 'ವಿದೇಶಿ' (?) ಕುಮ್ಮಕ್ಕು,ಧನಸಹಾಯದ ಸ್ವಕಲ್ಪಿತ ಸುದ್ದಿಯನ್ನೆ ಪದೆಪದೆ ಊಳಿಟ್ಟು ತಮ್ಮ ಅರ್ಧ 'ವಿದೇಶಿ' ನಾಳಿನ ನಾಯಕನ ಕಾಲನ್ನ ಇವತ್ತೆ ನೆಕ್ಕುತ್ತ ತಮ್ಮದೆ ಧಾಟಿಯಲ್ಲಿ ಓಲೈಸುವ ಕಸರತ್ತು ನಡೆಸುತ್ತಿದ್ದಾರೆ.

ಕ್ಯೂ ನಾ ಹೋ ಮೇರ ಭಾರತ್ ಮಹಾನ್...

Saturday, August 13, 2011

ಯಾರಿಗೆ ಬಂತು? ಎಲ್ಲಿಗೆ ಬಂತು?





ಸ್ವಾತಂತ್ರ ಯಾರಿಗೆ ಬಂದಿದೆ? ಎಂದು ಮುಂಜಾನೆ ಕಣ್ತೆರೆವಾಗ ನಾನೂ ಕಣ್ ಕಣ್ ಬಿಡುತ್ತ ತಲೆ ತುರಿಸಿಕೊಂಡೆ.ಹಾ ಯುರೇಕ....ಕ'ಮಲ'ಳ ಲಂಗ ಜಳಜಳ ಎಂದು ವಿಧಾನಸೌಧದಿಂದ ಹಿಡಿದು ಪರಪ್ಪನ ಅಗ್ರಹಾರದವರೆಗೆ (ಎರಡೂ ಕಲ್ಲು ಕಟ್ಟಡಗಳೇ!) ಸಾಮ್ರಾಜ್ಯ ವಿಸ್ತರಿಸಿಕೊಂಡಿರುವ 'ರಸಿಕ'ರೇಣು-ವರ್ತೂರು ಪ್ರಕಾಶ-ಸರ್ವರ್ ಸೋಮರಂತಹ 'ಕಟ್ಟಾ'ಳುಗಳಿಗೆ ಸ್ವಾತಂತ್ರ ಬಂದಿದೆ! ಆದರೆ ಅತ್ತ ಸವಣೂರಿನಂತಹ ಊರುಗಳಲ್ಲಿ ಇನ್ನೂ ಅಂತ್ಯಜ 'ಮಲ'ವನ್ನ ತಲೆಮೇಲೆ ಹೊರುತ್ತ,ಬೇಸತ್ತಾಗ ಸುರಿದುಕೊಳ್ಳುತ್ತಾ ಹಾಗೆ ಇದ್ದಾನೆ. ಮೂರ್ ಮೂರ್ ದಿನಕ್ಕೆಲ್ಲ ಬಂಡಾಯ ಸಾರಿ ಮಾಡೊ ಕೆಲಸ ಬಿಟ್ಟು ರೆಸಾರ್ಟ್ ಸೇರಿ ಅಲ್ಲಿಂದ ಹೊರ ಬಂದ ತಕ್ಷಣ ಮಂತ್ರಿಗಿರಿ ಅನಾಯಾಸವಾಗಿ ಪಡೆದು ಅರ್ಜೆಂಟ್ 'ರೆಡ್ ಲೈಟ್'ಸಚಿವರಾಗಿ ಕೆಡೋಗಾಲಕ್ಕೆ ಸಿರಿ ಅಂದವರ ಹಾಗೆ ನಡುರಾತ್ರೆಯಲ್ಲೂ ಹಿಂದೆ ಮೂರು,ಮುಂದೆ ಮೂರು ಗೂಟದ ಕಾರುಗಳನ್ನ ಸೈರನ್ ಗಲಭೆ ಸಹಿತ ಓಡಿಸಿ ಜನರ ನೆಮ್ಮದಿಗೆ ಬೆಂಕಿ ಇಟ್ಟವರಿಗೆ ಸ್ವಾತಂತ್ರ ಬಂದಿದೆ!

ತಮ್ಮೆಲ್ಲರ ಖಾಸಗಿ ಖಜಾನೆಯ ಕಾಮನ್'ವೆಲ್ತ್'ನ್ನ ಮುಲಾಜಿಲ್ಲದೆ ಕ್ರೀಡಾ ಮನೋಭಾವದಿಂದಲೆ ಸಮಾನವಾಗಿ (ಕಡೆಪಕ್ಷ ಅಲ್ಲಾದರೂ ಸಮಾನತೆಯಿದೆ,ಸಂತೋಷ!) ಹಂಚಿಕೊಂಡ ಕಲ್ಮಾಡಿಯಿಂದ ಹಿಡಿದು ಹುಟ್ಟಿನ ಕಾರಣದಿಂದಷ್ಟೇ 'ಗಾಂಧಿ'ಗಿರಿ ಮಾಡೋವವರವರೆಗೆ ಎಲ್ಲರಿಗೂ ಭೇದ-ಭಾವವಿಲ್ಲದೆ ಸೌತ್ ಬ್ಲಾಕಿನಿಂದ-ತಿಹಾರಿನ ಬ್ಯಾರಕ್ಕಿನ ಕೊನೆ ಮೂಲೆಯಲ್ಲಿ ಕುಳಿತ 'ರಾಜಾ'ಧಿರಾಜರಿಗೆಲ್ಲ ಸ್ವತಂತ್ರ ಬಂದಿದೆ!


ತನ್ನ ಅಂಗೈ ಅಗಲದ ಹೊಟ್ಟೆಪಾಡಿನ ಮೂಲಾಧಾರ ಭೂಮಿಯನ್ನ ಉಳಿಸಿಕೊಳ್ಳಲು ಬಡ ಬೋರೆಗೌಡ ಮಾತ್ರ ಆಳುವವರ ಗುಂಡಿಗೆ ಗುಂಡಿಗೆಯೋಡ್ದುತ್ತಲೆ ಇದ್ದಾನೆ (ಅನಿವಾರ್ಯವಾಗಿ!).ದೇಶ ಇಬ್ಭಾಗವಾಗಿ ನಮ್ಮ ಸಂಸ್ಕೃತಿಯ ತುಣುಕು ಇನ್ಯಾರೊ ಅರಿವುಗೇಡಿಗಳ ಪಾಲಾದ ೬೪ರ ಈ ಸಂಭ್ರಮಕ್ಕೆ ಹೌದು, ಬೆಚ್ಚಗೆ ಕಂಬಳಿ ಹೊದ್ದುಕೊಂಡ 'ಗೂಟದ' ಕಾರಿನ ಕೆಲವು ಕರಿ ಸಾಹೇಬರಿಗಂತೂ ನಿಜಕ್ಕೂ ಸ್ವಾತಂತ್ರ ಬಂದಿದೆ ಅನ್ನುವ ಜ್ಞಾನೋದಯ ಕಡೆಗೂ ಕಾಮೋಡಿನ ಮೇಲೆ ಆಯ್ತು?!.

೬೪ ಯಾಕಾಯ್ತು? ೬೩ ಆಗಿತ್ತು ಅದಕ್ಕೆ?!



ನಮ್ಮ 'ಭಾರ'ತಕ್ಕೆ ೬೪ರ ಮರು ಹುಟ್ಟಿನ ಹುಸಿ ಸಂಭ್ರಮ! ನಾನೂ ಇದೇ ತಿಂಗಳಲ್ಲಿ ಕಣ್ಣು ಬಿಟ್ಟವನಾದ್ದರಿಂದ ನನಗೂ ಇದರ ಸಂಭ್ರಮದಲ್ಲಿ ಶರೀಕನಾಗುವ ಹಂಬಲ.ಆದರೆ ಸುಮ್ಮನೆ ಕೂತರೂ ಕೂದಲು-ಉಗುರು ಕಳೆಯಂತೆ ಬೆಳೆಯೋ ಹಾಗೆ ವಯಸ್ಸಂತೂ ಆಗೇ ಆಗುತ್ತದೆ ಎನ್ನುವಂತೆ ;ಕೇವಲ ಕಾಲಚಕ್ರದ ಅರೆ ಮತ್ತೊಮ್ಮೆ ತಿರುಗಿದ್ದಕ್ಕೆ ವರ್ಷ ಇನ್ನೊಂದಾಯ್ತು ಅಂತ ಸಂತೋಷಪಡಲೇ? ಇಲ್ಲ ನಮ್ಮೆಲ್ಲರ ತಾಯಿ ಭಾರತಿಯ ಎದೆಯನ್ನ ಮನಸೋ ಇಚ್ಛೆ ಬಗೆದು ಮಗುಮ್ಮಾಗಿ ತಮ್ಮ ತಿಜೋರಿ ತುಂಬಿ ಕೊಂಡ ಸ'ಗಣಿ' ತಿಂದವರನ್ನ ನೋಡಿ ಬೀಗಲೇ? ಇಲ್ಲ ,೨ಜಿ-೩ಜಿ ಎಂದು ಎಲ್ಲರನ್ನೂ ಜೀ ಎಂದೇ ಕರೆಯುತ್ತಾ ಅವಳೊಡಲಿಗೆ ಕಾನೂನು ಬದ್ಧವಾಗಿಯೇ ಕನ್ನ ಹಾಕುತ್ತಿರುವ ಖದೀಮರನ್ನ ಕಂಡು ಎದೆಯುಬ್ಬಿಸಲೆ? ಏನೊಂದೂ ಸ್ಪಷ್ಟವಾಗದೆ ಕೆಕರುಮೆಕರಾಗಿದ್ದೇನೆ! ಗೊಂದಲ ಜಾರಿಯಲ್ಲಿದೆ...

Thursday, August 11, 2011

ಲಾಭವೆ ನನ್ನುಸಿರು...?!



ಕಾಸಿದ್ದರೆ ಕೈಲಾಸ
ಕಾಲಿದ್ದವರಂತೆ ಇಲ್ಲದರದ್ದೂ ಇದೇ ವಿಲಾಸ...
ಜಗತ್ತು ಸದಾ ಎತ್ತರದಲ್ಲಿರುವವರ ಪದತಲದ ಗುಲಾಮ,
ಓಲೈಕೆ ಹಲ್ಕಿರಿಕೆ....ಮೇಲೇರಿದವ ಎದುರಾದಾಗಲೆಲ್ಲ
ಹಚ್ಚುತ್ತ ಕೃತಕ ಪ್ರೀತಿಯ ಮುಲಾಮ/
ಹಿಂದೆಯೂ ಉಳ್ಳವರ ಬಾಲವಾಗಿ
ಇಲ್ಲದವರ ತಲೆಭಾರವಾಗಿ....
ಮುಖನೋಡಿ ಮಣೆ ಹಾಕುತ್ತಲೇ ಇತ್ತು
ಈ ಜಗತ್ತು,
ಲಾಭದ ದೂರಾಲೋಚನೆಯ ಡೊಗ್ಗು ಸಲಾಮ...
ಇದು ಹಾಕುತ್ತಲೇ ಇದೆ
ಹಾಕುತ್ತಲೇ ಇರುತ್ತದೆ ನೋಡಿ
ಇದೆ ಜಗದ ಹಣೆಬರಹ...!
ಇದೊಂಥರ ಸಭ್ಯ ಹರಾಮ?!//

Tuesday, August 9, 2011

ಉಕ್ಕಿ ಬಂದ ನೆನಪುಗಳೇ...


ಇರುಳು ಕಳೆದರೂ ಕತ್ತಲ ಕನಸು ಕರಗಿಲ್ಲ
ಮುಗಿಲು ಕೆಂಪಾಗಿದ್ದರೂ....
ಮನ ಮುಗಿಲಿನ್ನೂ ಬೆಚ್ಚನೆ ಬೆಳಗಿಗೆ ತೆರೆದಿಲ್ಲ,
ನಿನ್ನ ನಿರೀಕ್ಷೆಯಿದೆ/
ನಿಲ್ಲದ ಸೋನೆ ಮಳೆಯ ಹನಿಗಳ ಗುಂಗಲಿ
ನಿನ್ನ ನೆನಪುಗಳ ಕಂಬಳಿ ಗುಪ್ಪೆ ಬೆಚ್ಚಗೆ ಹೊದ್ದುಕೊಂಡು,
ಬಾಳಹಾದಿಯಲ್ಲಿ ಬರಿಗಾಲಲ್ಲಿ ಹೊರಟಿದೆ ಕನಸು//


ಹಗಲೆಲ್ಲ ನಿನಗಾಗಿ ಕಾದ ಕ್ಷಣಗಳಲ್ಲೆಲ್ಲ
ಉಕ್ಕಿ ಬಂದ ನೆನಪುಗಳೇ...
ಇರುಳಲ್ಲಿ ನೋವಿನ ನಾಲ್ಕು ಸಾಲಾದವು/
ಬಾನಿನಲಿ ಚಂದ್ರನಿಗೂ
ಬೆಳದಿಂಗಳ ಜೊತೆಗೆ ಜಗಳ...
ಭೂಮಿಯಲಿ ನಮ್ಮಿಬ್ಬರ,
ನಡುವೆ ಅದುವೆ ಬಹಳ//


ತುಟಿಗಳ ನಿತ್ಯ ಜಪ ನೀನು
ಎದೆಯ ಮೋಹಕ ರಾಗ....
ಉಸಿರಿನ ಅನುಕ್ಷಣದ ತಪ
ಉರಿಯೇದೆಯಲ್ಲೊಂದು ತಂಪು ಜಾಗ!,
ರೆಪ್ಪೆ ಸೋಕಿದ ಮುಂಗುರಳ ಸರಿಸಿ
ಗಾಳಿಯಲ್ಲೆ ಅದೆನನೋ ಬೆರಳ ಮೊನೆಯಲ್ಲಿ ಬಿಡಿಸಿ....
ಬಂದಾಗಲೆಲ್ಲ ಸಂತಸದಲೆಗಳನ್ನ ಹೊಮ್ಮಿಸುತ್ತಿದ್ದ
ನಿನ್ನ ಅನುಪಸ್ಥಿತಿ ಬಾಳನ್ನ ಗೋಳಾಗಿಸಿದೆ....!/
ಸತ್ತ ಭಾವಗಳ ಸಮಾಧಿಯ ಮೇಲೆ ಕುಳಿತು
ನಿಟ್ಟುಸಿರು ಬಿಡುತ್ತಿರುವ ನನ್ನ ಕಣ್ಣೀರಿಗೆ....
ಅದನ್ನು ಒರೆಸುವ ನೆಪದಲ್ಲಾದರೂ,
ನಿನ್ನ ಕೈಯೊಮ್ಮೆ ಸೋಕಲಿ ಎಂಬ ಈಡೇರದ ಆಸೆ!//

ಕೈಯಲ್ಲಿ ಹಬೆಯಾಡುವ ಚಹದ ಬಟ್ಟಲು ಹಿಡಿದು....

ಶೋಕಕ್ಕೆ ಸಿಲುಕಿ
ಒಲವಲ್ಲಿ ಶಾಪಕ್ಕೆ ನಿಲುಕಿ....
ಹಿಂದೆಯೆಲ್ಲ ಅಹಲ್ಯೆಯಂತೆ ಕಲ್ಲಾಗುತ್ತಿದ್ದರಂತೆ,
ನಾನೂ ಅಹಲ್ಯೆಯ ಮಗನೆ!
ನಿನ್ನ ತಿರಸ್ಕಾರ-ಮೊದಲಿಕೆಯ ಶಾಪಕ್ಕೆ ಸಿಕ್ಕವ ನಾನೇಕೆ ಕಲ್ಲಾಗಲಿಲ್ಲ?!,
ಕಣ್ಣೀರು ತರಬೇಡ ಸಿಕ್ಕಾಗ
ಬಾಳ ತಿರುವೊಂದರಲ್ಲಿ...
ಕಣ್ಣೀರ ಕಡಲ ತೀರದಲ್ಲೇ ಜೋಪಡಿ ಕಟ್ಟಿ ಕೊಂಡ ನನಗೆ,
ನಿನ್ನ ಹನಿ ಕಣ್ಣೀರು ಕಾಣೋದು ಕಷ್ಟದ ಸಂಗತಿ//


ಹೆಸರಿಗಷ್ಟೆ ಅಂಟಿಕೊಂಡಿರುವ ಹರ್ಷ
ನನ್ನ ಬಾಳಲ್ಲಿ ಹನಿಯೂ ಉಳಿದಿಲ್ಲ....
ನೀ ಬಳುವಳಿ ಇತ್ತ ಸೂತಕದ ಶೋಕ
ನೋಡು,
ಇನ್ನೂ ಮನಸಿಂದ ಕಳೆದಿಲ್ಲ/
ಎದೆ ಕುದಿಯೆಲ್ಲ ಕಣ್ಣೀರಾಗಿ ಉಕ್ಕಿ
ಭಾವದ ಬಿಸಿ ಆವಿ ನಿಟ್ಟುಸಿರಾಗಿ....
ಆಗಾಗ ಹೊರಬಂದು ಕಾಡುತ್ತದೆ,
ನಿನ್ನ ಕಡೆಯಬಾರಿ ಕಂಡಿದ್ದ ಜಾಗಕ್ಕೆ ಹೋದಾಗಲೆಲ್ಲ....
ಅರಿವಿಲ್ಲದೆ ನನ್ನ ಹಿಡಿತ ಮೀರಿ ಕಣ್ಣೀರು ನೆಲ ಮುಟ್ಟುತ್ತದೆ
ಅವ್ಯಕ್ತ ಭಾವಗಳ ಕಂಪನ ಮೆಲ್ಲನೆ
ಎದೆ ತಲೆಬಾಗಿಲ ಕದ ತಟ್ಟುತ್ತದೆ//


ಕೊಂಚ ಮಳೆ
ರಾತ್ರಿಯ ಮೋಡ ಮಂದಾರಕೆ....
ನೆನೆದು ಪುಳಕಿತಳಾದ ಒದ್ದೆ ಇಳೆ,
ಇದನ್ನೆ ನೋಡುತ್ತಾ ಹಾಗೆ ತನ್ಮಯನಾಗಿ
ಕೈಯಲ್ಲಿ ಹಬೆಯಾಡುವ ಚಹದ ಬಟ್ಟಲು ಹಿಡಿದು....
ನಿನ್ನ ಗುಂಗಿನಲ್ಲಿ ಹಾಗೆ ಕಳೆದು ಹೋಗುವುದು ನನ್ನ ನಿತ್ಯದ ಮೂರ್ತ ಕನಸು!/
ಮತ್ತೆ ನಸುಕಿನಲ್ಲಿ ನಿನ್ನ ನೆನಪ ಕಚಗುಳಿ
ಏಕಾಂಗಿ ನಾನಲ್ಲ ಪ್ರತಿ ಕ್ಷಣದ ಜೊತೆಯಾಗಿ ನಿನ್ನ ನೆನಪಿದೆಯಲ್ಲ....
ಗಾಳಿಯೂ ಆದಲಾರದಂತೆ ಭದ್ರವಾಗಿ ಮನದ ಬಾಗಿಲನ್ನ ಮುಚ್ಚಿದ್ದರೂ,
ಅದು ಹೇಗೊ ಎದೆಯಾಳದ ಭಾವಗಳು
ಬಿಕ್ಕಳಿಸಿದ ಸದ್ದು ಹೊರಗೆ ಹರಿಧು ಹೋಗಿದೆ//















Monday, August 8, 2011

ಎದೆಗೂಡಲಿ ಬೆಚ್ಚನೆ ಪ್ರೀತಿಯ ಅಗ್ಗಿಷ್ಟಕೆ......


ಎದೆ ಪೆಟ್ಟಿಗೆ ಎಲ್ಲಾ ನಿನ್ನ ನೆನಪಿನ ಕಾಣಿಕೆಯಿಂದ ಸಮೃದ್ಧ
ಬಾಚಿಕೊಳ್ಳಲಾ...ಆಸೆ ಬುರುಕನಂತೆ ದೋಚಿಕೊಳ್ಳಲ?...
ಈಗಷ್ಟೇ ಎಡೆಬಿಡದೆ ಸುರಿದು ನೆಲದೆದೆಯ ಆರ್ದ್ರವಾಗಿಸಿದ,
ಮಳೆಯ ಕೆಲವು ಒಲವ ಹನಿ ನನ್ನೆದೆಯಂಚನೂ ಹಾಗೆ ಸೋಕಿ
ನಿನ್ನ ನೆನನಪುಗಳನ್ನೆಲ್ಲ ಒದ್ದೆಯಾಗಿಸಿ ಹೋಗಿದೆ/
ಒಳ ನುಸುಳಿದ ಚಳಿಗೆ ನವಿರಾಗಿ ಕಂಪಿಸಿದ
ಮನಸಿನ ಒಳಮನೆಯಲ್ಲಿ ಬೆಚ್ಚಗೆ ನೀ ಹುದುಗಿದ್ದೆ....
ಕನಸುಗಳೊಂದಿಗೆ ಬಿಸಿ ಹೆಚ್ಚಿಸುವ ನೆನಪುಗಳೊಂದಿಗೆ,
ಖಾಲಿ ರಸ್ತೆಯ ಇನ್ನೊಂದು ತುದಿಗೆ ನೆಟ್ಟ
ನನ್ನ ನೋಟ ನಿನ್ನನೆ ಏಕೆ ಹುಡುಕಬೇಕು?
ನಿನ್ನ ನೆನಪುಗಳನ್ನೆ ಮನದ ಬೆರಳು ಏಕೆ ತಡುಕಬೇಕು?//


ನಾದ ಮರೆತ ವೀಣೆ
ಸ್ವರ ಮರೆತ ಕೊಳಲೂನು ನಾನೆ....
ಯಾವ ಸೂಚನೆಯನ್ನೂ ಕೊಡದೆ ಧುತ್ತನೆ,
ಪ್ರತ್ಯಕ್ಷವಾದರೆ ನೀ ಹೀಗೆ...ಮನಸಿಗನ್ನಿಸೋದು ಹಾಗೇನೆ/
ಭಾವದ ಬಯಲಲ್ಲಿ ಅನಾಥ ಭಿಕಾರಿ ಮಗು ಮನಸು...
ನೀನಿಲ್ಲದೆ
ನಿನ್ನ ಕಿರುಬೆರಳ ಆಸರೆ ಸಿಕ್ಕದೆ ....
ಚಿಗುರೀತು ಹೇಗೆ ಕನಸು//


ಮನಸಿನ ಪೆಟ್ಟಿಗೆಯಲ್ಲಿ ಹಳೆಯ ಬಟ್ಟೆಗಳಡಿ
ನಿನ್ನದೊಂದು ನೆನಪಿನ ಅಂಗಿ ನಿನ್ನೆದೆಯ ಅದೇ ವಾಸನೆ ಹೊತ್ತಿದ್ದು...
ಮತ್ತೆ ಸಿಕ್ಕ ಹಾಗೆ ನಿನ್ನ ನೆನಪಾದಾಗಲೆಲ್ಲ ಸಂತಸ ನನಗೆ/
ಕಿವಿ ಮೆಲೊಂಧು ರಾಗದ ಋಣ
ತುಟಿ ಮೇಲೆ ಮತ್ತದರದೆ ಅನುರಣನ....
ನಿರಂತರ ಹರಿವ ಧಾರೆಯಾಗಿರುವಾಗ,
ನೆನಪಿನ ನಾವೆಯಲ್ಲಿ ಕೈಕೈ ಹಿಡಿದು ಸುಮ್ಮನೆ ಏನನ್ನೂ ಮಾತನಾಡದೆ
ನೀ ಜೊತೆಗೆ ಕೂತಿರುವಾಗ.... ನಾ ಹೇಗೆ ಒಂಟಿ?//


ಕೆನ್ನೆ ಮೇಲಿನ ಗುಳಿಯೊಳಗೆ ಮೂಡಿದ ಮಾಸಲಾರದ ಮಚ್ಚೆ
ನಿನ್ನ ನೆನಪು ಸೇರಿ ಇನ್ನಷ್ಟು ಕೆಂಪಾಗಿದೆ...
ಮತ್ತೆ ಮಳೆ ನೆನೆದ ಮನಸ ಹಾದಿಯ ಇಬ್ಬದಿ,
ನಿರೀಕ್ಷೆಯ ಗರಿಕೆ ಚಿಗುರಿ ನಿನ್ನ ಪಾದಾಘಾತದ ಸವಿ ಕ್ಷಣಕ್ಕಾಗಿ ಕಾತರಿಸುತಿದೆ/
ನೆಲಕೂ-ನಭಕೂ ನಡುವೆ ಒಲವು ಚಿಗುರೊಡೆದ ಈ ಹೊತ್ತು
ಎಷ್ಟೆಲ್ಲಾ ಎದೆಗೂಡಲಿ ಬೆಚ್ಚನೆ ಪ್ರೀತಿಯ ಅಗ್ಗಿಷ್ಟಕೆ ಹೊತ್ತಿಸಿದೆ,
ನಿನಗೇನು ಗೊತ್ತು?//

ನಿನ್ನ ಕಣ್ಣ ಕಾಲ್ಡೀಪ......



ಮುಂಜಾವಿನ ಹಣೆಗೆ ನೇಸರ ಒತ್ತಿದ ನವಿರು ಮುತ್ತು
ಹಾಗೆಯೆ ಜಾರಿ...
ಮೋಡದಂಚಲಿ ತೂರಿ,
ಮಳೆಹನಿಯಾಗಿ ಕೆಳಬಿತ್ತು/
ಕನಸ ಕೊಳವ ಕಲಕಿದ ಭಾವಗಳ
ಬೆರಳುಗಳಿಗೆಲ್ಲ ನಿರೀಕ್ಷೆಯ ಪಸೆ....
ಗಾಢವಾಗಿ ಅಂಟಿಕೊಂಡಿದೆ//

ಕನಸುಗಳೆ ಚಲ್ಲಿದ ಹಾದಿಯಲ್ಲಿ ನಿನ್ನ ಕಣ್ಣ ಕಾಲ್ಡೀಪ
ನನಸಿನ ನಡೆಯ ತುಂಬಾ ನಿನ್ನ ಮೈಗಂಧದ ಧೂಪ....
ಇಷ್ಟೆ ಬೇಕಿರೋದು ನನಗೆ ಈ ಬಾಳಲ್ಲಿ,
ಎಲ್ಲೋ ಕೇಳಿದ್ದ ಮರೆಯಲಾಗದ ಮಾಧುರ್ಯದ ಕೊನೆ
ಆಸೆಯಿಂದ ಚೀಪುತ್ತ ನಿಂತ ಮಗುವಿನ ಕೈಯಲ್ಲುಳಿದ ಮಿಠಾಯಿಯ ಮೊನೆ...
ಈ ಬಾಳಲ್ಲಿ ನಿನ್ನ ನೆನಪು/
ಎದೆಯ ಕನವರಿಕೆಗಳಿಗೆಲ್ಲ ಮಾತಿನ ಚೌಕಟ್ಟು ಹಾಕಿ
ನಿನ್ನ ಮುಂದೆ ಚಾಚುವ ಇರಾದೆಯಿದೆ....
ಹೌದು,ನನ್ನೊಳಗೂ ಒಲವಿನ ಸವಿ ಬಾಧೆಯಿದೆ!,
ಹೇಳಿಕೊಳ್ಳಲಾಗದ ವಿಚಿತ್ರ ಸಂಕಟ ಎದೆಯಲ್ಲಿ
ನಿನ್ನ ನೆನಪೊಂದೆ ಸಾಂತ್ವಾನ...
ನಿರಂತರ ನೋವಿನ ಬೇನೆಯಲ್ಲೂ ನನ್ನ ತುಟಿಗಳಿಗೆ
ನಿನ್ನ ಹೆಸರಿನದೆ ಕನವರಿಕೆ...ನಿನ್ನ ಹೊರತು ನನಗಿನ್ಯಾರಿದ್ದಾರೆ ಹೇಳು?//


ಮೌನದ ಅಲೆಗಳ ಮೇಲೆ ತೇಲುವ
ಕಾಗದದ ಡೋಣಿ ನನ್ನ ಮನಸು...
ನೆಲೆಯಿಲ್ಲ,ಗುರಿಯ ಕಲ್ಪನೆಯಿಲ್ಲ
ನಿನ್ನೆದೆಯ ಬಂದರಿನಲ್ಲಿ ಹಾಕಲ ಲಂಗರು?,
ಕನಸಿನಲ್ಲೂ ಮನಸು ಗೀಚುವ ಅಕ್ಷರಗಳು ಕೂಡಿದರೆ ಮೂಡೋದು ನಿನ್ನದೆ ಹೆಸರು
ನನ್ನೆದೆಯ ಬರಡಿಗೂ ನಿನ್ನ ನೆನಪಿನ ಪರಿ ಹಬ್ಬಿಸಿದೆ ಮಾಸಲಾರದ ಹಸಿರು....
ಮಳೆ ನಿಂತ ನಂತರ ಬಿಡಿ ಬಿಡಿಯಾಗಿ ನೆಲ ಮುಟ್ಟುವ
ಕೊನೆಯ ಹನಿಯ ದಾಹ ನನ್ನೆದೆಯಲ್ಲಿ ನಿನ್ನ ನಿರೀಕ್ಷೆಯನ್ನ ಬಿತ್ತುತ್ತಿದೆ//

ಮೌನವೆ ಹಸಿರು ವಸಂತ...


ಕನಸಿನ ಹಾದಿಯಲ್ಲಿ ನಿನ್ನ
ಕಣ್ ಬೆಳಕ ಆಸರೆ ಇಲ್ಲದೆ ಹೇಗೆ ಹೆಜ್ಜೆಯೂರಲಿ?....
ನಿನ್ನ ನಗುವಿನ ಗುರಿಯಿರದ ಬಾಳಲ್ಲಿ
ಸಂತಸದ ಕೊನೆಯನೆಂತು ಮುಟ್ಟಲಿ?/
ಮಾತುಗಲ್ಲೆಲ್ಲ ಒಣ ಎಲೆಗಳಂತೆ
ಮೌನವೆ ಹಸಿರು ವಸಂತ...
ನನಸು ಕೇವಲ ಕ್ಷಣಿಕ
ನೆನಪಿನ ಮಾಧುರ್ಯವಷ್ಟೆ ಅನಂತ//


ಸಂತಸದ ಹೊನಲಿಗಿಂತ ಸಂಕಟದ ಇರುಳು ಹೆಚ್ಚು ಆಪ್ತ
ನಿನ್ನೆದೆಯ ದಾರಿಯಲ್ಲಿ ಹಾಕುವ ಹೆಜ್ಜೆಗೆ ಮನಸು ನಿನ್ನೊಳಗೆ ಲುಪ್ತ....
ಲವಲೇಶವೂ ಉಳಿದಿರದ ನಿರೀಕ್ಷೆ ಕೆಲವೊಮ್ಮೆ,
ನನ್ನ ಶೂನ್ಯ ನೋಟದಲ್ಲೂ ಸಂತಸ ಉಕ್ಕಿಸುವುದಿದೆ....
ನಿನ್ನ ನೆನಪುಕ್ಕಿ ಬಂದಾಗ!/
ಕಲ್ಲಿನ ಎದೆಯ ಮೇಲೂ ಕನಸ ಚಿಗುರೊಡೆಸಿದ
ನಿರೀಕ್ಷೆಯ ಬೀಜದ ಬಳ್ಳಿ ಸ್ವಚ್ಛಂದ ಬೆಳೆದು....
ಬಾಳ ತುಂಬಾ ಹಬ್ಬಿದೆ,
ಕನಸು ಕಂಗಳ...ಸಂಜ್ಞೆ ಮಾತಿಗೆ
ನಿನ್ನ ಮೌನದ ಉತ್ತರ....
ಅದನ್ನು ಅರ್ಥ ಮಾಡಿಕೊಳ್ಳಲಾಗದೆ ನಾನಂತೂ ಆದೆ ತತ್ತರ//


ಮೋಡದ ಮೋಹಕತೆಗೆ ಮರುಳಾಗಿ
ಭಾಸ್ಕರ ಬಾನಿಗೆ ಹೊಡೆದ ಕಣ್ಣು....
ಮುಗಿಲಲಿ ಹೊಳೆವ ಮಿಂಚಾಯ್ತು
ನಭದಿಂದ ನೆಲಕ್ಕಿಳಿದ ಮಳೆಯ ಮಧುರ ಸಂಚಾಯ್ತು/
ಒದ್ದೆಕಂಗಳ ಪ್ರತಿಹನಿಯಲ್ಲೂ ನಿನ್ನ ನೆನಪಿನ ಬಿಸಿಯಿದೆ
ಮನದ ಅಂಗಳಕ್ಕೆ ಹಚ್ಚಿದ ನಿರೀಕ್ಷೆಯ ರಂಗೋಲಿಯಲ್ಲಿ....
ನಿನ್ನದೆ ಉಸಿರು ಸೋಕಿಸಿದ ನೆನ್ನೆಯ ಹಸಿಯಿದೆ,
ಮಾತುಗಳೆಲ್ಲವನ್ನು ಬಂಧಿಸಿರಿಸಿರುವ ಮೌನದ
ಕತ್ತಲ ಕೊನೆಯಲ್ಲಿ ಭೀಕರ ಏಕತಾನತೆಯ ಆರ್ತನಾದ...
ನೀನಿದ್ದಿದ್ದರೆ
ಒಮ್ಮೆ ಬಂದಿದ್ದರೆ ಪಾರಾಗುತ್ತಿದ್ದೆನೇನೋ ಇದರಿಂದ ನಾನು//


ನೀನಿರದ ನನಸು
ನೀ ಬಾರದ ಕನಸು...
ನನ್ನ ದೃಷ್ಟಿಯಲ್ಲಿ ಮೌಲ್ಯ ಕಳೆದುಕೊಂಡ ಬಿಲ್ಲೆ
ಏನಿದ್ದರೇನು ಇರದಾಗ ನಿನ್ನ ನೆನಪಿಗೆ ಅಲ್ಲಿ ನೆಲೆ?/
ನೆನಪಿನ ಪರಿಮಳದಲ್ಲಿ
ಮಿಂದೆದ್ದ ಮನಸು,
ಇನ್ನೂ ನಿನ್ನ ಕನಸಿನ
ಮೆಲುಕಿನಲ್ಲಿಯೆ ಮಗ್ನವಾಗಿದೆ//