Friday, December 11, 2015

ವಲಿ - ೩೮








ಅಲ್ ತೈಫ್ ಕೋಟೆಯ ಮೇಲೆ ಸತತವಾಗಿ ಲಗ್ಗೆ ಇಟ್ಟರೂ ಸಹ ಅವರನ್ನ ಅಲುಗಾಡಿಸಲಾಗದೆ ಮಹಮದನ ಪಡೆ ಮೆಕ್ಕಾ ಯಾತ್ರೆ ಮುಗಿಸಿ ಮದೀನಾವನ್ನು ಬಂದು ಮುಟ್ಟಿ ಆಗಲೆ ಹತ್ತು ತಿಂಗಳು ಕಳೆದಿತ್ತು. ಆ ಅತೃಪ್ತಿ ಆತನ ಒಳಮನಸಿನಲ್ಲಿ ಆಗಾಗ ಮುಳ್ಳಿನಂತೆ ಚುಚ್ಚುತ್ತಲೆ ಉಳಿದಿತ್ತು. 'ನರಿಯನ್ನು ನರಿಯ ಬಿಲದಲ್ಲಿಯೆ ಇರಲು ಬಿಟ್ಟರೆ ಅದು ಯಾರಿಗೂ ತೊಂದರೆ ಕೊಡಲಾರದು!' ಅನ್ನುವ ಯುದ್ಧನೀತಿಯ ವಿವೇಕವನ್ನು ಮಹಮದ್ ಒಲ್ಲದ ಮನಸ್ಸಿನಿಂದಲೆ ಆಗ ಅಂಗೀಕರಿಸಿ ತುಸು ಕಾಲ ಸುಮ್ಮನಾಗಲು ಒಪ್ಪಿದ್ದ. ಆದರೆ ಆತ ಅವರನ್ನು ಸುಮ್ಮನೆ ಇರಗೊಟ್ಟಿದ್ದರೂ ಸಹ ಅಲ್ ತೈಫಿನ ಸುತ್ತಮುತ್ತಲಿನ ಆತನ ಮತಾವಲಂಭಿ ಮುಸಲ್ಮಾನರು ಆ ನೀತಿಯನ್ನ ಪಾಲಿಸಿರಲಿಲ್ಲ. ಹವಾಜಿನರಂತೂ ಅನಗತ್ಯವಾಗಿ ಅವಕಾಶ ಸಿಕ್ಕಾಗಲೆಲ್ಲ ಅಲ್ ತೈಫಿನವರನ್ನ ಕಾಡಿಸಿ ಪೀಡಿಸಿ ವಿಕೃತ ಆನಂದ ಅನುಭವಿಸುತ್ತಿದ್ದರು. ಅವರ ತೋಟ, ಜಮೀನು ಹಾಗೂ ಇನ್ನಿತರ ಆಸ್ತಿ ಪಾಸ್ತಿಗಳನ್ನ ಬೇಕಂತಲೆ ಹಾಳುಗೆಡವಿ ಉಪದ್ರ ನೀಡುತ್ತಿದ್ದರು.


ಈ ಮಧ್ಯೆ ಎಮನ್ ದೇಶಕ್ಕೆ ಯುದ್ಧ ತಂತ್ರಗಳ ಕಲಿಕೆಗಾಗಿ ಹೋಗಿದ್ದ ಅಲ್ ತೈಫಿನ ಮುಖಂಡರಲೊಬ್ಬನಾಗಿದ್ದ ಓರ್ವಾ ಇಬ್ನ್ ಮಸೂದ್ ಎಂಬಾತ ಅಲ್ಲಿಂದ ತನ್ನ ಮನೆಗೆ ಮರಳುವ ದಾರಿಯಲ್ಲಿ ಮದೀನಕ್ಕೆ ಭೇಟಿ ಕೊಟ್ಟು ಅಲ್ಲಿ ಮಹಮದನನ್ನು ಮುಖತಃ ಭೇಟಿಯಾದ. ಅಲ್ ಹೊಬೈಡಿಯಾದಲ್ಲಿ ಆತ ಈಗಾಗಲೆ ಮುಸಲ್ಮಾನರ ಸಂಪರ್ಕಕ್ಕೆ ಬಂದಿದ್ದ. ಅಲ್ಲಿ ಆತ ಅವರ ಮತಾಚರಣೆಯ ಶಿಸ್ತು, ಧಾರ್ಮಿಕ ನಡುವಳಿಕೆ ಹಾಗೂ ಆಚರಣೆಗಳಿಂದ ಪ್ರಭಾವಿತನೂ ಆಗಿದ್ದ. ಹೀಗಾಗಿ ಮಹಮದನನ್ನು ಭೇಟಿಯಾದ ಆತ ಇಸ್ಲಾಮಿಗೆ ಮತಾಂತರಿತನಾದ. ತಾನು ಅನಂತರ ಅಲ್ ತೈಫಿಗೆ ಹಿಂದಿರುಗಿ ಅಲ್ಲಿನವರನ್ನ ಇಸ್ಲಾಮಿನತ್ತ ಒಲಿಸಿ ಮತಾಂತರ ಮಾಡುವ ಪ್ರಯತ್ನಕ್ಕಿಳಿಯುತ್ತೇನೆ ಎಂದು ತನ್ನ ಮನದಾಸೆಯನ್ನ ಅರುಹಿದ.



ಮಹಮದನಿಗೆ ಅಲ್ ತೈಫ್ ಜನರ ಅನಾಗರೀಕ ನಡುವಳಿಕೆಯ ಸ್ಪಷ್ಟ ಪರಿಚಯವಿತ್ತು. ಆವರು ಯಾವುದೆ ಕಾರಣಕ್ಕೂ ಅವರು ಮತಾಂತರವಾಗಲಿಕ್ಕೆ ಒಪ್ಪದೆ ಅಜ್ಞಾನದಿಂದ ಅವನ ಮೇಲೆ ಎಗರಿ ಬೀಳಬಹುದು ಎಂದು ತರ್ಕಿಸಿ ಮಸೂದನಿಗೆ ಮರಳಿ ಮನೆಗೆ ಹೋಗದಂತೆ ಸೂಚಿಸಿದ. ಆದರೆ ತನ್ನವರ ಮೇಲೆ ಅಪಾರವಾದ ಭರವಸೆಯನ್ನು ಇರಿಸಿಕೊಂಡಿದ್ದ ಮಸೂದ್ ಮಾತ್ರ ಇದರಿಂದ ವಿಚಲಿತನಾಗದೆ ಅಲ್ ತೈಫಿನತ್ತ ಪಾದ ಬೆಳೆಸಿದ. ಮನೆಯನ್ನ ಮುಟ್ಟಿದವನೆ ತನ್ನ ಬಂಧು ಬಾಂಧವರಲ್ಲಿ ಆತ ತಾನು ಇಸ್ಲಾಮಿನ ಅನುಯಾಯಿಯಾಗಿ ಬದಲಾದ ವಿಷಯವನ್ನ ಹೇಳಿಕೊಂಡ. ಅವರೆಲ್ಲರೂ ಸಹ ತನ್ನನ್ನು ಅನುಸರಿಸಬೇಕೆಂದು ಆತ ಕರೆ ನೀಡಿದ. ಈ ಘೋಷಣೆಯ ನಂತರ ಬಂಧುಗಳೆಲ್ಲಾ ಚದುರಿ ತಮ್ಮ ತಮ್ಮ ಮನೆಯನ್ನ ಸೇರಿಕೊಂಡರು. ಅವರೆಲ್ಲಾ ತಮ್ಮ ತಮ್ಮೊಳಗೆ ಆಪ್ತ ಸಮಾಲೋಚನೆ ನಡೆಸಿಕೊಂಡರು.



ಮರು ಬೆಳಗ್ಯೆ ಉತ್ಸಾಹದಿಂದ ತನ್ನ ಮನೆಯ ಛಾವಣಿಯನ್ನೇರಿದ ಮಸೂದ್ ಅಲ್ಲಾಹೋ ಅಕ್ಬರ್ ಎಂದು ಪ್ರಾರ್ಥನೆಯ ಕರೆಕೊಟ್ಟು ಅವರೆಲ್ಲರನ್ನ ಪ್ರಾರ್ಥನೆಗೆ ಆಹ್ವಾನಿಸಲು ಯತ್ನಿಸುತ್ತಿರುವಾಗ ಎಲ್ಲಾ ದಿಕ್ಕುಗಳಿಂದ ಬಿರು ಬಾಣಗಳ ಪ್ರತಿಕ್ರಿಯೆ ಅವನಿಗೆ ಸಿಕ್ಕಿತು! ಹೀಗೆ ಸಿಕ್ಕ ಪ್ರತ್ಯುತ್ತರದಿಂದ ಘಾಸಿಯಾದ ಆತ ನೆತ್ತರು ಸುರಿಸುತ್ತಾ ನೆಲಕ್ಕುರುಳಿ ಅಸು ನೀಗಿದ. ಆತನ ಮಿತ್ರರು ಪ್ರಾಥಮಿಕ ಉಪಚಾರ ಮಾಡಿದ್ದೂ ಸಹ ಉಪಯೋಗಕ್ಕೆ ಬರಲಿಲ್ಲ. ಆದರೆ ಸಾಯುವ ಮುನ್ನ ಆತ ಹೊನೈನ್'ನ ಯುದ್ಧದಲ್ಲಿ ಮಡಿದ ಮುಸಲ್ಮಾನರ ಗೋರಿಗಳ ಪಕ್ಕದಲ್ಲಿ ತನ್ನನ್ನೂ ಸಹ ಹೂಳಬೇಕೆಂದು ಕೋರಿಕೊಂಡ. ಈ ಸುದ್ದಿ ಮಹಮದನ ಕಿವಿಗೆ ಬೀಳುತ್ತಲೆ ಆತ ಕ್ಷುದ್ರನಾದ, ಮಸೂದನನ್ನು ಆತ ಹುತಾತ್ಮನೆಂದು ಕೊಂಡಾಡಿದ.


ಮಸೂದನ ಬಲಿದಾನ ಮಹಮದನನ್ನು ಅಲ್ ತೈಫರ ಮೇಲೆ ಇನ್ನಷ್ಟು ಕಠಿಣನಾಗಿ ವರ್ತಿಸುವಂತೆ ಮಾಡಿತು. ಅಲ್ ತೈಫರೂ ಸಹ ಇದನ್ನೆಲ್ಲಾ ಪರಿಗಣನೆಗೆ ಆರಂಭದಲ್ಲಿ ತೆಗೆದುಕೊಳ್ಳದಿದ್ದರೂ ಸಹ ಮುಸಲ್ಮಾನರ ನಿರಂತರ ಪೀಡೆ ಅವರನ್ನ ಕಂಗಾಲು ಮಾಡತೊಡಗಿತು. ಬೇರೆ ಉಪಾಯ ಕಾಣದೆ ಅವರು ಒಂದು ಸಂಧಾನ ಸೂತ್ರಕ್ಕೆ ಒಳಪಡುವ ಉದ್ದೇಶದಿಂದ ತಮ್ಮ ಪ್ರಮುಖ ಆರು ಮುಖಂಡರ ನೇತೃತ್ವದಲ್ಲಿ ಪ್ರತ್ಯೇಕ ಇಪ್ಪತ್ತು ಪ್ರತಿನಿಧಿಗಳ ಸಂಧಾನದ ಸಮಾಲೋಚಕ ತಂಡವನ್ನು ಮಹಮದನ ಬಳಿ ಕಳುಹಿಸಿಕೊಟ್ಟರು. ಮಹಮದ್ ಅವರನ್ನ ಆದರದಿಂದಲೆ ಬರ ಮಾಡಿಕೊಂಡು ತನ್ನ ಮಸೀದಿಯ ಪಕ್ಕದಲ್ಲಿಯೆ ಅವರಿಗೆ ಬಿಡಾರ ಕಲ್ಪಿಸಿ ಉಳಿಯುವ ವ್ಯವಸ್ಥೆ ಮಾಡಿದ.



ದಿನವಿಡಿ ಅವರೆಲ್ಲರಿಗೆ ತನ್ನ ಧರ್ಮೋಪದೇಶ ನೀಡಿದ. ಪ್ರಮುಖವಾಗಿ ಅದರಲ್ಲಿ ಮೂರ್ತಿ ಪೂಜೆಗೆ ನಿಷೇಧವಿತ್ತು. ಆದರೆ ಅಲ್ ತೈಫ್ ಜನರು ಯಾವುದೆ ಕಾರಣಕ್ಕೂ ಈ ಹಿಂದಿನ ತಮ್ಮ ದೇವತೆಯನ್ನ ಬಿಟ್ಟುಕೊಡಲು ರಾಜಿಯಾಗಲಿಲ್ಲ. ತಮ್ಮ ಆರಾಧನೆಯ ಶಕ್ತಿ ದೇವತೆ ಸನಾತನರ ಕಾಳಿಯನ್ನ ಹೋಲುವ ಅಲ್ ಲಾಟಳ ವಿಗ್ರಹವನ್ನ ನಾಶ ಪಡಿಸಲಿಕ್ಕೆ ಸುತರಂ ಒಪ್ಪಲಿಲ್ಲ. ಇಸ್ಲಾಮನ್ನ ಸ್ವೀಕರಿಸಿದರೂ ಸಹ ಅಲ್ ಲಾಟಳನ್ನ ಒಡೆದು ವಿಛಿದ್ರ ಗೊಳಿಸುವುದು ಅಸಾಧ್ಯ ಎಂದವರು ಸ್ಪಷ್ಟ ಪಡಿಸಿದರು. ಇದರಿಂದ ವಿಚಲಿತನಾದ ಮಹಮದ್ ತನಗೆ ವಿಗ್ರಹಾರಾಧನೆಯ ಬಗೆಗಿರುವ ಅಸಹನೆ, ಅಪನಂಬಿಕೆ ಹಾಗೂ ಅಸಮಾಧಾನವನ್ನು ಅವರಿಗೆ ಮನದಟ್ಟು ಮಾಡಿಕೊಡಲು ಹೆಣಗಿದ. ಏಕ ದೈವದ ಆರಾಧನೆಗೆ ಒತ್ತು ಕೊಡುವ ಇಸ್ಲಾಮಿನಲ್ಲಿ ಮೂರ್ತಿ ಪೂಜೆಯನ್ನ ಪ್ರೋತ್ಸಾಹಿಸಲಾಗದು ಎಂದಾತ ನುಡಿದ.




ತಾನು ಸಾರುವ ತತ್ವಗಳು ವಿಗ್ರಹಾರಾಧನೆಗೆ ಪೂರಕವಾಗಿಲ್ಲ ಎಂದಾತ ಅವರೆಲ್ಲರಿಗೆ ತಿಳಿಯ ಪಡಿಸಿದ. ಇಸ್ಲಾಮ್ ಹಾಗೂ ವಿಗ್ರಹಾರಾಧನೆ ಒಟ್ಟೊಟ್ಟಿಗೆ ಸಾಗಲಾರದು ಎಂದೂ ಸಹ ಆತ ಹೇಳಿಕೆ ನೀಡಿದ. ಕಾಲಾನುಕ್ರಮದಲ್ಲಿ ಅದನ್ನ ಪರಗಣಿಸುವ ಹಾಗೂ ವಿಗ್ರಹ ನಾಶಕ್ಕೆ ಸೂಕ್ತ ಸಮಯಾವಕಾಶ ಕೋರುವ ಅವರ ಮನವಿಗಳನ್ನೆಲ್ಲಾ ಆತ ತಿರಸ್ಕಾರ ಸೂಚಿಸಿ ಈ ಕೂಡಲೆ ಅದನ್ನ ಒಡೆದು ಹಾಕಲೇಬೇಕೆಂದು ಪಟ್ಟು ಹಿಡಿದ.


ಆ ಕಾರ್ಯ ಮುಗಿದ ನಂತರ ಇಸ್ಲಾಮಿಗೆ ಒಳಪಟ್ಟ ಎಲ್ಲರೂ ನಿತ್ಯ ಅಲ್ಲಾನನ್ನು ಪ್ರಾರ್ಥಿಸಬೇಕು. ಪ್ರಾರ್ಥನೆಯ ಆಚರಣೆ ಇಲ್ಲದ ಇಸ್ಲಾಮಿಗೆ ಬೆಲೆ ಇಲ್ಲ ಎಂದಾತ ನುಡಿದ. ವಿಧಿ ಇಲ್ಲದೆ ನೆಮ್ಮದಿಗೆ ಕಾದಿದ್ದ ಅಲ್ ತೈಫಿನ ಮಂದಿ ಸಹ ಇದಕ್ಕೆ ಅನಿವಾರ್ಯವಾಗಿ ಸಮ್ಮತಿ ಸೂಚಿಸಿದರು. ಆದರೆ ಅವರೂ ಕೂಡ ಒಂದು ನಿಬಂಧನೆಯನ್ನ ಒಡ್ದಿದರು. ಅಲ್ ತೈಫ್ ಕಾಡಿನ ಪರಿಸರದಲ್ಲಿನ ಮೃಗಗಳನ್ನ ಮುಂದೆ ಬೇಟೆಯಾಡುವಂತಿಲ್ಲ ಎಂದವರು ಮನವಿ ಮಾಡಿಕೊಂಡದ್ದಕ್ಕೆ ಮಹಮದ್ ಸಮ್ಮತಿಸಿದ. ಆ ಬಗ್ಗೆ ಒಂದು ಸಾರ್ವಜನಿಕ ಶಾಸನ ಪತ್ರವನ್ನಾತ ಹೊರಡಿಸಿದ. ಅದರಲ್ಲಿ ಅಲ್ ತೈಫ್ ಕಾಡನ್ನ ಸುರಕ್ಷಿತಾರಣ್ಯವೆಂದು ಘೋಷಿಸಿ ಯಾರಾದರೂ ಅಲ್ಲಿನ ಮೃಗ ಖಗ ಹಾಗೂ ವೃಕ್ಷಗಳನ್ನ ನಾಶ ಪಡಿಸಿದ್ದು ಕಂಡು ಬಂದರೆ ಅಂತವರನ್ನ ಮುಲಾಜಿಲ್ಲದೆ ಹಿಡಿದು ಹಿಂಸಿಸಿ ಅವರ ಬಟ್ಟೆ ಕಳಚಿ ಬಿಡಲಾಗುವುದು ಎಂದೆನ್ನಲಾಗಿತ್ತು. ಅದಕ್ಕೂ ಮೀರಿ ಮತ್ತೆಯೂ ಮುಂದುವರೆದರೆ ಅಂತವರನ್ನ ಮಹಮದನ ಮುಂದೆ ಹಿಡಿದೆಳೆತಂದು ಆತ ಸೂಚಿಸುವ ಶಿಕ್ಷೆಗಳಿಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಲಾಗಿತ್ತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೫೧ರಲ್ಲಿ.



ಅಬು ಸಫ್ಯಾನ್ ಹಾಗೂ ಅಲ್ ಮೊಘಿರಾರನ್ನು ಪ್ರತ್ಯೇಕವಾಗಿ ಅಲ್ ಲಾಟಳ ವಿಗ್ರಹವನ್ನ ಹಾಳುಗೆಡವಲೆಂದೆ ಅವರೊಂದಿಗೆ ಕಳುಹಿಸಿಕೊಡಲಾಯಿತು. ಗುಡಿಯಲ್ಲಿ ಪ್ರಾರ್ಥಿಸುತ್ತಿದ್ದವರ ಹತಾಶ ರಕ್ಷಣಾ ಪ್ರಯತ್ನ ಹಾಗೂ ಕಡು ವಿರೋಧವನ್ನ ಬರ್ಬರವಾಗಿ ಹತ್ತಿಕ್ಕಿ ಅವರಿಬ್ಬರೂ ಮಚ್ಚು, ಗುದ್ದಲಿ ಹಿಡಿದು ಅಲ್ಲಿನ ಮೂರ್ತಿಯನ್ನ ಬುಡಸಹಿತ ಛಿದ್ರಗೊಳಿಸಿ ಒಡೆದು ಹಾಕಿದರು. ಈ ಗುಡಿಯ ನಾಶದೊಂದಿಗೆ ಮಹಮದನ ವಿರುದ್ಧ ಸೆಣೆಸುತ್ತಿದ್ದ ಅ ಕೊನೆಯ ಸಂಸ್ಥಾನ ಅಲ್ ತೈಫ್ ಕೂಡಾ ತನ್ನ ಸ್ವಾತಂತ್ರ್ಯವನ್ನ ಕಳೆದುಕೊಂಡು ಮಹಮದನ ಕಪಿಮುಷ್ಠಿಯಲ್ಲಿ ಚಿರ ಬಂಧಿಯಾಯಿತು.


ಕ್ರಿಸ್ತ ಶಕ ೬೩೧ರಲ್ಲಿ ವಾರ್ಷಿಕ ಮೆಕ್ಕಾ ಯಾತ್ರೆಗೆ ತಾನು ತೆರಳದೆ ಮಾವ ಅಬು ಬಕರನ್ನು ಮೂರು ಸಾವಿರ ಯಾತ್ರಿಕರೊಂದಿಗೆ ಮಹಮದ್ ಕಳುಹಿಸಿಕೊಟ್ಟ. ಅದಕ್ಕಾತ ಕೊಟ್ಟ ಕಾರಣ ಕುತೂಹಲಕರವಾಗಿತ್ತು. ಈಗಲೂ ಅಲ್ಲಿ ವಿಧರ್ಮೀಯರು ಬಂದು ಹರಕೆ ತೀರಿಸುತ್ತಿದ್ದಾರೆ. ಯಾವತ್ತು ಕೇವಲ ಮುಸಲ್ಮಾನರು ಮಾತ್ರ ಅಲ್ಲಿಗೆ ಬರುವಂತಾಗಿ ಉಳಿದವರನ್ನೆಲ್ಲಾ ದೂರ ತಳ್ಳಲಾಗುತ್ತದೆಯೋ ಅಂದು ತಾನು ಆ ಸ್ಥಳದ ಪಾವಿತ್ರ್ಯವನ್ನು ಒಪ್ಪಿಕೊಳ್ಳುತ್ತೇನೆ ಎಂದಾತ ಹೇಳಿಕೊಂಡ. ಅದರ ಸಂಬಂಧ ಅಲಿಯ ಕೈಗೆ ಒಂದು ಆಜ್ಞಾ ಪರ್ತವನ್ನ ದಾಟಿಸಿ ಅದನ್ನ ಯಾತ್ರೆಯ ಮಧ್ಯದಲ್ಲಿದ್ದ ಮಾವ ಅಬು ಬಕರನಿಗೆ ಮುಟ್ಟಿಸುವಂತೆ ಹೆಳಿದ. ಆ ಬಿಡುಗಡೆ ಪತ್ರ ಆತನಿಗೆ ಸಿಕ್ಕಿದ ಖುರ್ಹಾನಿನ ಸುರಾ ೯/೧೨೯ರ ಸಾರಾಂಶವಾಗಿದೆ. ಆಸಕ್ತರು ಸುರಾ ಸಂಖ್ಯೆ ೫/೨೮ - ೯/೧ನ್ನು ಸಹ ಈ ನಿಟ್ಟಿನಲ್ಲಿ ಗಮನಿಸಬಹುದು.


ಅದರನುಸಾರ ವಿಧರ್ಮೀಯರ ಮೇಲಿನ ಯಾವುದೆ ರಕ್ಷಣೆಯ ಹೊಣೆಗಾರಿಕೆಯಿಂದ ಆತನನ್ನು ಹಾಗೂ ಆತನ ಸ್ವ ಘೋಷಿತ ಪ್ರವಾದಿತ್ವವನ್ನು ಮುಕ್ತ ಮಾಡಲಾಗಿತ್ತು! ಅಂದರೆ ಸರಳ ಮಾತುಗಳಲ್ಲಿ ಮುಸಲ್ಮಾನನಾದವನು ಮೆಕ್ಕಾದಲ್ಲಿ ಮುಸಲ್ಮಾನನಲ್ಲದವನ ಕೊಳೆಯನ್ನ ಮಾಡಲು ಪರೋಕ್ಷವಾಗಿ ಮಹಮದ್ ಕುಮ್ಮಕ್ಕಿನ ಕರೆಕೊಟ್ಟಿದ್ದ. ಯಾತ್ರೆಯ ದಿನದಂದು ವಿಧರ್ಮೀಯರು ಪಶ್ಚಾತಾಪ ಪಟ್ಟರೆ ಅವರಿಗೆ ಒಳಿತಾಗುತ್ತದೆ. ಇಲ್ಲದೆ ಹೋದರೆ ಅವರಿಗೆಲ್ಲಾ ಘೋರ ಶಿಕ್ಷೆ ಕಾದಿದೆ. ಅಂತವರನ್ನೆಲ್ಲ ಮುಂದಿನ ನಾಲ್ಕು ತಿಂಗಳು ಸಮಯಾವಕಾಶ ನೀಡಿ ಹಾಗೆಯೆ ಬಿಡಲಾಗುವುದು. ಅಷ್ಟರೊಳಗೆ ಅವರು ಇಸ್ಲಾಮನ್ನು ಒಪ್ಪಿಕೊಂಡು ಮುಸಲ್ಮಾನರಾಗಬೇಕು.



ಅನಂತರವೂ ಅವರು ಅವಿಶ್ವಾಸಿಗಳಾಗಿಯೆ ಉಳಿದರೆ ಅವರ ವಿರುದ್ಧ ಹೋರಾಡಿ ಅಂತಹ ಅಧರ್ಮಿಗಳನ್ನ ಸೆರೆ ಹಿಡಿಯಲಾಗುವುದು. ಆ ಮೇಲೆ ಕಪ್ಪ ಪಡೆದು ಬಿಡುಗಡೆ ಮಾಡುವುದೋ, ಇಲ್ಲವೆ ಕೊಂದು ಕೊನೆಗಾಣಿಸುವುದೋ ಎಂಬುದನ್ನ ಸಂದರ್ಭಾನುಸಾರ ನಿರ್ಧರಿಸಲಾಗುತ್ತದೆ. ಅಲ್ಲದೆ ವಿಧರ್ಮೀಯರು ಸ್ವಚ್ಛರಲ್ಲದ ಕಾರಣ ಅವರು ಮೆಕ್ಕಾವನ್ನು ಪ್ರವೇಶಿಸಿ ಅಲ್ಲಿನ ಪರಿಸರವನ್ನ ಕಲುಷಿತಗೊಳಿಸುವಂತಿಲ್ಲ ಎಂದಾತ ಸಾರಿದ. ಈ ಅಸಂಬದ್ಧ ಹೇಳಿಕೆ ಮುಸಲ್ಮಾನರನ್ನೂ ಸಹ ಇನ್ನಿತರರಿಗಿಂತ ಅತಿ ಅತಿ ಕೊಳಕರೆಂದೆ ತೀರ್ಮಾನಿಸಿರುವ ಇನ್ನಿತರ ಬುಡಕಟ್ಟಿನವರ ವಿನೋದದ ನಡುವೆ ಹಾಸ್ಯಾಸ್ಪದ ಪ್ರಹಸನವಾಗಿ ಚಾಲ್ತಿಗೂ ಬಂದಿತು.



ಅಲಿ ಇದನ್ನ ಮೀನಾದಲ್ಲಿ ಯಾತ್ರೆಯ ಅಂತಿಮದಿನ ಸೈತಾನನಿಗೆ ಕಲ್ಲೆಸೆಯುವ ಸ್ಥಳದಲ್ಲಿ ನೆರೆದಿದ್ದ ಯಾತ್ರಿಕರನ್ನ ಉದ್ದೇಶಿಸಿ ದೊಡ್ದ ಗಂಟಲಿನಲ್ಲಿ ಓದಿ ಹೇಳಿದ. ಹಾಗೆ ಆತ ಉದುಇರಿಸಿದ ಅಣಿಮುತ್ತುಗಳನ್ನ ಶಾಂತವಾಗಿ ಆಲೈಸಿದ ಯಾತ್ರಿಕರು ಅದನ್ನ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದ ನಂತ ಅರೇಬಿಯಾದ ಉದ್ದಗಲಕ್ಕೂ ಪಸರಿಸಿದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೬೦ರಲ್ಲಿ.



ಇದರ ಫಲಿತಾಂಶ ಮುಂದೆ ನಿರೀಕ್ಷೆಯಂತೆಯೆ ಹಿಂಸಾತ್ಮಕವಾಗಿದ್ದಿತು. ಎಲ್ಲೆಲ್ಲಿ ಆ ತನಕ ಇಸ್ಲಾಮನ್ನ ವಿರೋಧಿಸಲಾಗುತ್ತಿತ್ತೋ ಅಲ್ಲಿಗೆಲ್ಲಾ ಮಹಮದನ ಮತೋನ್ಮತ್ತ ಮುಸಲ್ಮಾನರ ರಕ್ಕಸ ಪಡೆ ನುಗ್ಗಿ ಅವರನ್ನೆಲ್ಲಾ ಸದೆ ಬಡಿಯಿತು. ಅಂತಹ ಸಂಸ್ಥಾನಗಳ ವಿರುದ್ಧ ಕೇವಲ ಧಾರ್ಮಿಕ ಕಾರಣಕ್ಕೆ ಕ್ರೂರವಾದ ಯುದ್ಧಾಚರಣೆಯನ್ನ ನಡೆಸಿ ಹಿಂಸೆಯ ಉತ್ತುಂಗದಲ್ಲಿ ವಿರೋಧಿಸಿ ತಮ್ಮ ಮಾತೃಧರ್ಮ ಉಳಿಸಿಕೊಳ್ಳಲು ಹೆಣಗಾಡಿದ ನಿಶ್ಪಾಪಿಗಳನ್ನ ಮಣಿಸಲಾಯಿತು. ಈ ಮೂಲಕ ಅರೇಬಿಯಾದ ಪ್ರತಿಯೊಂದು ಕ್ಷೇತ್ರ, ಸಂಸ್ಥಾನ ಹಾಗೂ ಪ್ರಾಂತ್ಯದಲ್ಲಿ ಇಸ್ಲಾಮ್ ಒತ್ತಾಯಪೂರ್ವಕವಾಗಿ ಲಗ್ಗೆ ಇಟ್ಟು ಪಸರಿಸಿತು ಹಾಗೂ ಬಲವಾಗಿ ಆರಂಭದ ದಿನಗಳಲ್ಲಿಯೆ ಬೇರೂರಿ ಮರಳುಗಾಡಿನ ಜಾಲಿಯಂತೆ ವಿಫುಲವಾಗಿ ಚಿಗುರಿ ಬೆಳೆದು ನಿಂತಿತು.



( ಇನ್ನೂ ಇದೆ.)