Thursday, November 6, 2014

ಕಂಡವರ ಮನೆಯ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಂಡು ಚಳಿ ಕಾಯಿಸುವ ಕ'ಮಲ' ಪಕ್ಷದ ಭಂಡ ಪೀಡೆಗಳು.......








ಇದೊಂದು ಸರಳ ಪ್ರಕರಣ. ಸೊಕ್ಕು ಹೆಚ್ಚಾಗಿ ಬಾಲಕಿಯನ್ನ ಕಾಮದಾಟಕ್ಕೆ ಬಳಸಿಕೊಂಡ ಆರೋಪ ಹೊತ್ತವರನ್ನ ತಕ್ಷಣ ಒದ್ದು ಒಳಗೆ ಹಾಕಿದ್ದರೆ ಪ್ರಕರಣ ಇಷ್ಟು ವಿಕೋಪದ ಪರಿಸ್ಥಿತಿಗೆ ಹೋಗುತ್ತಿರಲಿಲ್ಲ. ಅದು ಬಿಟ್ಟು ಸುಳ್ಳು ಸುಳ್ಳೇ type ಮಾಡಿದ death note ಸೃಷ್ಟಿಸಿ ನಾಟಕ ಶುರುಮಾಡಿದ ನಂತರ ಬಿಜೆಪಿ ಪುಂಡು ಪೋಕರಿಗಳಿಗೆ ವಿಧ್ವಂಸಕ ಕಾರ್ಯಗಳನ್ನ ಎಸಗಲಿಕ್ಕೆ ಮುಕ್ತ ಪರವಾನಗಿ ದೊರೆತಂತಾಗಿ ವಿಕೋಪದ ಹಂತ ದಾಟಿ ಪ್ರಕೋಪಕ್ಕೆ ಹೋಗಿದೆ.

ಹಾಗಂತ ಇದು ಬಿಜೆಪಿ ಪುಂಡರ ಪ್ರಲಾಪದಂತೆ ಅತ್ಯಾಚಾರದ ಪ್ರಕರಣ ಅಲ್ಲವೇ ಅಲ್ಲ. ಮೊದಲನೆಯದಾಗಿ ಇದು ಒಂದು ಎಳೆಯರ ಪ್ರೇಮ ಪ್ರಕರಣ,

ಎರಡನೆಯದಾಗಿ ಮೊನ್ನೆ ಅದೊಮ್ಮೆ ಆಗಿದ್ದರೂ ಅದು ಸಮ್ಮತಿಯ sex ಹೊರತು ಬಲವಂತದ ಅತ್ಯಾಚಾರ ಅಲ್ಲ.

ಮೂರನೆಯದಾಗಿ ಇದರಲ್ಲಿ ಶಾಮೀಲಾದ ಆರೋಪ ಹೊತ್ತ ಎಲ್ಲರೂ ಮುಸಲ್ಮಾನರಲ್ಲ ಒಬ್ಬ ಸಾಬ, ಒಬ್ಬ ಬ್ಯಾರಿ ( ನಂದಿತಾಳ ಪ್ರೇಮಿ.) ಹಾಗೂ ಒಬ್ಬ ಹಿಂದೂ ಹುಡುಗ.

ಕೊನೆಯದಾಗಿ ಪರಿಸ್ಥಿತಿ ಶಾಂತವಾಗುವ ತನಕ ಈ ಮೂವರನ್ನ ವಶಕ್ಕೆ ಪಡೆದು ಅನಂತರ ಬೇಕಿದ್ದರೆ ಜಾಮೀನು ಮಂಜೂರು ಮಾಡಿದ್ದರೆ ಸಾಕಿತ್ತು.

ಇದು ಬಿಟ್ಟು "ದಿನಕ್ಕೊಂದು ಕಥೆ" ಹೊಡೆಯುತ್ತಿರುವ ಪೊಲೀಸ್ ಹಾಗೂ ಬಿಜೆಪಿ ಪುಂಡರು ಊರಿನ ಸ್ವಾಸ್ಥ್ಯವನ್ನ ಬೇಕಂತಲೇ ಹಾಳುಗೆಡವುತ್ತಿದ್ದಾರೆ. ಇಲ್ಲೀಗ ಹುಡುಗಿಯೊಬ್ಬಳಿಗೆ ಅತ್ಯಾಚಾರ ಘಟಿಸಿ ಆಕೆ ವಿಷ ಕುಡಿದು ಸತ್ತಳು ಅನ್ನೋದಕ್ಕಿಂತ ಅವಳು "ಹಿಂದೂ" ಹುಡುಗಿ, ಅವರು "ಮುಸ್ಲಿಂ" ಹುಡುಗರು ( ವಾಸ್ತವದಲ್ಲಿ ಇಬ್ಬರು ಮಾತ್ರ.) ಅನ್ನೋದಷ್ಟೇ ಮುಖ್ಯವಾಗುತ್ತಿದೆ.

ಇದನ್ನೇ ನೆಪ ಮಾಡಿಕೊಂಡು ಈಗ ತೀರ್ಥಹಳ್ಳಿಯ ವ್ಯಾಪಾರ ವಲಯದಲ್ಲಿ ಪ್ರಬಲರಾಗುತ್ತಿರುವ "ನ್ಯಾಷನಲ್ ಸಮೂಹ"ದ ಬ್ಯಾರಿಗಳನ್ನ ಹಣಿಯಲು ಬಿಜೆಪಿಯವರು ಹೊರಟಿದ್ದಾರೆ. ಏಕೆಂದರೆ ಅವರ ಮೆರೆದಾಟದಿಂದ ಹೆಚ್ಚು ಹಾನಿಯಾಗಿರೋದು ಕೊಂಕಣಿಗಳ, ಬಂಟರ ಹಾಗೂ ಬ್ರಾಹ್ಮಣರ ವ್ಯಾಪಾರಿ ಹಿತಾಸಕ್ತಿಗೆ. ಇವರೆಲ್ಲರೂ ಸಾಂಪ್ರದಾಯಿಕ ಬಿಜೆಪಿ ಬೆಂಬಲಿಗರು ಅನ್ನೋದಿಲ್ಲಿ ಗಮನಾರ್ಹ.

ಮೊದಲು ಪೊಲೀಸರು ಕಥೆ ಹೊಡೆಯುವುದನ್ನ ಬಿಟ್ಟು ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನ ಅದರಲ್ಲೂ ಅವಳ ಭಂಡ ಅಪ್ಪನನ್ನು ವಶಕ್ಕೆ ಪಡೆಯಲಿ. ವಾಸ್ತವದಲ್ಲಿ ಅವರಿಬ್ಬರೂ ಆನಂದಗಿರಿಗುಡ್ದದ ಸಮೀಪ ತುಂಗಾ ಮಹಾವಿದ್ಯಾಲಯದ ಕ್ಯಾಂಟೀನಿನ ಹತ್ತಿರದ ದಿಬ್ಬದಲ್ಲಿ ಮಾತಾಡುತ್ತಾ ಕುಳಿತಿದ್ದಾಗ 'ನೈತಿಕ ಪೊಲೀಸ್' ಗೂಂಡಾಗಳ ಕೈಗೆ ಸಿಕ್ಕಿ ಬಿದ್ದಿದ್ದರು. ಅಲ್ಲಿ ಅವರಿಬ್ಬರ ಧರ್ಮವನ್ನೆ ನೆಪ ಮಾಡಿಕೊಂಡ ಅವರು ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ. ಅನಂತರ ಅವಳ ಅಪ್ಪನನ್ನ ಅವಳಿಂದಲೆ ನಂಬರ್ ಪಡೆದು ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅವಳು ಯಾವ ಕಟ್ಟಿಗೆ ಹೆರಕುತ್ತಿದ್ದ ಅಜ್ಜಿಗೂ ಸಿಕ್ಕಿಲ್ಲ ಅವಳ ಮೈ ಕೆಸರೂ ಆಗಿರಲಿಲ್ಲ. ಅದೆಲ್ಲ ಬಿಜೆಪಿಯ ಅದ್ಭುತ ಕಥಾಕೋರರು ಸೃಷ್ಟಿಸಿ ತೇಲಿ ಬಿಟ್ಟ ಅಡುಗೂಲಜ್ಜಿ ಕಥೆ. ಚಂದಾಮಾಮದಲ್ಲಿ ಅದಕ್ಕಿಂತ ಚಂದದ ಕಥೆಗಳು ಬರುತ್ತಿದ್ದವು ಅಂತ ನೆನಪು. ಇಷ್ಟಾಗಿ ಆಮೇಲೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಬಂದು ಇಲ್ಲಿ ಗಲಭೆ ಎಬ್ಬಿಸುತ್ತಿರುವ ಬಿಜೆಪಿ ಪುಂಡರ ಮುಕುಳಿ ಮೇಲೆ ಒದ್ದು ಒಳಗೆ ಹಾಕಿ ಒಬ್ಬೊಬ್ಬರ ಮೇಲೂ ಗೂಂಡಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಿ. ಆಗ ಎಲ್ಲಾ ಸರಿಯಾಗಿ ತೀರ್ಥಹಳ್ಳಿ ಮೊದಲಿನಂತಾಗುತ್ತದೆ.

ನಂದಿತ ಅಪ್ಪನ ನಡುವಳಿಕೆ ಸಂಶಯಾಸ್ಪದ. ಆತ ಸ್ಪಷ್ಟವಾಗಿ ಸುಳ್ಳು ಹೇಳುತ್ತಿದ್ದಾನೆ. ಇನ್ನು ಯಾರೋ ಮತಿವಿಕಲನ ಬಡಬಡಿಕೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಮತಿಗೆಟ್ಟಂತೆ share ಮಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಶುದ್ಧ ಸುಳ್ಳು. ಇಬ್ರಾಹಿಂ ಶರೀಫ್ ದುಡ್ಡು ಮಾಡಿದ್ದು ರಸ್ತೆ ಕಾಮಗಾರಿ ಗುತ್ತಿಗೆಯಲ್ಲಿಯೇ ಹೊರತು ಆ ಬೇವಕೂಫ ಬಡಬಡಿಸಿದಂತೆ ಕಳ್ಳಸಾಗಣಿಕೆಯಿಂದಲ್ಲ. ಹಾಗಂದವನ ಆಲೋಚನೆಗಳು ಅದೆಲ್ಲಿಂದ ಕಳ್ಳಸಾಗಣೆಯಾದವು ಅನ್ನೋದು ಮೊದಲು ತನಿಖೆಯಾಗಬೇಕು. ಈ ವಿಚಾರಗಳು ಅಲ್ಲದೇ ಇನ್ನೂ ಒಂದು ಖಚಿತ ಮಾಹಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿದೆ.

ಮೊನ್ನೆ ನಂದಿತಾ ಮನೆಗೆ ಕರೆತಂದ ಅಪ್ಪ ಹೊಡೆದ ನಂತರ ಅವಮಾನಿತಳಾಗಿ ನಡು ರಾತ್ರೆ ಎದ್ದು ಫಿನಾಯಲ್ ಕುಡಿದು ಮೆಗ್ಗಾನ್ ಆಸ್ಪತ್ರೆಗೆ ಸೇರಿದ್ದಾಗ ನ್ಯಾಷನಲ್ ಶರೀಫರ ಮದ್ಯಸ್ಥಿಕೆಯಲ್ಲಿ ಚಿಕಿತ್ಸಾ ವೆಚ್ಚದ ಹೆಸರಿನಲ್ಲಿ ಐದು ಲಕ್ಷ ರೂಪಾಯಿಗೆ ಅವಳ ಅಪ್ಪ ಹಣ ಪಡೆದು ಸುಮ್ಮನಾಗಲು ಒಪ್ಪಿದ್ದ. ತಮ್ಮಿಂದ ಯಾವ ತಪ್ಪಾಗಿರದಿದ್ದರೂ ಆರ್ಥಿಕವಾಗಿ ಈಗಾಗಲೆ ತಮ್ಮ ಬಂಡವಾಳವನ್ನ ವಿವಿಧ ಉದ್ದಿಮೆಗಳಲ್ಲಿ ಸ್ಥಳಿಯವಾಗಿ ತೊಡಗಿಸಿರುವ ಶರೀಫ್ ತನ್ನ ವ್ಯಾಪಾರಿ ಹಿತಾಸಕ್ತಿಗೆ ಸುಖಾಸುಮ್ಮನೆ ಒದಗಬಹುದಾದ ಧಕ್ಕೆಯಿಂದ ತಪ್ಪಿಸಿಕೊಳ್ಳಲು ಬ್ಯಾರಿ ಸಮುದಾಯದ ಜಮಾತ್ ಮುಖಂಡರಾಗಿ ಅನಿವಾರ್ಯವಾಗಿ ಇದಕ್ಕೆ ಒಪ್ಪಿಕೊಂಡಿದ್ದರು.

ಆದರೆ ನಂದಿತಾಳ ಸಾವು ಈ ಎಲ್ಲಾ ಲೆಖ್ಕಾಚಾರಗಳನ್ನೂ ತಲೆ ಕೆಳಗಾಗಿಸಿತು. ಪರಿಸ್ಥಿತಿಯ ಲಾಭ ಪಡೆದ ಬಿಜೆಪಿಯ ಸಮಯಸಾಧಕ ರಾಜಕಾರಣಿ ಜ್ಞಾನೇಂದ್ರರು ಹೆಣೆದ ಕುತಂತ್ರದ ಫಲ ಪರ ಜಿಲ್ಲೆಗಳಿಂದ ತೀರ್ಥಹಳ್ಳಿಗೆ ಸಂಬಂಧವೇ ಇಲ್ಲದ ಬಿಜೆಪಿ ಪುಂಡರು, ಗೂಂಡಾಗಳು ಜಿಲ್ಲೆಗೆ ಧಾವಿಸಿ ಬಂದರು. ಸಾಮೂಹಿಕ ಅತ್ಯಾಚಾರ ಹಾಗೂ ಅದರಿಂದ ನೊಂದು ಆತ್ಮಹತ್ಯೆ ಎನ್ನುವ ಕಥೆ ಕಟ್ಟಲಾಯಿತು. ಮೊದಲು ಒಪ್ಪಿದ್ದ ಹಣ ಕೈ ಸೇರದೆ ಹತಾಶನಾಗಿದ್ದ ನಂದಿತಾಳ ಅಪ್ಪ ಕೂಡಾ ನಿರ್ಲಜ್ಜನಾಗಿ ಇದಕ್ಕೆ ಸಾಥ್ ಕೊಟ್ಟ.

ಸುತ್ತಲ ಯಾವ ಊರು ಹೊತ್ತಿ ಉರಿದರೂ ಇಲ್ಲಿಯವರೆಗೆ ಕೋಮು ದ್ವೇಷದ ಕಿಡಿ ತೀರ್ಥಹಳ್ಳಿಯನ್ನ ಮುಟ್ಟಿರಲಿಲ್ಲ. ಈಗ ಈ ಊರಲ್ಲೂ ಗಲಾಟೆ ಮಾಡಿಸಿ ಬಿಜೆಪಿ ಗೂಂಡಾಗಳಿಗೆ ತೃಪ್ತಿಯಾಗಿರಬಹುದು. ಸದ್ಯ ಕಾರ್ಕಳ ಒಂದು ಈತನಕ ಕೋಮು ಗಲಭೆಗೆ ಈ ವಲಯದಲ್ಲಿ ಬಲಿಯಾಗಿಲ್ಲ. ಈ ಹರಾಮಿಗಳು ಅಲ್ಲಿನ ಜನರ ನೆಮ್ಮದಿಗೆ ಯಾವಾಗ ಕಿಚ್ಚಿಡುತ್ತಾರೋ ಗೊತ್ತಿಲ್ಲ. ಇವರ ರಾಜಕೀಯದ ತೆವಲಿಗಷ್ಟು ಬೆಂಕಿ ಹಾಕ.

ಪರಿಸ್ಥಿತಿಯನ್ನ ವಿವೇಚಿಸಿ, ಬೇಕಾಬಿಟ್ಟಿ ವದಂತಿ ಹರಡಬೇಡಿ grow up yourself. ಅದೆಲ್ಲಾ ಬಿಜೆಪಿ ತಂತ್ರ. ರೇಪ್ case ಹಾಕೋದೆ ಆದರೆ ಮೊದಲು ಅವರ ಅಧಿನಾಯಕ 'ಬೂಸಿಯ'ನ ಮೇಲೆ ಹಾಕಬೇಕು. ಅಲ್ಲಿ ಸಂತ್ರಸ್ತರು ಶೋಭಕ್ಕ ಹಾಗೂ ನೊಂದವರು ಭಾರತಿಯಕ್ಕ?! ಹೇಳಿಕೇಳಿ ಅದು ನೀಲಿಚಿತ್ರ ರಸಿಕರ, ಹಾಗೆ ಸದನದಲ್ಲಿ ಹಾಡುಹಗಲೆ ನೋಡಿ ಕಲಿತಿದ್ದನ್ನ ನಟ್ಟ ನಡುರಾತ್ರಿ ಕಂಡವರ ಮನೆಯಲ್ಲಿ ಮಾಡಿ ನಲಿವ ಜೀವರಾಜ್, ಹಾಲಪ್ಪ ಹಾಗೂ ಕಾರ್ತಿಕರಂತಹ ಅನರ್ಘ್ಯ ರತ್ನಗಳಿರುವ ಕುಲಗೆಟ್ಟ ಪಕ್ಷ.

ಇನ್ನು ಸ್ಥಳಿಯ ಶಾಸಕರಾದ ಕಿಮ್ಮನೆ ರತ್ನಾಕರ ಇವತ್ತು ದೇವರಿಗೆ ಹುಯಿಲು ಕೊಟ್ಟಿರೋದು ಸ್ಥಳಿಯ ಆಚರಣೆಗೆ ಅನುಸಾರವಾಗಿಯೆ ಇದೆ. ಕಾನೂನಿಗೆ ಹೆದರದ ಭಂಡರು ಇವತ್ತಿಗೂ ಅಲ್ಲಿ ಮಾರಿ, ಜಕಣಿ, ಭೂತ ಹಾಗೂ ಊರ ದೇವರು ರಾಮೇಶ್ವರನ ಕಾರಣಕ್ಕೆ ಹೆದರಿ ಸಾಯುತ್ತಾರೆ. ಅದಕ್ಕೆ ತಕ್ಕಂತೆ ಕಿಮ್ಮನೆ ವರ್ತಿಸಿದ್ದಾರೆಯೆ ಹೊರತು ಇದರಲ್ಲಿ ವಿಶೇಷವೇನೂ ಇಲ್ಲ. ಪ್ರಕರಣ ಘಟಿಸಿದ ಆರಂಭದಲ್ಲಿಯೇ ಅದಕ್ಕೆ ಷರಾ ಬರೆದು ಹಾಸ್ಯಾಸ್ಪದವಾಗಿ ಅಂತಿಮ ತೀರ್ಪು ಕೊಟ್ಟಂತೆಯೆ ವರದಿ ಮಾಡಿದ ೨೪*೭ ಪೀಡೆಗಳ ಬಗ್ಗೆ ಆದಷ್ಟು ಕಡಿಮೆ ಮಾತನಾಡುವುದು ಸಮಾಜದ ಸ್ವಾಸ್ಥ್ಯಕ್ಕೇನೆ ಬಹಳ ಒಳ್ಳೆಯದು.

ಇದು ಕೊಲೆ ಅಲ್ಲವೇ ಅಲ್ಲ ಆತ್ಮಹತ್ಯೆ. ಇನ್ನು ಸಾಮೂಹಿಕ ಅತ್ತಲಾಗಿರಲಿ ಒಬ್ಬನಿಂದಲೂ ನಂದಿತಾಳ ಕನ್ಯತ್ವ ಹರಣವಾಗಿಲ್ಲ ( ಮಣಿಪಾಲ ಆಸ್ಪತ್ರೆಯ ವೈದ್ಯರು ಕೊಟ್ಟಿರುವ ಚಿಕಿತ್ಸಾ ಹಾಗೂ ಪರಿಕ್ಷಾ ವರದಿಯನ್ನ ಗಮನಿಸಿ.). ಹಾಗೊಮ್ಮೆ ಪ್ರಕರಣದಲ್ಲಿ ಯಾರನ್ನಾದರೂ BOOK ಮಾಡಬೇಕಿದ್ದರೂ ಮೊತ್ತಮೊದಲಿಗೆ ಅವಳಪ್ಪನನ್ನೇ BOOK ಮಾಡಬೇಕು. ಏಕೆಂದರೆ ಅವಳು ಅಸ್ವಸ್ಥ್ಯಳಾದದ್ದು ಮನೆಯಲ್ಲಿ. ಹಾಗೂ ವೈದ್ಯರಿಗೆ ಈ ಬಗ್ಗೆ ರಾತ್ರೆ ಉಂಡ ಆಹಾರದಲ್ಲಿ ವಿಷವಾಗಿದೆ ( ಅದೆ ಆಹಾರ ಉಂಡ ಆ ಭಂಡನಿಗೇಕೆ ವಿಷ ಪ್ರಕೋಪ ಕಾಡಲಿಲ್ಲವೋ ನಾಕಾಣೆ!.) ಅಂತಲೆ ಸುಳ್ಳು ಸುಳ್ಳೇ ಹೇಳಿ ಚಿಕಿತ್ಸೆಯ ಹಾದಿ ತಪ್ಪಿಸಿದ ಪುಂಡನವ. ಮೊದಲೆ ಫಿನಾಯಲ್ ಸೇವನೆ ಬಗ್ಗೆ ಗೊತ್ತಿದ್ದರೆ ಎನಿಮಾ ಕೊಟ್ಟು ಮುಂದಿನ ಸೂಕ್ತ ಚಿಕಿತ್ಸೆಯನ್ನಾದರೂ ಕೊಡಲು ಅವರು ಹೋದ ಮೂರೂ ಆಸ್ಪತ್ರೆಗಳ ವೈದ್ಯರಿಗೆ ಖಂಡಿತಾ ಸಾಧ್ಯವಾಗುತ್ತಿತ್ತು. ಆಗ ಸಾವಿನ ಸಾಧ್ಯತೆ ಗಣನೀಯವಾಗಿ ತಪ್ಪುತ್ತಿತ್ತು.

 ಬಾಲಕಿ ಸಾವಿನ ಮೊದಲು ಯಾರಲ್ಲೂ ಯಾವ ಹೇಳಿಕೆಯನ್ನೇ ಕೊಟ್ಟಿಲ್ಲ. ಸರಣಿ ಹೃದಯಾಘಾತದಿಂತ ಆಕೆ ಸತ್ತ ನಂತರ ಅನಿವಾರ್ಯವಾಗಿ ಅವಳಪ್ಪ ಪೊಲೀಸ್ ದೂರು ದಾಖಲಿಸಿದ ನಂತರವಷ್ಟೆ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ. ಅವಳಪ್ಪ ಹೇಳುತ್ತಿರುವ ಅವಳ ಮರಣ ಪೂರ್ವ ಹೇಳಿಕೆಯ ಕಥೆಗಳು ಯಾವ ಕಾಗಕ್ಕ ಗೂಬಕ್ಕರ ಕಥೆಗಳಿಗೂ ಕಡಿಮೆ ಇಲ್ಲ. ತನ್ನ ಸ್ವಂತ ಮಗಳ ಸಾವನ್ನೆ ಪ್ರಹಸನವಾಗಿಸಿ ಸಾವಿನ ನಂತರ ಅವಳ ಮಾನಭಂಗದ ಕಥೆ ಕಟ್ಟಿದ ಹರಾಮಿ ಅಪ್ಪನೆನ್ನುವ ಪ್ರಾಣಿಗೆ ನಾಚಿಕೆಯಾಗಬೇಕು. ಸಾಮಾನ್ಯ ಜ್ಞಾನ ಇರುವವರಿಗೆ ಈ ಸರಳ ಸತ್ಯ ಅರ್ಥವಾಗುತ್ತದೆ. ಇನ್ನೂ ಕಥೆ ಹೊಡೆಯುವ ರೋಗಿಷ್ಟರಿಗೆ ತೀರ್ಥಹಳ್ಳಿ ಇರಲಿ ಬಹುಷಃ ಜಗತ್ತಿನ ಇನ್ಯಾವ ಊರಿನಲ್ಲೂ ಮದ್ದು ಸಿಗಲಾರದು.

No comments:

Post a Comment