ಬಾನ ಅಶ್ರುಬಿಂದುಗಳಿಗೆ ಜರಡಿ ಹಿಡಿದ ಮೋಡ, 
ದುಃಖ ಕವಿದ ಹನಿಗಳ ಶೋಧಿಸಿ ಸುಖದ ಸ್ವೇದ ಬಿಂದುಗಳನೆ ನೆಲಕೆ ಹರಿಸಿತು/ 
ಜೊತೆಗೆ ಬೀಸಿದ ಮೆಲುಗಾಳಿ. 
ಆಗಸದ ಕೆನ್ನೆ ಮೇಲೆ ಇಳಿದ ನೋವಿನ ಕಣ್ನೀರನೆಲ್ಲ ಒರೆಸಿತು// 
ಸುರಿದ ಎರಡೇ ಎರಡು ಹನಿಗಳಿಗೆ ಎದೆಯೊಳಗೆ ಅಡಗಿಸಿಟ್ಟಿದ್ದ ಒಲವ ಬೀಜಗಳು ಮೊಳಕೆಯೊಡೆದವು, 
ಮಡುಗಟ್ಟಿ ಹೋಗಿದ್ದ ನೆಲದ ಮನದಂಗಳವೂ ಮತ್ತೆ ಹಸಿರಾದವು/ 
ಪ್ರೀತಿಯ ಪಿಸುನುಡಿಗೆ ಅದೆಂಥಾ ಮೋಹಕ ನಶೆ, 
ಉಷೆ ನಕ್ಕ ಮೋಡಿಗೆ ನಾಚಿ ಕೆಂಪಾಯ್ತು ಮೂಡಣ ದಿಶೆ//
 
No comments:
Post a Comment