Monday, September 24, 2012

ಈ ನೆಲದ ಇಸ್ಲಾಂ ಕುರಿತ ನನ್ನ ಅಪೇಕ್ಷೆಗಳು....

ಮುಸಲ್ಮಾನ್ ಆಳು ದೊರೆಗಳಿಂದ ಭಾರತೀಯ ಉಪಖಂಡದ ನಿಯಂತ್ರಣ ನೇರವಾಗಿ ಬ್ರಿಟಿಶ್ ರಾಣಿಯ ಕೈ ಸೇರಿ ಅನಂತರ ಭಾರತೀಯರ ಸ್ವಂತ ಸರಕಾರಕ್ಕೆ ಅಧಿಕಾರ ಹಸ್ತಾಂತರ ವಾಗುವ ಹೊತ್ತಿಗಾಗಲೇ ಉನ್ನತ ಆಡಳಿತ ವಲಯದಲ್ಲೀ "ಇಸ್ಲಾಂ ಲಾಬಿ" ದುರ್ಬಲಗೊಂಡು ಪೇಲವವಾಗಿತ್ತು. ಆಳುವ ವರ್ಗವಾಗಿದ್ದ ತಾವು ಸ್ವತಂತ್ರ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಕಾಲ ಕಸವಾಗುತ್ತೇವೆ ಎನ್ನುವ ಪೂರ್ವಾಗ್ರಹವನ್ನ ಮುಸ್ಲಿಂ ಸಮುದಾಯದಲ್ಲಿ ಅದರ ಧರ್ಮಾಂದ ಮೌಲ್ವಿಗಳು ಬೆಳೆಸಿದ್ದರು. ಇದರ ಅಸಲಿಯತ್ತನ್ನ ನನ್ನ ಮುಸಲ್ಮಾನ ಸ್ನೇಹಿತರು ಬಲವಾಗಿ ಅಲ್ಲಗೆ;ಲೆಯುತ್ತರಾದರೂ ನಾನವರಿಗೆ ಅದನ್ನ ಸಶಕ್ತ ಉದಾಹಾರನೆಯೊಂದಿಗೆ ಮನದಟ್ಟು ಮಾಡಿಸಲು ಯತ್ನಿಸಬಲ್ಲೆ. ಮಲಬಾರಿನಾದ್ಯಂತ 1920 ರಲ್ಲಿ ನಡೆದ "ಮಾಪಿಳ್ಳಾ ದಂಗೆ"ಗೆ, ಅದರ ಬರ್ಬರತೆಗೆ- ಆಗ ನಡೆದ ಒತಾಯದ ಸಾಮೂಹಿಕ ಮತಾಂತರಗಳಿಗೆ ಇದೆ ಸುಶುಪ್ತ ವ್ಯಗ್ರತೆಯೇ ನೇರ ಕಾರಣ. ಈ ಒಂದು ಪ್ರಕರಣ ಮುಂದೆ ಮಾಡಿದ ಅನಾಹುತ ಅಪಾರ. ಬ್ರಿಟಿಷರಿಗೂ ಅದೇ ಬೇಕಿತ್ತು! ಸ್ವತಂತ್ರ ಭಾರತವನ್ನ ಪರೋಕ್ಷವಾಗಿ ನಿಯಂತ್ರಿಸಲು ಹಾಗೂ ಸೋವಿಯತ್ ಸಾಮ್ರಾಜ್ಯಶಾಹಿಯನ್ನ ಏಷ್ಯಾದಲ್ಲಿ ವಿಸ್ತರಿಸದಂತೆ ತಡೆಯಲು ಅದಕ್ಕೊಂದು "ಮೆತ್ತೆ ರಾಷ್ಟ್ರ" (ಬಫರ್ ಸ್ಟೇಟ್ ) ಡ ಅಗತ್ಯವಿತ್ತು. ಈ ತೆರೆ ಮರೆಯ ಕಾರಣಕ್ಕೆ ನಮ್ಮ ದೇಶದ ಮುಸ್ಲಿಂ ಸಮುದಾಯದ ಒಡಕು ತುಪ್ಪ ಎರೆಯಿತು. ದೇಶ ಇಬ್ಭಾಗವಾಯಿತು. ಮೊಘಲ್ ಸಾಮ್ರಾಜ್ಯ ಅಳಿದ ನಂತರವೂ ದೇಶದಾದ್ಯಂತ ಕಿರು ಮುಸ್ಲಿಂ ಪಾಳೆಪಟ್ಟುಗಳು ಉಳಿದು ಹೋಗಿದ್ದವಲ್ಲ. ಹೀಗೆ ಉಳಿದಿದ್ದ ಶಾಹಿ ಮನೆತನಗಳ ದಖನ್ ಹುಕೂಮತ್ತು, ಆರ್ಕಾಟಿನ ನವಾಬಗಿರಿ, ಢಾಕಾ ನವಾಬಗಿರಿ, ಜುನಾಘಡದ ನವಾಬಗಿರಿ, ಅವಧದ ನವಾಬಗಿರಿ, ಹಿಸ್ಸಾರಿನ ನವಾಬಗಿರಿ, ಭೂಪಾಲದ ನವಾಬಗಿರಿ ಹೀಗೆ ಅಲ್ಲಲ್ಲಿ ಮುಸ್ಲಿಂ ಪಾಳೆಪಟ್ಟು ಸಕ್ರಿಯವಾಗಿತ್ತು. ಅದಾಗಲಷ್ಟೆ ಯುರೋಪಿಯನ್ನರ ಕಿರುಕುಳದ ವಿರುದ್ಧ ಸೆಟೆದು ನಿಲ್ಲಲು ಆರಂಭಿಸಿದ್ದ,ಭಾರತೀಯ ಯುವಮನಸ್ಸುಗಳಲ್ಲಿ ಧರ್ಮಾತೀತವಾಗಿ ಮೂಡಿದ್ದ ರಾಷ್ಟ್ರೀಯತೆಯ ಸ್ಪಷ್ಟ ಮನೋಭಾವ ತಾತ್ಕಾಲಿಕ ಐಕ್ಯತೆಯ ಆಶಾಭಾವ ಮೂಡಿಸಿದ್ದು ಹೌದಾದರೂ. ಒಡೆದು ಆಳುವುದರಲ್ಲಿ ನಿಸ್ಸೀಮರಾದ ಬ್ರಿಟೀಷರು ಇತ್ತಂಡಗಳಲ್ಲಿ ಸುಶುಪ್ತವಾಗಿದ್ದ ಧಾರ್ಮಿಕ ಅಸಹನೆಯನ್ನ ಪ್ರಚೋದಿಸಿದ ಪರಿಣಾಮ ಭಾರತದಲ್ಲಿ ಕೋಮು ಸಮರಗಳ ಸರಣಿಯೆ ನಡೆದುಹೋದವು- ದುರಾದೃಷ್ಟವಶಾತ್ ಇಂದೂ ಎಗ್ಗುಸಿಗ್ಗಿಲ್ಲದೆ ಅದು ನಡೆಯುತ್ತಲೆ ಇವೆ. ಇದರ ದೊಡ್ಡ ಆಘಾತವೆಂದರೆ ಧರ್ಮದ ಹೆಸರಿನಲ್ಲಿ ಆದ ದೇಶದ ವಿಭಜನೆ. ಅದರ ಪಾಶ್ಚಾತ್ ಪರಿಣಾಮಗಳು ಇಂದೂ ಸಹ ದೇಶದ ನೆಮ್ಮದಿಯನ್ನ ಆಗಾಗ ಕದಡುತ್ತಲೆ ಇವೆ. ಭಾರತೀಯ ಮುಸ್ಲೀಮರಲ್ಲಿ ಶೇಕಡಾ ಐದು ಭಾಗ ಅರಬ್ಬಿ ಬುಡಕಟ್ಟು ಮೂಲದ ಶುದ್ಧರಕ್ತದವರಾಗಿದ್ದರೆ ಉಳಿದವರೆಲ್ಲರೂ ಕಾರಣಾಂತರದಿಂದ ಮತಾಂತರವಾದ ಸನಾತನಧರ್ಮ ಮೂಲದವರೆ ಅನ್ನುವುದು ಸ್ಪಷ್ಟ. ಇದು ಆಯ್ಕೆಯ ಅವರೆಲ್ಲರ ಮತಾಂತರವಾಗಿತ್ತು ಎನ್ನುವ ಇಂದಿನ ಸೋ-ಕಾಲ್ಡ್ ಬುದ್ಧಿಜೀವಿಗಳ ಬುಡಭದ್ರವಿಲ್ಲದ ವಾದಸರಣಿ ಹಾಸ್ಯಾಸ್ಪದ. ಸಮಾಜದ ಮೇಲುವರ್ಗಗಳಲ್ಲಿ ಅಧಿಕಾರದ ಆಸೆಗಾಗಿ ವಿರಳವಾಗಿ ಇದಾಗಿರಬಹುದೇನೋ, ಆದರೆ ಕೆಳವರ್ಗದ ಮಂದಿಗೆ ಅಂತಹ ಯಾವುದೆ ಆಕರ್ಷಣೆಗಳಿರಲಿಲ್ಲ. ಅಲ್ಲದೆ ಶ್ರೇಣೀಕೃತ ವ್ಯವಸ್ಥೆಗೆ ಇತ್ತೀಚಿನವರೆಗೂ ಇದ್ದ ಸಾಮಾಜಿಕ ಸಮ್ಮತಿಯ ಹಿನ್ನೆಲೆಯಲ್ಲಿ ; ಹಿಂದೂ ಜಾತಿಭೇದ ಈ ಪರಿ ಮತಾಂತರಕ್ಕೆ ಪ್ರೋತ್ಸಾಹಿಸಿತು ಅನ್ನುವುದೂ ಕೂಡ ದುರ್ಬಲ ಪೊಳ್ಳುವಾದವೆ ಸರಿ. ಒಮ್ಮೆ ಧರ್ಮಭ್ರಷ್ಟನಾದರೆ ಸಾಕು ಅವನನ್ನ ಹೀನಾಯವಾಗಿ ಕಾಣುವ ಹಾಗೂ ಮರಳಿ ಮಾತೃಧರ್ಮಕ್ಕೆ ಪ್ರವೇಶ ನಿರಾಕರಿಸುವ ಹಿಂದೂ ಸನಾತನ ಧರ್ಮದ ವಿಲಕ್ಷಣತೆಯೆ ಅದರ ಅನೇಕ ಅನುಯಾಯಿಗಳನ್ನ ಕಾಲಕ್ರಮದಲ್ಲಿ ಇಸ್ಲಾಂ ಹಾಗೂ ಕ್ರೈಸ್ತ ಮತಗಳಿಗೆ ಶರತ್ತಿಲ್ಲದೆ ಧಾರೆ ಎರೆದು ಕೊಟ್ಟಿದೆ! ಗೋವೆಯ ಪೋರ್ಚಗೀಸ್ ಪ್ರೇರಿತ ಮತಾಂತರಗಳು ಹಾಗೂ ಮೇಲೆ ಹೇಳಿದ ಮಲಬಾರ್ ದಂಗೆಯ ಸಮಯದಲ್ಲಾದ ಒತ್ತಾಯದ ಮತಾಂತರಗಳು ಇದಕ್ಕೆ ಉತ್ತಮ ಉದಾಹಾರಣೆ. ತನ್ನ ಇಚ್ಚೆಯ ವಿರುದ್ಧವಾಗಿದ್ದರೂ ಸಹ ಒಮ್ಮೆ ಮತಭ್ರಷ್ಟನಾಗಿ ಅದರ ಮರುಕ್ಷಣ ತನ್ನದೇ ಕುಲ ಬಾಂಧವರಿಂದ ಹೀನಾಯವಾಗಿ ನಡೆಸಲ್ಪಟ್ಟ ನವ ಮತಾನ್ತರಿಯ ಮನಸು ಸಹಜವಾಗಿ ಕುದಿಯುತ್ತದೆ. ತನ್ನದಲ್ಲದ ತಪ್ಪಿಗೆ ಹುಟ್ಟುವ ಅಸಹಾಯಕತೆಗೆ ಆತ ತನ್ನ ಪೂರ್ವಧರ್ಮವನ್ನ ದ್ವೇಷಿಸುತ್ತಾನೆ ಜೊತೆಗೆ ನವ ಧರ್ಮವನ್ನ ಅಗತ್ಯಕ್ಕಿಂತ ಹೆಚ್ಚು ಕರ್ಮಠನಾಗಿ ಆಚರಿಸುತ್ತಾನೆ. ಭಾರತೀಯ ಮುಸ್ಲೀಮರ ಮೂಲಭೂತ ಸಮಸ್ಯೆಯೂ ಇದೆ ತಾನೆ? ಅಂದರೆ ಈ ನೆಲದ ಹಿಂದೂಯೇತರ ಧರ್ಮೀಯರ ಧಾರ್ಮಿಕ ಸಭ್ಯತೆ ಈ ಮತಾಂತರಗಳ ಮೂಲಕ ಬದಲಾಗಿದೆಯೆ ಹೊರತು ಅವರ ಭಾರತೀಯ ಸಂಸ್ಕೃತಿಯಲ್ಲ. ಅವರ ಧಾರ್ಮಿಕ ಶ್ರದ್ಧೆ ಅದೇನೆ ಇದ್ದರೂ, ಅವರೂ ಸನಾತನ ಧರ್ಮೀಯರಂತೆ ಇಲ್ಲಿನ ಎಲ್ಲಾ ಹಕ್ಕು- ಭಾದ್ಯತೆಗಳಿಗೆ ಕಟ್ಟು ಬದ್ಧರಾಗಿರಲೇಬೇಕು. ಅವರ ರಕ್ತದಲ್ಲಿ- ವಂಶವಾಹಿಗಳಲ್ಲಿ ಭಾರತೀಯತೆ ಸುಶುಪ್ತವಾಗಿ ಇರುವ ತನಕ ಬಾಹ್ಯ ಭೂಷಣ-ಆಹಾರಗಳಲ್ಲಿ ಇನ್ಯಾವುದೊ ದೇಶದವರನ್ನ ಅನುಕರಿಸುವುದು ಕೇವಲ ನಕಲಿ ಛದ್ಮವೇಷದಂತೆ ಕಾಣಿಸುತ್ತದೆ. ಭಾರತೀಯ ಮುಸ್ಲೀಮರು ಅದನ್ನು ಅರಿತುಕೊಂಡು ಪುಂಡ ಧರ್ಮಭೋದಕರ ಹಾಗೂ ಸ್ವಾರ್ಥಿ ರಾಜಕಾರಣಿಗಳ ಹುನ್ನಾರಕ್ಕೆ ಬಲಿಯಾಗಬಾರದು. ಅಲ್ಲದೆ ಈ ನಡುವೆ "ವಹಾಬಿ ಧರ್ಮಾಂಧತೆ"ಯ ಮಾರಿ ಭಾರತವನ್ನ ಆಂತರಿಕವಾಗಿ ಕೊರೆಯುತ್ತಿದೆ. ಶುದ್ಧ ಇಸ್ಲಾಂ(?) ಪ್ರತಿಪಾದಿಸುವ ಸೌದಿ ದೊರೆಗಳ "ತೈಲ ಧನ" ಪ್ರಾಯೋಜಿತ "ವಹಾಬಿ ಪಂಥ"ದ ಹಗಲು ಕಂಡ ಬಾವಿಗೆ ಭಾರತೀಯ ಮುಸ್ಲೀಮರು ಹಗಲೇ ಬೀಳುತ್ತಿರುವುದು ಮಾತ್ರ ದಿಗಿಲು ಹುಟ್ಟಿಸುವಂತಿದೆ. "ಭಾರತದಲ್ಲಿ ನಮಗೆ ಅಲ್ಲಾ ಬೇಕು ;ಆದರೆ ಮುಲ್ಲಾ ಅಲ್ಲ!". ಅರಬ್ ಜಗತ್ತಿನಲ್ಲಿಯೂ ಇಲ್ಲದ ಭಾರತೀಯ ಇಸ್ಲಾಮಿನ ಕೆಟ್ಟ ಉಪಲಬ್ಡಿ ಈ ಮುಲ್ಲಾಗಳು. ಮತ ಪಾಂಡಿತ್ಯದ ಸೋಗು ಹಾಕುತ್ತಾ ಮೂಲ ಇಸ್ಲಾಮಿನ ವ್ಯಾಖ್ಯೆಯನ್ನ ತಿರುಚಿ ವಾಸ್ತವ ಜಗತ್ತಿನಿಂದ ಧರ್ಮಾನುಯಾಯಿಗಳನ್ನ ವಂಚಿಸುವ ಈ ಧರ್ಮಾಂಧರ ದೆಸೆಯಿಂದ ತಲೆಮಾರುಗಳ ಹಿಂದೆ ಧರ್ಮಾಂತರವಾದ ಭಾರತೀಯ ಮುಸ್ಲಿಂ ಮನಸ್ಸುಗಳು ಇಬ್ಬಂದಿತನದಲ್ಲಿ ಸಿಲುಕಿ ಒದ್ದಾಡುವಂತಾಗುತ್ತಿದೆ. 'ದೀನ್ ಮೇ ಧಾಡಿ ಹೈ...ಪರ್ ಧಾಡಿ ಮೇ ದೀನ್ ನಹಿ!' ಎನ್ನುವುದು ಭಾರತೀಯ ಮುಸ್ಲಿಂ ಬಾಂಧವರಿಗೆ ಅರ್ಥವಾಗಬೇಕು. ಅಲ್ಲೊಬ್ಬ ಗೋಮುಖ ವ್ಯಾಘ್ರ ಕಸಾಯಿ ಎಸಿ ರೂಮಿನಲ್ಲಿ ಕುಳಿತು ಸದ್ಭಾವನೆಗಾಗಿ ಉಪಾವಾಸ ಮಾಡುವುದು ಈ ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಅಪಾಯಕಾರಿಯೊ, ಅಷ್ಟೆ ಅಪಾಯ ಕೇವಲ ಬಾಹ್ಯ ತೋರಿಕೆಯ ಧರ್ಮ ಭೋದಿಸುವ ಮುಲ್ಲಾಗಳಿಂದಲೂ ಕಟ್ಟಿಟ್ಟಿದೆ. ಅಷ್ಟಕ್ಕೂ ಮಹಮದ್ ಪೈಗಂಬರ್ ಭೋಧನೆಗಳು ಅರೇಬಿಯಾ ಮರಳುಗಾಡಿನ ಆಕಾಲದ ಖುರೈಶಿ ಬುಡಕಟ್ಟುಗಳ ಆಚರಣೆಗೆ ಅನುಸಾರವಾಗಿತ್ತು. ಅಲ್ಲಿನ ದೈನಂದಿನ ಕಟ್ಟು-ಕಟ್ಟಳೆಗಳು ಭಾರತದ ಮಟ್ಟಿಗೆ ಬಹುಪಾಲು ಅಪ್ರಸ್ತುತ. ಕೇವಲ ಗಡ್ಡ ಬಿಟ್ಟು, ಬಲೆಬಲೆ ಟೋಪಿ ಧರಿಸುವಂತೆ ಮಾಡಿ ಮುಸ್ಲಿಂ ಹುಡುಗರ ಪ್ರತ್ಯೇಕತೆಯನ್ನು ಮುಖ್ಯವಾಹಿನಿಯಿಂದ ಕಾಪಾಡಿಕೊಳ್ಳುವುದು, ಹಿಜಾಬ್ -ನಕಾಬ್ -ಬುರ್ಕಾ (ತಲೆವಸ್ತ್ರ- ಮುಖವಸ್ತ್ರ- ಮೈಮುಚ್ಚುವ ನಿಲುವಂಗಿ ) ಧರಿಸುವಂತೆ ಮುಸ್ಲಿಂ ಹೆಂಗಸರನ್ನ ಪೀಡಿಸುವುದು ಇಂತಹ ಬಹಿರಂಗ ಪ್ರದರ್ಶನಗಳು ಪರಸ್ಪರರಲ್ಲಿ ಅಪನಂಬಿಕೆಯನ್ನ ಹುಟ್ಟಿಸಿ ದೇಶದ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗ ಬಲ್ಲದೆ ಹೊರತು ಎಂದಿಗೂ ಪೂರಕವಾಗಲಾರದು. ರೋಮಿನಲ್ಲಿ ರೋಮನ್ನರಂತಿರಬೇಕಲ್ಲವೆ? ಹಾಗಂತ ಮುಸ್ಲೀಮರಿಗೆ ಯಾವುದೆ ಧಾರ್ಮಿಕ ನಿರ್ಬಂಧಗಳು ಭಾರತದಲ್ಲಿಲ್ಲವಲ್ಲ? ಇನ್ಯಾವುದೆ ಶರಿಯತ್ ಬದ್ಧ ಮುಸ್ಲಿಂ ದೇಶಗಳಿಗಿಂತಲೂ ಇಲ್ಲಿನ ಆಡಳಿತ ಮುಸ್ಲೀಂ ಸಮುದಾಯದ ಪರವಾಗಿದೆ ಆನ್ನುವುದು ಸ್ಪಟಿಕದಷ್ಟು ಸುದ್ಧ ಸತ್ಯ. ಜಗತ್ತಿನ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷಿಯ ಈ ಮಟ್ಟಿಗೆ ಜಗತ್ತಿಗೆ ಮಾದರಿಯಾಗಿದೆ. ಒಂದಾನೊಂದು ಕಾಲದಲ್ಲಿ ಸಂಪೂರ್ಣ ಹಿಂದೂಮಯವಾಗಿದ್ದ ಆ ದೇಶ ಇಂದು ಅದಕ್ಕೆ ತದ್ವಿರುದ್ಧವಾಗಿ ನೂರಕ್ಕೆ ನೂರು ಇಸ್ಲಾಮಿಕರಣಗೊಂಡಿದೆ. ಸುಮಾರು ಇಪ್ಪತ್ತ ಮೂರು ಕೋಟಿ ಮುಸ್ಲೀಮರಿರುವ ಅಲ್ಲಿನ ಜನ ತಮ್ಮ ಪೂರ್ವ ಸಂಸ್ಕೃತಿಯ ಬಗ್ಗೆ ಕುರುಡಾಗಿಲ್ಲ. ಇಂದಿಗೂ ತಮ್ಮ ಹೆಸರುಗಳಲ್ಲಿ- ನಾಗರೀಕ ಸೇವೆಗಳಲ್ಲಿ ನೆಲದ ಸಂಸ್ಕೃತಿಯ ಕುರುಹುಗಳನ್ನ ಉಳಿಸಿಕೊಂಡು ಬಂದಿದ್ದಾರೆ. ಅಂದರೆ ಇಸ್ಲಾಮನ್ನ ಅವರು ತಮ್ಮ ನೆಲದ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಿ ಒಗ್ಗಿಸಿ ಕೊಂಡಿದ್ದಾರೆ. ಅವರಿಗೆ ತಮ್ಮ ಪುರಾತನ ಸಂಸ್ಕೃತಿಯ ಬಗ್ಗೆ ಅತೀವ ಹೆಮ್ಮೆಯಿದೆ. ಮನುಷ್ಯನ ಧರ್ಮಾಚರಣೆ ವಯಕ್ತಿಕ ಮಟ್ಟದ್ದು. ಅದು ಬಹಿರಂಗವಾಗಿ ಗದ್ದಲವೆಬ್ಬಿಸುವ ಮಟ್ಟಕ್ಕೆ ಎಂದೂ ಇಳಿಯಬಾರದು. ಇಸ್ಲಾಂ ಹುಟ್ಟಿದ ಅರಬ್ ಜಗತ್ತಿನಲ್ಲಿಯೆ ನಮಾಜ್ ಕರೆಗೆ ಸೈರನ್ ಕೂಗಿಸುವ ವ್ಯವಸ್ಥೆ ಚಾಲ್ತಿಗೆ ಬಂದಿರುವಾಗ ಇನ್ನೂ ಭಾರತದಲ್ಲಿ 'ಬಾಂಗ್' ಕೂಗುವ ಹಳೆಯ ಪದ್ದತಿಗೆ ಅಂಟಿಕೊಳ್ಳುವುದು ಹೊಸತನವನ್ನು ತಂತ್ರಜ್ಞಾನದ ಪ್ರಸ್ತುತತೆಯನ್ನ ನಿರಾಕರಿಸಿದಂತೆ. ಅದಕ್ಕೆ ಪೈಪೋಟಿಯಾಗಿ ಸನಾತನ ಅವಿವೇಕಿಗಳೂ ಸಹ ಹೊತ್ತುಗೊತ್ತಿನ ಪರಿವೆಯಿಲ್ಲದೆ "ಎದ್ದೇಳು ಮಂಜುನಾಥಾ" ಎಂದು ಗದ್ದಲವೆಬ್ಬಿಸುತ್ತ ಬೆಳಗ್ಯೆ- ಮಧ್ಯಾಹ್ನ- ಸಂಜೆ ಹೀಗೆ ಅಸಂಬದ್ಧವಾಗಿ ಮಂಜುನಾಥನನ್ನ ಕ್ಷಣಕಾಲ ಮಲಗಲೂ ಬಿಡದೆ ನಿಮಿಷಕ್ಕೊಮ್ಮೆ ಬಡಿದೆಬ್ಬಿಸುತ್ತಾರೆ! ಗೋಮಾಂಸದ ಕುರಿತೂ ಇದೆ ಮಾತನ್ನ ಹೇಳಬಹುದು. ಹಿಂದೂ ಕೆಳವರ್ಗದ ಮಂದಿಯೂ ಕಡಿಮೆ ಬೆಲೆಗೆ ಸಿಗುವ ಕಾರಣ ಗೋಮಾಂಸವನ್ನ ಸೇವಿಸುತ್ತಾರೆ. ಅಂತೆಯೆ ಬಡ ಮುಸ್ಲೀಮರೂ ಸಹ. ಆದರೆ ಅದು ತಮ್ಮ ಧಾರ್ಮಿಕ ಸ್ವಾಭಿಮಾನದ ಸಂಕೇತ ಅಂತ ಮುಸ್ಲೀಮರು ಪರಿಗಣಿಸುವುದು ಕೊನೆಯಾಗಬೇಕು. ಆಹಾರ- ವಿಹಾರ ವ್ಯಕ್ತಿಯ ವಯಕ್ತಿಕ ವಿಚಾರಗಳು. ಕಡೆಯದಾಗಿ ಪರಸ್ಪರ ಅಪನಂಬಿಕೆಗೆ ಹಿಂದೂಗಳ ಕುರಿತ ಮುಸ್ಲೀಮರ ಹುಸಿ ಅಭದ್ರತೆಯ ಸಂಶಯ- ಮುಸ್ಲೀಮರ ಕುರಿತ ಹಿಂದೂಗಳ ದೇಶನಿಷ್ಠೆಯ ಸುಳ್ಳು ಸಂದೇಹ ಇವೆರಡೂ ಕಾರಣ. ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದನ್ನೆಲ್ಲ ಸ್ತ್ರೀ ರೂಪಕ್ಕೇರಿಸಿ ತಾಯಿಯನ್ನಾಗಿ ಆರಾಧಿಸುತ್ತೆ. ಉದಾಹಾರಣೆಗೆ ದೇಶ- ವಿದ್ಯೆ- ಅನ್ನ- ಹಣ- ನದಿ ಇವುಗಳನ್ನು ನೋಡಬಹುದು. ಆದರೆ ಧರ್ಮನಿಷ್ಠವಾಗಿ ಇಸ್ಲಾಂ ಪ್ರಕಾರ ನಡೆದುಕೊಂಡ ಅಂದಿನ ಇಸ್ಲಾಮಿ ಆಡಳಿತಗಾರರು ಈ ಭಾವನೆಗಳನ್ನೆ ಕೆಣಕುವಂತೆ ನಡೆದು ಕೊಂಡು ಸನಾತನ ಧರ್ಮೀಯರಾಲ್ಲಿ ಕಸಿವಿಸಿ ತಂದರು. ಹಿಂದೂ ಆರಾಧನಾಕ್ಷೇತ್ರಗಳ ಮೂರ್ತಿಗಳನ್ನ ಮಸೀದಿಗಳ ನೆಲಹಾಸು, ಮೆಟ್ಟಿಲು ಮಾಡಿಕೊಂಡದ್ದು. ಕಾಶ್ಮೀರದಲ್ಲಿ (ಹಿಂದೂ ನಂಬಿಕೆಗಳ ಪ್ರಕಾರ ಅದು ಶಾರದೆಯ ಆವಾಸ...ಅವಳನ್ನ 'ಕಾಶ್ಮೀರ ಪುರವಾಸಿನಿ' ಎಂದು ಕರೆಯಲಾಗುತ್ತೆ) ಆ ನೆಲದ ಭಾಷೆಯ ಸತ್ವವನ್ನೆ ಕಸಿಯಲಾಗಿದೆ. ಕಾಶ್ಮೀರಿ ಭಾಷೆಗೆ ಸ್ವಂತ ಲಿಪಿಯಿದ್ದರೂ ಇಂದು ಅದು ಬಳಕೆಯಲ್ಲಿಲ್ಲ, ಮೊಘಲ್ ಕಾಲದ ಹೇರಿಕೆಯ ಪರಿಣಾಮ ಅರಬ್ಬಿ ಲಿಪಿಯಲ್ಲಿ ಕಾಶ್ಮೀರಿ ಬರೆಯಲಾಗುತ್ತೆ. ತನ್ನ ನಿವಾಸದಲ್ಲೆ ವಿದ್ಯಾಧಿದೇವತೆ ಅನಾಥೆ ಆದದ್ದು ಹೀಗೆ! ಅದು ಇಂದಿಗೂ ಹಾಗೆಯೆ ಮುಂದುವರೆಯ ಬೇಕಿಲ್ಲ. ಧರ್ಮಕ್ಕಿಂತ ದೇಶ ಹಾಗೂ ಭಾಷೆ ಯಾವಾಗಲು ದೊಡ್ಡದು. ನಮ್ಮ ಮುಸ್ಲೀಂ ನೆರೆಕೆರೆಯವರಿಗೆ ಅರಬ್ಬಿಯೇ ಸಂವಹನ ಮಾಧ್ಯಮವಾದರೆ ಸಾಮನ್ಯ ಮುಸ್ಲಿಂ ಒಬ್ಬನಿಗೆ ಕಿರಿಕಿರಿ ಹುಟ್ಟಲಾರದೆ? ಹಿಂದೂ ಅತಿರೇಕಿಗಳಂತೆ ಇಸ್ಲಾಂ ಮೂಲಭೂತವಾದಿಗಳಿಗೂ "ಮಾನವ ಧರ್ಮ" ಎಲ್ಲಕಿಂತ ದೊಡ್ಡದು ಎಂಬುದನ್ನು ಒತ್ತಯವಾಗಿಯಾದರೂ ಅರಿವು ಮೂಡಿಸಲೆ ಬೇಕಿರುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಇಂಡೋನೇಷ್ಯ ನಮಗೆ ಮಾದರಿಯಾಗಬೇಕು. ಈ ದೇಶ ನಮ್ಮೆಲ್ಲರದು ಹಾಗೂ ಎಲ್ಲರೂ ಸಮಾನರು ಅನ್ನುವುದು ಮೊದಲು ಜಾರಿಯಾಗಲು ಅನುವಾಗುವಂತೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೆಕವಾಗಿರುವ ಶರಿಯತ್ ಭಾರತೀಯ ನ್ಯಾಯಾಂಗ ವ್ಯವಸ್ಥೆಯಿಂದ ರದ್ದಾಗಬೇಕು. ಸದ್ಯ ಮುಸ್ಲಿಂ ವಯಕ್ತಿಕ ಮಂಡಳಿ ಶರಿಯತ್ತಿನ ಪ್ರಕಾರವೇ ಮುಸ್ಲಿಂ ವಿವಾಹ ವಿಚ್ಚೇದನಗಳನ್ನ ಪರಾಮರ್ಶಿಸಿ ನ್ಯಾಯ ದಯಪಾಲಿಸುವ ಅಧಿಕಾರ ಹೊಂದಿದೆ. ಗುರುಕುಲ ಪದ್ಧತಿಯನ್ನ ಮರೆಯಾಗಿಸಿದಂತೆ ಮದರಸಗಳಿಗೂ ಸರಕಾರಿ ರಾಜಾಶ್ರಯ ನಿಂತು ಮುಸ್ಲಿಂ ಮಕ್ಕಳು ಮುಖ್ಯವಾಹಿನಿಯ ಶಾಲೆಗಳಲ್ಲಿ ಉಳಿದೆಲ್ಲರಷ್ಟೆ ಕಲಿತು, ತನ್ನ ಸಮವಯಸ್ಕ ಅನ್ಯ ಕೋಮಿನ ಮಕ್ಕಳಿಗೆ ಓದಿನಲ್ಲಿ- ಇನ್ನಿತರ ಚಟುವಟಿಕೆಗಳಲ್ಲಿ ಪೈಪೋಟಿ ನೀಡುವಂತಾಗಬೇಕು. ಎರಡು ಕಣ್ಣಷ್ಟೇ ಗೋಚರಿಸುವ ಬುರ್ಕಾ ಜಾಹಿರಾತಿನ ವೀನೈಲ್'ಗಳು ಕರಾವಳಿಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣುವುದು ನಿಂತಷ್ಟು ಶೀಘ್ರ ಮುಸ್ಲಿಂ ಮಹಿಳೆಯರು ನಿಟ್ಟುಸಿರು ಬಿಟ್ಟಾರು. ಕೊನೆಯ ಖಿಲಾಫತ್ ಅಸ್ತಿತ್ವದಲ್ಲಿದ್ದ ತುರ್ಕಿಯಲ್ಲಿಯೆ ಹೊಸತರದ ಇಸ್ಲಾಮನ್ನ ಜಾರಿಗೆ ತಂದಿರೋವಾಗ ನಮ್ಮಲ್ಲೇಕೆ ಹಳೆಯ ಮರಳುಗಾಡಿನ ಸಂಸ್ಕೃತಿಯ ಮೋಹ? "ಮೊದಲು ಭಾರತೀಯರಾಗೋಣ" ಆಮೇಲೆ ಇದ್ದೆ ಇದೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನರಾಗೋದು. ನಾಳೆಯಿಂದ ಇಸ್ಲಾಂ ಉಗಮದ ಕಥೆ ಇಲ್ಲಿ ಮೂಡಿ ಬರಲಿದೆ. ಆರಂಭದಲ್ಲಿ ಅಂದಿನ ಅರಬ್ ಜಗತ್ತಿನ ವಿಸ್ಕೃತ ಪರಿಚಯ ಮಾಡಿಸುವುದು ಅನಿವಾರ್ಯ. ಬೋರ್ ಎನಿಸಿದರೂ ಅದನ್ನ ಓದದೆ ಇರಬೇಡಿ. ಆ ಮೊದಲ ಕಂತನ್ನ ಓದದಿದ್ದರೆ ಮುಂದಿನ ಕಥೆ ಅಷ್ಟಾಗಿ ಅರ್ಥವಾಗಲಾರದು. ನನ್ನ ದೃಷ್ಟಿಯಲ್ಲಿ ಇಸ್ಲಾಂ ಇಷ್ಟೆ. ನನ್ನ ಸಹೋದರನೊಬ್ಬ ಅದಕ್ಕೆ ಮಾರುಹೊದರೆ ಹೇಗೆಯೋ ಹಾಗೆಯೆ ಇನ್ನುಳಿದ ಮುಸ್ಲೀಮರು ನನ್ನ ಪಾಲಿಗೆ. ಏಕೆಂದರೆ ನಾನವರನ್ನ ಮೊದಲು ನೋಡೋದು ಭಾರತೀಯತೆಯ ಮೋಹರಿನಿಂದ. ಅವರ ಧಾರ್ಮಿಕ ಶ್ರದ್ಧೆ ನನಗೆ ಇಲ್ಲಿಯ ತನಕ ಮುಖ್ಯವಾಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ. 'ಇಸ್ಲಾಂ ಮರುಭೂಮಿಯ ಬುಡಕಟ್ಟಿಗೆ ಹೇಳಿಮಾಡಿಸಿದ ಧರ್ಮಾಚರಣೆ ; ಅದರ ಆಶಯಗಳು-ನಿಯಮಾವಳಿಗಳು ಅದನ್ನ ಹೆಚ್ಚು ಸ್ಪುಟಗೊಳಿಸುತ್ತವೆ' ಅನ್ನುವ ನನ್ನ ನಿರ್ಧಾರಕ್ಕೆ ಕಾರಣವಾದದ್ದು ಆಗುಂಬೆ ಎಸ್.ನಟರಾಜ್'ರವರು ಬರೆದ "ಮಹಮದ್ ಪೈಗಂಬರ್ ಹಾಗು ಖಲೀಫರು" ಎಂಬ ಇಸ್ಲಾಮಿನ ಆತ್ಮಕಥೆ. ಬೆಂಗಳೂರಿನಲ್ಲಿ ಕಳೆದ ಬಾರಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದಲ್ಲಿ ಬೆಳಕು ಕಂಡಿದ್ದ ಈ ಹೊತ್ತಗೆಯನ್ನ (ಹಂಸ ಪ್ರಕಾಶನ) ಹಿಂದೆಂದೋ ಕುತೂಹಲಕ್ಕಾಗಿ ಓದಿದ್ದ ಖುರಾನ್ ಹಾಗು ಹದೀಸ್'ಗಳೊಂದಿಗೆ ಹೋಲಿಸಿ ಓದಿದಾಗ ಇದು ಇನ್ನಷ್ಟು ಧೃಡವಾಯಿತು. ಬಹುಷಃ ನಿಮ್ಮೆಲ್ಲರ ಭಾವನೆಗಳು ಇದಕ್ಕೆ ವ್ಯತರಿಕ್ತವಾಗಿದ್ದಿರಲೂಬಹುದು. ಅದೇ ಹೊತ್ತಗೆಯ ಪ್ರತಿಯೊಂದು ಪುಟವೂ ಇಲ್ಲಿ 'ದಿನಕ್ಕೊಂದು ಪುಟ'ದಂತೆ ಪ್ರಕಟಿಸುತ್ತೇನೆ. ಇಸ್ಲಾಮಿನ ಉಗಮದ ಬಗ್ಗೆ ನಿಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನ ಓದುವ ಸುಖವೂ ನಿಮ್ಮದಾಗಲಿ. ( ಮುಗಿಯಿತು...)

ಇಸ್ಲಾಮಿನಡಿ ಭಾರತ......

ಜಗತ್ತಿನ ಇತಿಹಾಸದಲ್ಲಿ ಬಹುಸಂಖ್ಯಾತ ಪರಧರ್ಮೀಯರನ್ನ ಇಸ್ಲಾಂ ಅನುಯಾಯಿಗಳು ಧೀರ್ಘಾವಧಿಯವರೆಗೆ ನಿರಂಕುಶವಾಗಿ ಆಳಿದ್ದು ಬಹುಷಃ ಸ್ಪೇನ್ ಹೊರತು ಪಡಿಸಿದರೆ ಅದು ಕೇವಲ ಭಾರತದಲ್ಲಿಯೆ. ಕ್ರೈಸ್ತ ಮತಾವಲಂಬಿಗಳ ಸ್ಪೇನ್ ಕ್ರಿಸ್ತಶಕ 711ರಿಂದ ಸರಿಸುಮಾರು ಎಂಟು ಶತಮಾನಗಳ ಕಾಲ ಇಸ್ಲಾಂ ಜಗತ್ತಿನ ಭಾಗವಾಗಿತ್ತು ಅನ್ನುವುದು ಇಂದಿಗೂ ಮುಸ್ಲಿಂ ಜಗತ್ತಿಗೆ ಕಡುಹೆಮ್ಮೆಯ ವಿಚಾರ. ಆದರೆ ಕ್ರಿಸ್ತಶಕ 1492ರಲ್ಲಿ ಈ ನಿರಂಕುಶತೆಗೆ ಲಗಾಮು ಬಿದ್ದು ಸ್ಪೇನ್ ಮರಳಿ ಕ್ಯಾಥೊಲಿಕ್ ಪಂಥಾನುಯಾಯಿಗಳ ತೆಕ್ಕೆಗೆ ಜಾರಿದ್ದು ಹಾಗು ಅವರು ಇಸ್ಲಾಮಿ ಕಾಲಮಾನದ ಕರುಹು ಉಳಿಯದಂತೆ "ಇಸ್ಲಾಮಿ ಸ್ಪೇನ್"ನ ಎಲ್ಲಾ ಪಳೆಯುಳಿಕೆಗಳನ್ನ ನಿರ್ದಾಕ್ಷಿಣ್ಯವಾಗಿ ಕ್ಯಾಥೊಲಿಕ್ ಧರ್ಮಾಂಧತೆಯಿಂದಲೆ ಬುಡಸಹಿತ ಕಿತ್ತು ಹಾಕಿದ್ದನ್ನ ಮಾತ್ರ ಜಾಣತನದಿಂದ ನೆನಪಿಸಿಕೊಳ್ಳಲು ಮರೆಯುತ್ತಾರೆ! ಇದೇನೆ ಇದ್ದರೂ ಈ ಹೊತ್ತಲ್ಲಿ ಹಿಂದಿರುಗಿ ನೋಡಿದಾಗ ಏಳು ಶತಮಾನಗಳ ಕಾಲ ಭಾರತವನ್ನು ಆಳಿ ಅನಂತರ ಇಲ್ಲಿಯೆ ಬೀಡು ಬಿಟ್ಟ ಇಸ್ಲಾಮಿನಿಂದ ಭಾರತ ಪಡೆದುಕೊಂಡದ್ದೇನು? ಅದರ ಕೊನೆಯ ನಿಶಾನಿಯನ್ನೂ ಇನ್ನಿಲ್ಲವಾಗಿಸಿ ಸ್ಪೇನ್ ಕಳೆದು ಕೊಂಡದ್ದೇನು? ಅನ್ನುವುದನ್ನ ಸುಲಭವಾಗಿ ಅಂದಾಜಿಸಬಹುದು. ಕುತ್ಬುದ್ದೀನ್ ಐಬಕನಿಂದ ಮೊದಲುಗೊಂಡು ಗುಲಾಮಿ ಸಂತತಿ- ಖಿಲ್ಜಿ ಸಂತತಿ- ತುಘಲಕ್ ಸಂತತಿ- ಸಯ್ಯದ್ ಸಂತತಿ- ಲೋಧಿ ಸಂತತಿ ಹಾಗೂ ಕಟ್ಟಕಡೆಯಲ್ಲಿ ಮೊಘಲರ ಸಂತತಿಯ ಕೊನೆಯ ಬಾದಶಹ ಎರಡನೆ ಬಹದ್ದೂರ್'ಷಾನವರೆಗೂ ಇಸ್ಲಾಂ ಭಾರತೀಯ ನೆಲದಲ್ಲಿ ನಿರಂಕುಶ ಅಟ್ಟಹಾಸವನ್ನ ಮೆರೆದದ್ದು ಅಳಿಸಿ ಹಾಕಲಾಗದ ಐತಿಹಾಸಿಕ ಸತ್ಯ. ಈ ಏಳುನೂರು ವರ್ಷಗಳಲ್ಲಿ ಭಾರತೀಯ ಉಪಖಂಡದ ಬಹುಭಾಗ ದೆಹಲಿ ಗದ್ದುಗೆಯ ನೆರಳಿನಲ್ಲಿತ್ತು. ಹಿಂದೂ ಕೃತಿ- ಸಂಸ್ಕೃತಿಗಳು ಇಸ್ಲಾಮಿ ಕ್ರಿಯಾಶೀಲತೆಯಿಂದ ಅನೇಕ ಉತ್ತಮ ಅಂಶಗಳನ್ನು ಕಡಪಡೆದುಕೊಂಡವು. ವಿಶೇಷವಾಗಿ ಭಾಷೆಯ ದೃಷ್ಟಿಯಿಂದ ಗಮನಾರ್ಹ ಹೊಸತನಗಳು ಗೋಚರಿಸಿದವು. ಸಂಗೀತದಲ್ಲಿ ಅರಬ್ ಮೂಲದ ವಿದೇಶಿ ತಂತಿವಾದ್ಯಗಳು ಇಲ್ಲಿನ ಸಾಂಪ್ರದಾಯಿಕ ವಾದ್ಯಗಳ ಜೊತೆಯಾಗಿ ಇಲ್ಲಿನ ಮೂಲ ಸಂಗೀತದ ಮೆರುಗು ಹೆಚ್ಚಿತು. ಸಾಹಿತ್ಯವೂ ಸಮೃದ್ಧವಾಗಿ ವಿಕಸಿಸಿತು. ಖವ್ವಾಲಿ- ಗಜಲ್ ಅಮದಾದರೆ ಕಥಕ್- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅವಿಷ್ಕರಣೆಯಾಗಿ ಭಾರತೀಯ ಸಾಂಸ್ಕೃತಿಕ ಜಗತ್ತು ಹೊಸತನವನ್ನ ಹೊತ್ತುಕೊಳ್ಳುವಂತಾಯಿತು. ಸಂಗೀತ- ಸಾಹಿತ್ಯ ಮಹಮದ್ ಪೈಗಂಬರನ ಉಕ್ತ ದೈವವಾಣಿಯ ಪ್ರಕಾರ ಇಸ್ಲಾಮಿ ಅನುಯಾಯಿಗಳಿಗೆ ಹರಾಮ್ ಎಂದು ಖುರಾನ್ ಹೇಳುವುದರಿಂದ ಅರೆಬ್ಬಿಯಾದಲ್ಲಿ ಅದರ ವಿಕಸನದ ಸ್ಥಿತಿ ಅಕ್ಷರಶಃ ಕೋಮಾಸ್ಥಿತಿಯಲ್ಲಿತ್ತು. ವಾಸ್ತವವಾಗಿ ಮಹಮದನಿಂದ ಬಹಳ ಹಿಂದೆ ಹುಟ್ಟಿದ್ದ ಪ್ರವಾದಿ ದಾವೂದನಿಗೆ ಅಲ್ಲಾ ದಯಪಾಲಿಸಿದ್ದು ಉದಾರವಾಗಿ ಉತ್ತಮ ಕಂಠ ಮಾಧುರ್ಯವನ್ನು. ಈ ಅಲ್ಲಾನ ಕಾರುಣ್ಯ ತನ್ನ ಮಹಿಮೆಗಳನ್ನು ಸ್ತುತಿಸಿ ಹಾಡಲ್ಲಿಕ್ಕೆಯೆ ಅನ್ನೋದು ಇಸ್ಲಾಂ ಮತಪಂಡಿತರಿಗೆ ಅರ್ಥವಾಗಲಾರದ್ದೇನಲ್ಲ. ಆದರೂ ಖುರಾನಿನ ಮಹಮದ್ ಕಾಲುವೆಯಾಗಿ ಹರಿದ ಅಲ್ಲಾನ ವಾಣಿಗಳನ್ನ ಬೇಕಾಬಿಟ್ಟಿ ವಿಶ್ಲೇಷಿಸಿ ಗೀತ- ಸಂಗೀತವನ್ನು ಇಸ್ಲಾಂ ನಿಷೇಧಿಸಿದೆ ಎಂದೇ ಬಲವಾಗಿ ಪ್ರತಿಪಾದಿಸಿ ಆಧುನಿಕ ಪ್ರಪಂಚದಲ್ಲೂ ತಮ್ಮ ಹಾಸ್ಯಾಸ್ಪದಾ ಮತಾಂಧತೆ ಮೆರೆಯುತ್ತಾರೆ. ಮರುಭೂಮಿಯ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಹರಾಮ್ ಎಂದು ಸಾರಲ್ಪಟ್ಟಿದ್ದ ಗೀತ- ಸಂಗೀತ- ಮೂರ್ತ ಶಿಲ್ಪ ಕಲೆಗಳಿಗೆ ಭಾರತದ ನೆಲದಲ್ಲಿ ಇಸ್ಲಾಮಿ ಕ್ರಿಯಾಶೀಲರಿಗೆ ಹೊಸಗಾಳಿ ಸಿಕ್ಕಂತಾಗಿ ತಮ್ಮ ಪ್ರತಿಭೆಯನ್ನೆಲ್ಲ ಅವರು ಮುಕ್ತವಾಗಿ ಇಲ್ಲಿ ಪ್ರದರ್ಶಿಸಿ ತಮ್ಮ ಪ್ರತಿಭೆಯ ಸಾಮರ್ಥ್ಯವನ್ನ ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳಲು ಅವಕಾಶವಾಯಿತು. ಇನ್ನು ವಾಸ್ತುಶಿಲ್ಪದ ಕಥೆಯೂ ಹೆಚ್ಚು ಕಡಿಮೆ ಅಂತದ್ದೆ. ಮರಳುಗಾಡಿನ ನೆಲದಲ್ಲಿ ಧಾರ್ಮಿಕ ಹಾಗೂ ಪ್ರಾಕೃತಿಕ ನಿರ್ಬಂಧಕ್ಕೆ ಒಳಗಾಗಿದ್ದ ಅವರ ಸೌಂದರ್ಯಪ್ರಜ್ಞೆಗೆ ಭಾರತ ಒಂದು ತೆರೆದ ವೇದಿಕೆಯಂತಾಗಿ ತಡೆಯಿಲ್ಲದೆ ಅವರ ಪ್ರತಿಭೆ ಇಲ್ಲಿ ಪ್ರಕಾಶಿಸತೊಡಗಿತು. ಸ್ಪೇನ್'ನಲ್ಲಿನ ಇಸ್ಲಾಮಿ ವಾಸ್ತುಶಿಲ್ಪವೂ ಇದರ ಮುಂದೆ ಮಂಕು ಅನ್ನುವುದನ್ನು ನಾವು ಮರೆಯುವಂತಿಲ್ಲ. ವಾಸ್ತುಶಿಲ್ಪ ಶಾಸ್ತ್ರದಲ್ಲಿ ಹೊಸ ಇಂಡೋ-ಇಸ್ಲಾಮಿಕ್ ಶೈಲಿಯ ಕಟ್ಟಡಗಳು ಭಾರತೀಯ ಉಪಖಂಡದ ಉದ್ದಗಲಕ್ಕೂ ತಲೆಯೆತ್ತಿ ನಿಲ್ಲುವಂತಾಯಿತು. ವಿಸ್ಮಯಕಾರಿ ವಾಸ್ತು ಶಿಲ್ಪದ ಬಿಜಾಪುರದ ಗೋಲಗುಮ್ಮಟ, ಇಬ್ರಾಹಿಂ ರೋಜಾ ಹಾಗೂ ಬಾರಾ ಕಮಾಲ್, ಗೋಲ್ಕೊಂಡಾದ ಚಾರ್'ಮಿನಾರ್. ಲಾಹೋರಿನ ಲಾಲ್ ಮಸ್ಜಿದ್, ಗುಲಬರ್ಗಾದ ಬುಲಂದ್ ದರ್ವಾಜಾ, ದೆಹಲಿಯ ಕೆಂಪು ಕೋಟೆ, ಶ್ರೀನಗರದ ಶಾಲಿಮಾರ್ ಹೂದೋಟ ಇವೆಲ್ಲ ಇಸ್ಲಾಮಿ ಕ್ರಿಯಾಶೀಲರಿಂದ ಭಾರತೀಯತೆಗೆ ಸಂದ ವಿಶೇಷ ಕೊಡುಗೆಗಳು. ಹೀಗಾಗಿ ಕೇವಲ ಸಾಂಸ್ಕೃತಿಕ ನೆಲೆಗಟ್ಟಿನಿಂದ ಅವಲೋಕಿಸಿದ್ದೆ ಹೌದಾದರೆ ಇದಲ್ಲದರಿಂದ ಭಾರತ ಬಹಳಷ್ಟು ಪಡೆದುಕೊಂಡಿತೆ ವಿನಃ ಕಳಕೊಂಡದ್ದು ನಗಣ್ಯ. ಆದರೆ ಈ ಮಾತು ಕೇವಲ ಕ್ರಿಯಾಶೀಲ ಕಲೆಗಳಿಗೆ ಸೀಮಿತ ಅನ್ನೋದು ಗಮನಾರ್ಹ ಅಂಶ. ಜೊತೆಗೆ ಅನೇಕ ಮೂಲ ಹಿಂದೂ ದೇಗುಲಗಳನ್ನ ನೆಲಸಮಗೊಳಿಸಿ ಅಲ್ಲಿನ ನೆಲೆಗಟ್ಟುಗಳನ್ನೆ ಉಳಿಸಿಕೊಂಡು ಅವವೇ ಕಂಭ ಭೋದಿಗೆಗಳನ್ನ ಬಳಸಿ ಹೊಸ ಇಸ್ಲಾಮಿ ಆರಾಧನಾ ಸ್ಥಳಗಳನ್ನ ಕಟ್ಟಿ ಕೊಳ್ಳಲಾಯಿತು. ಸದರಿ ದೇವಸ್ಥಾನಗಳ ಆರಾಧನಾ ಮೂರ್ತಿಗಳನ್ನ ಪ್ರಜ್ಞಾಪೂರ್ವಕವಾಗಿ ಪರಿವರ್ತಿತ ಮಸೀದಿಯ ಮೆಟ್ಟಿಲುಗಳಾಗಿ ನೆಲಕ್ಕೆ ಹಾಸಲಾಯಿತು. "ಗ್ಯಾನವ್ಯಾಪಿ ಮಸೀದಿ"ಯಾಗಿ ಪರಿವರ್ತಿತವಾದ ಕಾಶಿಯ ವಿಶ್ವನಾಥ ದೇಗುಲ ( ಚಿತ್ರಗಳಲ್ಲಿ ಗಮನಿಸಿ ) ಹಾಗೂ "ತಾಜ್ ಮಹಲಾ"ಗಿ ಪರಿವರ್ತಿತವಾದ ಆಗ್ರಾದ ತೇಜೋ ಮಹಲ್ ಇದಕ್ಕೆ ಎರಡು ಅತ್ಯುತ್ತಮ ಉದಾಹಾರಣೆಗಳು ಅದೆ ಕಾಲಕ್ಕೆ ಒತ್ತಾಯದ ಸರಣಿ ಮತಾಂತರಗಳು, ಅದಕ್ಕೆ ಒಪ್ಪದ ಮೂಲಧರ್ಮೀಯರ ಮೇಲೆ ನಿರಂತರವಾಗಿ ಎಸಗಲಾದ ಜಜಿಯಾದಂತಹ ಖುರಾನ್ ಸಮ್ಮತಿತ ದೌರ್ಜನ್ಯ ಗಳು ನಡೆದೇ ನಡೆದವು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚೀಲರು ಎಂಬ ಚಿತ್ರದುರ್ಗ ಸೀಮೆಯ ಬೇಡರ ಸಾಮೂಹಿಕ ಮತಾಂತರ ಹಾಗೂ ದಕ್ಷಿಣಕನ್ನಡ ಜೆಲ್ಲೆಯಂಚಿಂದ ಹಿಡಿದು ಮಲಬಾರಿನವರೆಗೂ ನಡೆದ ಬೆಸ್ತಕುಲದ ಮರಕ್ಕಲರ ಬಲವಂತದ ಮತಾಂತರಗಳು ಅತ್ಯಂತ ಹೇಯವಾಗಿದ್ದವು. ಸನಾತನ ಧಾರ್ಮಿಕ ಶ್ರದ್ಧಾಕೇಂದ್ರಗಳ ಧ್ವಂಸ ಹಾಗು ಮಸೀದಿಗಳಾಗಿ ಅವುಗಳ ಪರಿವರ್ತನೆ (ಉದಾಹಾರಣೆಗೆ ಕಾಶಿಯ ವಿಶ್ವನಾಥ ಮಂದಿರ ಗ್ಯಾನವ್ಯಾಪಿ ಮಸೀದಿಯಾದದ್ದು- ಅವಧದ ರಾಮಲಲ್ಲಾನ ದೇವಾಲಯ ಬಾಬರಿ ಮಸೀದಿಯಾದದ್ದು- ರಾವಳಪಿಂಡಿಯ ಕಟಾಸರಾಜ ದೇಗುಲದ ನಿರ್ಮೂಲನೆ- ಆಗ್ರಾದ ತೇಜೋಮಂದಿರದ ತಾಜ್'ಮಹಲ್ ಪರಿವರ್ತನೆ- ಮಥುರೆಯ ಕೃಷ್ಣ ದೇಗುಲ ಇಸ್ಲಾಮಿ ಶ್ರದ್ಧಾಕೇಂದ್ರವಾಗಿದ್ದನ್ನು ಗಮನಿಸಬಹುದು) ಕಾಶಿ, ಮಥುರಾ, ಅಯೋಧ್ಯ, ಸೋಮನಾಥ, ಢಾಕಾ, ಗೊಲ್ಕಂಡಾ, ಕೇರಳದ ಕೊಚ್ಚಿನ್ ಪ್ರಾಂತ್ಯದ ಒಳನಾಡುಗಳಲ್ಲಿ, ಕಾಶ್ಮೀರದ ಸರ್ವಜ್ಞಪೀಠದ (ಸದ್ಯ ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿದೆ) ದೇವಾಲಯಗಳ ಮೇಲಿನ ಉದ್ದೇಶಪೂರ್ವಕ ಧಾಳಿ ಇವೆಲ್ಲ ಮತಾಂಧತೆಯ ಅತಿರೇಕಗಳಾಗಿದ್ದವು ಎನ್ನುವುದನ್ನು ಮರೆಯುವ ಹಾಗಿಲ್ಲ. ಇಸ್ಲಾಂ ಶ್ರೇಷ್ಠ ಅನ್ನುವ ಅದನ್ನ ಅವಲಂಬಿಸಿದ ಅನುಯಾಯಿಗಳ ನಂಬಿಕೆಯನ್ನ ಒಪ್ಪೋಣ ಹಾಗೂ ಗೌರವಿಸೋಣ. ಆದರೆ ಇನ್ನಿತರ ಧರ್ಮಗಳು ಹೀನ ಅನ್ನೋದು ಮಾತ್ರ ಮತಾಂಧತೆಯಲ್ಲದೆ ಮತ್ತಿನ್ನೇನು? ನೈಸರ್ಗಿಗ ನ್ಯಾಯ ಇಸ್ಲಾಮಿನ ಅನುಯಾಯಿಗಳಿಗೊಂದು ಹಾಗೂ ಇನ್ನಿತರಿಗೊಂದು ಅನ್ನೋದು ಕುರಾನಿನ ಪ್ರಕಾರವೇ ಆದರೂ ಅದು ಅತಾರ್ಕಿಕ. ಇದೆ ಗೊಂದಲ ಒಬ್ಬ ಸಾಮಾನ್ಯ ಹಿಂದುವಿನ ಮನಸಿನಲ್ಲಿ ಮುಸ್ಲಿಂ ಸುದೀರ್ಘ ಆಳ್ವಿಕೆಯ ಕಾಲದ ಉದ್ದಕ್ಕೂ ಮುಳ್ಳಾಡಿಸುತ್ತಲೆ ಇತ್ತು. ಕ್ರಿಸ್ತಶಕ 1498ರಲ್ಲಿ ವಾಸ್ಕೋ-ಡಾ-ಗಾಮನ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಯುರೋಪಿಯನ್ ವ್ಯಾಪಾರಿಗಳು ಮುಂದೆ ಇಡಿ ದೇಶವನ್ನೆ ರಾಜಕೀಯವಾಗಿ ಪ್ರಭಾವಿಸುವ ಮಟ್ಟಿಗೆ ಬೆಳೆದು, ಕಡೆಗೊಮ್ಮೆ ಕ್ರಿಸ್ತಶಕ 1622ರಲ್ಲಿ ಭಾರತ ಉಪಖಂಡ ಹೊಕ್ಕ ವಣಿಕರ ಸೋಗಿನ ಬ್ರಿಟಿಶ್ ಅತಿಕ್ರಮಣಕಾರರು ಕ್ರಮೇಣ ಬಲಿತು ಕ್ರಿಸ್ತಶಕ 1857 ರಲ್ಲಿ ಮೊಘಲರ ಕೊನೆಯ ನಾಮ್-ಕೆ-ವಾಸ್ತೆ ಬಾದಶಹನನ್ನು ಮಾಂಡಲೆಯ ಸೆರೆಮನೆಗೆ ಗಡಿಪಾರು ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿದುಕೊಳ್ಳುವ ಮೂಲಕ ಭಾರತೀಯ ಇಸ್ಲಾಮಿ ಸಾಮ್ರಾಜ್ಯಶಾಹಿಯ ಸೂರ್ಯ ಕೊನೆಗೂ ಮುಳುಗಿದ. ಆದರೆ ಕತ್ತಲಾದ ನಂತರವೂ ಅಲ್ಲಲ್ಲಿ ತಾರೆಗಳು ಹೊಳೆಯುವಂತೆ ಮೊಗಲ್ ಸಾಮಂತ ಸರದಾರರು ದೇಶದ ಅಲ್ಲಲ್ಲಿ ಒಂದೊ ಪ್ರಬಲ ಬ್ರಿಟಿಷರ ಸ್ನೇಹ ಸಾಧಿಸಿಯೋ ಇಲ್ಲವೆ ವೈರ ಕಟ್ಟಿಕೊಂಡೊ ಸ್ವತಂತ್ರವಾಗಿ, ತಮ್ಮ ಆಳ್ವಿಕೆಯನ್ನ ದೇಶ ರಾಜಕೀಯವಾಗಿ ಕ್ರಿಸ್ತಶಕ 1947ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ ಪಡೆದ ಎರಡುವರ್ಷಗಳ ನಂತರದವರೆಗೂ ಉಳಿಸಿಕೊಂಡೆ ಬಂದರು. ಆಗಲೂ ಅವರಲ್ಲಿ ಕೆಲವರು ತಮ್ಮ ಧರ್ಮನಿಷ್ಠೆಗೆ ಅನುಸಾರವಾಗಿ ಸನಾತನ ಧರ್ಮಾನುಯಾಯಿಗಳ ಮೇಲೆ ಜಿದ್ದು ಸಾಧಿಸುವಂತೆ ನಡೆದುಕೊಂಡದ್ದೂ ಇತ್ತು. ಉದಾಹಾರಣೆಗೆ ಅಲ್ಪಾವಧಿಗೆ ಮೈಸೂರನ್ನು ಆಳಿದ ಟಿಪ್ಪೂ ಸುಲ್ತಾನ ಬಹಿರಂಗವಾಗಿ ಹಿಂದೂ ಶ್ರದ್ಧಾಕೇಂದ್ರವಾಗಿದ್ದ ಶೃಂಗೇರಿ ಶಾರದಾ ಪೀಠಕ್ಕೆ ಉದಾರ ದೇಣಿಗೆ ನೀಡುತ್ತಿದ್ದ ಅನ್ನುವುದು ಹೌದಾದರೂ (ಹಿಂದೂಗಳೇ ಆಗಿದ್ದ ಮರಾಠರು ಸಂಪತ್ತು ದೋಚುವ ದುರಾಸೆಯಿಂದ ಶೃಂಗೇರಿಗೆ ಧಾಳಿಯಿಟ್ಟು ಮೂಲ ಶಾರದೆಮೂರ್ತಿಯನ್ನೆ ದ್ವಂಸ ಮಾಡಿ ಬರ್ಭರವಾಗಿ ಲೂಟಿ ಎಸಗಿದ್ದ ದಿನಗಳವು), ಅದೆ ಟಿಪ್ಪು ಮಲಬಾರ್ ಹಾಗೂ ಕೊಡಗಿನಲ್ಲಿ ಒತ್ತಾಯದಿಂದ ಕತ್ತಿಮೊನೆಯಂಚಲ್ಲಿ ಎಸಗಿದ್ದ ಮತಾಂತರಗಳನ್ನ ಮರೆಯುವುದು ಹೇಗೆ? ಶೃಂಗೇರಿಗೆ ಹಾಗೂ ನಂಜನಗೂಡಿಗೆ ಅವನ ದಾನ ತನ್ನ ಬಹುಸಂಖ್ಯಾತ ಹಿಂದೂ ಪ್ರಜೆಗಳನ್ನ ರಾಜಕೀಯವಾಗಿ ಓಲೈಸಲು ಅವರ ಶ್ರದ್ಧಾಕೇಂದ್ರಗಳನ್ನ ಆತ್ಮೀಯವಾಗಿಟ್ಟುಕೊಳ್ಳುವ ಸರಳ- ಶುದ್ಧ ರಾಜಕೀಯ ನಡೆಯಾಗಿತ್ತು ಅನ್ನುವುದು ಸ್ಪಷ್ಟ. ಹಾಗೆಯೆ ಮತಾಂತರಗಳೂ ಕಟ್ಟರ್ ಇಸ್ಲಾಮಿಯಾಗಿ ಅವನ ಧರ್ಮಶ್ರದ್ಧೆ ವಿಧಿಸಿದ್ದ ಕರ್ತವ್ಯವೂ ಆಗಿತ್ತು. ನಮ್ಮ ಇಂದಿನ ಸಾಮಾಜಿಕ ಸಂಹಿತೆ ಹಾಗೂ ಕಾನೂನಿನ ಹಿನ್ನೆಲೆಯಲ್ಲಿ ಇತಿಹಾಸದ ಘಟನಾವಳಿಗಳನ್ನ ಒರೆಗೆ ಹಚ್ಚುವುದರಿಂದ ಆಗುವ ಎಡವಟ್ಟುಗಳು ಇವು ಅನ್ನೋದು ಸ್ಪಷ್ಟ. ಈಗಿನ ಜಾತ್ಯಾತೀತತೆಯ ಕಲ್ಪನೆಯೂ ಇದ್ದಿರದಿದ್ದ ಅಂದಿನ ಸಾಮಾಜಿಕ ಪರಿಸ್ಥಿತಿಗೆ ಬಹುಷಃ ಅದು ತಪ್ಪೆನಿಸುತ್ತಿರಲಿಲ್ಲವೇನೊ. ಆದರೆ ಇಂದಿನ ನಾಗರೀಕ ಕಾನೂನಿನ ಅಡಿಯಲ್ಲಿ ಅದು ಪ್ರಮಾದವಾಗಿ ಗೋಚರಿಸುತ್ತದೆ. ( ನಾಳೆಗೆ... )

Sunday, September 23, 2012

ಭಾರತೀಯತೆ ಮತ್ತು ಪರಕೀಯತೆ....

ಭಾರತೀಯ ನೆಲದ ಮೇಲೆ ವಿದೇಶಿ ಆಕ್ರಮಣದ ಚರಿತ್ರೆಯನ್ನ ಅಧಿಕೃತವಾಗಿ ಅವಲೋಕಿಸುವುದಾದರೆ ನಾವು ಇನ್ನೂ ಹಿಂದೆ ಕ್ರಿಸ್ತಪೂರ್ವಕ್ಕೆ ಹೋಗುವುದು ಅನಿವಾರ್ಯ. ಪ್ರಪಂಚವನ್ನೆ ಗೆಲ್ಲುವ ( ಅಂದಿನ ಪ್ರಪಂಚದ ಕಲ್ಪನೆ ಗ್ರೀಕ್- ಸ್ಪೇನಿನ ಹಾಗೂ ಪೋರ್ತಗೀಸಿನ ಜನವಸತಿ, ಉತ್ತರದ ಅನಾಗರೀಕ ಯುರೋಪು- ಪೂರ್ವದ ಹಿಮಾಚ್ಛಾದಿತ ಯುರೋಪ್ ಹಾಗೂ ಉತ್ತರ ಆಫ್ರಿಕೆಯ ಕೆಲಭಾಗ ಹಾಗು ಅರೇಬಿಯಾ- ಪರ್ಷಿಯಾ- ಇಂಡಿಯ ಇಷ್ಟಕ್ಕೆ ಸೀಮಿತವಾಗಿತ್ತು. ದಕ್ಷಿಣ ಅಮೆರಿಕಾ ಖಂಡದ ಉತ್ತರಭಾಗದಲ್ಲಿಯೂ ವಿಕಸಿತವಾಗಿದ್ದ ಇಂಕಾ ನಾಗರೀಕತೆ ತನ್ನ ಹೊಳಪು ಕಳೆದುಕೊಂಡು ತನ್ನಷ್ಟಕ್ಕೆ ಅಳಿದು ಹೋಗಿತ್ತು. ಭಾರತಕ್ಕೆ ಮೊದಲು 'ಇಂಡಿಯ' ಅಂದವರು ಗ್ರೀಕರು. ಸಿಂಧೂನದಿಯನ್ನ ಇಂಡಸ್ ಎಂದು ಕರೆದ ಅವರು ಅದರ ತೀರದಲ್ಲಿ ವಾಸವಿದ್ದ ಎಲ್ಲರನ್ನೂ ಸಾರಾಸಗಟಾಗಿ ಇಂಡಿಯನ್ನರು ಎಂದು ಗುರುತಿಸಿದರು. ಅನಂತರದ ದಿನಗಳಲ್ಲಿ ಯುರೋಪಿನಾದ್ಯಂತ ಅದೆ ಹೆಸರು ಖಾಯಂ ಆಯಿತು.) ವಿಶ್ವಕ್ಕೆ ನಿಜವಾದ ಅರ್ಥದಲ್ಲಿ ಸಾಮ್ರಾಟನಾಗುವ ಮಹತ್ವಾಕ್ಷಾಂಶೆ ಹೊಂದಿದ್ದ ಅಪರೂಪದ ಸಾಹಸಿ- ನಿಜವಾದ ಅರ್ಥದಲ್ಲಿ ಜಗತ್ತನ್ನೇ ಗೆಲ್ಲುವ ಕನಸುಗಾರ ಅಲೆಕ್ಸಾಂಡರ್ ಮೊತ್ತಮೊದಲಿಗೆ ಇಲ್ಲಿನ ಸಂಪತ್ತು ಹಾಗೂ ಅಧಿಕಾರ ವಿಸ್ತರಣೆಯ ಉದ್ದೇಶದಿಂದ ಧಾಳಿ ಸಂಘಟಿಸಿದ್ದ. ಇಸ್ಲಾಂ ಹುಟ್ಟುವ ಸಾವಿರ ವರ್ಷದ ಹಿಂದೆಯೆ ಗ್ರೀಕರ ಈ ಸಾಹಸಿ ನೆಲಮಾರ್ಗದಿಂದಲೆ ಹೊರಟು ಪರ್ಶಿಯವನ್ನ ಗೆದ್ದು (ಇಂದಿನ ಇರಾಕ್) ಅಲ್ಲಿ ತನ್ನ ದಣಿದಿದ್ದ ಸೈನ್ಯವನ್ನ ಬಹುತೇಕ ಬರಾಕಸ್ತುಗೊಳಿಸಿ ಪರ್ಷಿಯಾದ ಉತ್ಸಾಹಿ ತರುಣರನ್ನೆ ಹೆಚ್ಚಾಗಿ ಹೊಂದಿದ್ದ ಹೊಸ ಸೈನ್ಯವನ್ನ ಕಟ್ಟಿ ಸಿಂಧೂನದಿಯ ಎಲ್ಲೆ ಬಂದು ಮುಟ್ಟಿದ. ನಿಶ್ಚಿತ ಗಡಿ ರೇಖೆಗಳ ಕಲ್ಪನೆ ಆಗ ಇಲ್ಲದಿದ್ದರೂ ಇಂದಿನ ಭೂಪಟದ ಗಡಿರೇಖೆಯನ್ನ ಅನುಸರಿಸಿ ಹೇಳುವುದಾದರೆ ಪರ್ಷಿಯಾ ಅಂದಿನ ಭಾರತದ ನೆರೆದೇಶವಾಗಿತ್ತು (ಧರ್ಮಾಧರಿತವಾಗಿ ದೇಶ ವಿಭಜನೆಯಾಗುವವರೆಗೂ ಪರ್ಶಿಯ ಭಾರತದ ನೆರೆದೇಶವೆ ಆಗಿತ್ತು). ಅಲೆಕ್ಸಾಂಡರ್'ನ ಉದ್ದೇಶ ಗಂಗೆಯನ್ನು ಮುಟ್ಟಿ ಅದರ ಪ್ರವಾಹದ ದಿಕ್ಕಿನಲ್ಲೆ ಸಾಗಿ ಅನಂತರ ಸಾಗರ ತೀರ ಸೇರಿ ಬಂದ ದಾರಿಯಲ್ಲೆ ಹಿಂದಿರುವುದಾಗಿತ್ತು. ಭಾರತದ ಸಿರಿವಂತಿಕೆಯ ಬಗ್ಗೆ ಆಗಿನ ಗ್ರೀಕಿನಲ್ಲಿ ವ್ಯಾಪಾರಿಗಳ ವಲಯದಲ್ಲಿ ಉತ್ಪ್ರೇಕ್ಷಿತ ದಂತ ಕಥೆಗಳು ಚಾಲ್ತಿಯಲ್ಲಿದ್ದು, ಆ ಸಮೃದ್ಧ ದೇಶವನ್ನ ಲೂಟಿ ಹೊಡೆಯುವ ದೊಡ್ಡ ಯೋಜನೆಯೂ ಅವನಿಗಿತ್ತು. ಆದರೆ ಅವನ ಆತ್ಮಸ್ಥೈರ್ಯ ಕುಗ್ಗುವಂತ ಘಟನೆಗಳು ಒಂದಾದರ ಮೇಲೆ ಒಂದು ನಡೆದುದರಿಂದ ಸಾಮ್ರಾಟ ತನ್ನ ಈ ಯೋಜನೆಯನ್ನ ಬಿಟ್ಟು ಸ್ವದೇಶಕ್ಕೆ ಹಿಂದಿರುಗಲೆ ಬೇಕಾಯಿತು. ಎಲ್ಲಕ್ಕೂ ಮೊದಲನೆಯದಾಗಿ ಅವನ ಜೀವವೆ ಆಗಿದ್ದು ಗ್ರೀಸಿನಿಂದ ಪರ್ಷಿಯಾದವರೆಗೂ ಜೊತೆನೀಡಿದ್ದ ಕುದುರೆ ಭ್ಯೂಸಿಫಲಾಸ್ ಅತೀವ ಬಳಲಿಕೆಯಿಂದ ಈ ದಿಗ್ವಿಜಯ ಯಾತ್ರೆಯ ನಡುವೆಯೇ ಅಸುನೀಗಿತು. ಎರಡನೆಯದಾಗಿ ಗಂಗೆಯ ಇಕ್ಕೆಡೆಗಳಲ್ಲೂ ನೆಲೆ ನಿಂತಿದ್ದ ಅನೇಕ ಭಾರತೀಯ ಬುಡಕಟ್ಟುಗಳನ್ನ ಮಣಿಸಿ ಮುಂದೆ ಸಾಗುವುದು ಬಲಿ ಕಠಿಣ ಸವಾಲಿನ ಕೆಲಸವಾಗಿತ್ತು. ಮೂರನೆಯದಾಗಿ ಭಾರತೀಯ ರಾಜ ಪುರೂರವನ ಸ್ವರಕ್ಷಣೆಯ ಯುದ್ದಾಹ್ವಾನ ಅಲೆಕ್ಸಾಂಡರ್ ಚಿಂತೆ ಹೆಚ್ಚಿಸಿತ್ತು ಹಾಗೂ ಕೊನೆಯದಾಗಿ ಸಾವಿರಾರು ಮೈಲಿ ಹೋರಾಡುತ್ತಾ ಬಂದು ವಿಭಿನ್ನ ಹವಾಮಾನಗಳನ್ನ ಎದುರಿಸಿ ಅವನ ಬಹುತೇಕ ಮೂಲಸೈನಿಕರು ಬಳಲಿ ನಿತ್ರಾಣರಾಗಿ ಹೋಗಿದ್ದರು. ಹೀಗಾಗಿ ಪುರೂರವನನ್ನು ಮಣಿಸಿದರೂ ಕೇವಲ ಕಪ್ಪಪಡೆದು ಸ್ವದೇಶದ ಹಾದಿ ಹಿಡಿಯಲು ಅಲೆಕ್ಸಾಂಡರ್ ನಿರ್ಧರಿಸಿ ತನ್ನ ಒಡನಾಡಿಗಳಿಗೆ ತನ್ನೊಂದಿಗೆ ಬರುವ ಅಥವಾ ಇಲ್ಲೇ ಉಳಿಯುವ ಸ್ವಾತಂತ್ರ ನೀಡಿದ. ಅನೇಕ ಗ್ರೀಕರು ಮರಳಿ ಹೋಗಲಿಕ್ಕೆ ಇಚ್ಚಿಸದೆ ಇಲ್ಲೆ ಉಳಿದು ಭಾರತೀಯ ಮುಖ್ಯವಾಹಿನಿಯಲ್ಲಿ ಬೆರೆತು ಹೋದರು. ಭಾರತೀಯ ಉಪಖಂಡದಲ್ಲಿ ಆಗಷ್ಟೆ ವೇದಕಾಲ ಮುಗಿದು ದೇವತಾರಾಧನೆ ಪ್ರಕೃತಿಪೂಜೆಯಿಂದ ವಿಗ್ರಹಾರಾಧನೆಗೆ ವಿಕಸಿಸಿತ್ತು. ಇಲ್ಲಿನ ಧಾರ್ಮಿಕತೆಯನ್ನೆ ಕ್ರಮೇಣ ಅನುಸರಿಸತೊಡಗಿದ ಇಲ್ಲುಳಿದ ಗ್ರೀಕರು ತಮ್ಮ ಮೂಲ ಆರಾಧನಾ ಕ್ರಮವನ್ನು ಕೊಂಚ ಮಾರ್ಪಡಿಸಿ ಕೊಳ್ಳಬೇಕಾಯಿತಷ್ಟೆ. ಗ್ರೀಕಿನಲ್ಲೂ ಮೂರ್ತಿ ಪೂಜೆ ಉತ್ತುಂಗದಲ್ಲಿದ್ದ ದಿನಗಳವು. ಆದರಿಂದ ಈ ಹೊಸ ಆರಾಧನಾ ಕ್ರಮಕ್ಕೆ ಹೊಂದಿಕೊಳ್ಳುವುದು ಅವರಿಗೆ ಹೆಚ್ಚಿನ ಗೊಂದಲಕ್ಕೆ ಎಡೆ ಮಾಡಿಕೊಡಲಿಲ್ಲ. ಏಕೆಂದರೆ ಕ್ರೈಸ್ತ ಧರ್ಮ ಬೆತ್ಲಹೆಮ್'ನಲ್ಲಿ ಉಗಮವಾಗಲು ಇನ್ನೂ ಮೂರೂಕಾಲು ಶತಮಾನ ಬಾಕಿಯಿದ್ದ ದಿನಗಳವು. ಅದು ಹುಟ್ಟಿ ಬೆಳೆದು ಗ್ರೀಕನ್ ಸಾಮ್ರಾಜ್ಯದ ನಂತರ ಪ್ರವರ್ಧಮಾನಕ್ಕೆ ಬಂದ ರೋಮನ್ ಸಾಮ್ರಾಜ್ಯದ ರಾಜಧರ್ಮವಾಗುವವರೆಗೂ ಯುರೋಪಿನಲ್ಲಿ ಭಾರತದಂತೆ ವಿಗ್ರಹಾರಾಧನೆ ಚಾಲ್ತಿಯಲ್ಲಿತ್ತು. ಹೀಗೆ ಇಲ್ಲಿನ ಪದ್ಧತಿಗೆ ಮನಸೋತು ವೇದಾಧರಿತ ಜೀವನ ಕ್ರಮವನ್ನ ಅನುಸರಿಸ ತೊಡಗಿದ ಇಲ್ಲಿಯೆ ಉಳಿದ ಗ್ರೀಕರ ಮುಂದಿನ ಸಂತತಿ ಸ್ಥಳೀಯ ಪುರೋಹಿತಶಾಹಿಗಳೊಡನೆ ಬೆರೆತು "ಚಿತ್ಪಾವನ ಬ್ರಾಮ್ಹಣ" ಸಮುದಾಯವಾಗಿದೆ. ದೈಹಿಕವಾಗಿ ಅವರಲ್ಲಿ ಉಳಿದ ಯುರೇಷಿಯನ್ ಕುರುಹುಗಳು ಅವರ ಮೂಲವನ್ನು ಸ್ಪಷ್ಟಪಡಿಸುತ್ತವೆ. ಮುಂದಿನ ದಿನಗಳಲ್ಲಿ ಗುಜರಾತದಿಂದ ಆರಂಭಿಸಿ ಕೇರಳದವರೆಗೂ ಕರಾವಳಿಯಲ್ಲಿ ಹರಡಿ ಕೊಂಡ ಈ ಸಮುದಾಯದ ಸದಸ್ಯರ ಮೂಲ ಭಾರತೀಯ ತಳಿಗೆ ಹೊರತಾದ ನೀಲಿ- ಹಸಿರು- ಬೂದು ಕಣ್ಣುಗಳು, ಹಾಲುವರ್ಣದ ಚರ್ಮ, ಕೆಂಚು ಕೂದಲು, ಎದ್ದುಕಾಣುವ ಗ್ರೀಕನ್ ಮುಖಚರ್ಯೆ. ಇವೆಲ್ಲ ಅವರ ತಲೆಮಾರುಗಳ ಹಿಂದಿನ ಗ್ರೀಕನ್ ವಂಶವಾಹಿಗಳ ಕೊಡುಗೆಯಾಗಿ ಉಳಿದುಹೋಗಿದೆ. ತಮ್ಮ ಪ್ರಪೂರ್ವಜರ ಬುದ್ಧಿಮತ್ತೆಯೂ ಅವರಿಗೆ ರಕ್ತಗತವಾಗಿ ಹರಿದು ಬಂದಿದೆ. ಇವರೂ ಸಹ ಇಲ್ಲಿನವರನ್ನ ತಮ್ಮ ಮೂಲ ಧರ್ಮಕ್ಕೆ, ತಾವು ಅದೂ ವರೆಗೂ ನಂಬಿದ್ದ ನಂಬಿಕೆಗಳಿಗೆ ಮತಾಂತರಿಸದೆ ತಾವೆ ಇಲ್ಲಿನ ಮತಕ್ಕೆ ಮಾರು ಹೋಗಿ ಈಗ ನೂರಕ್ಕೆ ನೂರು ಶೇಕಡಾ ಭಾರತೀಯರೆ ಆಗಿಹೋಗಿದ್ದಾರೆ ಅನ್ನುವುದು ನಿಮ್ಮ ಗಮನಕ್ಕಿರಲಿ. ಮತ್ತೆ ಕ್ರಿಸ್ತಶಕ 1175ರ ಇಸ್ಲಾಮಿ ದೊರೆ ಮಹಮದ್ ಘೋರಿಯ ಧಾಳಿಗೆ ಮರಳೋಣ. ಮಹಮದ್ ಬಿನ್ ಗಜನಿಯ ಕೊನೆಧಾಳಿಯ ನಂತರ ಭಾರತಕ್ಕೆ ನುಗ್ಗಿದ ಮತ್ತೊಬ್ಬ ಇಸ್ಲಾಮಿ ಅರಸು ಈತ. ಆ ಮೊದಲ ಧಾಳಿಯಲ್ಲಿ ಮುಲ್ತಾನನ್ನು ಆಕ್ರಮಿಸಿದ ಘೋರಿ ಸತತ ಏಳು ಬಾರಿ ಭಾರತದ ಉತ್ತರ ಭೂಭಾಗಗಳನ್ನ ಲೂಟಿ ಹೊಡೆದ. ತನ್ನ ಮೊದಲ ಧಾಳಿಯ ನಂತರ ಕ್ರಿಸ್ತಶಕ 1178ರಲ್ಲಿ ಗುಜರಾತಿನ ಸೋಮನಾಥ ದೇವಾಲಯದತ್ತ ( 1948ರಲ್ಲಿ ಪುನರುತ್ಥಾನಗೊಂಡ ದೇವಸ್ಥಾನವನ್ನ ಚಿತ್ರದಲ್ಲಿ ಗಮನಿಸಬಹುದು.) ನುಗ್ಗುವ ಯತ್ನದಲ್ಲಿದ್ದಾಗ ಘೋರಿ ಅಲ್ಲಿನ ದೊರೆ ಎರಡನೆ ಭೀಮದೇವನಿಂದ ತೀವ್ರ ಪ್ರತಿರೋಧ ಎದುರಿಸಿದನಾದರೂ ಸೋಲೊಪ್ಪಿಕೊಳ್ಳಲಿಲ್ಲ. ಆದರೆ ತನ್ನ ಮೂರನೆ ಧಾಳಿಯ ತರೈನ್ ಸಮರದಲ್ಲಿ ಪೃಥ್ವಿರಾಜ ಚೌಹಾಣನ ಎದುರು ನಾಚಿಕೆಗೇಡಿನ ಸೋಲನ್ನ ಆತ ಎದುರಿಸಿ ತೀವ್ರವಾಗಿ ಗಾಯಗೊಂಡು ಕಾಬೂಲಿಗೆ ಓಡಿ ಹೋಗಬೇಕಾಯಿತು. ಆದರೆ ಮುಂದಿನ ವರ್ಷ ನಡೆದ ಯುದ್ದದಲ್ಲಿ ಪರಿಣಾಮ ವ್ಯತಿರಿಕ್ತವಾಗಿ ಪೃಥ್ವಿರಾಜ ಚೌಹಾಣನೆದುರು ಘೋರಿ ಯುದ್ಧ ಗೆದ್ದ. ಆಗ ಕನೋಜು ಪ್ರತಿಹಾರರ ಆಡಳಿತ ಕೇಂದ್ರವಾಗಿದ್ದರೂ ಇಂದಿನಂತೆ ಇಂದ್ರಪ್ರಸ್ಥದ (ಇಂದಿನ ದೆಹಲಿ) ಮೇಲಿನ ಒಡೆತನ ಭಾರತದ ಸಾಮ್ರಾಟರು ಯಾರು ಎಂಬುದನ್ನು ನಿರ್ಧರಿಸುತ್ತಿತ್ತು. ಹೀಗಾಗಿ ಘೋರಿ ಪೃಥ್ವಿರಾಜನನ್ನು ಮಣಿಸಿದ ನಂತರ ಇಂದ್ರಪ್ರಸ್ಥ, ಕನೋಜು, ಕಾಶಿ, ಅಜ್ಮೇರ್, ಗೌಡ ದೇಶ (ಇಂದಿನ ಬೆಂಗಾಲ) , ಗುಜರಾತ್ ಎಲ್ಲವನ್ನ ದೋಚಿದ. ಈತನ ದಾಳಿಯ ನಂತರ ಮತ್ತೆ "ಕತ್ತಿ ಇಲ್ಲವೆ ಖುರಾನ್"ನ ಅನುಸಾರ ಸೆರೆ ಸಿಕ್ಕವರನ್ನ ಬಲವಂತದಿಂದ ಮತಾಂತರಕ್ಕೆ ಒಳಪಡಿಸಲಾಯಿತು. ಇಲ್ಲಿಯವರೆಗೂ ಕೇವಲ ಲೂಟಿಗೆ ಸೀಮಿತವಾಗಿದ್ದ ಇಸ್ಲಾಂ ಧಾಳಿಕೋರತನ ಘೋರಿ ತನ್ನ ತುರ್ಕಿ ಮೂಲದ ಗುಲಾಮ ಕುತ್ಬುದ್ದೀನ್ ಐಬಕ್'ನನ್ನು ತಾನು ಗೆದ್ದ ಭಾರತೀಯ ನೆಲೆಗಳ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಭಾರತೀಯ ನೆಲದಲ್ಲಿಯೆ ಇಸ್ಲಾಂ ಆಳ್ವಿಕೆ ಜಾರಿಗೆ ಬರುವಂತಾಗಲು ಮೂಲವಾಯಿತು. ಕ್ರಿಸ್ತಶಕ 1206ರಲ್ಲಿ ಘೋರಿ ಶಾಶ್ವತವಾಗಿ ಗೋರಿ ಹೊಕ್ಕ ನಂತರ ಕುತ್ಬುದ್ದೀನ್ ಐಬಕ್ ಕಂದಹಾರಿನ ಗದ್ದುಗೆಯಿಂದ ಸ್ವಾತಂತ್ರ್ಯವನ್ನ ಘೋಷಿಸಿಕೊಂಡು ಭಾರತದ ಮೊದಲ ಮುಸ್ಲಿಂ ಆಳರಸನಾಗಿ ಗುರುತಿಸಿಕೊಂಡ. ಭಾರತೀಯ ನೆಲದಲ್ಲಿ ಅಧಿಕೃತವಾಗಿ ಅವನ ಗುಲಾಮಿ ಸಂತತಿಯ ಆಳ್ವಿಕೆ 'ಇಸ್ಲಾಮಿ ರಾಜಧರ್ಮ'ದೊಂದಿಗೆ ಹೀಗೆ ಆರಂಭವಾಯ್ತು. ( ನಾಳೆಗೆ.... )

ಗಿಣ್ಣು ಎಂಬ ತ್ರಿಶಂಕು ಸ್ವರ್ಗ....

ನನ್ನ ಮನಸಿನಲ್ಲಿ ಆದಿತ್ಯವಾರ ಹಾಗೂ ಶನಿವಾರಗಳೆಂದರೆ ಶಾಲೆಗೆ ಮಣ್ಣು ಹೊರುತ್ತಿದ್ದ ಬಾಲ್ಯದ ದಿನಗಳಲ್ಲಿ ವಿಪರೀತ ಪ್ರೀತ್ಯಾದರ ಇರುತ್ತಿದ್ದವು. ಆಗೆಲ್ಲ ನಮಗೆ ವಾರಕ್ಕೆ ಐದು ದಿನ ಪೂರ್ತಿ ಶಾಲೆಯಿದ್ದರೆ ಶನಿವಾರ ಬೆಳಗಿನ ತರಗತಿ ಮಾತ್ರ ನಡೆಯುತ್ತಿತ್ತು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಯೆ ಹತ್ತಕ್ಕೆ ಶುರುವಾಗಿ ಐದಕ್ಕೆ ಬಿಡುತ್ತಿದ್ದ ತರಗತಿಗಳು ಶನಿವಾರ ಮಾತ್ರ ಬೆಳಗ್ಯೆ ಎಂಟೂ ಕಾಲಿಗೆ ಶುರುವಾಗಿ ಹನ್ನೊಂದೂ ಕಾಲಿಗೆ ಶಾಲೆ ಬಿಡುತ್ತಿತ್ತು. ಮುಂದಿನ ಒಂದುವರೆ ದಿನ ಕೇವಲ ನಮ್ಮದು. ವಾರಪೂರ್ತಿ ಬೆವರು- ಮಣ್ಣು ಹಿಡಿದು ನಾತ ಹೊಡೆಯುತ್ತಿದ್ದ ಸಮವಸ್ತ್ರದಲ್ಲಿ ನರಳುತ್ತಿದ್ದ ನಮ್ಮೆಲ್ಲರಿಗೆ ಶನಿವಾರದ ಬಣ್ಣದ ಬಟ್ಟೆಗಳ ದಿನವೆಂದರೆ ಲವಲವಿಕೆಯ ದಿನ. ನಾವೆಲ್ಲರೂ ಹನ್ನೊಂದೂವರೆಗೆ ಶಾಲೆ ಬಿಟ್ಟು ಹೊರಡುತ್ತಿರುವಂತೆ ಮನಸಿನಲ್ಲಿ ಮುಂದಿನ ಒಂದೂವರೆದಿನಗಳ ಅವಧಿಗೆ ವಿವಿಧ ಪಂಚವಾರ್ಷಿಕ ಯೋಜನೆಗಳನ್ನ ಹಾಕಿಕೊಂಡೆ ಹೆಜ್ಜೆಯಿಡುತ್ತಿದ್ದೆವು ಅಥವಾ ಮನೆಗಳತ್ತ ದೌಡಾಯಿಸುತ್ತಿದ್ದೆವು. ವಾರವಿಡಿ ನಮ್ರತೆಯನ್ನ ನಟಿಸುತ್ತಲಾದರೂ ಮನೆಯ ಕೆಲಸ ಕಾರ್ಯಗಳಲ್ಲಿ ವಿಧೇಯನಾಗಿರುತ್ತಿದ್ದ ನನ್ನ "ಮಾರ್ಜಾಲ ಸನ್ಯಾಸ"ಕ್ಕೆ ನಿಜವಾಗಿಯೂ ಮನ ಕರಗಿಯೋ ಏನೋ ಮನೆಮಂದಿಯೆಲ್ಲಾ ಆ ಒಂದೂವರೆ ದಿನದ ಮಟ್ಟಿಗೆ ನನ್ನ ಮೇಲೆ ಅಲ್ಪ ಸ್ವಲ್ಪ ಉದಾರ ಮನಸನ್ನ ತೋರುತ್ತಿದ್ದರು. ಆದರೆ ನನ್ನ ಅಸಲಿಯತ್ತಿನ ವಾಸಾನೆ ಹಿಡಿದಿರುತ್ತಿದ್ದ ಕಿರಿಯ ಚಿಕ್ಕಮ್ಮನಿಂದ ಇವೆಲ್ಲದಕ್ಕೂ ವಿವಿಧ ಆಕ್ಷೇಪಣೆಗಳ "ವಿಟೋ" ವೊಂದು ಸದಾ ಅವಳ ಅನುಮಾನದ ಬತ್ತಳಿಕೆಯಿಂದ "ಅಕ್ಷಯ ಅಂಬು"ವಿನಂತೆ ಬಂದು ಅಮ್ಮನ ಮುಂದೆ ಬೀಳುತ್ತಿದ್ದರೂ ಅಮ್ಮ ಅವನ್ನೆಲ್ಲ ಅವತ್ತಿನ ಮಟ್ಟಿಗೆ ( ಕೇವಲ ಅವತ್ತಿನ ಮಟ್ಟಿಗೆ ಮಾತ್ರ! ) ಗಂಭೀರವಾಗಿ ಪರಿಗಣಿಸದೆ ಸ್ವಲ್ಪ ಸೊಕ್ಕಲು ವಾರಾಂತ್ಯದಲ್ಲಿ ನನಗೆ ಬಿಡುವು ಕೊಡುತ್ತಿದ್ದರು. ಈ ಬಿಡುಗಡೆಯ ಭಾಗ್ಯದ ರುಚಿ ಕಂಡವ "ಪ್ರತಿದಿನವೂ ಶನಿವಾರ, ಭಾನುವಾರಗಳೆ ಆಗಿರಲಿ ದೇವಾ" ಅಂತ ನಿತ್ಯದ ಭಜನೆಯಲ್ಲಿ ಮನಸಾರೆ ಬೇಡಿಕೊಳ್ಳುತ್ತಿದ್ದೆ. "ಭಕ್ತ ಪ್ರಹ್ಲಾದ"ದಲ್ಲಿ ಎಳೆಯ ಭಕ್ತನ ಮೊರೆಯನ್ನಾಲಿಸಿ ಕಂಭದಿಂದ ಸಿಡಿದೆದ್ದು ಹೊರಬಂದ ಪ್ರಭು ಎಂದಾದರೊಮ್ಮೆ ಹಾಗೆ ನನ್ನ ಮುಂದೆಯೂ ಪ್ರತ್ಯಕ್ಷನಾಗಿ ನನ್ನ ಈ ಬೇಡಿಕೆಗೂ "ತಥಾಸ್ತು" ಎನ್ನುತ್ತಾನೆ ಎನ್ನುವ ಗಾಢ ನಂಬಿಕೆ ಬಾಲ್ಯದುದ್ದಕ್ಕೂ ನನಗಿತ್ತು. ಅಂತಹ ಶುಭ ಸಂಧರ್ಭದಲ್ಲಿ ಅವನಿಗೆ ಚಾಡಿ ಹೇಳಿಕೊಟ್ಟು ಹಿರಣ್ಯಕಾಶುಪಿವಿನಂತಹ ನನ್ನ ಕಿರಿ ಚಿಕ್ಕಮ್ಮನಿಗೂ ಒಂದು ತಕ್ಕ ಪಾಠ ಕಲಿಸಲೇ ಬೇಕು ಅಂತ ಮನಸೊಳಗೆ ತೀರ್ಮಾನಿಸಿಕೊಂಡಿದ್ದೆ. ಇರಲಿ, ಆ ಸಂದರ್ಭ ಇನ್ನೂ ಬದುಕಿನಲ್ಲಿ ಕೂಡಿ ಬಂದಿಲ್ಲ! ಆದರೆ ಈ ಬಿಡುವಿಗೂ ಅನೇಕ "ಷರತ್ತುಗಳು ಅನ್ವಯ"ವಾಗುತ್ತಿದ್ದವು. ಮೊದಲನೆಯದಾಗಿ ಅಂದು ಬೇಗ ಉಂಡು ಅಮ್ಮನ ಜೊತೆ ಕುಶಾವತಿಯ ಸರಕಾರಿ ಫಾರ್ಮಿಗೋ, ಇಲ್ಲವೆ ಶಟ್ಟರ ಗದ್ದೆಯ ನಾಡ್ತಿ ಹೊಳೆಯಂಚಿಗೋ, ಅದೂ ಅಲ್ಲದಿದ್ದರೆ ಪುರಸಭೆಯ ಹಿಂದಿದ್ದ ಸಾಬರ ಹಳೆ ಸ್ಮಶಾನಕ್ಕೋ ಹೋಗ ಬೇಕಾಗುತ್ತಿತ್ತು. ಅಲ್ಲೆಲ್ಲ ಸಮೃದ್ಧವಾಗಿ ಬೆಳೆದಿರುತ್ತಿದ್ದ ಕಡ್ಡಿಕಡ್ಡಿಯಂತಹ ಹಸಿ ಹುಲ್ಲುಗಳನ್ನ ಅಮ್ಮ ತನ್ನ ಕೈಗತ್ತಿಯಿಂದ ಕೂಯ್ದೂ ಕುಯ್ದೂ ಕಟ್ಟು ಕಟ್ಟಿ ಸಿದ್ಧ ಮಾಡುತ್ತಿದ್ದರು. ನಾನು ಹಾಗೂ ಅಮ್ಮ ಸೇರಿ ಅದನ್ನ ಮನೆಗೆ ಸಾಗಿಸುತ್ತಿದ್ದೆವು. ನನ್ನ ಗಾತ್ರಕ್ಕೆ ತಕ್ಕ ಸಾಮರ್ಥ್ಯದ ಚಿಕ್ಕ ಕಟ್ಟು ನನ್ನ ತಲೆಯೇರುತ್ತಿದ್ದರೆ, ದೊಡ್ಡ ಕಟ್ಟನ್ನ ಅಮ್ಮ ಹೊರುತ್ತಿದ್ದರು. ಹೀಗೆ ಹತ್ತಾರು ಬಾರಿ ಅಲ್ಲಿಗೂ ಮನೆಗೂ ಓಡಾಡಿ ಹುಲ್ಲು ಹೊತ್ತು ಹಾಕಿ ನಮ್ಮ ಮನೆಯ ನಾಲ್ಕು ಕಾಲಿನ ನೆಂಟರ ವಾರದ ಹಸಿ ಹುಲ್ಲಿನ ಹಂಬಲಕ್ಕೆ ಒಂದು ದಾರಿ ಮಾಡುವಾಗ ಹೊತ್ತು ಯಾರ ಅನುಮತಿಒಗೂ ಕಾಯದೆ ಜಾರಿ ಮೂರರ ಸಮೀಪ ಬಂದು ಮುಟ್ಟಿರುತ್ತಿತ್ತು. ನಡುನಡುವೆ ಮುಖದ ಅಂಚಿನಿಂದ ಧಾರಾಕಾರವಾಗಿ ಸುರಿಯುವ ಬೆವರನ್ನ ತಲೆಗೆ ಸಿಂಬಿ ಸುತ್ತಿ ಕೊಂಡಿದ್ದ ಬೈರಾಸಿನಿಂದ ಆಗಾಗ ಒರೆಸಿಕೊಳ್ಳುತ್ತಲೇ ಆದಷ್ಟು ಶೀಘ್ರ ಈ ಕೆಲಸದ ಹೊರೆಯನ್ನ ಕೊಟ್ಟಿಗೆಯವರೆಗೂ ಸಾಗಿಸುವ ಕೆಲಸವನ್ನ ಓಡೋಡುತ್ತಲೇ ಮಾಡಿ ಪೂರೈಸುತ್ತಿದ್ದೆ. ಇದು ಮುಗಿದ ಮೇಲೆ ಸದರಿ ಹುಲ್ಲನ್ನೆಲ್ಲ ಅಟ್ಟಕ್ಕೆ ಸಾಗಿಸುವ ಕೆಲಸ ಬಾಕಿ ಉಳಿಯುತ್ತಿತ್ತು. ಉತ್ತಮ ಮೋಪಿನ ಮರದಿಂದ ಮಾಡಿದ್ದ ನಮ್ಮ ಕೊಟ್ಟಿಗೆಯ ಸಣ್ಣಟ್ಟ ಮತ್ತೆ ಕೇವಲ ಬಿದಿರ ದಬ್ಬೆ ಹಾಸಿದ್ದ ದೊಡ್ಡಟ್ಟ ಎರಡೂ ನಮ್ಮ ಕೊಟ್ಟಿಗೆಯಲ್ಲಿತ್ತು. ದೊಡ್ಡಟ್ಟದಲ್ಲಿ ಈ ವಾರದ ಖರ್ಚಿನ ಹಸಿ ಹುಲ್ಲುಗಳನ್ನೆಲ್ಲ ಶೇಖರಿಸಿ ಇಡಬೇಕಾಗಿತ್ತು, ನಾನೆ ಏಣಿ ಏರಿ, ಅಟ್ಟ ಹಟ್ಟಿ ಅಮ್ಮ ಕೆಳಗಿನಿಂದ ಕೊಡುವ ಹುಲ್ಲಿನ ಹೊರೆಗಳನ್ನೆಲ್ಲ ಅಟ್ಟದಲ್ಲಿ ಒತ್ತಿ ಒತ್ತಿ ಕೂಡಿಡಬೇಕಿತ್ತು. ಮಳೆಗಾಲದ ಹಿಂಚು ಮುಂಚಿನ ದಿನಗಳಲ್ಲಿ ಮಾತ್ರ ಸಿಗುತ್ತಿದ್ದ ಈ ಹಸಿ ಹುಲ್ಲಿನ ಹೊರೆಯನ್ನ ನಾವು ಹೊತ್ತು ತಂದಾಗ ನಮ್ಮ ಕೊಟ್ಟಿಗೆಯ ದನಗಳ ಕಣ್ಣುಗಳು ಆಸೆಯಿಂದ ಹೊಳೆಯುತ್ತಿದ್ದುದು, ಅವುಗಳ ಬಾಯಿ ಅಯಾಚಿತವಾಗಿ ಜೊಲ್ಲು ಸುರಿಸುತ್ತಿದ್ದುದು ಎಲ್ಲಾ ಮತ್ತೆ ನೆನಪಾಗುತ್ತಿದೆ. ನಾವು ಕಟ್ಟಿ ಹಾಕಿಯೇ ಸಾಕುತ್ತಿದ್ದ ಪಾಪದ ಆ ಮೂಕ ಜೀವಗಳ ಕನಿಷ್ಠ ಬಯಕೆಗಳನ್ನಾದರೂ ತೀರಿಸಿದ ತೃಪ್ತಿ ಆಗೆಲ್ಲಾ ಮನಸಿನಲ್ಲಿ ಮೂಡಿ ಒಂಥರಾ ಖುಷಿ ಮನಮಾಡುತ್ತಿತ್ತು. ನಮ್ಮ ಮನೆಯಲ್ಲಿ ಸುಮಾರು ದನಗಳಿದ್ದರೂ ಎಮ್ಮೆ ಮಾತ್ರ ಇದ್ದದ್ದು ಒಂದೆ. ಅದೂ ಕೂಡ "ಲೋನೆಮ್ಮೆ"!. ಲೋನೆಮ್ಮೆ ಅಂದರೆ ಬ್ಯಾಂಕಿನಲ್ಲಿ ಸಾಲ ಮಾಡಿ ಖರೀದಿಸಿದ್ದು. ಸದರಿ ಸಾಲ ಕೊಟ್ಟ ಬ್ಯಾಂಕಿನವರು ಗುರುತಿಗಾಗಿ ಅದರ ಕಿವಿ ಚುಚ್ಚ್ಹಿಸಿ ಬೆಂಡೋಲೆಯಂತಹ ಒಂದು ಬ್ಯಾಂಕಿನ ಮುದ್ರೆಯಿರುವ ಗುರುತಿನ ಹಿತ್ತಾಳೆ ಬಿಲ್ಲೆಯೊಂದನ್ನ ಎಮ್ಮೆಯ ಎಡ ಗಿವಿಗೆ ಹಾಕಿದ್ದರು. ಸಾಮಾನ್ಯವಾಗಿ ಎಲ್ಲಾ ಸಾಲ ಪಡೆದು ಖರೀದಿಸಿದ ಎಮ್ಮೆಗಳಿಗೆ ಇಂತಹ "ಬ್ಯಾಂಕ್ ಬೆಂಡೋಲೆ" ಸಾಲದ ಕೊನೆಯ ಪೈಸ ಸಂದಾಯವಾಗುವವರೆಗೂ ಖಾಯಂ ಆಗಿ ರಾರಾಜಿಸುತ್ತಿತ್ತು. ಅವಳಿಗೊಬ್ಬ ಮುದ್ದಾದ ಗಂಡು ಕರುವೂ ಇದ್ದ. ಮೇಲ್'ಬಸ್ಟ್ಯಾಂಡಿನ ಬಳಿಯಿರುವ ಎರಡು ಎಮ್ಮೆ ದೊಡ್ಡಿಗಳಲ್ಲೊಂದರಿಂದ ಆಮ್ಮ ಇನ್ನೂ ಹಸುಗೂಸಾಗಿದ್ದ ಮರಿಕೋಣನನ್ನು ತೋಳಲ್ಲಿ ಎತ್ತಿ ಕೊಂಡು ಬಂದಿದ್ದರೆ, ತನ್ನ ಕಂದನನ್ನೆ ಕಕ್ಕುಲಾತಿಯಿಂದ ದಿಟ್ಟಿಸುತ್ತಾ ಅವನ ಮೈಯನ್ನ ಅವಕಾಶವಾದಾಗಾಲೆಲ್ಲ ರಸ್ತೆಯುದ್ದಕ್ಕೂ ಚೂರುಪಾರು ನೆಕ್ಕುತ್ತಾ ಅವನಮ್ಮ ನನ್ನಮ್ಮನ ಹಿಂದೆ ಹಿಂದೆಯೆ ಸನ್ಮೋಹಿನಿಗೆ ಒಳಗಾದವಳಂತೆ ಕಾತರದ ಹೆಜ್ಜೆ ಹಾಕುತ್ತಾ ನಮ್ಮ ಮನೆಯ ಹಿಂಬಾಗಿಲ ದಣಪೆ ದಾಟಿ ನಮ್ಮ ಕುಟುಂಬದ ಖಾಯಂ ಸದಸ್ಯಳಾಗಿ ಸೇರಿ ಹೋದಳು. ಮೊದಲಿಗೆ ಅಲ್ಲಿ ಅದಾಗಲೇ ಹಕ್ಕು ಸಾಧಿಸಿದ್ದ ದನಗಳ ಮಂದೆ ಈ ಹೊಸಬಳನ್ನ ತಿವಿಯುವಂತೆ ದಿಟ್ಟಿಸಿದ್ದು ಹೌದಾದರೂ ಕ್ರಮೇಣ ಅವಳ ಇರುವನ್ನೂ ಸಹಜವಾಗಿ ಒಪ್ಪಿಕೊಂಡು ಅವಳನ್ನೂ ಸಮಾನ ದೃಷ್ಟಿಯಿಂದ ಕಾಣತೊಡಗಿದರು. ಆ ದಿನ ನನಗಿನ್ನೂ ಚನ್ನಾಗಿ ನೆನಪಿದೆ. ಮಿರಿಮಿರಿ ಮಿಂಚುತ್ತಿದ್ದ ಮೈಯಿನ ಎಮ್ಮೆಯಮ್ಮ- ಇನ್ನೂ ರೋಮಾವೃತ್ತ ಮೈಯ ಬೆದರಿದ ಕಣ್ಣುಗಳ ತನ್ನ ಪುಟ್ಟ ಕೋಣ ಕುಮಾರನೊಂದಿಗೆ ನಮ್ಮ ಮನೆಯನ್ನ ಹೊಕ್ಕ ಆ ದಿನ ನನಗೆ ಇನ್ನೂ ಚನ್ನಾಗಿ ನೆನಪಿದೆ. ಅವನಿಗೂ ನಮ್ಮ ಮನೆಯಲ್ಲಿ ಅವನ ಪ್ರಾಯದ ಇನ್ನಿತರ ತುಂಟ ಕಾರುಗಳಿಗೆ ಸಿಗುತ್ತಿದ್ದ ಸಕಲ ಸೌಭಾಗ್ಯಗಳೂ ಲಭ್ಯವಾದವು. ರಾತ್ರಿ ಅವನನ್ನ ಚನ್ನಾಗಿ ಹೊದಿಸಿ ಅವನಿಗಾಗಿಯೇ ಮಾಡಿದ್ದ ಹೊಸಾ ಗೋಣಿ ತಾಟಿನ ಹಾಸಿಗೆ ಮೇಲೆ ನಮ್ಮ ಅಡುಗೆ ಮನೆಯೊಳಗೆ ಮಲಗಿಸಿ ಕೊಳ್ಳಲಾಗಿತ್ತು. ಉತ್ಸಾಹ ಹೆಚ್ಚಾಗಿದ್ದ ನನಗೋ ಒಬ್ಬ ಹೊಸ ತಮ್ಮ ಸಿಕ್ಕಿದ್ದ ಖುಷಿಯಿತ್ತು. ನಮ್ಮೆಲ್ಲರ ಅತಿ ಮುಚ್ಚಟೆಯನ್ನ ಅರಿತುಕೊಂಡ ಆತ ಒಂದೆರಡು ದಿನದಲ್ಲಿಯೆ ಮೈಚಳಿಯನ್ನೆಲ್ಲ ಬಿಟ್ಟು ತನ್ನ ಮಗು ಸಹಜ ವರ್ತನೆಗಳಿಂದ ನಮ್ಮನ್ನೆಲ್ಲ ರಂಜಿಸಿದ. ಬರುಬರುತ್ತಾ ನಮ್ಮೆಲ್ಲರ ಮೇಲೂ "ರೌಡಿ ರಾಥೋಡ "ನಂತೆ ಹಕ್ಕು ಸಾಧಿಸತೊಡಗಿದ. ನಾವೇನಾದರೂ ತಿನ್ನುವುದನ್ನ, ತಿನ್ನುವ ವಸ್ತುವೇನಾದರೂ ನಮ್ಮ ಕೈಯಲ್ಲಿದ್ದದ್ದನ್ನ ನೋಡಿದರೆ ಅದನ್ನ ತನಗೆ ಕೊಡುವ ತನಕ ಹಟಾ ಮಾಡುತ್ತಿದ್ದ. ಹಾರಿ ಕಿತ್ತು ಕೊಳ್ಳಲು ವಿಫಲ ಯತ್ನಕ್ಕಿಳಿಯುತ್ತಿದ್ದ. ಹಟ್ಟಿಗೆ ಹೋದವರನ್ನೆಲ್ಲ ಹಸಿ ಹುಲ್ಲು ಕೊಡುವಂತೆ ಪೀಡಿಸುತ್ತಿದ್ದ. ಬೆಳ್ಳಂಬೆಳಗ್ಯೆ ಇನ್ನುಳಿದ ಕರುಗಳಿಗಿಂತ ಮೊದಲೆ ಅಮ್ಮ ತನಗೆ ಹಬೆಯಾಡುವ ರುಚಿರುಚಿಯಾದ ತೌಡು ಬೆರೆಸಿದ ಅಕ್ಕಚ್ಚು ಕೊಡದಿದ್ದರೆ ಇತರರೊಂದಿಗೆ ಗುದ್ದಾಟಕ್ಕಿಳಿಯುತ್ತಿದ್ದ . ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಅವನ ಪಾರಮ್ಯದ ಮುಂದೆ ನಾವೆ ಪರದೇಶಿಗಳಾಗಿ ಹೋದೆವು! ಉಳಿದಂತೆ ನಮ್ಮ ಕೊಟ್ಟಿಗೆ ಯಲ್ಲಿದ್ದ ದನಗಳ ಗ್ಯಾಂಗಿಗೆ ತಲೆಮಾರುಗಳ ಹಿನ್ನೆಲೆಯಿದೆ. ನಮ್ಮ ಮನೆಯ ಪಶು ಸಂಪತ್ತನ್ನ ಹೆಚ್ಚಿಸಿದ ಹಿರಿಮೆ ಲಕ್ಷ್ಮಿಗೆ ಸಲ್ಲಬೇಕು. ಮದುವೆಯಾಗಿದ್ದ ಹೊಸತರಲ್ಲಿ ಕೊಪ್ಪ ಚಿಕ್ಕಪ್ಪನ ಡ್ರೈವಿಂಗ್ ಗುರುಗಳಾಗಿದ್ದ ಬಾಳೆಬೈಲಿನ ಶೀನಪ್ಪ ಶೆಟ್ಟರ ಮನೆಯಿಂದ ಇನ್ನೂ ಮೈನೆರೆದಿರದ ಲಕ್ಷ್ಮಿಯನ್ನ ನನ್ನ ತಾಯಿಯ ತಾಯಿ ಮನೆಗೆ ತಂದಿದ್ದರಂತೆ. ಶೆಟ್ಟರ ಮನೆಯಾಕೆ ಮೀನಾಕ್ಷಿಯಮ್ಮ ನಮ್ಮೆಲ್ಲರ ಪಾಲಿಗೆ ಪ್ರೀತಿಯ "ಅಜ್ಜಿ"ಯಾಗಿ ಉಳಿದು ಹೋಗಿದ್ದರು. ಮನೆಗೆ ಯಾರಾದರೂ ನೆಂಟರು ಬಂದ ಪಕ್ಷದಲ್ಲಿ ಅವರನ್ನ ಸಿದ್ಧೇಶ್ವರ ಗುಡ್ಡಕ್ಕೆ ಕರೆದೊಯ್ಯುವುದು ಆಗೆಲ್ಲ ನಮ್ಮಲ್ಲಿ ಒಂದು ಸಂಪ್ರದಾಯವೆ ಆಗಿತ್ತು. ಹೋಗುವಾಗ- ಬರುವಾಗ ನಾವು ಗುಡ್ಡದ ಅಂಚಿಗೆ ಇದ್ದ ಮೀನಾಕ್ಷಿ ಅಜ್ಜಿಯ ಮನೆಗೆ ಎಡತಾಕುತ್ತಿದ್ದೆವು. ಗುಡ್ಡಕ್ಕೆ ಹೋಗುವಾಗ ನಮಗೆ ಅವರು ಅವರ ಹಿತ್ತಲ ಗದ್ದೆಯಲ್ಲೇ ಬೆಳೆದಿದ್ದ ಬಾಳೆಹಣ್ಣು- ಪೇರಳ ಹಾಗೂ ನೇರಳೆ ಹಣ್ಣು ದಾರಿ ಖರ್ಚಿಗೆ ಕಟ್ಟಿ ಕೊಟ್ಟು ಅಲ್ಲಿದ್ದ ಸಿದ್ಧೇಶ್ವರನಿಗೆ ಮಾಡಿಸಲು ಹಣ್ಣು ಕಾಯನ್ನೂ ಕಟ್ಟಿ ಕೊಡುತ್ತಿದ್ದರು. ಮತ್ತೆ ಮರಳಿ ಕತ್ತಲಾಗುವಾಗ ಅಲ್ಲಿಂದ ಮನೆಗೆ ಹಿಂದಿರುಗುವಾಗ ಅವರ ಮನೆಯಲ್ಲಿ ನಮಗೆಲ್ಲರಿಗೂ ಚನ್ನಾಗಿ ಕಾಯಿ- ಸಕ್ಕರೆ- ಹಸಿ ಮೆಣಸು ಬೆರೆಸಿದ ಅವಲಕ್ಕಿ ಜೊತೆಗೆ ಕಾಫಿಯ ಸಮಾರಾಧನೆ ಮಾಡಿಸುತ್ತಿದ್ದರು. ಅವನ್ನೆಲ್ಲ ತಯಾರು ಮಾಡಿಟ್ಟುಕೊಂಡು ನಮ್ಮ ದಾರಿಯನ್ನೆ ಕಾಯುತ್ತಾ ಅವರ ಮನೆಯ ಉದ್ದನೆಯ ಗೇಟಿನ ಹತ್ತಿರ ಕಣ್ಣು ಕಿರುದು ಗೊಳಿಸಿಕೊಂಡು ಕೈಯನ್ನ ದೃಷ್ಟಿ ನಿಖರವಾಗಿಸಿಕೊಳ್ಳಲು ನೆರೆ ಬಂದಿದ್ದ ತನ್ನ ಹುಬ್ಬಿನ ಮೇಲೆ ಅಡ್ಡ ಹಿಡಿದು ನಿಂತ ಮೀನಾಕ್ಷಿ ಅಜ್ಜಿ ಮತ್ತೆಮತ್ತೆ ನೆನಪಾಗುತ್ತಾರೆ. ಅವರ ಅವಲಕ್ಕಿಯ ರುಚಿ ಬಿಸಬಿಸ ಹೆಜ್ಜೆ ಹಾಕಿ ಗುಡ್ಡ ಇಳಿದು ಅವರ ಮನೆ ಮುಟ್ಟುವಂತೆ ಕಾಲುಗಳಿಗೆ ಪುಸಲಾಯಿಸುತ್ತಿದ್ದ ದಿನಗಳ ಸವಿ ಇನ್ನೂ ಮನದ ಮೂಲೆಯಲ್ಲಿರುವ ನೆನಪಿನ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಅವರಲ್ಲಿಂದ ನಮ್ಮ ಮನೆಗೆ ಬರುವಾಗ ಈ ಲಕ್ಷ್ಮಿ ಎಳೆಗರು. ಮಲೆನಾಡು ಗಿಡ್ಡ ತಳಿಗೆ ಸೇರಿದ ಮಣ್ಣಿನ ಬಣ್ಣದ ಕುಳ್ಳನೆಯ ಲಕ್ಷ್ಮಿ ನಮ್ಮ ಕೊಟ್ಟಿಗೆ ತುಂಬಿದ್ದ ಎಲ್ಲಾ ಸಂತಾನಗಳಿಗೂ ರಾಜಮಾತೆ. ಈ ಹಿರಿಯಜ್ಜಿಯ ಕಣ್ಣ ಆರೈಕೆಯಲ್ಲಿಯೇ ಅವಳ ಮಕ್ಕಳ, ಮೊಮ್ಮಕ್ಕಳ ಅಷ್ಟೆ ಏಕೆ ಮರಿ ಮಕ್ಕಳ ಹೆರಿಗೆಯಾಗಿ ಅವರೆಲ್ಲರ ಸಂಸಾರ ಬೆಳೆದಿದೆ. ಈ ಲಕ್ಷ್ಮಿ ನಾನು ಸರಿಯಾಗಿ ಕಣ್ಣು ಬಿಡುವ ಹೊತ್ತಿಗೆಲ್ಲ ಅಜ್ಜಿಯಾಗಿದ್ದಳು. ನನ್ನ ತಾಯಿಯ ತಾಯಿ ಸತ್ತು ಮನೆಗೆ ನನ್ನ 'ಅಮ್ಮ'ನ ಪ್ರವೇಶ ಆದ ನಂತರ ಲಕ್ಷ್ಮಿ ಅಮ್ಮನ ಆಪ್ತ ವಲಯಕ್ಕೆ ಸೇರಿ ಹೋಗಿದ್ದಳು. ಪುಟ್ಟ ದೇಹಾಕೃತಿಯ ಲಕ್ಷ್ಮಿಯದ್ದು ಪರಮ ಸಾಧು ಸ್ವಭಾವ. ಅವಳ ಮಕ್ಕಳು ಮೊಮ್ಮಕ್ಕಳೊಂದಿಗೆ ನಾನೂ ಎಷ್ಟೋ ಸಲ ಅಮ್ಮ ಹಾಲು ಕರೆದಾದ ಮೇಲೆ ಅವಳ ಮೊಲೆಗೆ ಬಾಲ್ಯದಲ್ಲಿ ಬಾಯಿ ಹಾಕಿ ಹಾಲು ಹೀರಿದ್ದೇನೆ. ಅವಳಿಗೆ ತನ್ನವರು- ಪರರು ಎಂಬ ಭೇದ ಭಾವವಿಲ್ಲ. ಎಲ್ಲಾ ಮಕ್ಕಳೂ ತನ್ನ ಮಕ್ಕಳೆ ಎನ್ನುವಂತೆ ನಮ್ಮ ಇಂತಹ ಬೇಕು ಬೇಡಗಳನ್ನ ತನಗೆ ಅದೆಷ್ಟೇ ಹಿಂಸೆಯಾದರೂ ತಡಕೊಂಡು ಪೂರೈಸಿದ್ದಾಳೆ ಅವಳು. ಮೊದಲ ಹೆರಿಗೆಯಲ್ಲಿ ತ್ರಾಸವಾಗಿ ಕರು ಸತ್ತು ಹುಟ್ಟಿದ ನಂತರ ಅಮ್ಮ ಅವಳಿಗೆ ಕೃತಕ ಗರ್ಭಧಾರಣೆಯನ್ನ ಮಾಡಿಸುತ್ತಿದ್ದರು . ಪ್ರತಿ ಬಾರಿ ಕೊಟ್ಟಿಗೆಯ ಸುಂದರಿಯರಲ್ಲಿ ಯಾರಾದರು ಬೆದೆಗೆ ಬಂದಾಗಾಲೂ ನಮ್ಮ ಮನೆಯಿಂದ ಮೂರು ಬೀದಿ ದೂರವಿದ್ದ ವಾಸಣ್ಣನಿಗೆ ಕರೆ ಹೋಗುತ್ತಿತ್ತು. ಈ ದೂತನಾಗುವ ಹೊಣೆ ನನ್ನದೆ ಆಗಿರುತ್ತಿದ್ದರಿಂದ ನನಗೆ ಈ ಪಂಚಾಯ್ತಿಯೆಲ್ಲ ತುಂಬಾ ಚನ್ನಾಗಿ ಗೊತ್ತು. ವಾಸಣ್ಣ ನಮ್ಮೂರಿನ ಜಾನುವಾರು ಆಸ್ಪತ್ರೆಯ ಕಾಂಪೌಂಡರ್ , ಆದರೆ ನಮ್ಮ ಕೊಟ್ಟಿಗೆಯ ಮೂಲ ನಿವಾಸಿಗಳ ಪಾಲಿಗೆ ಸಾಕ್ಷಾತ್ ಅವರೇ ಡಾಕ್ಟರ್. ಅವರು ಅಲ್ಲಿಗೆ ಬಂದರೆಂದರೆ ಅಲ್ಲಿನ ಘಟವಾಣಿಯರ ಸದ್ದೆಲ್ಲ ಕ್ಷಣದಲ್ಲಿ ಅಡಗಿ "ಎಲ್ಲಿ ಈ ಸಾರಿ ನನಗೆ ದಬ್ಬಣದಂತಹ ಸೂಜಿ ಚುಚ್ಚಿ ಇಂಜೆಕ್ಷನ್ ಕೊಡುತ್ತಾರೋ!" ಎನ್ನುವ ಕಲ್ಪನೆಯಲ್ಲಿಯೆ ಹೆದರಿದ ಅವರೆಲ್ಲರ ಹಿಡಿತ ಮೀರಿ ಸಗಣಿ ಉಚ್ಚೆ ಹೊರಬಂದು ದೊಪದೊಪ ಕೆಳಗುರುಳುತ್ತಿತ್ತು. ಉದ್ದನೆಯ ಗಾಜಿನ ಕೊಳವೆಗಳನ್ನ ಜೋಪಾನವಾಗಿರಿಸಿದ್ದ ಪಿವಿಎಸ್ ಪೈಪಿನಂತಹ ಕೊಳವೆಡಬ್ಬವನ್ನು ವಾಸಣ್ಣ ತರುತ್ತಿದ್ದರು. ಮತ್ತೊಂದು ಕೈಪರ್ಸಿಗಿಂತ ದೊಡ್ಡದಾದ ಚರ್ಮದ ಚೀಲವೂ ತಪ್ಪದೆ ಅವರ ಕಂಕುಳ ಸಂಧಿಯಲ್ಲಿ ರಾರಾಜಿಸುತ್ತಿರುತ್ತಿತ್ತು.. ಅವರ ಕೊಳವೆ ಡಬ್ಬಿಯಿಂದ ತೆಗೆದ ಉದ್ದನೆಯ ಗಾಜಿನ ತೆಳೂ ನಳಿಕೆಯೊಂದನ್ನ ದನದ ಪುಕುಳಿಯಲ್ಲಿ ತೂರಿಸಿ ಅವರು ಬೆದೆಗೆ ಬಂದ ಸುಂದರಿಯರಿಗೆಲ್ಲ ಅದೇನೂ ಒಂದು "ಚಿಕಿತ್ಸೆ" ಮಾಡುತ್ತಿದ್ದರು! ಅವರು ಹಾಗೆ ಮಾಡುವಾಗ ವರ ಕೈ ಮೊಣ ಗಂಟಿನವರೆಗೂ ಒಳ ತೂರಿ ಹೊರಬರುತ್ತಿದ್ದರಿಂದ ಅಲ್ಲಿಯವರೆಗೂ ಸಗಣಿ ಮಯವಾಗಿರುತ್ತಿತ್ತು. ನಾನು ಅನ್ತರ ಕೈತೊಳಕೊಲ್ಲೋಕೆ ಸೋಪು ಕೊಟ್ಟು ಚೋಬಿನಿಂದ ನೀರೆರೆಯುತ್ತಿದ್ದೆ. ಅವರ ಈ ಚಿಕಿತ್ಸೆ ಫಲಿಸಿ ಕೆಲವೆ ತಿಂಗಳಲ್ಲಿ ನನಗೊಬ್ಬ ತಮ್ಮನೋ- ತಂಗಿಯೋ ಒಂದು ಶುಭಗಳಿಗೆಯಲ್ಲಿ ಅವರಮ್ಮನ ಮಾಸಿನಿಂದ ಕಳಚಿಕೊಂಡು ದೊಪ್ಪನೆ ಧರೆಗುರುಳುತ್ತಿದ್ದರು. ನನಗೆ ಮತ್ತೊಂದು ವಾರ ತಿನ್ನಲಿಕ್ಕೆ ಸಮೃದ್ಧ ಗಿಣ್ಣು ಸಿಗುತ್ತಿತ್ತು! ಈ ಗಿಣ್ಣುವಿನ ಆಸೆಗೆ ವಾಸಣ್ಣನಿಗೆ ಕರೆ ಕಳಿಸುವ ದೂತನ ಕೆಲಸವನ್ನ ಅತಿ ಉತ್ಸಾಹದಿಂದ ಮಾಡುತ್ತಿದ್ದೆ. ಈ ಉತ್ಸಾಹದ ಭರದಲ್ಲಿ ಆಗಾಗ ಹೊತ್ತಲ್ಲದ ಹೊತ್ತಿನಲ್ಲಿ "ವಾಸಣ್ಣನನ್ನ ಕರ್ಕೊಂಡು ಬರಲ? ಅವ್ರು ಬಂದು ತುಂಬಾ ದಿನ ಆಯ್ತಲ್ಲ!" ಅಂತ ಅಮ್ಮನ ಹತ್ತಿರ ಕೇಳಿ ಮನೆಮಂದಿಯಿಂದೆಲ್ಲ ಧರ್ಮಕ್ಕೆ ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದೆ. ನನ್ನ ಗಿಣ್ಣದ ಆಸೆಗೆ ಮೂಲವಾಗಿದ್ದ ವಾಸಣ್ಣನ ಆಗಮನದ ಕಾತರ ಅವರ್ಯಾರಿಗೂ ಅರ್ಥವೆ ಆಗದಿದ್ದುದು ಮಾತ್ರ ನನ್ನಲ್ಲಿ ಖೇದ ಹುಟ್ಟಿಸುತ್ತಿತ್ತು?!

Saturday, September 22, 2012

ಇಸ್ಲಾಂ ಧಾಳಿಕೋರತನ ಹಾಗು ಭಾರತೀಯರೊಂದಿಗಿನ ಅದರ ಆರಂಭಿಕ ಕದನ....

ದಕ್ಷಿಣದಲ್ಲಿ ಕಡಲ ತಡಿಯ ನಾಡುಗಳಲ್ಲಿ ಇಸ್ಲಾಂ ವ್ಯಾಣಿಜ್ಯದ ಕಾರಣಗಳ ಮೂಲಕ ಕ್ರಿಸ್ತಶಕ 646ರಲ್ಲಿ ದೇಶದೊಳಗೆ ತನ್ನ ಮೊದಲ ಹೆಜ್ಜೆಯೂರುತ್ತಿದ್ದಾಗ ಭಾರತ ಉಪಖಂಡದಲ್ಲಿದ್ದ ರಾಜಕೀಯ ಪರಿಸ್ಥಿತಿಯನ್ನ ನಾವು ಅರಿತುಕೊಳ್ಳಬೇಕು. ಕೇರಳದ ಚೇರರು ಸ್ವತಂತ್ರರಾಗಿ ಮೆರೆಯುತ್ತಿದ್ದ ಕಾಲವದು. ಇಂದಿನ ತಮಿಳುನಾಡಿನ ಬಹುಪಾಲು ಕಂಚಿಯಿಂದ ಆಳುತ್ತಿದ್ದ ಪಲ್ಲವರ ಅಧೀನದಲ್ಲಿತ್ತು. ಕೊಂಗನಾಡಿನ ಕೆಲಭಾಗಗಳೂ ಸೇರಿ ದಕ್ಷಿಣ ತಮಿಳುನಾಡು ತಂಜಾವೂರು ಕೇಂದ್ರಿತ ಚೋಳರ ಆಳ್ವಿಕೆಯಲ್ಲಿತ್ತು. ಚೋಳರು ಪಲ್ಲವರ ಸಾಮಂತರಾಗಿದ್ದರು. ಇನ್ನುಳಿದಂತೆ ಪೂರ್ವದ ಕರಾವಳಿಗಳೂ ಸೇರಿದಂತೆ ದಕ್ಷಿಣ ಹಾಗೂ ಪಶ್ಚಿಮ ಭಾರತದ ಬಹುಪಾಲು ಬಾದಾಮಿಯ ಚಾಲುಕ್ಯರ ಸಾಮ್ರಾಜ್ಯದಲ್ಲಿ ಸೇರಿಹೋಗಿದ್ದವು. ದೇಶದ ಉತ್ತರದ ಭೂಭಾಗ ಕನೋಜಿನ ಬೌದ್ಧ ದೊರೆ ಹರ್ಷ ಚಕ್ರವರ್ತಿಯ ಅಧೀನದಲ್ಲಿದ್ದು ಅವನ ಆಳ್ವಿಕೆಯ ಪ್ರತಿಹಾರ ಗುರ್ಜರ ಸಂಸ್ಥಾನ ತನ್ನ ಕೊನೆಗಾಲದ ಅಂಚಿಗೆ ಬಂದು ಮುಟ್ಟುವ ಸ್ಥಿತಿಯಲ್ಲಿತ್ತು. ಸಾಮ್ರಾಟರೆನಿಸಿದ್ದ ಗುರ್ಜರ- ಚಾಲುಕ್ಯ- ಪ್ರತಿಹಾರ- ಪಲ್ಲವರನ್ನ ಧಿಕ್ಕರಿಸಿ ಚೋಳ- ಪಾಂಡ್ಯ- ಚೇರ- ಕದಂಬ ಮುಂತಾದ ಮನೆತನಗಳು ಒಂದೊ ಹೊಸತಾಗಿ ಸಾಮ್ರಾಜ್ಯ ಕಟ್ಟಲು, ಇಲ್ಲವೆ ಅಧೀನ ಸಾಮ್ರಾಟರಿಂದ ಸ್ವತಂತ್ರ ಘೋಷಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದರು. ಆರ್ಥಿಕವಾಗಿ ನೋಡುವಾಗ ಆ ದೃಷ್ಟಿಯಿಂದ ಭಾರತ ಭೂಮಿ ಸಮೃದ್ಧವಾಗಿತ್ತು ಹಾಗೂ ಇಲ್ಲಿನ ವಣಿಕ ಸಾರ್ಥಗಳು (ಕ್ಯಾರವಾನ್) ದಕ್ಷಿಣದ ಕಂಚಿಯಿಂದ ವಾಯುವ್ಯದ ಸಮರಖಂಡದವರೆಗೂ (ಇಂದಿನ ಉಜ್ಬೇಕಿಸ್ತಾನ), ನೈರುತ್ಯದ ಮುಸ್ಸೇರಿ ಪಟ್ಟಣದಿಂದ ಗಂಗಾ ಬಯಲು ದಾಟಿ ಈಶಾನ್ಯದ ಬ್ರಮ್ಮದೇಶದವರೆಗೂ ಸೊತ್ತು ಸರಂಜಾಮುಗಳನ್ನ ಹೊತ್ತು ಬಿಕರಿ ಮಾಡುತ್ತಿದ್ದವು. ಸಾಲದ್ದಕ್ಕೆ ಸಮುದ್ರ ಮಾರ್ಗಗಳ ಮೂಲಕ ಆಗ್ನೇಯ ದೇಶಗಳಿಗೂ ಹೋಗುವ ಸಾರ್ಥಗಳೂ ಅಸ್ತಿತ್ವದಲ್ಲಿದ್ದವು. ಆದರೆ ಪಶ್ಚಿಮ ಕರಾವಳಿಯಿಂದ ಯಾವುದೆ ಸರಕುಗಳನ್ನ ನೇರವಾಗಿ ಹೊತ್ತೊಯ್ದು ಮಾರಲು ಅರಬ್ಬಿಗಳ ಆಕ್ಷೇಪ ಜಾರಿಯಲ್ಲಿತ್ತು. ಆಗಷ್ಟೆ ಕಣ್ತೆರೆದಿದ್ದ ಇಸ್ಲಾಮಿಗೆ ಧರ್ಮಾಂತರವಾಗಿದ್ದ ಅರಬ್ ಜಗತ್ತಿನ ವಣಿಕರು ಭಾರತೀಯ ವಾಣಿಜ್ಯಿಕ ಸಿರಿಯ ಮೇಲೆ ಕಣ್ಣಿಡಲಾರಂಭಿಸಿದ್ದರು. ಅರಬ್ ಜಗತ್ತಿನಲ್ಲಿ ಸಿರಿಯಾದ ದಮಸ್ಕಾಸ್, ಇರಾಕಿನ ಬಾಗ್ದಾದ್, ಪರ್ಷಿಯಾದ ತೆಹರಾನ್ ರಾಜಧಾನಿಗಳಾಗಿ ಮೆರೆಯುತ್ತಿದ್ದವು. ಆದರೂ ಯಾರಿಂದಲೂ ಆಳಿಸಿಕೊಳ್ಳಲು ಇಚ್ಚಿಸದ ಹಲವಾರು ಬುಡಕಟ್ಟುಗಳು ತಮ್ಮ ತಮ್ಮೊಳಗೆ ಮರುಳುಗಾಡಿನ ರೀತಿ ರಿವಾಜುಗಳನ್ನ ಮುಂದುವರೆಸುತ್ತಾ ತಮಗೆ ತೋಚಿದ ಹಾಗೆ ಕಾನೂನು ಕಟ್ಟಳೆಗಳನ್ನು ತಮ್ಮ ಸಮಾಜದೊಳಗೆ ರೂಪಿಸಿಕೊಂಡಿದ್ದವು. ಆದರೆ ಇವೆಲ್ಲದಕ್ಕೂ ಇಸ್ಲಾಮಿನ ನೆಲೆಗಟ್ಟು ಕಡ್ಡಾಯವೆ ಆಗಿಹೋಗಿತ್ತು. ಇತಿಹಾಸದಲ್ಲಿಯೇ ಮೊತ್ತಮೊದಲಿಗೆ ಭಾರತೀಯ ಉಪಖಂಡವನ್ನ ಹಿಂದುಸ್ತಾನವೆಂದೂ, ಇಲ್ಲಿನ ನಿವಾಸಿಗಳನ್ನ ಸಾರಾಸಗಟಾಗಿ ಹಿಂದೂಗಳೆಂದೂ ಗುರುತಿಸಿದವರು ಅರಬ್ಬಿಗಳೆ. ಸಿಂಧೂ ನದಿಯ ಸುತ್ತಮುತ್ತಲವರೆಗೆ ಆಗಾಗ ಧಾಳಿಯಿಡುತ್ತಿದ್ದ ಅರಬ್ ಬುಡಕಟ್ಟುಗಳ ಬಾಯಲ್ಲಿ ಸಿಂಧೂ ಹಿಂದೂವಾಗಿ ಉಚ್ಚಾರಿತವಾಗಿ ಸದ್ಯ ಅದೆ ಇಲ್ಲಿನ ಮೂಲ ಧರ್ಮದ ಹೆಸರಾಗಿ ಉಳಿದು ಹೋಗಿದೆ! ಆದರೆ ಆಗ ಧರ್ಮದ ಕಲ್ಪನೆ ಭಾರತೀಯ ಉಪಖಂಡದಲ್ಲಿ ಸಾಪೇಕ್ಷ ವಾಗಿದ್ದು ಅದೊಂದು ಬದುಕುವ ಕ್ರಮ ಹಾಗೂ ಸಾಮಾಜಿಕ ವಿಧಿ ವಿಧಾನಗಳ ರೂಪಿತ ಮಾದರಿಯಾಗಿತ್ತು. ಆದನ್ನ ಇಲ್ಲಿನ ಎಲ್ಲರೂ ಬೇಷರತ್ತಾಗಿ ಒಪ್ಪಿಯೂಕೊಂಡಿದ್ದರು. ಹೀಗಿದ್ದ ಭಾರತದ ಮೇಲೆ ಆರಂಭದಲ್ಲಿ ಇಸ್ಲಾಮಿನ ಪ್ರತಿನಿಧಿಯಾಗಿ ಧಾಳಿಯಿಟ್ಟವನು ಮಹಮದ್ ಬಿನ್ ಕಾಸಿಂ. ಕ್ರಿಸ್ತಶಕ 714ರ ಅಂತ್ಯದಲ್ಲಿ ಇವನ ನೇತೃತ್ವದಲ್ಲಿ ಇಸ್ಲಾಮಿ ಧರ್ಮಾನುಯಾಯಿಗಳಿಂದ ಭಾರತದ ಮೇಲೆ ಮೊದಲ ಆಕ್ರಮಣ ನಡೆಯಿತು. ದೇವಳದಿಂದ (ಇಂದಿನ ಕರಾಚಿ) ರಾಜ್ಯಭಾರ ಮಾಡುತ್ತಿದ್ದ ದಾಹಿರ ರಾಜ ಸಾಂಪ್ರದಾಯಿಕವಲ್ಲದ ಹಾಗು ಕ್ರೌರ್ಯಕ್ಕೆ ಹೆಚ್ಚು ಒತ್ತು ಕೊಡುವ ಅರಬ್ಬೀ ಬುಡಕಟ್ಟುಗಳ ಯುದ್ದ ಶೈಲಿಯಿಂದ ನಜ್ಜುಗುಜ್ಜಾಗಿ ಹೋದ. ಮೂಲಸ್ಥಾನದಲ್ಲಿದ್ದ (ಇಂದಿನ ಮುಲ್ತಾನ್) ಕೊನಾರ್ಕದಲ್ಲಿರುವಂತಹದ್ದೆ ಸೂರ್ಯ ದೇವಾಲಯ ಇವರ ಧಾಳಿಯ ಅಂಗವಾಗಿದ್ದ ಧರ್ಮ ಶ್ರದ್ಧೆಗೆ ಬಲಿಯಾಗಿ ; ಮೂರ್ತಿ ಭಂಜನೆಗೆ ಸಿಲುಕಿ ಸರ್ವನಾಶವಾಗಿ ಹೋಯಿತು. ಇಂದು ಅಲ್ಲಿ ಹಿಂದಿದ್ದ್ದ ದೇವಸ್ಥಾನದ ಪಳಯುಲಿಕೆಯಿದೆ ಹಾಗೂ ಅದರ ನೆಲೆಗಟ್ಟಿನಲ್ಲಿಯೇ ಬ್ರಹತ್ ಮಸೀದಿ ಕಟ್ಟಲಾಗಿದೆ ( ಚಿತ್ರದಲ್ಲಿ ಗಮನಿಸಿ.). ಅಲ್ಲಿ ಕೆತ್ತಲಾಗಿದ್ದ ಸುಂದರ ರಥವೆರಿದ ಸೂರ್ಯನ ಪ್ರತಿಮೆಯನ್ನ ಕಾಸಿಮನ ಬರ್ಬರ ಸ್ವಭಾವದ ಅರಬ್ಬೀ ಸೈನಿಕರು ಧ್ವಂಸಗೊಳಿಸಿದ್ದೆ ಇಸ್ಲಾಮಿನಿಂದ ಹಿಂದುತ್ವಕ್ಕೆ ಸಂದ ಮೊದಲ ಆಘಾತ. ಕತ್ತಿಯಂಚಲ್ಲಿ ಗೆದ್ದ ನಾಡಿನಲ್ಲಿ ಧನ- ದ್ರವ್ಯದ ಸುಲಿಗೆಗಳು ನಡೆದವಾದರೂ ಮತಾಂತರದಂತಹ ಅತಿರೇಕ ಆಗಿನ್ನೂ ಅಡಿಯಿಟ್ಟಿರಲಿಲ್ಲ. ಆದರೆ ವಿಕೃತಿಯ ಮುಂದುವರಿಕೆಯಾಗಿ ಧಾಳಿಗೆ ಸಿಲುಕಿದ್ದ ಇಂದಿನ ಸಿಂಧ್ ಪ್ರಾಂತ್ಯದಲ್ಲಿದ್ದ ಅನೇಕ ದೇವಾಲಯಗಳಲ್ಲಿ ವ್ಯಾಪಕ ಮೂರ್ತಿ ಭಂಜನೆಗಳು ನಡೆದವು. ಅಂದಿನ ಭಾರತೀಯ ಉಪಖಂಡದ ರಾಜಕೀಯ ಸ್ಥಿತಿಯಲ್ಲಿ ಆಂತರಿಕ ಐಕ್ಯತೆ ಇಲ್ಲದ ಭಾರತದ ಪಾಳೆಪಟ್ಟುಗಳು ಇನ್ನೊಂದು ರಾಜ್ಯದ ಮೇಲಾದ ಪರಧರ್ಮೀಯರ ಪೈಶಾಚಿಕ ಮಟ್ಟದ ಧಾಳಿಯನ್ನ ಕಂಡೂ ಕಾಣದ ಹಾಗೆ ಇದ್ದರು. ಇದು ಅವರ ರಾಜಕೀಯ ನಡೆಯಾಗಿತ್ತು. ಸಿಂಧ್'ನ ಸರಹದ್ದು ಮೀರಲು ಯತ್ನಿಸಿ ಮಾಳವ ರಾಜ್ಯಕ್ಕೆ ಮುಗಿಬಿದ್ದ ಆರಬ್ಬಿ ಧಾಳಿಕೋರರನ್ನ ರಾಜ ಭೋಜರಂತಹ ದೊರೆಗಳು ಹಿಮ್ಮೆಟ್ಟಿಸಿದ್ದರಿಂದ ಮುಂದಿನ ಮೂರುನೂರು ವರ್ಷ ಯಾವುದೆ ತಂಟೆ ತಕರಾರುಗಳು ಸಿಂಧೂ ನದಿಯ ಪೂರ್ವತೀರವನ್ನ ಪ್ರವೇಶಿಸಲಾಗಲಿಲ್ಲ. ಆದರೆ ಕೊರಾಸನ್'ನ ದೊರೆ ಸಬಕ್ತಗಿನ್ ಬೌದ್ಧಧರ್ಮದ ಹಿಡಿತದಲ್ಲಿದ್ದ ಕಾಬೂಲನ್ನ ಆಕ್ರಮಿಸಿ ಅಲ್ಲಿಗೆ ಇಸ್ಲಾಮನ್ನು ಒತ್ತಾಯದಿಂದ ಹೇರಿದ. ಅನಂತರ ಅವನ ಗಮನ ಭಾರತದ ಸಂಪತ್ತಿನತ್ತ ಹರಿಯಿತು. ಭಟಿಂಡದ ರಾಜ ಜಯಪಾಲ ಅದಾಗ ತಾನೆ ಅಳಿವಿನಂಚಿನಲ್ಲಿದ್ದ ಪ್ರತಿಹಾರ ಸಾಮ್ರಾಜ್ಯದ ಸಾಮ್ರಾಟ ರಾಜ್ಯಪಾಲನ ಸಹಕಾರ ಪಡೆದು ಚಾಂದೆಲರ ರಾಜ ದಂಗಣನ ಜೊತೆ ಮೈತ್ರಿ ಸಾಧಿಸಿ ಸಬಕ್ತಗೀನನ ಸೈನ್ಯವನ್ನ ಕ್ರಿಸ್ತಶಕ 991ರಲ್ಲಿ ಹಿಮ್ಮೆಟ್ಟಿಸಲು ಶತಪ್ರಯತ್ನ ಮಾಡಿದನಾದರೂ ಅದು ಫಲ ಕೊಡದೆ ಕೈಚೆಲ್ಲ ಬೇಕಾಯಿತು. ಸಬಕ್ತಗೀನನ ಮಗ ಮಹಮದ್ ಬಿನ್ ಗಜನಿಯ ಮುಂದಿನ ಅಟ್ಟಹಾಸದ ಧಾಳಿಯ ಪರ್ವ ಆರಂಭಗೊಂಡಂತೆಯೆ ಭಾರತೀಯ ಜನಾಂಗಗಳು ಒತ್ತಾಯದ ಮತಾಂತರಕ್ಕೆ ಒಳಪಡಲು ಆರಂಭಿಸಿದವು. ಅಲ್ಲಿಯ ತನಕ ಹೇರಿಕೆಯ ಮತಾಂತರ ಭಾರತೀಯರ ಪಾಲಿಗೆ ಕೇಳಿಯೂ ಗೊತ್ತಿರದ ಹೊಸ ವಿಚಾರವಾಗಿತ್ತು. ಬೌದ್ಧ ಹಾಗೂ ಜೈನ ಧರ್ಮಾನುಸರಣೆ ಕೇವಲ ಐಚ್ಚಿಕವಾಗಿತ್ತೆ ಹೊರತು ವಾಣಿಜ್ಯಿಕ ಕುಟಿಲೋಪಾಯಗಳನ್ನ ಬಿಟ್ಟು ಇನ್ಯಾವುದೇ ಮಾರ್ಗದ ಮೂಲಕ ನೇರ ಹೇರಿಕೆಯಲ್ಲ. ಗಜನಿಯ ಆರ್ಭಟದಲ್ಲಿ ಸಿಲುಕಿ "ಕತ್ತಿ ಇಲ್ಲವೆ ಖುರಾನ್"ಎಂಬ ನೇರ ಬೆದರಿಕೆಗೆ ಮಣಿದು ಜೀವ ಉಳಿಸಿಕೊಳ್ಳಲು ಇಸ್ಲಾಂ ಅನುಸರಣೆಗೆ ಇಳಿದವರೇ ಹೆಚ್ಚು. ಕ್ರಿಸ್ತಶಕ 997ರಿಂದ ಆರಂಭವಾದ ಗಜನಿ ಮಹಮದನ ನಿರಂತರ ಆಕ್ರಮಕ ದಂಡಯಾತ್ರೆಗಳು 1027ರವರೆಗೂ ಕಾಶ್ಮೀರ, ಪಂಜಾಬ್, ಮಾಳವಾ, ಕಂಗ್ರಾ, ತಾನೇಶ್ವರ, ಕನೂಜು, ಮಥುರೆ, ಗ್ವಾಲಿಯರ್ ಹಾಗು ಸೋಮನಾಥ ದೇವಾಲಯಗಳ ಮೇಲೆಲ್ಲಾ ನಿರಂತರ ಹದಿನೇಳು ಬಾರಿ ನಡೆದವು. ಭಾರತದೊಳಗೆ ಅಷ್ಟು ದೂರ ಸಾಗಿ ಬಂದು ಲೂಟಿ ಹೊಡೆಯುವಾಗ ಅವನು ಅನೇಕ ಹಿಂದೂ ಸಾಮ್ರಾಜ್ಯಗಳ ಸರಹದ್ದನ್ನ ದಾಟಿಕೊಂಡೆ ಬರಬೇಕಾಗಿತ್ತು ಅನ್ನೋದು ನಿಮ್ಮ ನೆನಪಿನಲ್ಲಿರಲಿ. ಅದೆ ವೇಳೆಗೆ 'ತಮ್ಮ ಮನೆ ಮಾತ್ರ ಸುರಕ್ಷಿತವಾಗಿದ್ದರಾಯ್ತು...ಅಕ್ಕಪಕ್ಕದವರು ಬೇಕಿದ್ರೆ ಹಾಳು ಬಿದ್ದು ಹೋಗಲಿ!" ಎಂಬ ಆ ರಾಜ್ಯಗಳ ರಾಜರ ಹಾಗು ಪ್ರಜೆಗಳ ಮನಸ್ಥಿತಿಯ ಹಿಂದಿರುವ ಸ್ವಾರ್ಥವನ್ನೂ ಮರೆಯದಿರಿ! ಈ ಹೊಟ್ಟೆಕಿಚ್ಚಿನ ಫಲವಾಗಿ ಕೆಲವೆ ಸಾವಿರ ರಕ್ತ ಪಿಪಾಸುಗಳ ಜೊತೆಗೂಡಿ ಭಾರತದ ಸಿರಿ ಸಂಪತ್ತನ್ನ ಲೂಟಿ ಮಾಡಿ, ಅಮಾಯಕರನ್ನ ಒತ್ತಾಯದಿಂದ ಬಲವಂತವಾಗಿ ಮತಪರಿವರ್ತನೆಗೆ ಒಳಪಡುವ ಹಾಗೆ ಹಿಂಸಿಸಿದ ಮಹಮದ್ ಬಿನ್ ಗಜನಿ ಇಷ್ಟು ಯಶಸ್ವಿ ಧಾಳಿಯನ್ನ ಸಂಘಟಿಸಲು ಸಾಧ್ಯವಾಗುತ್ತಿರಲಿಲ್ಲ ಅನ್ನುವುದಂತೂ ಸತ್ಯ. ಇದಕ್ಕೂ ಭಾರತದಲ್ಲಿನ ಇಸ್ಲಾಮಿನ ಕಥೆಗೂ ನೇರಾನೇರ ಸಂಬಂಧವಿರುವ ಕಾರಣ ಐತಿಹಾಸಿಕ ನೆಲೆಗಟ್ಟಿನಿಂದಲೂ ಅನಿವಾರ್ಯವಾಗಿ ಭಾರತೀಯ ಇಸ್ಲಾಮನ್ನು ಅವಲೋಕಿಸಬೇಕಿದೆ. ಅದೇನೆ ಧಾಳಿ ಮಾಡಿದ್ದರೂ ಮಹಮದ್ ಬಿನ್ ಗಜನಿ ಮರಳಿ ಸ್ವದೇಶಕ್ಕೆ ಹೋಗಿ 1030ರಲ್ಲಿ ಅಲ್ಲಿಯೆ ತನ್ನ ಕೊನೆಯುಸಿರನ್ನೆಳೆದ. ಇಲ್ಲಿನ ರಾಜ್ಯವನ್ನ ಆಳುವ ಯಾವ ಅಭಿಲಾಷೆಯೂ ಅವನ ಧಾಳಿಯ ಹಿಂದೆ ಇದ್ದಿರಲಿಲ್ಲ. ಹೀಗಾಗಿ ಅಧಿಕೃತ ಇಸ್ಲಾಂ ಪ್ರಭುತ್ವದ ಆರಂಭಕ್ಕಾಗಿ ಭಾರತ ಭೂಮಿ ಇನ್ನೂ ಒಂದೂಕಾಲು ಶತಮಾನ ಕಾಯಬೇಕಾಯಿತು. ಮುಂದೆ ಮತ್ತೊಬ್ಬ ಕಿರಾತಕ ಸ್ವರೂಪಿ ಅಫಗನ್ ದೊರೆ ಮಹಮದ್ ಘೋರಿ ಧಾಳಿಯಿಡುವ ತನಕ. ( ನಾಳೆಗೆ.... )

Friday, September 21, 2012

".....ಕಪಿತ್ತ ಜಂಬೋ ಫಲಸಾರ ಭಕ್ಷಿತಂ"


ಸಂಜೆ ಬಯಲಿಗೆ ಆಡಲು ಹೋಗುತ್ತಿದ್ದ ನಾವು ಮಕ್ಕಳಿಗೆ ನಾಳೆ ನಮ್ಮೂರಿಗೆ ಯಕ್ಷಗಾನ ಮೇಳವೊಂದು ಬರುವ ಪುರಾವೆಗಳು ಸಿಗುತ್ತಿದ್ದವು. ಸದಾ ಹುಡಿ ಧೂಳಿನಿಂದ ಆವ್ರುತ್ತವಾಗಿರುತ್ತಿದ್ದ ಮೈದಾನಕ್ಕೆಲ್ಲ ಒಂದು ಸುತ್ತು ನೀರು ಹೊಡೆದು ನಾಳೆ ಟರ್ಪಾಲ್ ಟೆಂಟು ಕಟ್ಟಲು ಅನುಕೂಲವಾಗುವಂತೆ ಮೈದಾನದ ಸುತ್ತಲೂ ಸರಳಿನಂತ ಗೂಟಗಳನ್ನ ಹೊಡೆಯಲು ಆರಂಭಿಸಿರುತ್ತಿದ್ದರು. ನಾಳೆ ಯಕ್ಷಗಾನ ನೋಡುವ ಖುಷಿಗೆ ಮನಸೊಳಗೆ ಮಂಡಿಗೆ ಮೆಲ್ಲುತ್ತಾ ಕತ್ತಲು ಕವಿಯಲು ಇನ್ನೇನು ಆರಂಭ ವಾಗುವ ಹೊತ್ತಿನಲ್ಲಿ ನಾನು ಮನೆಯ ಹಾದಿ ಹಿಡಿಯುತ್ತಿದ್ದೆ. ಬಯಲಿಗೆ ಸೊಕ್ಕಲು ಹೋಗಿ ನಿತ್ಯ ತಡವಾಗಿ ಬರುತ್ತೇನೆ ಅನ್ನುವ ಹಿರಿಯರ ದೂರು ಬೈಗುಳದ ರೂಪದಲ್ಲಿ ದಿನವೂ ಎದುರಿಸಲೇ ಬೇಕಾಗಿದ್ದರಿಂದ ನಾನದರ ಪಾಲಿಗೆ ಸಂಪೂರ್ಣ ಕಿವುಡನಾಗಿದ್ದೆ. ಶಾಸ್ತ್ರದಂತೆ ಅವರೂ ಉಗಿಯುತ್ತಿದ್ದರು, ನಾನೂ ಅಭ್ಯಾಸ ಬಲದಿಂದ ನಿರ್ಲಿಪ್ತನಾಗಿ ಉಗಿಸಿಕೊಳ್ಳುತ್ತಿದ್ದೆ. ಒಂದೇ ಒಂದು ದಿನ ಯಾರಾದರೂ ಈ ಹೊತ್ತಲ್ಲಿ ಬಯ್ಯದಿದ್ದರೆ ಅದೇನನ್ನೋ ಕಳೆದು ಕೊಂಡಂತೆ ಭಾಸವಾಗುತ್ತಿತ್ತು! ಕೈಕಾಲು ತೊಳೆದ ಶಾಸ್ತ್ರ ಪೂರೈಸಿ ಮೂರು ಸಂಜೆ ಅಂತನ್ನುವ ಆ ಹೊತ್ತಿನಲ್ಲಿ ನಮ್ಮ ದೇವರ ಮನೆಯಲ್ಲಿ ಕೂಡು ಹಾಕಲ್ಪಟ್ಟಿದ್ದ ಶೃಂಗೇರಿ ಶಾರದೆ, ಕಟೀಲು ದುರ್ಗಾಪರಮೇಶ್ವರಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಹಿತ ಅಷ್ಟೂ ದೇವರುಗಳು, ಕೊಲ್ಲೂರು ಮೂಕಾಂಬಿಕೆ, ಹೊರನಾಡ ಅನ್ನಪೂರ್ಣೆ, ಉಡುಪಿ ಕೃಷ್ಣ, ಕಾಶಿ ವಿಶ್ವನಾಥನ ಕಟ್ಟು ಹಾಕಿಸಿದ ಪಟಗಳ ಜೊತೆಗೆ ಬೀಡಿ- ಸೋಪು- ಬ್ಲೇಡ್- ಪೇಯಿಂಟು ಪ್ರಚಾರ ಕ್ಯಾಲೆಂಡರ್ಗಳಲ್ಲಿ ಕಾರಣವೆ ಇಲ್ಲದೆ ಸೆರೆಸಿಕ್ಕವರಂತೆ ಮುದ್ರಿತರಾಗಿ, ಈಗ ನನ್ನಜ್ಜನ ಒತ್ತಡಕ್ಕೆ ಅನಿವಾರ್ಯವಾಗಿ ಮಣಿದು (ಬೇರೆ ದಾರಿಯಾದರೂ ಅವರೆಲ್ಲರಿಗೆ ಏನಿತ್ತು ಪಾಪ!) ಕಪ್ಪು ಅಂಚಿನ ಫ್ರೇಮ್ ಸೇರಿ ಸದ್ಯಕ್ಕೆ ಈ ಕ್ಷುಲ್ಲಕ ಜಗತ್ತಿನ ಗೋಳುಗಳಿಂದ ಸೇಫಾಗಿದ್ದ ಖಾದರ್ ಸಾಬರ ಮೂರುಮಾರ್ಕ್ "ಬೀಡಿ" ಲಕ್ಷ್ಮಿ (ಜೂಲಿ ಲಕ್ಷ್ಮಿ ತರಹ), ಭಾರತ್ ಬೀಡಿ ಸರಸ್ವತಿ, ಹಮಾಮ್ ಸೋಪಿನ ಶಿವಪಾರ್ವತಿ, ಮಹಾಲಸ ಜುವೆಲ್ಲರ್ಸ್ ಗಣಪತಿ, ಏಷ್ಯನ್ ಪೇಯಿಂಟ್ ಸುಬ್ರಮಣ್ಯ, "ಲಿಂಗೇಶ್ವರ ಕಟ್ಟಿಂಗ್ ಶಾಪ್, ಸವಳಂಗ ರಸ್ತೆ, ಶಿವಮೊಗ್ಗ" ಇವರ ಅಕ್ಕಮಹಾದೇವಿ, ಮಹಾವೀರ ಕ್ಲಾತ್ ಸೆಂಟರಿನ ಗೊಮ್ಮಟೇಶ್ವರ ಹೀಗೆ ಆ ಉದ್ಯಮಗಳಿಗೆ ಚೂರೂ ಸಂಬಂಧಿಸದ ಮೂರೂ ಮುಕ್ಕಾಲು ದೇವತೆಗಳ (ಕೆಲವು ದೇವಾನುದೇವತೆಗಳ ಅಸಹಜ ಗಾತ್ರದ ಚಿತ್ರಗಳು ಫ್ರೇಮ್ ಗಾತ್ರಕ್ಕೆ ಅನುಗುಣವಾಗಿ ದೇಹದ "ಕೆಳಗಿನ" ಅವಯವಗಳನ್ನು ಕಳೆದು ಕೊಂಡು ಅಂಗವಿಕಲರಾಗಿರುತ್ತಿದ್ದುದೂ ಉಂಟು!) ಸಾಲಿಗೆ ದೀಪ ಹಚ್ಚಿ, ಅದರಲ್ಲೊಂದು ಹಣತೆ ದೀಪವನ್ನಿರಿಸಿ ಕಡೆಗೆ ಮನೆ ಮುಂದಿನ ತುಳಸಿ ಕಟ್ಟೆಗೆ ಕೊಂಡೊಯ್ದು ಇಟ್ಟು ಕೈ ಮುಗಿಯ ಬೇಕಿತ್ತು. ತುಳಸಿಗೆ ದೀಪ ಇಡುವ ಹೊಣೆ ಅಮ್ಮನದ್ದು ದೀಪವನ್ನ ತುಳಸಿಕಟ್ಟೆಯ ಮೇಲಿತ್ತು ಅದಕ್ಕೆ ಮೂರುಸುತ್ತು ಬಂದು ಅಡ್ಡಬಿದ್ದು ನಮಸ್ಕರಿಸುವಾಗ ಯಾಂತ್ರಿಕವಾಗಿ ಇವೆಲ್ಲವನ್ನೂ ಅನುಕರಿಸುತ್ತಿದ್ದೆ. ಮನದಲ್ಲಿ ಅಷ್ಟೇನೂ ಭಕ್ತಿ ಇರದಿದ್ದರೂ ಈ ಎಲ್ಲಾ ಸದಾಚಾರಗಳನ್ನ ಮಾಡದಿದ್ದರೆ ಬೆನ್ನ ಮೇಲೆ ಆಡ ಬಹುದಾದ ಹಿರಿಯರ ಭಯವಂತೂ ಇದ್ದೆ ಇತ್ತು. ಈ ಭಯದ ದಾಸನಾಗಿ ಇವೆಲ್ಲ ಅನಿವಾರ್ಯ ಕರ್ಮಗಳನ್ನ ಶ್ರದ್ಧೆಯಿಂದ ಪೂರೈಸುತ್ತಿದ್ದೆ. ಇಷ್ಟಾದ ಮೇಲೆ ಯಾವ ರಾಗದ ಖಚಿತ ಹಂಗೂ ಇಲ್ಲದ ನಮ್ಮದೇ ಧಾಟಿಯಲ್ಲಿ ನಾಲ್ಕಾರು ಭಜನೆಗಳನ್ನೂ ಮನೆಯ ಮಕ್ಕಳೆಲ್ಲ ಸಾಮೂಹಿಕವಾಗಿ ಅಷ್ಟೂ ದೇವರ ಪಟಗಳ ಮುಂದೆ ಗಟ್ಟಿ ಧ್ವನಿಯಲ್ಲಿ ಭಕ್ತಿ ಪರವಶರಂತೆ ಸೋಗು ಹಾಕುತ್ತಾ ತಾಳ ಕುಟ್ಟಿ ಕೊಂಡು ಅರಚುತ್ತಿದ್ದೆವು. ಈ ಅಪಶ್ರುತಿಯ ಪ್ರಲಾಪವನ್ನು ಕೇಳಿ ಕೇಳಿ ದೇವರುಗಳಿಗೆಲ್ಲ ಸುಸ್ತಾಗಿಯೋ... ಇಲ್ಲ... ತಾಳ ಕುಟ್ಟುತ್ತಾ ಕೂಗಿ ಕೂಗಿ ಕಡೆಗೆ ನಮ್ಮ ಗಂಟಲಿಗೆ ದಣಿವಾಗಿಯೋ ಅಂತೂ ಇಂತೂ ಮಂಗಳಕ್ಕೆ ಬಂದು ಮುಟ್ಟುತ್ತಿದ್ದೆವು. ಈ ಮಂಗಳದೊಂದಿಗೆ ಮಂಗಳಾರತಿ ಮುಗಿದರೂ ಬಾಯಿಪಾಠ ಮಾಡಿಕೊಂಡಿರುತ್ತಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಸಂಸ್ಕೃತ ಶ್ಲೋಕಗಳನ್ನು ಕೇಳಿದವರಿಗೆ ಶೋಕ ಒತ್ತರಿಸಿಕೊಂಡು ಬರುವಂತೆ ಅಪಭ್ರಂಶದಲ್ಲಿ ದೇವರನ್ನೆ ಹೆದರಿಸುವಂತೆ ಘರ್ಜಿಸದ ಹೊರತು ನಮ್ಮ ಪ್ರಾರ್ಥನೆಯ ಕಲಾಪ ಮುಗಿಯುತ್ತಿರಲ್ಲಿಲ್ಲ. ನಮ್ಮ ಈ ಎಲ್ಲ ಕಿರುಕುಳಗಳನ್ನು ಸಹಿಸಲು ಆ ಎಲ್ಲ ದೇವಗಣಗಳಿಗೆ ಅಪಾರ ತಾಳ್ಮೆಯ ಶಕ್ತಿಯಿತ್ತಲ್ಲಾ ಎಂದು ಇಂದಿಗೂ ಸೋಜಿಗ ಪಡುತ್ತೇನೆ. ಇಷ್ಟಾಗಿ ಇಲ್ಲಿ ಭಜನೆ ಮುಗಿಸಿ ಎದುರು ಮನೆ ಬಪಮನ ಗಣಪತಿ ಕಡ್ಲೆಗಾಗಿ ಅವರ ಮನೆಯತ್ತ ಓಡುತ್ತಿದ್ದೆ. ಅವರ ಮನೆ ಗಣಪತಿಯ ನೈವೇದ್ಯವಾಗಿ ಅವರು ನೆನೆಸಿದುತ್ತಿದ್ದ ಹಸಿ ಕಡಲೆಯ ಪಾಲಿಗಾಗಿ ಇನ್ನೂ ಅನೇಕ ಪ್ರತಿ ಸ್ಪರ್ಧಿಗಳು ಸುತ್ತಮುತ್ತಲ ಮನೆಗಳಿಂದ ನನಗಿಂತ ಮೊದಲೆ ದೌಡಾಯಿಸುವ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿರುತ್ತಿದ್ದರಿಂದ ಹೀಗೊಂದು ಅಕಾಲದ ರನ್ನಿಗ್ ರೇಸ್ ನನ್ನ ಬಾಲ್ಯದುದ್ದಕ್ಕೂ ಇದ್ದ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು. ಬಪಮ ಕಡ್ಲೆ ಕೊಡುವಾಗ ಅವರ ಸೊಸೆ ಗೀತಮ್ಮ ತಮ್ಮ ಅಂಗಳದಲ್ಲಿದ್ದ ತುಳಸಿಕಟ್ಟೆಗೆ ಪ್ರದಕ್ಷಿಣೆಯ ಸುತ್ತು ಹಾಕುತ್ತ ಮೂಗಿನಲ್ಲೇ ದೇವರ ನಾಮ ಹಾಡಿಕೊಳ್ಳುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಕಳೆದ ವರ್ಷ ಇದೆ ಸಂಧರ್ಭದಲ್ಲಿ ಅವರ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಗೆ ಹೋಗಿದ್ದೆ! ಕಾಲ ಎಷ್ಟು ಬೇಗ ಸವೆಯುತ್ತದೆಯಲ್ಲ. ಅವರ ಮೂಗುರಾಗಕ್ಕೆ ನಮ್ಮದೂ ಶ್ರುತಿ ಅನಪೇಕ್ಷಿತವಾಗಿ "....ಕಪಿತ್ತ ಜಂಬೋ ಫಲಸಾರ ಭಕ್ಷಿತಂ" ಎಂದು ಸೇರುತ್ತಿತ್ತು. ಸರಿ ಸುಮಾರು ಹೀಗೆಯೇ ಇರುತ್ತಿದ್ದ ನನ್ನ ಬಹುಪಾಲು ಸಂಜೆಗಳು ಈಗ ಕೈಜಾರಿ ಹೋಗಿ ಯಾವುದೋ ಕಾದಿಟ್ಟ ನಿಧಿ ಕಳೆದು ಕೊಂಡ ಅರ್ಜೆಂಟ್ ನಿರ್ಗತಿಕನ ಫೋಸ್ ಕೊಟ್ಟುಕೊಳ್ಳುತ್ತಾ ನನ್ನನ್ನು ನಾನೆ ಸಂತೈಸಿಕೊಳ್ಳುತ್ತಿರುತ್ತೇನೆ. ಇವತ್ತಿಗೂ ಮುಕ್ತಿಯಿಲ್ಲದೆ ಅವವೆ ಫ್ರೇಮ್'ಗಳಲ್ಲಿ ಸಿಲುಕಿ ಒರಲೆಗಳಿಂದ ಕಚ್ಚಿಸಿಕೊಂಡು ಒದ್ದಾಡುತ್ತಿರುವ ನಮ್ಮ ದೇವರ ಮನೆಯಲ್ಲಿ ಬಂಧಿಗಳಾಗಿರುವ ದೇವಾನು ದೇವತೆಗಳಿಗೂ ಇಂತಹದ್ದೊಂದು ನಿರಂತರ ಶೂನ್ಯ ಕಾಡುತ್ತಿರಬಹುದು ಎಂಬ ಗುಮಾನಿ ನನಗಿದೆ. ಸಂಪ್ರದಾಯದಂತೆ ಇಷ್ಟೆಲ್ಲಾ ಆಗಿ ಮುಗಿಯುವಾಗ ಶಾಲೆಯ ಚೀಲ- ಅದರೊಳಗೆ ಬಿಲದೊಳಗಣ ಇಲಿಯಂತೆ ಹುದುಗಿರುತ್ತಿದ್ದ ಮನೆಕೆಲಸದ ಪುಸ್ತಕಗಳನ್ನು ಇಷ್ಟವಿಲ್ಲದಿದ್ದರೂ ಹೊರಗೆ ತೆಗೆಯಲೇ ಬೇಕಾಗಿದ್ದ ದಿನದ ಅತಿ ಕೆಟ್ಟ ಘಳಿಗೆಗಳು ಬಂದೆ ಬಿಟ್ಟಿರುತ್ತಿದ್ದವು. ಇಷ್ಟವಿಲ್ಲದಿದ್ದರೂನು ಈ ಪ್ರಾರಬ್ಧ ಕರ್ಮದಿಂದ ಪಾರಾಗಲು ಬೇರೆ ದಾರಿ ಇರುತ್ತಿರಲಿಲ್ಲವಾಗಿ ಅನಿವಾರ್ಯವಾಗಿ ಹೋಂ ವರ್ಕ್ ಮಾಡಲು ಸನ್ನದ್ಧನಾಗುತ್ತಿದ್ದೆ. ವಾಸ್ತವವಾಗಿ ನಾನು ಓದಿನಲ್ಲಿ ಸಾಕಷ್ಟು ಜಾಣನಾಗಿದ್ದೆ. ಕಾಪಿ ಬರೆಯುವುದೂ ಸೇರಿದಂತೆ ಶಾಲೆಯಲ್ಲಿ ಕೊಡುತ್ತಿದ್ದ- ನನ್ನ ಪಾಲಿಗೆ ತೀರಾ ಚಿಲ್ಲರೆ ಅನ್ನಿಸುತ್ತಿದ್ದ ಮನೆಕೆಲಸಗಳಿಗೆ ಇನ್ನೂ ಕಡೆಯ ಘಂಟೆ ಹೊಡೆಯುವ ಮೊದಲು ಅಲ್ಲೇ ಮೋಕ್ಷ ಕಲ್ಪಿಸಿರುತ್ತಿದ್ದೆ. ಆದರೀಗ ಇಲ್ಲದ ಮನೆಗೆಲಸವನ್ನು ಈ ಟ್ಯೂಬ್ ಲೈಟ್ ಅಡಿ ಕೂತು ಮಾಡೋದಾದರೂ ಎಲ್ಲಿಂದ? ಹೀಗಾಗಿ ಓದುವ ನಾಟಕ ನಿರಂತರವಾಗಿ ಮಾಡುತ್ತಿದ್ದೆ. ನಡುವೆ ನಿದ್ದೆಯ ಸೆಳೆತ ವಿಪರೀತವಾದಾಗ ತಲೆಯನ್ನು ಹಿಡಿತ ಮೀರಿ ತೂಗದಂತೆ ನಿಗಾವಹಿಸುವ ಕೆಲಸಕ್ಕೆ ಯಾರ ಅಪ್ಪಣೆ ಇಲ್ಲದಿದ್ದರೂ ಸದಾ ಸ್ವಯಂ ಸೇವಕಳಂತೆ ಸಿದ್ದಳಾಗಿರುತ್ತಿದ್ದ ನನ್ನ ಕಡೆಯ ಚಿಕ್ಕಮ್ಮ "ಟಪ್" ಎಂದು ಜೋರಾಗಿ ತಲೆಯ ಮೇಲೊಂದು ಏಟನ್ನ ಉತ್ಸಾಹದಿಂದ ಕಾದಿದ್ದವಳಂತೆ ಹಾಕುತ್ತಿದ್ದಳು. ಅವಳು ಅಲ್ಲಿ ತನ್ನ ಹೋಂ ವರ್ಕ್ ಮಾಡಲು ಕೂತಿರುತ್ತಿದ್ದಳೋ ಇಲ್ಲ ನನಗೆ ತಲೆ ಮೊಟಕಲೋ ಎಂಬ ಸಂಶಯ ನನಗಿವತ್ತಿಗೂ ಇದೆ. ಈ ಪ್ರಹಸನ ಕಷ್ಟದಲ್ಲಿ ಮುಗಿಯುವಾಗ ಕಡೆಗೂ ಊಟದ ಸಮಯ ಆಗಿರುತ್ತಿತ್ತು. ಮತ್ತೆ ಮನೆಯಲ್ಲಿ ಅಗೋಳಿ ಮಂಜಣನ ಸಾಕ್ಷಾತ್ಕಾರವಾಗುವ ಹೊತ್ತದು. ಊಟಕ್ಕೆ ಕಳ್ಳತನ ಮಾಡುತ್ತಿದ್ದ ನನಗೆ "ಬೇಗ ಉಂಡವರು ಗಿಳಿಯಂತೆ; ನಿಧಾನವಾಗಿ ಉಣ್ಣುವವರು ಕಾಗೆಯಂತೆ!!" ( ಗಿಳಿಯಾಗಿ ಬರುವ ಭಾಗ್ಯವೇನು? ಕಾಗೆಯಾದರೆ ನಷ್ಟವೇನು ಎಂಬ ಪ್ರಶ್ನೆಗೆ ಇನ್ನೂ ಅರ್ಥ ಹುಡುಕುತ್ತಿದ್ದೇನೆ!) ಎನ್ನುವ ಪುಸಲಾವಣೆ ಮಾವ ಹಾಗು ಚಿಕ್ಕಮ್ಮಂದಿರದು. ಗಿಳಿಯಾಗಲು ನನ್ನ ಅಳತೆ ಮೀರುತ್ತಿರುವ ಸಂಪೂರ್ಣ ಅರಿವಿದ್ದರೂ ಒತ್ತಾಯದಲ್ಲಿ ತುರುಕಿಕೊಂಡು ಕಾದರೆ ಗಿಳಿಯಾಗುವ ಮೊದಲೇ ಅಗೋಳಿ ಮಂಜಣನೆಂಬ ಬಿರುದು ಉಚಿತವಾಗಿ ಸಿಕ್ಕಿರುತ್ತಿತ್ತು! ನನ್ನ ಊಟ ಮಾಡುವುದರಲ್ಲಿದ್ದ ನಿರಾಸಕ್ತಿಗೆ ಅವರು ಅರಿಯುತ್ತಿದ್ದ ಇಂತಹ ಭೀಕರ ಮದ್ದುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೊ? ತಿಳಿಯದೆ ಗಲಿಬಿಲಿಯಾಗುತ್ತಿತ್ತು. ಅಸಹಾಯಕತೆಯೆ ಮಡುಗಟ್ಟಿರುತ್ತಿದ್ದ ಜಲಪಾತ ಇನ್ನೇನು ನನ್ನ ಬೋಳೆ ಕಣ್ಣುಗಳಿಂದ ಉದುರೋಕೆ ಸರ್ವ ಸನ್ನದ್ಧವಾಗಿರುತ್ತಿದ್ದವು. ಆದರೆ ರಾತ್ರಿ ಊಟದ ಬಗ್ಗೆ ನನಗಿದ್ದ ನಿರಾಸಕ್ತಿಯ ಅಸಲು ಕಾರಣ ಅವರ್ಯಾರಿಗೂ ಗೊತ್ತಿರಲೇ ಇಲ್ಲ!. ಇವತ್ತಿಗೂ ಅದರ ರಹಸ್ಯ ಅವರಿಗೆ ಗೊತ್ತೇ ಇಲ್ಲ.

ಭಾರತದ ನೆಲದಲ್ಲಿ ಇಸ್ಲಾಂ...

ವಿದೇಶಿ ಛಾಪಿನ ಧರ್ಮಗಳಲ್ಲಿ ಮೊದಲಿಗೆ ಭಾರತದ ನೆಲದಲ್ಲಿ ನೆಲೆಯೂರಲು ಸಾಧ್ಯವಾದದ್ದು ಯಹೂದಿ ಧರ್ಮಕ್ಕೆ. ಮದ್ಯಪ್ರಾಚ್ಯದಲ್ಲಿ ಆರಂಭವಾಗಿದ್ದ ಇಸ್ಲಾಮಿ ಹಾಗೂ ಕ್ರೈಸ್ತ ಧರ್ಮ ಯುದ್ದ (ಕ್ರುಸೇಡ್)ದ ಬಲಿಪಶುಗಳಾಗಿದ್ದ ಯಹೂದ್ಯರು ಮೊದಲಿಗೆ ಒಂದೂವರೆ ಸಾವಿರ ವರ್ಷದಿಂದೀಚೆಗೆ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದರು, ಇಂದಿನ ಕೇರಳದ ಕರಾವಳಿಯಲ್ಲಿ ಹಾಗು ಪೂರ್ವಕರಾವಳಿಯ ಮೂಲಕ ತ್ರಿಪುರ ಹಾಗು ನಾಗಾಲ್ಯಾಂಡಿನ ಗುಡ್ಡಗಾಡುಗಳಲ್ಲಿ ಇವರು ನೆಲೆಯೂರಿದರು. ಅನಂತರದ ಸರದಿ ಜತುರಾಷ್ಠನ ಅನುಯಾಯಿಗಳಾದ ಪರ್ಶಿಯನ್ನರದ್ದು. ಅರಬ್ಬಿಯಾದ ತುಂಬಾ ತನ್ನ ತೋಳ್ಬಲದಿಂದ ನೆಲೆ ಸ್ಥಾಪಿಸಿಕೊಂಡಿದ್ದ ಇಸ್ಲಾಂ ಪರ್ಷಿಯಾದ ರಾಜಗದ್ದುಗೆಯನ್ನ ಅಲುಗಾಡಿಸಿ ಅಲ್ಲಿನ ರಾಜಧರ್ಮವಾದ ಮೇಲೆ ನಿಷ್ಟಾವಂತ ಅಗ್ನಿ ಆರಾಧಕರಾದ ಪರ್ಶಿಯನ್ನರಿಗೆ ದೇಶಭ್ರಷ್ಟರಾಗುವ ಹೊರತು ಇನ್ಯಾವುದೆ ಆಯ್ಕೆಗಳು ಉಳಿದಿರಲಿಲ್ಲ. ಹೀಗಾಗಿ ಅವರಲ್ಲಿ ಬಹುತೇಕರು ಸ್ವಧರ್ಮ ಭ್ರಷ್ಟರಾಗಲು ಇಚ್ಚಿಸದೆ ಭಾರತ ಉಪಖಂಡದ ಗುಜರಾತ್ ಹಾಗು ಮಹಾರಾಷ್ಟ್ರದ ಕರಾವಳಿಗಳಿಗೆ ರಾಜಕೀಯ ಆಶ್ರಯ ಬಯಸಿ ಗುಳೆ ಬಂದರು. ಇವೆರಡೂ ಧರ್ಮಾನುಯಾಯಿಗಳು ಕೇವಲ ಇಲ್ಲಿ ನೆಲೆ ಕಂಡುಕೊಂಡು ಮುಖ್ಯವಾಹಿನಿಯಲ್ಲಿ ಬೆರೆತುಹೋದರೆ ವಿನಃ ತಮ್ಮ ಧರ್ಮ ಪ್ರಚಾರದ ಯಾವುದೆ ಒಳ ಉದ್ದೇಶಗಳನ್ನ ಹೊಂದಿರಲಿಲ್ಲ ಅನ್ನೋದು ಗಮನಾರ್ಹ. ಇದರ ಬಗ್ಗೆ ಒಂದು ಕುತೂಹಲ ಹುಟ್ಟಿಸುವ ಕಥೆ ಚಾಲ್ತಿಯಲ್ಲಿದೆ. ಗುಜರಾತಿನ ಅಂದಿನ ಸನಾತನ ರಾಜನ ಬಳಿ ಆಶ್ರಯ ಬಯಸಿ ಬಂದ ಪರ್ಶಿಯನ್ನರ ಮುಖಂಡನಿಗೆ ರಾಜ 'ಆಶ್ರಯ ಕೇಳುವ ನಿಮ್ಮನ್ನ ಹೇಗೆ ನಂಬೋದು?' ಅಂದನಂತೆ. ಆವಾಗ ರಾಜನ ಪಾಕಶಾಲೆಯಿಂದ ಒಂದು ಲೋಟ ಹಾಲನ್ನು ತರಿಸಲು ಕೋರಿದ ಆ ಪರ್ಶಿಯನ್ನರ ಮುಖಂಡ ತನ್ನ ಚೀಲದಿಂದ ಚಮಚೆ ಸಕ್ಕರೆ ತೆಗೆದು ಅದಕ್ಕೆ ಬೆರೆಸಿ 'ನೋಡಿ ಹಾಲಲ್ಲಿ ಸಕ್ಕರೆ ಬೆರೆತಂತೆ ನಿಮ್ಮೊಂದಿಗೆ ಬೇರೆಯುತ್ತೇವೆ!' ಎಂದು ಉತ್ತರಿಸಿದನಂತೆ. ಹೀಗೆ ರಾಜನ ಮನಗೆದ್ದ ಪರ್ಷಿಯನ್ನರು ಕೊನೆಗೂ ತಮ್ಮ ನುಡಿಗೆ ಬದ್ಧರಾಗಿಯೆ ಉಳಿದರು. ಇಂದಿಗೂ ಗುಜರಾತಿನ ಸೂರತ್ ಹಾಗು ಮಹಾರಾಷ್ಟ್ರದ ಮುಂಬೈನ ಆರ್ಥಿಕ ಪ್ರಪಂಚದಲ್ಲಿ ಪಾರಸಿ ವ್ಯಾಪಾರಿಗಳದ್ದೆ ರಾಜ್ಯಭಾರ. ಹೀಗಿದ್ದರೂ ಅವರನ್ನ ಧರ್ಮಾಧರಿತವಾಗಿ ಗುರುತಿಸಲಾಗದಂತೆ ಸಮಾಜದ ಐಕ್ಯತೆಯಲ್ಲಿ ಆ ಸಮುದಾಯ ಲೀನವಾಗಿ ಹೋಗಿದೆ. ಉದಾಹಾರಣೆಗೆ ಟಾಟಾ ಉದ್ಯಮ ಸಮುದಾಯವನ್ನೆ ಗಮನಿಸಿ. ಆದರೆ ಭಾರತಕ್ಕೆ ಇಸ್ಲಾಮಿನ ಆಗಮನದ ಕಥೆ ತುಸು ವಿಭಿನ್ನವಾಗಿದೆ. ಎಲ್ಲರೂ ಆದು ಬಲಪ್ರಯೋಗದ ಮೂಲಕ, ಹೆಚ್ಚಾಗಿ ಗಜನಿ ಮಹಮ್ಮದನ ಅತಿಕ್ರಮಣದದಿಂದ ಭಾರತವನ್ನ ಹೊಕ್ಕಿತು ಅಂತಲೆ ಭಾವಿಸಿದ್ದಾರೆ. ಆದರೆ ವಾಸ್ತವ ಅದಲ್ಲ. ಇಸ್ಲಾಂ ಭಾರತದ ಭೂಮಿಗೆ ಅಡಿಯಿಟ್ಟದ್ದು ನೈಋತ್ಯ ಕರಾವಳಿಯ ಮೂಲಕ. ಗಜನಿ ಮಹಮದನ ಅತಿಕ್ರಮಣಕ್ಕೂ ಎರಡೂವರೆ ಶತಮಾನದ ಹಿಂದೆಯೆ ಕೇರಳದ ಕರಾವಳಿ ತೀರದಲ್ಲಿರುವ ಅಂದಿನ ಮುಸ್ಸೇರಿ ಪಟ್ಟಣ (ಇಂದಿನ ಕೊಲ್ಲಂ)ದ ಮೂಲಕ ಇಸ್ಲಾಂ ಭಾರತವನ್ನ ಪ್ರವೇಶಿಸಿತ್ತು. ಅದು ಅಂದಿನ ಕೇರಳದ ಪ್ರಮುಖ ರೇವುಪಟ್ಟಣವಾಗಿತ್ತು. ಅಂದಿನ ಕೇರಳ ಚಂದ್ರಗಿರಿಯ ದಕ್ಷಿಣಕ್ಕಿರುವ ತಂಬುರದಿಂದ ಭಾರತಭೂಮಿಯ ತುತ್ತತುದಿಗಿರುವ ಶಚೀಂದ್ರಂ (ಈಗ ತಮಿಳುನಾಡಿಗೆ ಸೇರಿದೆ) ವರೆಗೆ ವ್ಯಾಪಿಸಿದ್ದು ಐದು ಮುಖ್ಯ ರಾಜ್ಯಗಳಾಗಿ ಹಂಚಿಹೋಗಿತ್ತು. ಆ ಎಲ್ಲಾ ಪಾಳೆಪಟ್ಟುಗಳು ನಡು ಕೇರಳದಲ್ಲಿರುವ ಕೊಡುಂಗಲ್ಲೂರು ಸ್ಥಿತ ಚೇರ ರಾಜಮನೆತನದ ಸಾಮ್ರಾಜ್ಯಕ್ಕೆ ಅಧೀನವಾಗಿದ್ದು ರಾಜಕೀಯವಾಗಿ ಅಲ್ಲಿನ ವರ್ಮನ್ ಗದ್ದುಗೆಗೆ ನಿಷ್ಠವಾಗಿದ್ದವು. ಅಲ್ಲಿಗೆ ಇಸ್ಲಾಂ ಪರವೆಶಿಸಿದ ಬಗ್ಗೆ ಎರಡು ತರಹದ ಕತೆಗಳು ಚಾಲ್ತಿಯಲ್ಲಿವೆ. ಎರಡೂ ಕೂಡ ಜಾನಪದ ಮೂಲದವೇ ಅನ್ನೋದು ಗಮನಾರ್ಹ. ಮೊದಲನೆಯ ಕಥೆ ಹೀಗಿದೆ, ಅಲ್ಲಿನ ಆಳರಸ ನಡುವಯಸ್ಸಿನ ರಾಜ ರಾಮವರ್ಮ ಕುಲಶೇಖರನಿಗೆ ಒಂದು ರಾತ್ರೆ ಆಕಾಶದಿಂದ ತಾರೆಯೊಂದು ಎರಡಾಗಿ ಒಡೆದು ಬೀಳುವ ಅಪರೂಪದ ದೃಶ್ಯ ಕಂಡುಬಂತು. ಅದನ್ನ ಅನಿಷ್ಟದ ಶಕುನವಾಗಿ ಚಿಂತಿಸಿದ ರಾಜ 'ಚೇರಮಾನ ಪೆರುಮಾಳ್" (ಶ್ರೀಸಾಮಾನ್ಯರು ಅವನನ್ನ ಕರೆಯುತ್ತಿದ್ದುದೆ ಹಾಗೆ.) ಆಸ್ಥಾನದ ಜೋತಿಷಿಗಳಲ್ಲಿ ಈ ಬಗ್ಗೆ ವಿಚಾರಿಸಿದ. ಸೂಕ್ತ ಉತ್ತರ ದೊರೆಯದೆ ಖಿನ್ನನಾಗಿದ್ದ. ಆಗ ಅಲ್ಲಿಗೆ ಅರಬ್ಬಿಗಳ ವ್ಯಾಪಾರಿ ನಿಯೋಗವೊಂದು ವ್ಯಾಪಾರದ ಅನುಮತಿ ಕೋರಲು ಅವನ ಆಸ್ಥಾನಕ್ಕೆ ಬಂದಿತ್ತು. ಆ ನಿಯೋಗದ ಮುಖಂಡ ಈ ಸಮಸ್ಯೆಯನ್ನ ಮಹಮದ್ ಪೈಗಂಬರ್ ಇಸ್ಲಾಮನ್ನು ಅಲ್ಲಾಹನಿಂದ ಪ್ರೇರಿತನಾಗಿ ಭೋದಿಸ ತೊಡಗಿದ್ದಕ್ಕೆ ಸಮೀಕರಿಸಿದ. ಕಾಕತಾಳೀಯವಾಗಿ ಕನಸು ಬಿದ್ದ ಕಾಲಕ್ಕೂ ಪೈಗಂಬರನ ಪ್ರವಾದಿತನದ ಸ್ವಘೋಷಣೆಗೂ ಕಾಲದಲ್ಲಿ ಸಾಮ್ಯತೆ ಕಂಡು ಬಂತು. ಕ್ರಿಸ್ತಶಕ 639ಕ್ಕೆ ಕನಸು ಬಿದ್ದದ್ದು, ಪ್ರವಾದಿ ಭೋದನೆಗೆ ಆರಂಭಿಸಿದ್ದು ಕ್ರಿಸ್ತಶಕ 638ಕ್ಕೆ. ಹೀಗಾಗಿ ಆ ವಿವರಣೆ ರಾಜನಿಗೆ ಸಮಂಜಸ ಎನ್ನಿಸಿ ಅವನು ಇಸ್ಲಾಂ ಬಗ್ಗೆ ಒಲವು ತಾಳಿದ. ಮೆಕ್ಕಾ ಯಾತ್ರೆಗೆ ಮನಸನ್ನೂ ಮಾಡಿದ. ಎರಡನೆಯ ಕಥೆ ಸ್ವಲ್ಪ ಅಶ್ಲೀಲತೆಯ ಸೊಂಕಿನದ್ದು. ನಡುವಯಸ್ಸಿನ ರಾಜ ಚೇರಮಾನ ಪೆರುಮಾಳನ ಎಳೆ ಹೆಂಡತಿಗೆ ಗಂಡನಿಂದ ಸರಿಯಾಗಿ ಕಾಮ ತೃಪ್ತಿಯಾಗದೆ ಆಕೆ ತನ್ನ ಕುದುರೆ ಸಾರೋಟಿನ ತರುಣ ಸಾರಥಿಯನ್ನ ತನ್ನೊಂದಿಗೆ ಏಕಾಂತದಲ್ಲಿ ಕಾಮ ಕಲಾಪದಲ್ಲಿ ತೊಡಗುವಂತೆ ಪ್ರೋತ್ಸಾಹಿಸಿದಳಂತೆ. ಏಕಾಂತದಲ್ಲಿ ಸಿಕ್ಕ ಆ ಸುವರ್ಣಾವಕಾಶವನ್ನು ಎಡಗಾಲಲ್ಲಿ ಒದ್ದ ಆ ರಾಜ ನಿಷ್ಠ ರಾಣಿಯ ಕಾಮ ಭಿಕ್ಷೆಯನ್ನ ಧಿಕ್ಕರಿಸಿ ಅವಳ ವಿರೋಧ ಕಟ್ಟಿ ಕೊಂಡನಂತೆ. ಕೆರಳಿದ ಕಾಮ ಪೀಡಿತೆ ರಾಣಿ ಇದಕ್ಕೆ ತಕ್ಕ ಶಾಸ್ತಿ ಮಾಡಲೊಂದು ಕುಟಿಲೋಪಾಯ ಹೂಡಿದಳು. ಎರಡು ಕಾಯಿ ಗರಟೆಯಿಂದ ತಿಕ್ಕಿಕೊಂಡು ತನ್ನ ಮೊಲೆಯಲ್ಲಿ ನಡು ಮಧ್ಯ ಗಾಯ ಮಾಡಿ ಕೊಂಡಳು. ನಂತರ ರೋಧಿಸುತ್ತಾ ಕೂತಳು. ರಾಜ ಬರುವಾಗ ಅವಳ ಮೊಲೆಯಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಏನೆಂದು ವಿಚಾರಿಸಿದಾಗ ಅದು ಸಾರಥಿಯ ಕುಕೃತ್ಯವೆಂತಲೂ, ಆತ ತನ್ನನ್ನು ಅತ್ಯಾಚಾರ ಮಾಡಿ ಮೊಲೆಯಲ್ಲಿ ಪರಚಿ ಈ ಪರಿ ಗಾಯ ಮಾಡಿದ ಎಂದು ರಾಣಿ ಗಂಡನಿಗೆ ದೂರಿತ್ತಳು. ಕುಪಿತ ಗೊಂಡ ಚೇರಮಾನ ಪೆರುಮಾಳ್ ವಿವೇಚಿಸಲು ಸಮಯ ತೆಗೆದು ಕೊಳ್ಳದೆ ಕೂಡಲೆ ನಿಂತ ನಿಲುವಿನಲ್ಲಿಯೆ ಆರೋಪಿ ಸಾರಥಿಗೆ ಶಿರಚ್ಚೇಧನಡ ಶಿಕ್ಷೆ ವಿಧಿಸಿಧ! ಸಾರಥಿಯನ್ನ ಅವನ ಮನೆಯಿಂದ ಹೆಡೆಮುರಿ ಕಟ್ಟಿ ಎಳೆದು ಕೊಂಡು ಬರಲಾಯಿತು. ಆತನ ಕೊಲೆಗೂ ಮುನ್ನ ಅಂತಿಮ ಆಸೆ ಏನೆಂದು ವಿಚಾರಿಸಲಾಯಿತು. ಆತ ಸಮುದ್ರ ತೀರದಲ್ಲಿ ತನ್ನ ಪಗಾರವನ್ನೆಲ್ಲ ರಾಶಿ ಹಾಕಿ ತನಗೊಂದು ಸೇರಣ್ಣ ಕೊಡಬೇಕು ಅಂದನಂತೆ! ಆಗೆಲ್ಲಾ ಸಂಬಳ ಧಾನ್ಯದ ರೂಪದಲ್ಲಿ ಕೊಡಲಾಗುತ್ತಿತ್ತಾಗಿ ಆತನ ಅಲ್ಲಿಯವರೆಗಿನ ಪಗಾರವಾಗಿದ್ದ ಧಾನ್ಯಗಳನ್ನೆಲ್ಲ ಕಡಲ ಪಕ್ಕದ ದೊಡ್ಡ ಬಂಡೆಯ ಮೇಲೆ ಸುರಿದು ಆತನ ಕೈಗೊಂದು ಸೇರು ಕೊಟ್ಟರು. ಆತ ರಾಗವಾಗಿ "ಕಾಮಿ ಹೆಣ್ಣಿನ ಮಾತಿಗೆ ಹಿತ್ತಾಳೆ ಕಿವಿಯಾದ ಮೂರ್ಖರಾಜ ನೀನು ತಲೆ ಬೋಳಿಸಿ ಕೊಂಡು ಸುನ್ನತಿ ಮಾಡಿಸಿಕೋ, ನಿನ್ನ ಈ ಅಖಂಡ ಕೇರಳ ಛಿದ್ರವಾಗಲಿ !" ಎಂದು ಗಟ್ಟಿ ಧ್ವನಿಯಲ್ಲಿ ಶಪಿಸುತ್ತಾ ಅಷ್ಟೂ ಧಾನ್ಯವನ್ನ ಸೇರಿನಲ್ಲಿ ಅಳೆದಳೆದು ಕಡಲ ನೀರಿಗೆ ಸುರಿದನಂತೆ! ನಂತರ ಅವನ ವಧೆಯಾಯಿತು. ಈ ಶಾಪವನ್ನ ಕೇಳಿ ದಿಗಿಲಾದ ರಾಜ ಕೂಲಂಕುಷ ವಿಚಾರಣೆ ನಡೆಸಿದಾಗ ರಾಜನಿಗೆ ರಾಣಿಯ ಕಾಮಲೋಲುಪತೆಯೊಂದಿಗೆ ಆಕೆಯ ಹಲವು ವಿಟರ ಪತ್ತೆಯಾಯಿತು. ಇದರಿಂದ ನೊಂದ ಆತ ರಾಣಿಯೊಂದಿಗೆ ಅವರೆಲ್ಲರಿಗೂ ಮರಣದಂಡನೆ ಶಿಕ್ಷೆ ವಿಧಿಸಿ ಶಾಪದ ಅನುಸಾರ ತಲೆ ಬೋಳಿಸಿ ಕೊಂಡು ತನ್ನ ರಾಜ್ಯ ತೊರೆದು ವ್ಯಾಪಾರಿಗಳಾಗಿ ಬಂದಿದ್ದ ಅರಬ್ಬರ ನೌಕೆಯೇರಿ ಪಶ್ಚಿಮದ ದಿಕ್ಕಾಗಿ ಕೊನೆಯ ಬಾರಿಗೆ ಕೇರಳದಿಂದ ಹೊರಗೆ ಕಾಲಿಟ್ಟ. "ನೀರಿಗೆ ಸುರಿದರೂ ಅಳೆದು ಸುರಿಯ ಬೇಕು!" ಅನ್ನುವ ಗಾದೆ ಈ ಘಟನೆಯ ನಂತರ ಹುಟ್ಟಿ ಕೊಂಡದ್ದಂತೆ. ಆದರೆ ತನ್ನ ಧರ್ಮಾಂತರದಿಂದ ಒದಗುವ ಸಾಮಾಜಿಕ ಬಂಡಾಯವನ್ನ ಊಹಿಸಿ ಇದನ್ನ ಬಹಿರಂಗಪಡಿಸದೆ ಮೊದಲಿಗೆ ತನ್ನ ರಾಜ್ಯದ ಐದು ಭಾಗಗಳನ್ನ ಸರಿಸಮವಾಗಿ ಐವರು ಸಂಬಂಧಿಗಳಿಗೆ ಹಂಚಿ ಯಾತ್ರೆಯ ನೆಪದಲ್ಲಿ ಹಡಗಿನ ಮೂಲಕ ಚೆರಮಾನ ಪೆರುಮಾಳ್ ಮೆಕ್ಕಾಗೆ ಅದೆ ಅರಬ್ಬೀ ವ್ಯಾಪಾರಿ ತಂಡದೊಂದಿಗೆ ಹೊರಟ. ಒಂದು ಊಹೆಯ ಪ್ರಕಾರ ಅವನಿಗೆ ಪ್ರವಾದಿಗಳ ದರ್ಶನವೂ ಆಯಿತು. ಆದರೆ ಈ ಬಗ್ಗೆ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲದ ಕಾರಣ ಇದು ಊಹಾಪೋಹವಷ್ಟೆ ಅಂದು ಕೊಳ್ಳಬೇಕಿದೆ. ಅಲ್ಲಿ ಇಸ್ಲಾಮಿಗೆ ಧರ್ಮಾಂತರಗೊಂಡ ರಾಜ ಅಲ್ಲಿಯೇ ನಾಲ್ಕು ಸಂವತ್ಸರ ಕಳೆದ ಅನಂತರ ಮರಳಿ ಪ್ರವಾದಿಯ ನೇರ ಶಿಷ್ಯ 'ಮೌಲಿಕ್ ಇಬಾನುದ್ದೀನ್' ಜೊತೆಗೂಡಿ ಭಾರತದತ್ತ ಮುಖಮಾಡಿ ಹಡಗೇರಿದ. ಆದರೆ ದುರಾದೃಷ್ಟವಶಾತ್ ಆಮಶಂಕೆಗೆ ಬಲಿಯಾಗಿ ಆತ ತೀರ ನಿತ್ರಾಣಗೊಂಡ. ತನ್ನ ಕೊನೆಯನ್ನ ಊಹಿಸಿದ ಆತ ಅಲ್ಲಿಯೆ ಹಡಗಿನಲ್ಲಿ ಚರ್ಮದ ಮೇಲೆ ಐದು ಪತ್ರಗಳನ್ನು ತನ್ನ ರಾಜಮುದ್ರೆಯೊಂದಿಗೆ ಬರೆದು ತನ್ನ ಐವರು ಉತ್ತರಾಧಿಕಾರಿಗಳಿಗೆ ತಲುಪಿಸುವಂತೆ ಮೌಲಿಕ್ ಇಬಾನುದ್ದೀನರಿಗೆ ಹೇಳಿ ಅಸುನೀಗಿದ. ಹೀಗೆ ಅಂತ್ಯವಾಯ್ತು ಪ್ರಪ್ರಥಮ ಭಾರತೀಯ ಮತಾಂತರಿತ ಮುಸ್ಲೀಮನ ಜೀವನ. ಈ ಮತಾಂತರ ಸ್ವ ಇಚ್ಛೆಯದಾಗಿತ್ತು ಹಾಗೂ ಬಲವಂತದ ಯಾವ ಕುರುಹೂ ಅಲ್ಲಿರಲಿಲ್ಲ ಅನ್ನೋದು ನೆನಪಿಡಬೇಕಾದ ಅಂಶ. ಹೀಗೆ ಸತ್ತ ರಾಜಾ ರಾಮವರ್ಮ ಕುಲಶೇಖರನನ್ನು ಒಮನ್ನಿನ ಸಲಾಲದಲ್ಲಿ ಇಸ್ಲಾಂ ವಿಧಿಯ ಪ್ರಕಾರ ಸಮಾಧಿ ಮಾಡಲಾಯಿತು.ಅವನ ಶಿಫಾರಸ್ಸು ಪತ್ರ ಹಿಡಿದು ಮುಸ್ಸೇರಿ ಪಟ್ಟಣ ಮುಟ್ಟಿದ ಮೌಲಿಕ್ ಇಬಾನುದ್ದೀನನಿಗೆ ಸತ್ತ ತಮ್ಮ ಹಿರಿಯನ ಆಶಯದಂತೆ ಅವನ ಉತ್ತರಾಧಿಕಾರಿಗಳು ಧರ್ಮಪ್ರಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು ಹಾಗೂ ರಾಜ್ಯದ ಐದು ಪ್ರಮುಖ ಭಗವತಿ ದೇವಾಲಯಗಳನ್ನ ಮಸೀದಿಗಾಗಿ ಬಿಟ್ಟು ಕೊಟ್ಟರು. ಹೀಗೆ ಅಧಿಕೃತವಾಗಿ ಆರಂಭವಾದ ಭಾರತದ ಮೊತ್ತಮೊದಲ ಮಸೀದಿ 'ಚೇರಮಾನ ಪಳ್ಳಿ' ಎಂಬ ಹೆಸರಿನಲ್ಲಿ ಕೋಡಂಗಲ್ಲೂರಿನಲ್ಲಿ ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇಲ್ಲಿನ ವಾಸ್ತು ಪಕ್ಕಾ ಕೇರಳದ ಇನ್ನಿತರ ದೇವಾಲಯಗಳಂತೆಯೆ ಇದೆ. ಮಸೀದಿಯ ಹಿಂದೆ ದೇವಾಲಯದ ಹಿಂದಿರುವಂತೆ ಕೊಳವೂ ಇದೆ. ಇಂದಿಗೂ ಅಲ್ಲಿನ ರಂಜಾನ್ ಸಹಿತ ಧಾರ್ಮಿಕ ಸಮಾರಂಭಗಳಿಗೆ ರಾಜ ಮನೆತನದವರು ಖಾಯಂ ವಿಶೇಷ ಆಹ್ವಾನಿತರು. ಅವರೇನೂ ತಮ್ಮ ಮಾತೃಧರ್ಮ ಬದಲಿಸಿಕೊಂಡಿಲ್ಲ, ಹಿಂದೂಗಳಾಗಿಯೆ ಇದ್ದಾರೆ. ೧೯೨೦ರ ದಶಕದಲ್ಲಿ ಅಲ್ಲಿ ಎದ್ದಿದ್ದ ಕುಖ್ಯಾತ "ಮಾಪಿಳ್ಳಾ ದಂಗೆ"ಯಲ್ಲಿ ಆ ಕುಟುಂಬ ಕೂದಲೆಳೆಯಿಂದ ಬಲವಂತದ ಮತಾಂತರವನ್ನು ತಪ್ಪಿಸಿ ಕೊಂಡಿತ್ತು ಅನ್ನೋದು ಒಂದು ರೋಚಕ ಸಂಗತಿ. ನಾನು ಆಲ್ಲಿನ ಜಮಾತ್ ಅದ್ಯಕ್ಷರಾದ "ಸಂಜೀವಿನಿ ಆರೋಗ್ಯಾಲಯಂ"ನ ಡಾ, ಅಬ್ದುಲ್ಲರನ್ನು ಕಂಡು ಮಾತನಾಡಿಸಿದ್ದೇನೆ. ಅವರ ವಿವರವಾದ ಸಂದರ್ಶನ ನನ್ನಲ್ಲಿದೆ. ಇದರ ಹೊರತು ಕೊಲ್ಲಂ-ಕಾಸರಗೋಡು ಹಾಗು ಕನ್ಯಾಕುಮಾರಿ ಬಳಿ ಇನ್ನಿತರ ದೇವಸ್ಥಾನಗಳು ಮಸೀದಿಗಳಾಗಿ ಪರಿವರ್ತಿತವಾದವು. ಇದು ಆರಂಭದ ಕಥೆ. ಆರಂಭದಲ್ಲಿ ಭಾರತೀಯ ಉಪಖಂಡದಲ್ಲಿ ಸೌಮ್ಯವಾಗಿದ್ದ ಇಸ್ಲಾಂ ಪ್ರಸರಣೆ ಅನಂತರದ ದಿನಗಳಲ್ಲಿ ಮಾತ್ರ ದುಂಡಾವರ್ತಿಗೆ ಮೊರೆ ಹೋದದ್ದು ದುರದೃಷ್ಟಕರ. ಇದೆ ಮಾದರಿಯಲ್ಲಿ ಸಿರಿಯನ್ ಕ್ರಿಸ್ತರು ಕೇರಳದ ಮೂಲಕವೆ ಕ್ರೈಸ್ತ ಧರ್ಮವನ್ನೂ ಭಾರತಕ್ಕೆ ತಂದಿದ್ದರು. ಅಲ್ಲಿ ಅವರಿಗೆ "ನಸ್ರಾಣಿ" ಎನ್ನಲಾಗುತ್ತದೆ. ಆದರೆ ಅದು ಇಸ್ಲಾಮಿನ ಮೂಲಭೂತವಾದಕ್ಕೆ ಅಂಟಿಕೊಳ್ಳದೆ ಸೌಮ್ಯ ಮಾರ್ಗದಲ್ಲೆ ತನ್ನ ಜನಪ್ರಿಯತೆಯನ್ನ ಹೆಚ್ಚಿಸಿಕೊಂಡಿತ್ತು. ಪುರಾತನ ಕಾಲದಿಂದಲೂ ದೇಶದ ಸಮುದ್ರ ವ್ಯಾಪಾರದ ದ್ವಾರವಾಗಿ ವಿಶಾಲ ಕರಾವಳಿಯಲ್ಲಿ ಹರಡಿಕೊಂಡ ಕೇರಳ ವಿದೇಶಿಯರೊಂದಿಗೆ ಆರ್ಥಿಕ ನಂಟು ಹೊಂದಿದ್ದರಿಂದ ಈ ಎಲ್ಲಾ ಘಟನಾವಳಿಗಳಿಗೆ ಕೇರಳವೆ ರಂಗಸ್ಥಳವಾಗುವಂತಾಯಿತು. (ಉಳಿದದ್ದು-ನಾಳೆಗೆ....)