Wednesday, November 13, 2013

"ಭಾಗ್ಯ"ದ ಲಕ್ಸ್ಮವ್ವ ನೀ ಇಸ್ಟ್ ಬ್ಯಾಗ್ ಬ್ಯಾಗ ಕುಣ್ದಾಡ್ಕೊಂಡ್ ಬಂದ್ ಬುಟ್ರೆ ಎಂಗವ್ವಾ?


ಉಟ್ಟಿದರೆ ಕನ್ನಡ ನಾಡಲ್ಲಿ ಉಟ್ಟಿಯಾದ ಮ್ಯಾಕೆ ಇನ್ನೆಲ್ಲೈತೆ ಯೋಳಿ ದೌ"ರ್ಭಾಗ್ಯ"? ಸಿದ್ಧರಾ"ಮೈ ನೆ ಪ್ಯಾರ್ ಕಿಯಾ", ಪರ್ ಉನ್ಕೋ ಉನ್ಕೇ "ಭಾಗ್ಯ"ಶ್ರೀ ನೆ ಶಾಯದ್ ದೋಖಾ ದಿಯಾ?! ಅಂಗಾಗಿನೆ ಮಹಾಜನ"ಗೋಳೆ" "ಕುರಿತೋದದೆಯುಂ ಪರಿಣತ ಮತಿ"ಗಳಾದ ನಿಮಗೆಲ್ಲ ಮುಂದೆ ಕಾದೈತೆ

"ಭಾಗ್ಯ"ವೇ "ಭಾಗ್ಯ" ಅನ್ನ"ಭಾಗ್ಯ", ಶಾದಿ"ಭಾಗ್ಯ", ಮುನ್ನ(?)"ಭಾಗ್ಯ".

ಮುನ್ನಂದಿರು ಅತ್ತರೆ ಕ್ಷೀರ "ಭಾಗ್ಯ",ಮುನ್ನನ ಅಪ್ಪಂದಿರು ಆತ್ತರೆ ದ್ರಾಕ್ಷಾರ "ಭಾಗ್ಯ". ಇದ್ಕಿಂತ ಬೇಕೈತಾ ಇನ್ನ"ಭಾಗ್ಯ"?
ಇಷ್ಟ್ ಸಾಕಾಗಂಗಿಲ್ಲ ಆಂತಾವ ನಮ್ ಸಿದ್ರಾಮಣ್ಣ ಒಂದ್ ಕೋಟಿ ಖರ್ಚ್ ಮಾಡಿ ಈಗಾ ಇರೋ ಮನೆನೆ ಸುಮ್ಸುಮ್ಕೆ ವಾಸ್ತು ಪರ್ಕಾರ ವೈನಾ ಮಾಡ್ಕಂತೈತಣ್ಣೋ!
ಇದು ಯಾವ ಗೂಢ ನಂಬಿಕೆ ಅಂತೆಲ್ಲಾ ಕೇಳೀರ ಉಸಾರ್!

"ಕಂಡವ್ರ್ ಕಾಸು, ಸದ್ಯಕ್ಕೆ ಸಿದ್ರಾಮಣ್ಣನೆ ಅದನ್ನ ಖರ್ಚ್ ಮಾಡೋ ಬಾಸು"

ಬೂಸಿಯ ಬಿಟ್ಟೊದ್ ಖುರ್ಚಿಲಿ ಅಪ್ಪಂತವ್ರ್ಯಾರಾರ ಬಂದ್ ಕುಂತ್ಕತೌರೆ ಅಂತ ಕಸ್ತೂರಿ ಕನ್ನಡಿಗರು ಕಾದಿದ್ದೆ ಬಂತು. ಇವ್ರ್ಯಾರೋ "ಶಾದಿ - ಬಿದಾಯಿ" ಅಂತಾವ ಕಿತ್ತೋದ ಕಲ್ಯಾಣ ಮಂಟಪದ ಗಿರಾಕಿಗಳು ಇಧಾನಸೌಧವ ಅಟ್ಕಾಯಿಸ್ ಕೊಂಡವ್ರೆ! ಒಟ್ನಲ್ಲಿ ಕರ್"ನಾಟಕ"ದಲ್ಲಿ ಪಾಲುದಾರರಾದ ನಮ್ಮದೆಲ್ಲ ಶಾನೆ "ಭಾಗ್ಯ"ವೋ "ಭಾಗ್ಯ" ಕಣಣ್ಣೋ?!

No comments:

Post a Comment